Hotel Style Tomato Chutney Recipe: ಹೋಟೆಲ್ ಸ್ಟೈಲ್ ಟೊಮೆಟೊ ಚಟ್ನಿ ಮಾಡುವುದು ಹೇಗೆ?
ಅನೇಕ ಜನರು ಬೆಳಿಗ್ಗೆ ಇಡ್ಲಿ, ಚಟ್ನಿ, ಸಾಂಬಾರ್ ಮತ್ತು ವಡೆ ಮಾಡುತ್ತಾರೆ. ನೀವು ಈ ರೀತಿಯಾಗಿ ಮನೆಯಲ್ಲಿ ತಿಂಡಿ ಮಾಡಲು ಹೊರಟಿದ್ದೀರಾ? ಹಾಗಿದ್ದರೆ ಆ ಇಡ್ಲಿ ಅಥವಾ ದೋಸೆಗೆ ತೆಂಗಿನಕಾಯಿ ಚಟ್ನಿಯೊಂದಿಗೆ ಟೊಮೆಟೊ ಚಟ್ನಿ ಕೂಡ ಮಾಡಿ.
ಅದು ಕೂಡ ಹೋಟೆಲ್ ಶೈಲಿಯಲ್ಲಿ ಟೊಮೆಟೊ ಚಟ್ನಿ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ. ನೀವು ಮತ್ತು ನಿಮ್ಮ ಕುಟುಂಬ ಸದಸ್ಯರೆಲ್ಲರೂ ಇಷ್ಟಪಟ್ಟು ಅದನ್ನು ತಿನ್ನುವುದರಲ್ಲಿ ಎರಡು ಮಾತಿಲ್ಲ. ಮುಖ್ಯವಾಗಿ ಈ ಚಟ್ನಿಯನ್ನು 10 ನಿಮಿಷದಲ್ಲಿ ಮಾಡಬಹುದು. ಇದನ್ನು ದೋಸೆ ಇಡ್ಲಿಗೆ ಮಾತ್ರವಲ್ಲ, ಚಪಾತಿ, ಪೂರಿ, ರೈಸ್ ಅಲ್ಲದೇ ಸಂಜೆ ಬ್ರೆಡ್ ಜೊತೆ ತಿನ್ನಲೂ ಸಖತ್ ಟೇಸ್ಟಿಯಾಗಿರುತ್ತದೆ.

ಹಾಗಾದರೆ ತಡ ಮಾಡುವುದು ಬೇಡ. ಹೋಟೆಲ್ ಸ್ಟೈಲ್ ಟೊಮೆಟೊ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ನೀವೂ ಕೂಡ ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ, ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
ಅಗತ್ಯವಿರುವ ವಸ್ತುಗಳು:
* ಆಲಿವ್ ಎಣ್ಣೆ - 2 ಚಮಚ
* ಬೆಳ್ಳುಳ್ಳಿ,ಲವಂಗ - 4
* ಈರುಳ್ಳಿ - 1 (ಸಣ್ಣದಾಗಿ ಹೆಚ್ಚಿದ)
* ಟೊಮೆಟೊ - 4 (ಸಣ್ಣದಾಗಿ ಹೆಚ್ಚಿದ)
* ಕರಿಬೇವಿನ ಎಲೆಗಳು - 1 ಕಟ್ಟು
* ಅರಿಶಿನ ಪುಡಿ - 1/4 ಟೀಸ್ಪೂನ್
* ಮೆಣಸಿನಕಾಯಿ - 2
* ಜೀರಿಗೆ - 1 /2 ಟೀಸ್ಪೂನ್
* ಹುಣಸೆಹಣ್ಣು - 1 ಸಣ್ಣ ತುಂಡು
* ಉಪ್ಪು - ರುಚಿಗೆ ತಕ್ಕಂತೆ
* ಬೆಲ್ಲ - 1 ಸಣ್ಣ ತುಂಡು
ಒಗ್ಗರಣೆಗಾಗಿ...
* ಎಣ್ಣೆ - 1 ಟೀಸ್ಪೂನ್
* ಸಾಸಿವೆ - 1/2 ಟೀಸ್ಪೂನ್
* ಉದ್ದಿನ ಬೇಳೆ - 1/2 ಟೀಸ್ಪೂನ್
* ಕರಿಬೇವಿನ ಎಲೆಗಳು - ಸ್ವಲ್ಪ

ಪಾಕವಿಧಾನ:
* ಮೊದಲು ಬಾಣಲೆಯನ್ನು ಒಲೆಯಲ್ಲಿ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದಾಗ ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಲವಂಗಾ ಮತ್ತು ಸ್ವಲ್ಪ ಉಪ್ಪು ಹಾಕಿ ಮೃದುವಾಗುವವರೆಗೆ ಹುರಿಯಿರಿ.
* ಅದಕ್ಕೆ ಟೊಮೆಟೊ, ಕರಿಬೇವಿನ ಸೊಪ್ಪು ಮತ್ತು ಅರಿಶಿನ ಪುಡಿಯನ್ನು ಹಾಕಿ ಟೊಮೆಟೊ ಮೃದುವಾಗುವವರೆಗೆ ಹುರಿಯಿರಿ.
* ನಂತರ ಮೆಣಸಿನಕಾಯಿ ಹಾಕಿ 2 ನಿಮಿಷ ಹುರಿಯಿರಿ. ಬಳಿಕ ಇದಕ್ಕೆ ಕರಿಬೇವಿ, ಅರಿಶಿನ ಪುಡಿ ಹಾಕಿ ಬೇಯಿಸಿ.
* ಬಳಿಕ ಹುಣಸೆ ಹಣ್ಣನ್ನು ಸಣ್ಣ ತುಂಡು ಹಾಕಿ ಹುರಿದು ತಣ್ಣಗಾಗಿಸಿ.
* ನಂತರ ಮಿಕ್ಸರ್ ಜಾರ್ ನಲ್ಲಿ ಹುರಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಸ್ವಲ್ಪ ಬೆಲ್ಲ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ನಂತರ ಒಂದು ಬಟ್ಟಲಿನಲ್ಲಿ ಚಟ್ನಿ ತೆಗೆದುಕೊಳ್ಳಿ.
* ಕೊನೆಗೆ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪನ್ನು ಹಾಕಿ ಒಗ್ಗರಣೆ ಮಾಡಿ ಚಟ್ನಿಯೊಂದಿಗೆ ಬೆರೆಸಿ ತಿಂದರೆ ರುಚಿಕರವಾದ ಹೋಟೆಲ್ ಶೈಲಿಯ ಟೊಮೆಟೊ ಚಟ್ನಿ ರೆಡಿ.












Click it and Unblock the Notifications