ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿಸಬೇಕಾ?: 9 ದಿನ ಸಾಕು, ಒಮ್ಮೆ ಹೀಗೆ ಮಾಡಿ ನೋಡಿ

ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕ ಮಕ್ಕಳಿನಿಂದ ಹಿಡಿದು ಯುವಕ- ಯುವತಿಯರಲ್ಲಿ ಅತೀ ಹೆಚ್ಚಾಗಿ ಬಿಳಿ ಕೂದಲಿನ ಸಮಸ್ಯೆಯನ್ನ ಎದುರಿಸುತ್ತಿರುತ್ತದೆ. ಹಲವಾರು ರೀತಿಯ ಪೋಷಕಾಂಶಗಳ ಕೊರತೆ ಇರುತ್ತದೆಯೋ ಅವರಲ್ಲಿ ಬಿಳಿ ಕೂದಲಿನ ಸಮಸ್ಯೆ ಅಧಿಕವಾಗಿ ಕಾಣುತ್ತಿರುತ್ತದೆ.

ಹೌದು, ಆಯುರ್ವೇದ ತಜ್ಞರು ಸೂಚಿಸಿರುವ ಕೆಲವು ಮನೆಮದ್ದುಗಳನ್ನು ಬಳಸಿ ಬಿಳಿ ಕೂದಲಿನಿಂದ ಪರಿಹಾರ ಪಡೆಯಬಹುದು. ನಿಮ್ಮ ಬಿಳಿ ಕೂದಲನ್ನ ಕಪ್ಪಾಗಿಸುವುದು ಹೇಗೆ? ಯಾವ ವಿಧಾನಗಳನ್ನು ಅನುಸರಿಸ ಬೇಕಾಗುತ್ತದೆ ಹಾಗೂ ಯಾವ ಪದಾರ್ಥಗಳು ಅಂದರೆ ಯಾವ ಮನೆ ಮದ್ದು ಉಪಯೋಗವಾಗುತ್ತದೆ. ನಮ್ಮ- ನಿಮ್ಮ ಅಕ್ಕ ಪಕ್ಕ ಸ್ಥಳದಲ್ಲಿ ಸಿಗುವ ಪದಾರ್ಥಗಳನ್ನ ಉಪಯೋಗಿಸಿಕೊಂಡು ನಾವು ಹೇಗೆ ಬಿಳಿ ಕೂದಲನ್ನ 9 ದಿನಗಳಲ್ಲಿ ಶಾಶ್ವತವಾಗಿ ಹೇಗೆ ಕಪ್ಪಾಗಿಸಬಹುದು ಎಂಬ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ.

Follow these tips for 9 days to turn your grey hair to black hair permanently in Kannada

ಒಂದು ಮನೆ ಮದ್ದನ್ನು ಅಂದರೆ ನ್ಯಾಚುರಲ್ ಡೈ ಮಾಡುವುದಕ್ಕೆ ಯಾವುದೇ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ 50 ಗ್ರಾಂ ನಷ್ಟು ಸೀಬೆ ಎಲೆಯ ಪೇಸ್ಟ್ 50 ಗ್ರಾಂ ಮೆಹಂದಿ ಪೌಡರ್ , ಇದಕ್ಕೆ 50ರಿಂದ 60 ml ನಷ್ಟು ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲಸಿಕೊಳ್ಳಬೇಕು. ನಂತರ ಆಗುವ ಈ ಪೇಸ್ಟ್ ಅನ್ನುಏಳರಿಂದ ಎಂಟು ದಿನಗಳ ತನಕ ಒಂದು ಕಬ್ಬಿಣದ ಬಾಣಲೆಯಲ್ಲಿ ಹಾಕಿ ಇಡಬೇಕು ಈ ರೀತಿ ಇಡುವುದರಿಂದ ಆ ಒಂದು ಪೇಸ್ಟ್ ಸಂಪೂರ್ಣ ವಾಗಿ ಕಪ್ಪು ಬಣ್ಣವನ್ನು ಹೊಂದುತ್ತದೆ.

ಇದು ಯಾವುದೇ ರೀತಿಯ ಕೆಮಿಕಲ್ ಪದಾರ್ಥ ಮಿಶ್ರಿತ ಇರುವುದಿಲ್ಲ ಬದಲಿಗೆ ನ್ಯಾಚುರಲ್ ಆಗಿ ಅಂದರೆ ನೈಸರ್ಗಿಕವಾಗಿ ಕಪ್ಪಾಗಿರುತ್ತದೆ ಆದ್ದರಿಂದ ಇದನ್ನು ಉಪಯೋಗಿಸುವುದು ತುಂಬಾ ಉತ್ತಮ. ಈ ಪೆಸ್ಟ್‌ ನಲ್ಲಿ ಯಾವುದೇ ರೀತಿಯ ತುರಿಕೆ, ಕೂದಲಿಗೆ ಸಮಸ್ಯೆ ಆಗುವುದಿಲ್ಲ. ಈ ರೀತಿ ಕಪ್ಪಾದಂತಹ ಮಿಶ್ರಣವನ್ನು ನಿಮ್ಮ ಇಡಿ ತಲೆ ಕೂದಲಿಗೆ ಅಂದರೆ ತಲೆ ಬುಡದಿಂದ ತುದಿಯ ತನಕ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಲೆ ಸ್ನಾನವನ್ನು ಮಾಡಬೇಕು

ತಲೆ ಸ್ನಾನ ಮಾಡುವಾಗ ಶೀಗೆ ಕಾಯಿ ಉಪಯೋಗಿಸಿ ತಲೆ ಸ್ನಾನ ಮಾಡಬೇಕು. ಈ ರೀತಿ ಮಾಡುತ್ತಾ ಬರುವುದರಿಂದ ನಿಮ್ಮ ತಲೆ ಕೂದಲು ಸಂಪೂರ್ಣವಾಗಿ ಕಪ್ಪಾಗುತ್ತ ಬರುತ್ತದೆ ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಉಂಟಾಗುವುದಿಲ್ಲ. ಬದಲಿಗೆ ನಿಮ್ಮ ಕೂದಲು ಸಂಪೂರ್ಣವಾಗಿ ಅಂದರೇ ಶಾಶ್ವತವಾಗಿ ಕಪ್ಪಾಗುತ್ತದೆ. ಈ ಮಿಶ್ರಣವನ್ನ ಹಚ್ಚುವುದರಿಂದ ಕಪ್ಪಾಗುವುದು ಮಾತ್ರವಲ್ಲದೇ ಕೂದಲಿನ ಬೆಳವಣಿಗೆಗೂ ಸಹ ಇದು ಉಪಯೋಗವಾಗುತ್ತದೆ.

Follow these tips for 9 days to turn your grey hair to black hair permanently in Kannada

ಆರೋಗ್ಯಕರ ಕೂದಲಿಗೆ ಯಾವ ಆಹಾರವನ್ನ ಸೇವಿಸಬೇಕು?

ಬಿಳಿ ಕೂದಲಿನಿಂದ ಬಳಲುತ್ತಿರುವವರು ನೆಲ್ಲಿಕಾಯಿ ಸೇವಿಸಬೇಕು. ಅಲ್ಲದೇ, ನೆಲ್ಲಿಕಾಯಿ ಹೇರ್ ಮಾಸ್ಕ್ ಬಳಸುವುದರಿಂದ ಅನೇಕ ಪ್ರಯೋಜನಗಳಿವೆ. ಕೂದಲು ಕಪ್ಪಾಗುವುದಲ್ಲದೆ ಹೊಳೆಯುತ್ತದೆ. ಇನ್ನೂ ಸಲಾಡ್‌ಗಳು, ಮೀನು ಮತ್ತು ಮಾಂಸ, ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ನೀವು ಸೇವನೆ ಮಾಡಬೇಕು.

ಇನ್ನೂ ಬಿಳಿ ಕೂದಲಿಗೆ ಈರುಳ್ಳಿ ಕೂಡ ಪರಿಣಾಮಕಾರಿ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಈರುಳ್ಳಿಯಲ್ಲಿ ಅತೀ ಹೆಚ್ಚಾಗಿ ಔಷಧೀಯ ಗುಣಗಳು ಇರುತ್ತವೆ ಇದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು ಅಲ್ಲದೇ, ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಬಿಳಿ ದಾಸವಾಳವೂ ಆಯುರ್ವೇದ ಗುಣಗಳನ್ನು ಹೊಂದಿದೆ. ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಆಮ್ಲಾ ಪೌಡರ್ ಅನ್ನು ಹೇರ್ ಡೈ ಆಗಿ ತಯಾರಿಸಿ ವಾರಕ್ಕೊಮ್ಮೆ ಬಳಸುವುದರಿಂದ ಶಾಶ್ವತ ಪರಿಹಾರ ಪಡೆಯಬಹುದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+