Get Updates
Get notified of breaking news, exclusive insights, and must-see stories!

Hair conditioning: ಕೂದಲು ರೇಷ್ಮೆ ತರ ಹೊಳೆಯುವಂತೆ ಕಾಣಲು ಡೀಪ್ ಕಂಡೀಷನಿಂಗ್ ಮಾಡುವುದು ಹೇಗೆ?

ಕೂದಲಿನ ಆರೈಕೆ ಎನ್ನುವುದು ನಮ್ಮ ತ್ವಚೆಯ ಆರೈಕೆಯಂತೆಯೇ ತುಂಬಾ ಮುಖ್ಯವಾದದ್ದು. ನಮ್ಮ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಹೆಣ್ಣು ಮಕ್ಕಳಿಗೆ ತಮ್ಮ ಕೂದಲನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲು ಎಂದರೆ ತಪ್ಪಲ್ಲ. ಕೂದಲು ಉದ್ದ ಇರಲಿ, ಚಿಕ್ಕದಿರಲಿ ಆರೈಕೆಯಂತು ಮಾಡಲೇಬೇಕು.

ಅದರಲ್ಲೂ ವಿಶೇಷವಾಗಿ ಒಣ ಕೂದಲನ್ನು ಹೊಂದಿರುವವರಿಗೆ ಅದನ್ನು ಆರೈಕೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿಯೇ ಕಂಡಿಷನರ್‌ಗಳನ್ನು ಬಳಸಲಾಗುತ್ತದೆ. ಈ ಕಂಡಿಷನರ್‌ಗಳು ಕೂದಲನ್ನು ನಯವಾಗಿ ಮಾಡುವುದರ ಜೊತೆಗೆ ಕೂದಲು ಉದುರುವಿಕೆಯನ್ನು ಕೂಡ ಕಡಿಮೆ ಮಾಡುತ್ತದೆ.

How to Deep Conditioning Your Hair to looks smoother and softer

ಕೂದಲಿಗೆ ಕಂಡಿಷನರ್ ಹೇಗೆ ಉಪಯುಕ್ತ?

ಕೂದಲಿನ ಆರೈಕೆಗೆ ಯಾವಾಗಲೂ ಹೆಚ್ಚು ಹೆಚ್ಚು ಹಣ ಹೂಡಬೇಕಿಲ್ಲ. ಕೆಲವು ಹೇರ್ ಕಂಡಿಷನರ್‌ಗಳು ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಅದ್ಭುತಗಳನ್ನೇ ಮಾಡಬಹುದು. ನಿಮ್ಮ ಮನೆಯಲ್ಲಿ ದೊರೆಯುವ ಕೆಲವು ವಸ್ತುಗಳಿಂದಲೇ ಕೂದನ್ನು ನಯವಾಗಿ ರೇಷ್ಮೆಯಂತೆ ಇಟ್ಟುಕೊಳ್ಳಬಹುದು.

ಹೆಚ್ಚಾಗಿ, ಒಣ ಕೂದಲು ಇರುವ ಜನರ ಕೂಡಲು ಹೆಚ್ಚು ಒರಟಾದ ಮತ್ತು ಸುಕ್ಕುಗಟ್ಟಿದ ಕೂದಲಿನಂತೆ ಇರುತ್ತದೆ. ಇದರಿಂದ ತಲೆಯಲ್ಲಿ ಹೆಚ್ಚು ಸಿಕ್ಕು ಉಂಟಾಗುತ್ತದೆ. ಒಣ ಕೂದಲು ಇರುವವರು ಮಾತ್ರವಲ್ಲ ಪ್ರತಿ ಹತ್ತು ದಿನಗಳಿಗೊಮ್ಮೆ ಮನೆಯಲ್ಲಿಯೇ ಡೀಪ್ ಕಂಡೀಷನಿಂಗ್‌ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು.

ಕಂಡಿಷನರ್‌ಗಳಲ್ಲಿ ಸಾಮಾನ್ಯವಾಗಿ ಹ್ಯೂಮೆಕ್ಟಂಟ್‌ಗಳು ಮತ್ತು ಎಮೋಲಿಯಂಟ್‌ ಇರುತ್ತದೆ. ಇವೆರಡೂ ಕೂದಲಿನಲ್ಲಿ ತೇವಾಂಶವನ್ನು ಲಾಕ್ ಮಾಡಲು, ಕೂದಲಿನ ಸಿಕ್ಕನ್ನು ಕಡಿಮೆ ಮಾಡುತ್ತದೆ. ಡೀಪ್ ಕಂಡಿಷನರ್‌ಗಳು ಸಾಮಾನ್ಯ ಕಂಡಿಷನರ್‌ಗಳಿಗಿಂತ ಸ್ವಲ್ಪ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಅವು ಸ್ವಲ್ಪ ದಪ್ಪವಾಗಿರುತ್ತದೆ ಮತ್ತು ದೀರ್ಘಾವಧಿಯ ಪ್ರಯೋಜನಗಳನ್ನು ನೀಡುತ್ತವೆ. ಆರೋಗ್ಯಕರ ಮತ್ತು ಬಲವಾದ ಕೂದಲಿಗೆ ಕಾರಣವಾಗುತ್ತದೆ.

How to Deep Conditioning Your Hair to looks smoother and softer

ಮನೆಯಲ್ಲಿ ನಿಮ್ಮ ಕೂದಲನ್ನು ಡೀಪ್ ಕಂಡೀಷನ್ ಮಾಡುವುದು ಹೇಗೆ

1. ನಿಮ್ಮ ಕೂದಲನ್ನು ಸ್ವಚ್ಛಗೊಳಿಸಿ:

ಉತ್ತಮ ಶಾಂಪೂನಿಂದ ನಿಮ್ಮ ಕೂದಲನ್ನು ಸ್ವಚ್ಛಗೊಳಿಸಿ. ಸಲ್ಫೇಟ್‌ಗಳು, ಪ್ಯಾರಾಬೆನ್‌ಗಳು, ಕೃತಕ ಸುಗಂಧ ದ್ರವ್ಯಗಳು ಮತ್ತು ಡ್ರೈಯಿಂಗ್ ಆಲ್ಕೋಹಾಲ್‌ಗಳಂತಹ ರಾಸಾಯನಿಕಗಳಿಲ್ಲದ ಶಾಂಪೂವನ್ನು ಬಳಸಿದರೆ ಕೂದಲು ಆರೋಗ್ಯವಾಗಿರುತ್ತದೆ. ಇಲ್ಲದಿದ್ದರೇ, ಇವು ಕೂದಲಿನಿಂದ ನೈಸರ್ಗಿಕ ತೈಲಗಳನ್ನು ತೆಗೆದುಹಾಕಬಹುದು. ನಿಮ್ಮ ಕೂದಲನ್ನು ಉಗುರುಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ.

2. ನಿಮ್ಮ ಡೀಪ್ ಕಂಡೀಷನರ್ ಅಪ್ಲೈ ಮಾಡಿ:

ನಿಮ್ಮ ಬೆರಳುಗಳನ್ನು ಬಳಸಿ ನಿಧಾನವಾಗಿ ನಿಮ್ಮ ಕೂದಲಿಗೆ ಡೀಪ್ ಕಂಡಿಷನರ್ ಅನ್ನು ಹಚ್ಚುತ್ತಾ ಬನ್ನಿ. ಪ್ರತಿ ಕೂದಲಿನ ಎಳೆಗೂ ಸರಿಯಾಗಿ ಹಚ್ಚಲಾಗಿದೆಯೇ ಎಂಬುದನ್ನು ಗಮನಿಸಿ.

3. ಕಂಡೀಷನರ್ ಹಚ್ಚಿ ಕೆಲ ಹೊತ್ತ ಕಾಯಿರಿ:

ಡೀಪ್ ಕಂಡಿಷನರ್ ಅನ್ನು ನಿಮ್ಮ ಕೂದಲು ಹೀರಿಕೊಳ್ಳಲು ಅನುವಾಗುವಂತೆ ಕೊಂಚ ಸಮಯ ಹಾಗೆ ಬಿಡಿ. ಅನುಮತಿಸಿ. ಡೀಪ್ ಕಂಡಿಷನರ್ ಅನ್ನು ಕೂದಲಿನ ಮೇಲೆ 20 ರಿಂದ 30 ನಿಮಿಷಗಳ ಕಾಲ ಬಿಡುವುದು ಉತ್ತಮ. ಆದರೆ, ಕೆಲವು ಡೀಫ್ ಕಂಡಿಷನರ್‌ ಮೇಲೆ ಇರುವ ಸೂಚನೆಗಳನ್ನು ಅನುಸರಿಸಬೇಕು.

4. ಕೂದಲನ್ನು ತೊಳೆಯಿರಿ:

20 ರಿಂದ 30 ನಿಮಿಷ ಆದ ನಂತರ ತಣ್ಣಗೀನ ನೀರಿನಿಂದ ನಿಮ್ಮ ಕೂದಲನ್ನು ಸರಿಯಾಗಿ ತೊಳೆಯಿರಿ ಮತ್ತು ಒಣಗಿಸಿ. ನಿಮ್ಮ ಕೂದಲನ್ನು ಟವೆಲ್‌ನಿಂದ ಒತ್ತಿ ಉಜ್ಜಬೇಡಿ. ನಿಧಾನವಾಗಿ ಒಣಗಲು ಬಿಡಿ. ಈಗ ನಿಮ್ಮ ಕೂದಲು ರೇಷ್ಮೆಯಂತೆ ಹೊಳೆಯುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+