ಸಾಮಾನ್ಯ ಫೋಟೋಗಳನ್ನು ವೃತ್ತಿಪರ ಭಾವಚಿತ್ರಗಳಾಗಿ ಪರಿವರ್ತಿಸುವ ಜೆಮಿನಿ AI ಪ್ರಾಂಪ್ಟ್‌ಗಳು
ಇನ್ನು ಅತ್ಯದ್ಬುತ ಸ್ಟುಡಿಯೋ, ವೃತ್ತಿಪರ ಕ್ಯಾಮರಾಮ್ಯಾನ್‌ಗಳ ಅಗತ್ಯವೇ ಇಲ್ಲ. ಬೇರೆ ಬೇರೆ ರೀತಿಯ ಅದ್ಭುತ ಫೋಟೋಗಳನ್ನು ನೀವೇ ನಿಮ್ಮ ಮೊಬೈಲ್‌ನಲ್ಲಿ ಸಿದ್ದಗೊಳಿಸಬಹುದು. ವೃತ್ತಿಪರ ಛಾಯಾಗ್ರಾಹಕರನ್ನೇ ಮೀರಿಸುವ ಅತಿ ಸುಂದರ ಫೋಟೊಗಳು ನಿಮ್ಮ ಅಂಗೈಯಲ್ಲಿಯೇ ಮೂಡಿ ಬರಲಿದೆ. ಗೂಗಲ್ ನ ಜೆಮಿನಿ AIನ ಈ ಪ್ರಾಂಪ್ಟ್‌ಗಳು ನಿಮಗೆ ಗೊತ್ತಿದ್ದರೆ ಸಾಕು. ನೀವು ಕೂಡಾ ವೃತ್ತಿಪರ ಫೋಟೋಗ್ರಾಫರ್ ಆಗುವುದು ಶತ ಸಿದ್ದ.
ಸಾಮಾನ್ಯ ಫೋಟೋಗಳನ್ನು ಅಸಾಧಾರಣವಾಗಿ ಪರಿವರ್ತಿಸಲು ಜೆಮಿನಿ AI ಪ್ರಬಲ ವೇದಿಕೆಯನ್ನು ನೀಡುತ್ತದೆ. ಅದರ ಸುಧಾರಿತ ಎಡಿಟಿಂಗ್ ಮೂಲಕ ತಮಗೆ ಬೇಕಾದ ರೀತಿಯಲ್ಲಿ ಫೋಟೋಗಳನ್ನು ತಾವೇ ಸಿದ್ದಪಡಿಸಿಕೊಳ್ಳಬಹುದು. ಪ್ರಾಂಪ್ಟ್‌ಗಳು ಜೆಮಿನಿ AI ಗೆ ಲೈಟಿಂಗ್, ಬಣ್ಣ, ಟೆಕಶ್ಚರ್‌ಗಳನ್ನು ಬಳಸಿಕೊಂಡು ನಿಮಗೆ ಅಗತ್ಯಕ್ಕೆ ತಕ್ಕಂತೆ ಬೆರಗುಗೊಳಿಸುವ ರೀತಿಯಲ್ಲಿ ಅತ್ಯದ್ಬುತ ಫೋಟೊಗಳನ್ನು ನಿಮ್ಮ ಮುಂದಿಡಲು ಸಹಾಯ ಮಾಡುತ್ತದೆ. ಸಾಮಾಜಿಕ ಮಾಧ್ಯಮ, ಪೋರ್ಟ್‌ಫೋಲಿಯೊಗಳು ಅಥವಾ ವೈಯಕ್ತಿಕ ಬಳಕೆ ಹೀಗೆ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಸುಂದರ ಫೋಟೋಗಳನ್ನು ಪಡೆಯಬಹುದು.

ಜೆಮಿನಿ ಫೋಟೋ ಪ್ರಾಂಪ್ಟ್:
ವೃತ್ತಿಪರ ಹೆಡ್‌ಶಾಟ್ ಫೋಟೋ:
ಕೆಲಸಕ್ಕೆ ನೇಮಕ ಮಾಡಿಕೊಳ್ಳುವಾಗ, ಕ್ಲೈಂಟ್‌ಗಳು ಲಿಂಕ್ಡ್‌ಇನ್ ಅನ್ನು ಪರಿಶೀಲಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ ನಮ್ಮ ಹಳೆಯದಾದ ಮಸುಕಾದ ಫೋಟೋಗಳನ್ನು ಲಗತ್ತಿಸಿದ್ದರೆ ಕೆಲವೊಮ್ಮೆ ಸರಿಯಾದ ಇಂಪ್ರೆಶನ್ ನೀಡುವುದು ಸಾಧ್ಯವಾಗದೇ ಹೋಗಬಹುದು. ಹಾಗಂತ ಇದಕ್ಕಾಗಿ ಸ್ಟುಡಿಯೋ ಸೆಷನ್‌ಗೆ ಹಣ ಖರ್ಚು ಮಾಡುವುದು ಕೂಡಾ ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ. ಇಂಥಹ ಸಂದರ್ಭದಲ್ಲಿ ಜೆಮಿನಿ ಕೆಲವೇ ನಿಮಿಷಗಳಲ್ಲಿ ನಿಮಗೆ ಬೇಕಾದ ರೀತಿಯ ಫೋಟೋ ಸಿದ್ದ ಪಡಿಸಿ ಕೊಡುತ್ತದೆ.
ಪ್ರಾಂಪ್ಟ್:
ವೃತ್ತಿಪರ ಕಾರ್ಪೊರೇಟ್ ಹೆಡ್‌ಶಾಟ್, ಬಿಳಿ ಶರ್ಟ್ ಮೇಲೆ ಚಾರ್ಕೋಲ್ ಬಣ್ಣದ ಬ್ಲೇಜರ್ ಧರಿಸಿರುವ 30 ರ ಆಸುಪಾಸಿನ ಮಹಿಳೆ/ಪುರುಷ/ವ್ಯಕ್ತಿಯ ಫೋಟೋಗೆ ಸೂಕ್ಷ್ಮ ಗ್ರೇಡಿಯಂಟ್ ಗ್ರೇ ಬ್ಯಾಕ್ ಗೌಂಡ್ ಇರಲಿ. ಸಾಫ್ಟ್ ಸ್ಟುಡಿಯೋ ಲೈಟಿಂಗ್, ಆತ್ಮವಿಶ್ವಾಸ, ಸ್ವಲ್ಪ ನಗು, ತೀಕ್ಷ್ಣ ಕಣ್ಣುಗಳು ಮತ್ತು ಕ್ಯಾಮೆರಾದತ್ತ ನೇರ ನೋಟ ಇರುವ 85mm ಲೆನ್ಸ್‌ನಲ್ಲಿ ಚಿತ್ರೀಕರಿಸಲಾಗಿರುವ ಉತ್ತಮ ಗುಣಮಟ್ಟದ ಫೋಟೋ ಎನ್ನುವ ಪ್ರಾಂಪ್ಟ್ ನೀಡಿ ನಿಮ್ಮ ಪೋಟೋ ಅಪ್‌ಲೋಡ್ ಮಾಡಿದರೆ ನಿಮಗೆ ಬೇಕಾಗಿರುವ ರೀತಿಯ ಭಾವಚಿತ್ರ ಸಿದ್ದವಾಗುತ್ತದೆ.
ಸಾಮಾಜಿಕ ಮಾಧ್ಯಮಕ್ಕಾಗಿ ವೈಯಕ್ತಿಕ ಬ್ರ್ಯಾಂಡ್‌ಗಾಗಿ ಫೋಟೋ:
ತರಬೇತುದಾರರು, ಸಲಹೆಗಾರರು, ಫ್ರೀಲ್ಯಾನ್ಸರ್‌ಗಳು ಮತ್ತು ಕ್ರಿಯೆಟರ್ಸ್ ಎಲ್ಲರೂ ದಿನದ ಬಹಳ ಸಮಯ ಆನ್‌ಲೈನ್‌ನಲ್ಲಿಯೇ ಕಳೆಯುತ್ತಾರೆ. ಹೀಗಿರುವಾಗ ನಿಮ್ಮ ಪರ್ಸನಲ್ ಬ್ರಾಂಡ್ ಇಮೇಜ್ ಇಲ್ಲಿ ಬಹಳ ಮುಖ್ಯವಾಗಿರುತ್ತದೆ. ಉತ್ತಮ ವೈಯಕ್ತಿಕ ಬ್ರ್ಯಾಂಡ್ ಇಮೇಜ್ ಎಂದರೆ ಕೇವಲ ವ್ಯಾನಿಟಿ ಅಲ್ಲ. ಅದು ನೀವು ಏನು ಮಾಡುತ್ತೀರಿ? ನೀವು ಯಾರು ಎಂಬುದರ ದೃಶ್ಯ ಸಂಕ್ಷಿಪ್ತ ರೂಪವಾಗಿದೆ. ಒಂದೇ ಫೋಟೋದಲ್ಲಿ ಸರಿಯಾದ ಹಿನ್ನೆಲೆ, ಉಡುಪು, ಎನರ್ಜಿ ಇದ್ದರೆ 200 ಪದಗಳ ಬಯೋ ಕಾಪಿಯ ಕೆಲಸವನ್ನು ಆ ಒಂದು ಛಾಯಾಚಿತ್ರ ಮಾಡಿ ಮುಗಿಸುತ್ತದೆ.
ಪ್ರಾಂಪ್ಟ್:
ಉತ್ತಮ ಗಾಳಿ ಬೆಳಕು ಇರುವ ಕೆಲಸದ ಸ್ಥಳ ಅಥವಾ ಮನೆಯ ಸ್ಟುಡಿಯೋದಲ್ಲಿರುವಂಥಹ ಫೋಟೋ. ನೈಸರ್ಗಿಕ ಕಿಟಕಿ ಬೆಳಕು ಇರುವಂತೆ ಶುಭ್ರವಾದ ಲಿನಿನ್ ಶರ್ಟ್, ವಿಶ್ರಾಂತಿ ಭಂಗಿ, ನೈಜ ನಗು, ಹಿನ್ನೆಲೆಯಲ್ಲಿ ಪುಸ್ತಕದ ಕಪಾಟುಗಳು ಅಥವಾ ಸಸ್ಯಗಳು, ಗೋಲ್ಡನ್ ಅವರ್ ಫೀಲ್ ನೀಡುವಂಥಹ ಫೋಟೊ ಎನ್ನುವ ಪ್ರಾಂಪ್ಟ್ ನೀಡಿ ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಿದರೆ ಸೋಶಿಯಲ್ ಮೀಡಿಯಾ ಬಳಕೆಗೆ ಅಗತ್ಯವಿರುವ ಪರ್ಸನಲ್ ಬ್ರಾಂಡ್ ಫೋಟೋ ನಿಮ್ಮ ಕೈಯ್ಯಲ್ಲಿರುತ್ತದೆ.
ಸ್ಪೀಕರ್ ಅಥವಾ ಈವೆಂಟ್ ಬಯೋ ಫೋಟೋ:
ಸಮ್ಮೇಳನ ಆಯೋಜಕರು, ಪಾಡ್‌ಕ್ಯಾಸ್ಟ್ ಹೋಸ್ಟ್‌ಗಳು ಮತ್ತು ಕಾರ್ಯಕ್ರಮ ಸಂಯೋಜಕರು ಯಾವಾಗಲೂ ನಿಮ್ಮ ಜೀವನದ ಕತೆಯ ಜೊತೆಗೆ ಹೈ ರೆಸಲ್ಯೂಶನ್ ಫೋಟೋವನ್ನು ನೀಡುವಂತೆ ಕೇಳುತ್ತಾರೆ . ಈ ಚಿತ್ರಗಳು ಈವೆಂಟ್ ವೆಬ್‌ಸೈಟ್‌ಗಳು, ಪ್ರೆಸ್ ಕಿಟ್‌ಗಳು ಮತ್ತು ವೇದಿಕೆಯ ಪರದೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇಂಥಹ ಫೋಟೋಗಳು ಸಾಮಾನ್ಯವಾಗಿ ಗಾತ್ರದಲ್ಲಿ ದೊಡ್ಡದಾಗಿರುತ್ತದೆ.
ಪ್ರಾಂಪ್ಟ್:
ದೇಹದ ಮುಕ್ಕಾಲು ಭಾಗ ಕಾಣಿಸಿಕೊಳ್ಳುವಂತಹ ಛಾಯಾಚಿತ್ರ, ಸ್ವಲ್ಪ ತೆರೆದ ತೋಳುಗಳೊಂದಿಗೆ ಆತ್ಮವಿಶ್ವಾಸದಿಂದ ನಿಂತಿರುವ ಭಂಗಿ, ಗಾಢವಾದ ನೀಲಿ ಅಥವಾ ಇದ್ದಿಲು ಬಣ್ಣದ ಸೂಟ್, ಮಸುಕಾದ ಗಾಢ ಹಿನ್ನೆಲೆ, ಶಕ್ತಿಯುತ ಮತ್ತು ಪ್ರಬಲ ಉಪಸ್ಥಿತಿ, ಹೈ ಕಾಂಟ್ರಾಸ್ಟ್, ತೀಕ್ಷ್ಣವಾದ ಮುಖದ ವಿವರ, ಎಂದು ಪ್ರಾಂಪ್ಟ್ ನೀಡಿ ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಿದರೆ ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಫೋಟೋ ಸಿಗುತ್ತದೆ.
ರಜಾ ಕಾರ್ಡ್‌ಗಳು ಮತ್ತು ಸ್ಮರಣಿಕೆಗಳಿಗಾಗಿ ಕುಟುಂಬದ ಭಾವಚಿತ್ರ:
ಫ್ಯಾಮಿಲಿ ಫೋಟೊ ಯಾವಾಗಲೂ ದುಬಾರಿಯಾಗಿರುತ್ತವೆ. ಯಾಕೆಂದರೆ ಸಣ್ಣ ಮಕ್ಕಳು ಇದ್ದರೆ ಎಲ್ಲರನ್ನೂ ಸರಿಯಾಗಿ ಸಂಭಾಳಿಸಿಕೊಂಡು ಉತ್ತಮ ಛಾಯಾಚಿತ್ರ ಮೂಡಿ ಬರುವಂತೆ ಮಾಡುವುದು ಸುಲಭದ ಮಾತಲ್ಲ. ಹಾಗಾಗಿ ಇಲ್ಲಿ ಫೋಟೋಗ್ರಾಫರ್‌ಗಳು ತುಸು ಹೆಚ್ಚೇ ಚಾರ್ಜ್ ಮಾಡುತ್ತಾರೆ. ಆದರೆ ಜೆಮಿನಿ ಹಾಗಲ್ಲ. ಕುಟುಂಬದ ಸದಸ್ಯರ ಫೋಟೋಗಳನ್ನು ಬಳಸಿಕೊಂಡು ಒಂದೊಳ್ಳೆ ಫ್ರೇಮ್‌ಗೆ ಬೇಕಾಗಿರುವ ಫೋಟೋವನ್ನು ಸಿದ್ದ ಪಡಿಸುತ್ತದೆ.
ನೀಡಬೇಕಾಗಿರುವ ಪ್ರಾಂಪ್ಟ್:
"ಶರತ್ಕಾಲದ ಹೊರಾಂಗಣ ಸನ್ನಿವೇಶದಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ತಾಯಿ, ತಂದೆ ಮತ್ತು ಇಬ್ಬರು ಚಿಕ್ಕ ಮಕ್ಕಳು ಬಿದ್ದ ಎಲೆಗಳಿಂದ ಸುತ್ತುವರೆದ ಮರದ ಬೆಂಚಿನ ಮೇಲೆ ಒಟ್ಟಿಗೆ ಕುಳಿತಿರುವಂತ ಫೋಟೋ. ಬರ್ನ್ಟ್ ಆರೆಂಜ್, ಕೆನೆ ಬಣ್ಣ, ಆಲಿವ್ ಗ್ರೀನ್ ಬಣ್ಣದ ಬಟ್ಟೆಗಳನ್ನು ತೊಟ್ಟಿರುವಂತೆ, ನೈಸರ್ಗಿಕ ಶಾಂತ ಅಭಿವ್ಯಕ್ತಿಗಳು, ನಗು, ಹಿನ್ನೆಲೆಯಲ್ಲಿ ಮರಗಳ ಚಿತ್ರ, ಫಿಲ್ಮಿ ಫೋಟೋಗ್ರಾಫಿ ರೀತಿ ಕೊಡಾಕ್ ಪೋರ್ಟಾ 400 ಕಲರ್ ಟೋನ್ ಎನ್ನುವ ಪ್ರಾಂಪ್ಟ್ ನೀಡಿ ಪ್ರತಿಯೊಬ್ಬ ಕುಟುಂಬ ಸದಸ್ಯರ ಫೋಟೋಗಳನ್ನು ಅಪ್‌ಲೋಡ್ ಮಾಡಿ. ನಿಮ್ಮ ಫ್ಯಾಮಿಲಿ ಪೋಟ್ರೇಟ್ ರೆಡಿಯಾಗಿ ಸಿಗುತ್ತದೆ.
ರಿಯಲ್ ಎಸ್ಟೇಟ್ ಏಜೆಂಟ್:
ಏಜೆಂಟರು, ದಲ್ಲಾಳಿಗಳು, ಹಣಕಾಸು ಸಲಹೆಗಾರರು, ದಂತವೈದ್ಯರು ಮತ್ತು ಸ್ಥಳೀಯ ವ್ಯಾಪಾರ ಮಾಲೀಕರು ಎಲ್ಲರಿಗೂ ವಿಶ್ವಾಸಾರ್ಹತೆಯನ್ನು ಒಂದು ನೋಟದಲ್ಲೇ ತಿಳಿಸುವ ಭಾವಚಿತ್ರ ಬೇಕಾಗುತ್ತದೆ. ಬಸ್ ಶೆಲ್ಟರ್, ಬ್ಯುಸಿನೆಸ್ ಕಾರ್ಡ್ ಅಥವಾ ಗೂಗಲ್ ಬ್ಯುಸಿನೆಸ್ ಪ್ರೊಫೈಲ್‌ನಲ್ಲಿರುವ ಫೋಟೋ ಸಾಮಾನ್ಯವಾಗಿ ಯಾರಾದರೂ ನಿಮ್ಮನ್ನು ಮೊದಲು ಸಂಪರ್ಕಿಸುವ ಸ್ಥಳವಾಗಿರುತ್ತದೆ.
ನೀಡಬೇಕಾಗಿರುವ ಪ್ರಾಂಪ್ಟ್:
"ರಿಯಲ್ ಎಸ್ಟೇಟ್ ಏಜೆಂಟ್ ಅಥವಾ ಸ್ಥಳೀಯ ವ್ಯವಹಾರ ಮಾಲೀಕರ ವಿಶ್ವಾಸಾರ್ಹ ವೃತ್ತಿಪರ ಭಾವಚಿತ್ರ. ಸ್ವಾಗತಾರ್ಹ ನಗು, ಅಚ್ಚುಕಟ್ಟಾದ ಕ್ಯಾಶುಯಲ್ ಉಡುಪು - ಬ್ಲೇಜರ್, ತೆರೆದ ಕಾಲರ್. ರಸ್ತೆ ಅಥವಾ ಸ್ಥಳೀಯ ಅಂಗಡಿಯ ಮುಂಭಾಗದಲ್ಲಿ ತೆಗೆದ ಛಾಯಾಚಿತ್ರ. ಪ್ರಕಾಶಮಾನವಾದ ನೈಸರ್ಗಿಕ ಹಗಲು ಬೆಳಕು, ಸ್ವಲ್ಪ ಮಸುಕಾದ ಹಿನ್ನೆಲೆ, ತೀಕ್ಷ್ಣವಾದ ಫೋಕಸ್ ಇರುವಂಥ ಮುಖ, ಹೈ ರೆಸಲ್ಯೂಶನ್, ನೈಸರ್ಗಿಕ ಚರ್ಮದ ಟೋನ್ ಇರುವ ಫೋಟೋಗಾಗಿ ಪ್ರಾಂಪ್ಟ್ ನೀಡಿ ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಬೇಕು.
ಸಂಸ್ಥಾಪಕರು ಮತ್ತು ಸ್ಟಾರ್ಟಪ್ ಸಿಇಒ:
ಪತ್ರಿಕಾ ವೈಶಿಷ್ಟ್ಯಗಳು, ಹೂಡಿಕೆದಾರರ ಡೆಕ್‌ಗಳು, ವೇಗವರ್ಧಕ ಅಪ್ಲಿಕೇಶನ್‌ಗಳು ಮತ್ತು ಕಂಪನಿ ವೆಬ್‌ಸೈಟ್‌ಗಳಿಗೆ ದೃಷ್ಟಿ, ನಾಯಕತ್ವ ಮತ್ತು ವಿಶ್ವಾಸಾರ್ಹತೆಯನ್ನು ಸಂವಹಿಸುವ ಸಂಸ್ಥಾಪಕರ ಭಾವಚಿತ್ರದ ಅಗತ್ಯವಿದೆ. ಇಲ್ಲಿ ತುಂಬಾ ಹೊಳಪು ಕೊಟ್ಟರೆ, ನೀವು ಸ್ಟಾಕ್ ಫೋಟೋದಂತೆ ಕಾಣಬಹುದು. ತುಂಬಾ ಸಾಂದರ್ಭಿಕವಾಗಿಯೂ ಕಾಣಿಸಬಹುದು.ಹೀಗಿರುವಾಗ ನಿಮಗೆ ಅಗತ್ಯವಿರುವ ಲುಕ್ ಅನ್ನು ಜೆಮಿನಿ ನೀಡುತ್ತದೆ.
ಪ್ರಾಂಪ್ಟ್:
"ಸ್ಟಾರ್ಟ್‌ಅಪ್ ಸಂಸ್ಥಾಪಕ ಅಥವಾ ತಂತ್ರಜ್ಞಾನ ಸಿಇಒ, ಸ್ವಚ್ಛವಾದ ಕನಿಷ್ಠ ಉಡುಪನ್ನು ಧರಿಸಿರುವ ಫೋಟೋ. ಡಾರ್ಕ್ ಕ್ರೂನೆಕ್ ಅಥವಾ ಸೂಕ್ಷ್ಮ ಮಾದರಿಯ ಶರ್ಟ್. ಆಧುನಿಕ ಗಾಜಿನ ಮತ್ತು ಕಾಂಕ್ರೀಟ್ ಕೆಲಸದ ಸ್ಥಳದಲ್ಲಿ ಅಥವಾ ಮುಸ್ಸಂಜೆಯಲ್ಲಿ ಬಾಲ್ಕನಿ ಕಿಟಕಿಗಳ ಮೂಲಕ ನಗರದ ದೃಶ್ಯ ಕಾಣಿಸುವಂತೆ ತೆಗೆದಿರುವ ಛಾಯಾಚಿತ್ರ. ಹಿನ್ನೆಲೆಯಲ್ಲಿ ನಗರದ ಹೊಳಪಿನಿಂದ ಸುತ್ತುವರಿದ ಬೆಳಕು ಸೂಕ್ಷ್ಮವಾದ ರಿಮ್ ಲೈಟ್ ನೊಂದಿಗೆ ಮುಂದಕ್ಕೆ-ಒರಗಿರುವ ನಿಂತಿರುವ ಭಂಗಿ, ಒಂದು ಕೈ ಮೇಜಿನ ಮೇಲೆ ವಿಶ್ರಾಂತಿ ಪಡೆಯುವ ರೀತಿಯಲ್ಲಿರುವಂತಹ ಫೋಟೋ. ಮ್ಯಾಗಜಿನ್ ಮುಖಪುಟ್ಟಕ್ಕೆ ಅನ್ವಯವಾಗುವಂತಹ ಫೋಟೋ ಎಂದು ಪ್ರಾಂಪ್ಟ್ ನೀಡಿ ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಬೇಕು.
ಇಲ್ಲಿ ಪ್ರಾಂಪ್ಟ್ ನೀಡುವಾಗ ಬೆಳಕಿನ ಮೂಲದ ಬಗ್ಗೆ ನಿರ್ದಿಷ್ಟವಾಗಿರಿ.
ಸಾಂಸ್ಕೃತಿಕ ಪರಂಪರೆ ಅಥವಾ ಹಬ್ಬದ ಭಾವಚಿತ್ರ:
ಕುಟುಂಬಗಳು ಮತ್ತು ವ್ಯಕ್ತಿಗಳು ಸಾಂಸ್ಕೃತಿಕ ಗುರುತು, ಪರಂಪರೆಯ ಆಚರಣೆಗಳು, ಹಬ್ಬಗಳು, ಮದುವೆಗಳು, ಪದವಿ ಪ್ರದಾನ ಸಮಾರಂಭದ ಫೋಟೋಗಳನ್ನು ಎಲ್ಲರೂ ಇಷ್ಟಪಡುತ್ತಾರೆ.
ಪ್ರಾಂಪ್ಟ್:
"ಸುಂದರವಾದ ಪರಂಪರೆಯ ಭಾವಚಿತ್ರ ರಚಿಸುವುದು. ಉದಾಹರಣೆಗೆ ನಿರ್ದಿಷ್ಟ ಸಾಂಸ್ಕೃತಿಕ ಸಂದರ್ಭ, ದೀಪಾವಳಿ, ಮದುವೆ, ನಾಮಕರಣ ಸಮಾರಂಭ. ಸಾಂಪ್ರದಾಯಿಕ ಉಡುಗೆ ಬೇಕಿದ್ದರೆ ಇಲ್ಲಿ ಸ್ಪಷ್ಟವಾಗಿ ಹೇಳಬೇಕು. ಉದಾಹರಣೆಗೆ ಗಾಢ ಕೆಂಪು ಮತ್ತು ಚಿನ್ನದಲ್ಲಿ ಕಸೂತಿ ಮಾಡಿದ ಲೆಹೆಂಗಾ ಹೀಗೆ. ಸಾಂಸ್ಕೃತಿಕ ಆಚರಣೆಯ ಮಸುಕಾದ ಹಿನ್ನೆಲೆಯಲ್ಲಿ ತೆಗೆದಿರುವ ಫೋಟೋ. ದೀಪಗಳು, ಹೂವಿನ ಅಲಂಕಾರ, ನೈಸರ್ಗಿಕ ಬೆಳಕು, ಸಂತೋಷದಾಯಕ ಮತ್ತು ಹೆಮ್ಮೆಯ ಅಭಿವ್ಯಕ್ತಿ, ಶ್ರೀಮಂತ ಮತ್ತು ರೋಮಾಂಚಕ ಬಣ್ಣ, ಸಂಭ್ರಮಾಚರಣೆಯ ವಾತಾವರಣ ಎಂದು ಪ್ರಾಂಪ್ಟ್ ನೀಡಿ ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಬೇಕು.
ಕೆಲವು ಮುಖ್ಯ ಸಲಹೆಗಳು:
ಈ ಪ್ರಾಂಪ್ಟ್‌ಗಳಿಂದ ನಿಮ್ಮ ನಿರೀಕ್ಷೆಯಂತೆ ಫಲಿತಾಂಶ ಸಿಗಬೇಕಾದರೆ ಈ ವಿಚಾರಗಳು ನೆನಪಿರಲಿ.
ಸ್ಪಷ್ಟ ಉಲ್ಲೇಖ ಫೋಟೋವನ್ನು ಅಪ್‌ಲೋಡ್ ಮಾಡಿ. ಮುಖದ ರಚನೆ ಮತ್ತು ಹೋಲಿಕೆಗೆ ಆಧಾರವನ್ನು ಹೊಂದಿರುವಾಗ ಜೆಮಿನಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ತಟಸ್ಥ ಬೆಳಕಿನಲ್ಲಿ ಸರಳವಾದ, ಉತ್ತಮ ಲೈಟಿಂಗ್‌ನಲ್ಲಿ ತೆಗೆದ ಸೆಲ್ಫಿ ಸೂಕ್ತವಾಗಿರುತ್ತದೆ.
ನಿಮಗೆ ಏನನ್ನಿಸುತ್ತಿದೆ ಎನ್ನುವುದನ್ನು ಸರಿಯಾಗಿ ವಿವರಿಸಿ. ವಿಶ್ವಾಸಾರ್ಹ," "ಕಮಾಂಡಿಂಗ್ ," "ಚಿಂತನಶೀಲ," ಮತ್ತು "ಸಂತೋಷದಾಯಕ" ದಂತಹ ಪದಗಳು ವಾಸ್ತವವಾಗಿ ಭಂಗಿ, ಅಭಿವ್ಯಕ್ತಿ ಮತ್ತು ಬೆಳಕಿನ ಆಯ್ಕೆಗಳ ಮೇಲೆ ಪ್ರಭಾವ ಬೀರುತ್ತವೆ.
ಬೆಳಕಿನ ಮೂಲದ ಬಗ್ಗೆ ನಿರ್ದಿಷ್ಟವಾಗಿರಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications