Health: ಕಣ್ಣು ಮುಚ್ಚಿದ್ರೆ ನಿದ್ದೆ ಬಾರದೆ ಆಫೀಸ್ ಕೆಲ್ಸಾ ನೆನಪಾಗುತ್ತಾ? ಈ ಹಣ್ಣು ತಿನ್ನಿ...
ಕೋಲೀನ್ ದೇಹಕ್ಕೆ ಅಗತ್ಯವಿರುವ ಪೋಷಕಾಂಶ. ಆದರೆ ಅನೇಕ ಬಾರಿ ಜನರು ಅಗತ್ಯವಿರುವಷ್ಟು ಕೋಲಿನ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದು ಕೆಲ ಹಣ್ಣುಗಳು ಅಥವಾ ಕೆಲ ಆಹಾರ ಸೇವನೆ ಮಾಡುವ ಮೂಲಕ ಮಾತ್ರ ಹೆಚ್ಚಾಗಿ ಲಭ್ಯವಾಗುತ್ತದೆ. ಕೋಲೀನ್ ಏಕೆ ಮುಖ್ಯ ಅಂದರೆ ದೇಹದ ಸಾಮಾನ್ಯ ಕಾರ್ಯಗಳಿಗೆ ಇದರ ಅಗತ್ಯವಿದೆ. ಇದು ಯಕೃತ್ತಿನಿಂದ ಸಣ್ಣ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ.
ನರಮಂಡಲ, ಚಯಾಪಚಯ, ಮೆದುಳಿನ ಬೆಳವಣಿಗೆ ಮತ್ತು ಸ್ನಾಯುಗಳ ಚಲನೆಗೆ ಇದು ಮುಖ್ಯವಾಗಿದೆ. ದೇಹಕ್ಕೆ ಇಷ್ಟೇಲ್ಲಾ ಪ್ರಯೋಜನವನ್ನು ನೀಡುವ ಕೋಲೀನ್ ಈ ಒಂದು ಹಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ನಾವ್ಯಾರೂ ಕೂಡ ಊಹಿಸದಂತಹ ಆರೋಗ್ಯಕರ ಪ್ರಯೋಜನಗಳು ಇವೆ. ಹಾಗಾದರೆ ಕೋಲೀನ್ ಅನ್ನು ಯಾವೆಲ್ಲಾ ಆಹಾರ ಹಾಗೂ ಹಣ್ಣು ಸೇವನೆಯಿಂದ ಪಡೆಯಬಹುದು, ಅದರಿಂದಾಗುವ ಪ್ರಯೋಜನಗಳು ಯಾವುವು ಎಂದು ತಿಳಿಯೋಣ.

ಉತ್ತಮ ನಿದ್ರೆಯನ್ನು ನೀಡುವ ಕೋಲೀನ್
ನಿದ್ರೆ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ನಿದ್ರೆಯ ಸಮಯದಲ್ಲಿ ದೇಹ ಚೇತನಗೊಳ್ಳಲು ಕಾರ್ಯನಿರ್ವಹಿಸುತ್ತದೆ. ಮೆದುಳು ಸ್ಮರಣೆಯನ್ನು ಪ್ರಕ್ರಿಯೆಗೊಳಿಸಲು ಮತ್ತು ಸಂಗ್ರಹಿಸಲು ಕಾರ್ಯನಿರ್ವಹಿಸುತ್ತದೆ. ನಿದ್ರೆಯ ಕೊರತೆ ಅಥವಾ ಕಳಪೆ ನಿದ್ರೆ ಆಲಸ್ಯ, ಆಯಾಸ, ಕಿರಿಕಿರಿ, ಪರಿಧಮನಿಯ ಕಾಯಿಲೆ, ಹೃದ್ರೋಗ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಕೋಲೀನ್ ಉತ್ತಮ ನಿದ್ರೆಯನ್ನು ನೀಡುತ್ತದೆ. ಹಾಗಾದರೆ ಸಂಪೂರ್ಣವಾಗಿ ನಿದ್ರೆ ಮಾಡಲು ಯಾವ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.
ನಿದ್ರೆಗಾಗಿ ಕೋಲೀನ್ ಆಹಾರ
1. ಪಪ್ಪಾಯಿ
ಪಪ್ಪಾಯ ತುಂಬಾ ಸಾಮಾನ್ಯವಾದ ಹಣ್ಣು. ಮಾರುಕಟ್ಟೆಯಲ್ಲಿ ಹೇರಳವಾಗಿ ಇದು ಸಿಗುತ್ತದೆ. ಅಲ್ಲದೆ ಹೆಚ್ಚಿನ ಋತುವಿನಲ್ಲಿ ಸಿಗುವ ಹಣ್ಣು ಇದಾಗಿದೆ. ಇದನ್ನು ಸಾಮಾನ್ಯವಾಗಿ ಉತ್ತಮ ಜೀರ್ಣಕ್ರಿಯೆಗಾಗಿ ಸೇವಿಸಲಾಗುತ್ತದೆ. ಇದರಿಂದಾಗಿ ಹೊಟ್ಟೆಯ ಸಮಸ್ಯೆಗಳಿರುವುದಿಲ್ಲ. ಈ ಹಣ್ಣನ್ನು ತಿನ್ನುವ ಮೂಲಕ ದೇಹವು ಕೋಲೀನ್ ಅನ್ನು ಪಡೆಯುತ್ತದೆ., ಅದರ ಸಹಾಯದಿಂದ ನೀವು ಶಾಂತಿಯುತವಾಗಿ ನಿದ್ರೆಯನ್ನು ಮಾಡಬಹುದು.
2. ಮೊಟ್ಟೆ
ಮೊಟ್ಟೆಗಳನ್ನು ಕೋಲೀನ್‌ನ ಶ್ರೀಮಂತ ಮೂಲವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ನೀವು ಹಳದಿ ಲೋಳೆಯನ್ನು ಸೇವಿಸಿದರೆ ಈ ಪೋಷಕಾಂಶದ ಕೊರತೆಯನ್ನು ಹೊಂದಿರುವುದಿಲ್ಲ ಮತ್ತು ನಿಮ್ಮ ನಿದ್ರೆ ಕೂಡ ಉತ್ತಮವಾಗಿರುತ್ತದೆ. ಒಂದು ದೊಡ್ಡ ಮೊಟ್ಟೆಯಲ್ಲಿ ಸುಮಾರು 147 ಮಿಗ್ರಾಂ ಕೋಲೀನ್ ಇರುತ್ತದೆ.

3. ಚಿಕನ್
ಚಿಕನ್ ಅನ್ನು ಸಾಮಾನ್ಯವಾಗಿ ಪ್ರೋಟೀನ್ ಪಡೆಯಲು ತಿನ್ನಲಾಗುತ್ತದೆ. ಇದು ದೇಹವನ್ನು ಬಲಪಡಿಸುತ್ತದೆ. ಆದರೆ ನೀವು ಅದನ್ನು ನಿಯಮಿತವಾಗಿ ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, 100 ಗ್ರಾಂ ಬೇಯಿಸಿದ ಕೋಳಿಯಲ್ಲಿ ಸುಮಾರು 73 ಮಿಗ್ರಾಂ ಕೋಲೀನ್ ಅನ್ನು ಪಡೆಯುತ್ತೀರಿ.
ಹೀಗೆ ಮೇಲಿನ ಎಲ್ಲಾ ಆಹಾರ ಹಾಗೂ ಹಣ್ಣು ನಿಮ್ಮ ನಿದ್ದೆಗೆ ಬೇಕಾಗುವ ಕೋಲೀನ್ ಅನ್ನು ನೀಡುತ್ತವೆ. ಹೀಗಾಗಿ ನಿದ್ದೆಯ ಸಮಸ್ಯೆ ಇರುವವರು, ನಿದ್ರೆಯ ಕೊರತೆ ಅನುಭವಿಸುತ್ತಿರುವವರಿಗೆ ಈ ಎಲ್ಲಾ ಆಹಾರ ಸೇವನೆಗೆ ಶಿಫಾರಸ್ಸು ಮಾಡಬಹುದು.
-
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಅಳೆದು ತೂಗಿ ಅನ್ನ ಮಾಡಬೇಡಿ,ತುಸು ಮಿಕ್ಕಲಿ: ಇದರ ಹಿಂದಿದೆ ಧಾರ್ಮಿಕ ಕಾರಣ -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
PM Modi: ಆದಿಚುಂಚನಗಿರಿ ಮಠಕ್ಕೆ 'ನಮೋ' ಭೇಟಿ: ಕರ್ನಾಟಕ ಸಂಸ್ಕೃತಿ, ಮಠದ ಸೇವೆಗೆ ಮೆಚ್ಚುಗೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್












Click it and Unblock the Notifications