Garden Tips: ಈ ಸಸ್ಯಗಳಿದ್ದಲ್ಲಿ ಹಾವುಗಳೂ ಇರುತ್ತವೆಯಂತೆ! ನಿಮ್ಮ ಮನೆಯ ಸುತ್ತ ಮುತ್ತ ಒಮ್ಮೆ ಕಣ್ಣಾಡಿಸಿ

Garden Tips: ಮಳೆ ಬೀಳುತ್ತಿದ್ದ ಹಾಗೆ ಸುತ್ತ ಮುತ್ತ ಹಸಿರು ಹೆಚ್ಚಾಗುತ್ತದೆ. ಇನ್ನು ಮಳೆಗಾಲದಲ್ಲಿ ಬೇರೆ ಬೇರೆ ರೀತಿಯ ಹೂವಿನ ಗಿಡಗಳನ್ನು ತಂದು ನೆಡುವ ಅಭ್ಯಾಸ ಬಹಳ ಮಂದಿಗೆ ಇರುತ್ತದೆ. ಯಾಕೆಂದರೆ ಮಳೆಗಾಲದಲ್ಲಿ ಬಹುತೇಕ ಗಿಡಗಳ ಕಡೆಗೆ ಹೆಚ್ಚಿನ ಗಮನ ನೀಡುವ ಅಗತ್ಯವೇ ಇರುವುದಿಲ್ಲ. ಆದರೆ ಕೆಲವು ಸಸ್ಯಗಳು ಹಾವುಗಳ ನೆಲೆಯಾಗಿ ಬದಲಾಗಬಹುದು. ಆಹಾರ ಮತ್ತು ಅಡಗಿಕೊಳ್ಳಲು ಸುರಕ್ಷಿತ ಸ್ಥಳವನ್ನು ಹುಡುಕಿಕೊಂಡು ಬರುವ ಹಾವುಗಳು ಕೆಲವೊಂದು ಸಸ್ಯಗಳ ಹತ್ತಿರ ಬರುತ್ತವೆ. ಯಾಕೆಂದರೆ ಈ ಸಸ್ಯಗಳ ಸುತ್ತಲೂ ಕೀಟಗಳು, ಕಪ್ಪೆಗಳು, ಹಲ್ಲಿಗಳು, ಅಳಿಲುಗಳು ಅಥವಾ ಇಲಿಗಳು ಹೆಚ್ಚಾಗಿ ಇರುತ್ತವೆ. ಹಾಗಾಗಿ ಆ ತಮ್ಮ ಬೇಟೆಯನ್ನು ಹುಡುಕಿಕೊಂಡು ಬರುವ ಹಾವುಗಳು ಆ ಗಿಡಗಳ ಬುಡವನ್ನೇ ತಮ್ಮ ನೆಲೆಯನ್ನಾಗಿ ಮಾಡಿಬಿಡಬಹುದು.

ಬ್ರಹ್ಮ ಕಮಲ

ಬ್ರಹ್ಮ ಕಮಲವನ್ನು ರಾತ್ರಿ ರಾಣಿ ಎಂದು ಕೂಡಾ ಕರೆಯಲಾಗುತ್ತದೆ. ಈ ಹೂವಿನ ಪರಿಮಳ ಅದ್ಬುತವಾಗಿರುತ್ತದೆ. ಈ ಹೂವು ರಾತ್ರಿ ವೇಳೆಯೇ ಅರಳುವುದು. ಇದರ ಪರಿಮಳ ಬಹಳ ದೂರದವರೆಗೆ ಪಸರಿಸುತ್ತದೆ. ಇದು ವಿವಿಧ ಕೀಟಗಳನ್ನು ಆಕರ್ಷಿಸುತ್ತದೆ. ಕಪ್ಪೆಗಳು ಮತ್ತು ಹಲ್ಲಿಗಳು ಹೆಚ್ಚಾಗಿ ಈ ಹೂವಿನ ಪರಿಮಳಕ್ಕೆ ಮನ ಸೋತು ಇವುಗಳ ಬಳಿಬರುತ್ತದೆ. ಈ ಕೀಟಗಳನ್ನು ಹಿಡಿದು ತಿನ್ನುವ ಸಲುವಾಗಿ ಹಾವುಗಳು ಕೂಡಾ ಅಲ್ಲಿಗೆ ಬರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಬ್ರಹ್ಮ ಕಮಲ ಗಿಡಗಳ ಬಳಿ ಹೋಗುವ ಮುನ್ನ ಹುಷಾರಾಗಿರುವುದು ಒಳ್ಳೆಯದು.

Garden Tips

ದಟ್ಟವಾದ ರೋಸ್ಮರಿ ಸಸ್ಯಗಳು

ಇತ್ತೀಚಿನ ದಿನಗಳಲ್ಲಿ ರೋಸ್ಮರಿ ಸಸ್ಯ ಬಹಳ ಜನಪ್ರಿಯ ಗಿಡಮೂಲಿಕೆ ಎಂದರೆ ತಪ್ಪಲ್ಲ. ಇದರ ದಟ್ಟವಾದ ಎಲೆಗಳು ಕೆಳಗಿರುವ ಮಣ್ಣಿನಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಲಿಗಳು ಅಥವಾ ಇತರ ಸಣ್ಣ ಜೀವಿಗಳು ಹತ್ತಿರದಲ್ಲಿ ಈ ಗಿಡದ ಸುತ್ತಲೂ ಬರಲು ಪ್ರಾರಂಭಿಸಿದರೆ, ಹಾವುಗಳು ಕೂಡಾ ಅಲ್ಲಿ ಓಡಾಡುವುದು ಸಾಮಾನ್ಯವಾಗಿ ಬಿಡುತ್ತದೆ. ಆದ್ದರಿಂದ, ರೋಸ್ಮರಿ ಸಸ್ಯಗಳ ಅಡಿಯಲ್ಲಿ ಒಣಗಿದ ಎಲೆಗಳು ಕಸ ಕಡ್ಡಿಗಳು ಸಂಗ್ರಹವಾಗದಂತೆ ನೋಡಿಕೊಳ್ಳಿ.

ಸುಗಂಧ ರಾಜ ಅಥವಾ ಟ್ಯೂಬೆರೋಸ್ ಸಸ್ಯ

ಈ ಗಿಡ ನಿಮ್ಮ ಮನೆಯ ಸುತ್ತ ಇದ್ದರೆ ನೀವು ಬಹಳ ಹುಷಾರಾಗಿರಬೇಕು. ಇದರ ಬಿಳಿ ಹೂವುಗಳು ಭಾರೀ ಪರಿಮಳವನ್ನು ಹೊಂದಿರುತ್ತದೆ. ಈ ಪರಿಮಳದ ಕಾರಣದಿಂದಲೇ ಅನೇಕ ಸಣ್ಣ ಕೀಟಗಳು ಈ ಗಿಡದ ಸುತ್ತ ಸೇರಿಕೊಳ್ಳುತ್ತದೆ. ಹೆಚ್ಚು ಕೀಟಗಳು ಇದ್ದರೆ ಅವುಗಳನ್ನು ತಿನ್ನುವ ಸಣ್ಣ ಜೀವಿಗಳು ಕೂಡಾ ಅಲ್ಲಿ ಬಂದು ಸೇರುತ್ತವೆ. ಆ ಜೀವಿಗಳನ್ನು ಹಿಡಿಯಲು ಹಾವುಗಳು ಕೂಡಾ ಬಂದು ಸೇರಿಕೊಳ್ಳುತ್ತದೆ. ಹಾಗಾಗಿ ಈ ಗಿಡದ ಸುತ್ತಲೂ ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರುವುದು ಬಹಳ ಅವಶ್ಯಕ.

ದಟ್ಟವಾದ ಮಲ್ಲಿಗೆ ಪೊದೆ

ಮಲ್ಲಿಗೆ ಬಳ್ಳಿಗಳು ಮತ್ತು ಪೊದೆಗಳು ಸಾಕಷ್ಟು ದಟ್ಟವಾಗಿ ಬೆಳೆಯುತ್ತವೆ. ಇದನ್ನು ಆಗಾಗ ಕಟ್‌ ಮಾಡುತ್ತಾ ಇರಬೇಕು. ಇಲ್ಲವಾದರೆ ಸಣ್ಣ ಜೀವಿಗಳು ಆ ಪೊದೆಯೊಳಗೆ ಸುಲಭವಾಗಿ ಸೇರಿಕೊಳ್ಳುತ್ತದೆ. ಜೊತೆಗೆ ಇದರ ಪೊದೆಗಳು ಹಾವುಗಳು ಆರಾಮಾಗಿ ಇರುವ ಸ್ಥಳವೂ ಆಗಬಹುದು. ಹಾಗಾಗಿ ಮಲ್ಲಿಗೆ ಗಿಡವನ್ನು ಕತ್ತರಿಸುತ್ತಾ ಇರಬೇಕು.

ಮಾರ್ನಿಂಗ್‌ ಗ್ಲೋರಿ

ಮಾರ್ನಿಂಗ್‌ ಗ್ಲೋರಿ ತುಂಬಾ ಬೇಗ ಹರಡಿಕೊಳ್ಳುವುದು. ಅದನ್ನು ಹಾಗೆಯೇ ಬಿಟ್ಟರೆ, ಸಾಕಷ್ಟು ದಟ್ಟವಾಗುವುದು. ಇದರ ದಟ್ಟವಾದ ಬಳ್ಳಿಗಳ ಕೆಳಗೆ ನೀರಿನ ಅಂಶ ಹೆಚ್ಚಾಗಿ ಉಳಿಯುತ್ತದೆ. ಒದ್ದೆ ಜಾಗದಲ್ಲಿ ಹೆಚ್ಚಾಗಿ ಸಣ್ಣ ಕೀಟಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ, ಅದನ್ನು ನಿಯಮಿತವಾಗಿ ಕಟ್‌ ಮಾಡುತ್ತಾ ಇರಬೇಕು ಮತ್ತು ಆ ಜಾಗವನ್ನು ಸ್ವಚ್ಛವಾಗಿ ಇಡಬೇಕು.

ಪಾರಿಜಾತ

ಪಾರಿಜಾತದ ಹೂವುಗಳು ರಾತ್ರಿ ಅರಳಿ ಬೆಳಗಾಗುವಷ್ಟರಲ್ಲಿ ಮರದ ಕೆಳಗೆ ಉದುರಿ ಬೀಳುತ್ತವೆ. ಈ ಮರದ ಕೆಳಗೆ ಇರುವ ಎಲೆಗಳನ್ನು ಹೆಚ್ಚು ಸಮಯದವರೆಗೆ ಕ್ಲೀನ್‌ ಮಾಡದಿದ್ದರೆ ತೇವಾಂಶ ಉಳಿದು ಅಲ್ಲಿ ಸಣ್ಣ ಕೀಟಗಳು ಬೆಳೆಯಬಹುದು. ಇದು ಹಾವುಗಳು ಆ ಮರದ ಕೆಳಗೆ ಬರುವುದಕ್ಕೆ ಕಾರಣವಾಗಬಹುದು. ಆದ್ದರಿಂದ, ಈ ಮರದ ಕೆಳಗೆ ಎಲೆ, ಹೂವು ಉಳಿಯದಂತೆ ದಿನಾಲೂ ಸ್ವಚ್ಛಗೊಳಿಸುತ್ತಿರಬೇಕು.

ಹಾವುಗಳು ಬಾರದಂತೆ ತಡೆಯುವುದು ಹೇಗೆ

ನಿಮ್ಮ ಮನೆಯ ಸುತ್ತ ಮುತ್ತ ಈ ಸಸ್ಯಗಳಿದ್ದರೆ, ಭಯಪಡುವ ಅಗತ್ಯವಿಲ್ಲ. ಇಲ್ಲಿ ನೀವು ಕ್ಲೀನ್‌ ಮಾಡುತ್ತಿರುವುದು ಮುಖ್ಯ. ಒಣಗಿದ ಎಲೆಗಳು, ಮರದ ತುಂಡು, ಕಲ್ಲು ಅಥವಾ ಕಸ ಇಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ನಿಯಮಿತವಾಗಿ ಹುಲ್ಲು ಕತ್ತರಿಸಬೇಕು. ಮನೆಯ ಸುತ್ತಲೂ ಇಲಿಗಳು ಬಾರದಂತೆ ತಡಯುವುದು ಕೂಡಾ ಮುಖ್ಯ. ಯಾಕೆಂದರೆ ಇವು ಹಾವುಗಳಿಗೆ ಪ್ರಾಥಮಿಕ ಆಹಾರ ಮೂಲವಾಗಿದೆ.

ಯಾವುದೇ ಒಂದು ಸಸ್ಯವು ಹಾವುಗಳನ್ನು ಆಕರ್ಷಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಹಾವುಗಳು ಆಹಾರ, ತೇವಾಂಶ ಮತ್ತು ಅಡಗಿಕೊಳ್ಳಲು ಸುರಕ್ಷಿತ ಜಾಗ ಸಿಕ್ಕಿದ ತಕ್ಷಣ ಅಲ್ಲಿ ಬಂದು ಸೇರಿಕೊಳ್ಳುತ್ತವೆ. ಆದ್ದರಿಂದ, ಸಸ್ಯಗಳನ್ನು ತೆಗೆದುಹಾಕುವ ಬದಲು, ಅವುಗಳ ಸರಿಯಾದ ಆರೈಕೆ ಮತ್ತು ಅವುಗಳ ಸುತ್ತಲಿನ ಜಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+