Gold Rate: ಚಿನ್ನದ ಬೆಲೆ ಭರ್ಜರಿ ಏರಿಕೆ: ಆಭರಣ ಪ್ರಿಯರಿಗಾಗಿ ಈ ಸಲಹೆಗಳು

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಿಶ್ಚಿತಾರ್ಥ-ಮದುವೆಯಂತಹ ಸಮಾರಂಭಗಳ ಸಂಖ್ಯೆ ಹೆಚ್ಚಾಗಿದ್ದು, ಜೊತೆಗೆ ಇತರ ಶುಭಕಾರ್ಯಗಳು ಕೂಡ ಭರದಿಂದ ಸಾಗುತ್ತಿದೆ. ಶಾಸ್ತ್ರ, ಸಂಪ್ರದಾಯ, ಪ್ರತಿಷ್ಠೆ ಇವುಗಳನ್ನೆಲ್ಲಾ ಪರಿಗಣಿಸಿ ಶುಭ ಸಮಾರಂಭಗಳಿಗೆ ಚಿನ್ನಾಭರಣಕೊಳ್ಳುವವರ ಸಂಖ್ಯೆ ತೀರಾ ಹೆಚ್ಚಾಗುತ್ತಿದ್ದು, ಚಿನ್ನದ ಬೆಲೆ ಗಗನಕ್ಕೇರುತ್ತಿದೆ.

ನಿಶ್ಚಿತಾರ್ಥ-ಮದುವೆಯಂತಹ ಸಮಾರಂಭಗಳಲ್ಲಿ ಚಿನ್ನ ಧರಿಸುವುದು ಸಾಮಾನ್ಯವಾಗಿದೆ. ಆದರೆ ಚಿನ್ನ ಧರಿಸಲೇಬೇಕು ಎನ್ನುವ ಕಟ್ಟುಪಾಡಿಗೆ ಬೀಳಬೇಡಿ. ಏಕೆಂದರೆ ಚಿನ್ನದ ಬೆಲೆ ದುಬಾರಿಯಾಗಿದೆ. ಚಿನ್ನವನ್ನೇ ಧರಿಸಬೇಕು ಎನ್ನುವ ಆಸೆಗೆ ಬಿದ್ದು ಸಾಲದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳಬೇಡಿ. ಚಿನ್ನ ಖರೀದಿಸಬೇಕು ಎಂದು ನಿಮ್ಮ ಆದಾಯಕ್ಕಿಂತ ಹೆಚ್ಚಿನ ಸಾಲ ಮಾಡಿಕೊಳ್ಳಬೇಡಿ. ಇದು ನಿಮಗೆ ಚಿನ್ನ ಖರೀದಿಸಿದ ಖುಷಿಗಿಂತ ಮಾನಸಿಕ ನೆಮ್ಮದಿಯನ್ನು ಕೆಡಿಸುವ ಸಾಧ್ಯತೆ ಹೆಚ್ಚಿದೆ.

Gold Price Has Increased Here Is The Some Simple Tips For Jewellery Lovers

ಚಿನ್ನವನ್ನು ಭವಿಷ್ಯಕ್ಕೆ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಯೋಚನೆ ಮಾಡುವವರು ಈಗಲೇ ಚಿನ್ನ ಖರೀದಿಸಿ ಏಕೆಂದರೆ ಮುಂದಿನ ದಿನಗಳಲ್ಲಿ ಸ್ವರ್ಣ ದರ ಮತ್ತಷ್ಟು ಹೆಚ್ಚಾಗಲಿದೆ. ಆದರೆ ಮದುವೆಯಂತಹ ಸಮಾರಂಭಗಳಲ್ಲಿ ಸುಂದರವಾಗಿ ಕಾಣಲು ಹಾಗೂ ಧರಿಸಬೇಕು ಎಂದು ಚಿನ್ನ ಖರೀದಿಸಬೇಕು ಎನ್ನುವವರಿಗೆ ಇದು ಸೂಕ್ತ ಕಾಲವಲ್ಲ. ಬದಲಿಗೆ ಈ ಕೆಳಗೆ ನೀಡಲಾದ ಸಲಹೆಗಳನ್ನು ಆಭರಣ ಪ್ರಿಯರು ಅನುಸರಿಸಬಹದು.

ಬೆಳ್ಳಿ ಆಭರಣಗಳಿಗೆ ಆದ್ಯತೆ ನೀಡಿ

ಚಿನ್ನದಂತೆ ಬೆಳ್ಳಿಯ ದರವೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಬೆಳ್ಳಿ ಚಿನ್ನದಷ್ಟು ದುಬಾರಿಯಲ್ಲ. ಹೀಗಾಗಿ ಬೆಳ್ಳಿ ಆಭರಣಗಳಿಗೆ ಆದ್ಯತೆ ನೀಡಿ. ಇನ್ನೂ ಇತ್ತೀಚಿಗೆ ಬೆಳ್ಳಿ ಆಭರಣಗಳು ಕೂಡ ಟ್ರೆಂಡಿಂಗ್‌ ಆಗುತ್ತಿದೆ. ಬೆಳ್ಳಿಯ ಇಮಿಟೇಷನ್‌ ಜ್ಯುವೆಲರಿಗಳು ಲಭ್ಯವಿದೆ. ಥೇಟ್‌ ಚಿನ್ನದ ರೀತಿ ಕಾಣುವ ಈ ಆಭರಣಗಳ ಖರೀದಿಯೂ ಸುಲಭ ಹಾಗೂ ಹೆಚ್ಚಿನ ಕಾಲ ಬಾಳಿಕೆ ಬರುತ್ತದೆ. ಆಂಟಿಕ್‌ ಆಭರಣಗಳ ಸೆಟ್‌, ಪ್ರೀಶಿಯಸ್‌ ಜ್ಯುವೆಲರಿಗಳು, ಟೆಂಪಲ್‌ ಜ್ಯುವೆಲರಿ, ಕಂಟೆಂಪರರಿ ಡಿಸೈನ್ಸ್‌ ಸೇರಿದಂತೆ ಚಿನ್ನದ ವಿವಿಧ ರೀತಿಗಳು ಬೆಳ್ಳಿಯಲ್ಲೂ ಕೂಡ ಸಿಗುತ್ತದೆ. ಹೀಗಾಗಿ ಬೆಳ್ಳಿಯ ಆಭರಣಗಳಿಗೂ ಆದ್ಯತೆ ನೀಡಿ.

Gold Price Has Increased Here Is The Some Simple Tips For Jewellery Lovers

ಒನ್‌ ಗ್ರಾಂ ಗೋಲ್ಡ್ ಜ್ಯುವೆಲರಿ

ಕಳೆದ ಅನೇಕ ವರ್ಷಗಳಿಂದ ಮಾರುಕಟ್ಟೆಯಲ್ಲಿ ಯಶಸ್ವಿ ಉದ್ಯವಾಗಿರುವ ಒನ್‌ ಗ್ರಾಂ ಗೋಲ್ಡ್ ಜ್ಯುವೆಲರಿಯನ್ನು ಎಂತವರೂ ಖರೀದಿಸಬಹುದು. ದಿಟ್ಟು ಚಿನ್ನದ ಆಭರಣಗಳಂತೆ ಕಾಣುವ ಇವುಗಳು ನಿಮಗೆ ಸುಂದರವಾದ ಲುಕ್‌ ನೀಡುತ್ತದೆ. ಚೆನ್ನಾಗಿ ಇಟ್ಟುಕೊಂಡರೆ ಹಲವು ವರ್ಷಗಳು ಇದನ್ನು ಬಳಕೆ ಮಾಡಬಹುದು. ಚಿನ್ನದಂತೆ ಕಾಣುವ ವಿವಿಧ ರೀತಿಯ ಆಭರಣಗಳನ್ನು ಧರಿಸಬೇಕು ಎನ್ನುವ ಆಸೆ ಇರುವ ಆಭರಣ ಪ್ರಿಯರು ಈ ಒನ್‌ ಗ್ರಾಂ ಗೋಲ್ಡ್ ಜ್ಯುವೆಲರಿಗೆ ಆದ್ಯತೆ ನೀಡಬಹುದು.

ಚಿನ್ನದ ಮೇಲೆ ಹೂಡಿಕೆ

ಇತರ ಆಭರಣಗಳ ಮೇಲೆ ಆಸಕ್ತಿ ಇಲ್ಲ ಚಿನ್ನವೇ ಖರೀದಿಸಬೇಕು ಎನ್ನುವವರು ಏಕಾಏಕಿ ಚಿನ್ನವನ್ನು ಖರೀಸುವ ಬದಲು ಚಿನ್ನದ ಮೇಲೆ ಹೂಡಿಕೆ ಮಾಡಲು ಆರಂಭಿಸಿ. ಸಾಲ ಮಾಡಿ ಬಡ್ಡಿ ಕಟ್ಟಿ ಚಿನ್ನ ಖರೀಸುವ ಬದಲು ಚಿನ್ನಕೊಳ್ಳಲು ಆಭರಣದ ಅಂಗಡಿಗಳಲ್ಲೇ ಹೂಡಿಕೆ ಮಾಡಿ.

Gold Price Has Increased Here Is The Some Simple Tips For Jewellery Lovers

ಈಗೀಗ ಸಾಮಾನ್ಯವಾಗಿ ಎಲ್ಲಾ ಆಭರಣದ ಅಂಗಡಿಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಅನೇಕ ಯೋಜನೆಗಳಿರುತ್ತದೆ. ತಿಂಗಳಿಗೆ ನಿಮ್ಮಿಂದಾಗುವಷ್ಟು ಹಣವನ್ನು ಚಿನ್ನದ ಸ್ಕೀಮ್‌ಗಳನ್ನು ಕಟ್ಟಿ. ಕಂತು ಕಂತುಗಳ ರೀತಿ ಕಟ್ಟುವ ಈ ಹಣವು ವರ್ಷಗಳು ಅಥವಾ ನಿಮಗೆ ಬೇಕಾಗುವ ಸಮಯದಲ್ಲಿ ಚಿನ್ನ ಖರೀದಿಸಲು ನೆರವಾಗುತ್ತದೆ.

ಇನ್ನು ಕೆಲವೇ ದಿನಗಳಲ್ಲಿ ಆಷಾಢ ಮಾಸ ಆರಂಭವಾಗಲಿದ್ದು, ಈ ಸಮಯದಲ್ಲಿ ಶುಭ ಸಮಾರಂಭಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಅನೇಕರು ಮದುವೆಯಂತಹ ಶುಭಕಾರ್ಯಗಳನ್ನು ಮಾಡುವುದಿಲ್ಲ. ಹೀಗಾಗಿ ಚಿನ್ನ ಖರೀಸುವವರ ಸಂಖ್ಯೆ ಕೂಡ ಕಡಿಮೆಯಾಗಲಿದ್ದು, ಚಿನ್ನದ ದರ ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಸಮಯದಲ್ಲಿ ಆಭರಣ ಪ್ರಿಯರು ಚಿನ್ನ ಖರೀದಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+