ಫ್ರಿಜ್‌ನಲ್ಲಿ ಮೊಟ್ಟೆ ಎಷ್ಟು ದಿನ ಇಡಬಹುದು? ಬಹುತೇಕರಿಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ ನೋಡಿ

ಇತ್ತೀಚಿನ ದಿನಗಳಲ್ಲಿ ಮೊಟ್ಟೆ ಬಹುತೇಕ ಎಲ್ಲರ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಪ್ರೋಟೀನ್‌, ವಿಟಮಿನ್‌ಗಳು ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವವರೆಗೆ ಮೊಟ್ಟೆಯ ಪಾತ್ರ ಮಹತ್ವದ್ದಾಗಿದೆ. ಆದರೆ ಅನೇಕರು ಮಾರುಕಟ್ಟೆಯಿಂದ ತಂದ ಮೊಟ್ಟೆಗಳನ್ನು ನೇರವಾಗಿ ಫ್ರಿಜ್‌ನಲ್ಲಿ ಇಟ್ಟು ದೀರ್ಘಕಾಲ ಸಂಗ್ರಹಿಸಿ ಬಳಸುತ್ತಾರೆ. ಈ ಅಭ್ಯಾಸ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿ ಇದೆ.

ಸಾಮಾನ್ಯವಾಗಿ ಮೊಟ್ಟೆಗಳು ಹೆಚ್ಚು ದಿನ ಬರಲಿ ಎಂಬ ಉದ್ದೇಶದಿಂದ ಅವುಗಳನ್ನು ಫ್ರಿಜ್‌ನಲ್ಲಿ ಇಡಲಾಗುತ್ತದೆ. ಆದರೆ ತಜ್ಞರ ಪ್ರಕಾರ, ಮೊಟ್ಟೆಗಳನ್ನು ತುಂಬಾ ದಿನಗಳಕಾಲ ಫ್ರಿಜ್‌ನಲ್ಲಿ ಸಂಗ್ರಹಿಸುವುದು ಒಳ್ಳೆಯದಲ್ಲ. ಕೆಲವು ಅಧ್ಯಯನಗಳ ಪ್ರಕಾರ, ಹೆಚ್ಚು ದಿನ ಸಂಗ್ರಹಿಸಿದ ಮೊಟ್ಟೆಗಳಲ್ಲಿ ಪೌಷ್ಟಿಕಾಂಶದ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ದೇಹಕ್ಕೆ ದೊರೆಯಬೇಕಾದ ಪೋಷಕಾಂಶಗಳ ಲಾಭವು ಕಡಿಮೆಯಾಗಬಹುದು.

Egg Storage Tips

ಇದಲ್ಲದೆ, ಸರಿಯಾದ ರೀತಿಯಲ್ಲಿ ಸಂಗ್ರಹಿಸದ ಮೊಟ್ಟೆಗಳು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ತಾಜಾ ಮೊಟ್ಟೆಗಳನ್ನು ಖರೀದಿಸಿ ಬಳಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಅವಶ್ಯಕತೆಗಿಂತ ಹೆಚ್ಚು ಮೊಟ್ಟೆಗಳನ್ನು ಒಂದೇ ಬಾರಿ ಖರೀದಿಸುವ ಬದಲು, ಬೇಕಾದಷ್ಟನ್ನು ಮಾತ್ರ ತೆಗೆದುಕೊಳ್ಳುವುದು ಒಳ್ಳೆಯದು.

ಫ್ರಿಜ್‌ನಲ್ಲಿ 1 ರೂಪಾಯಿ ನಾಣ್ಯ ಇಟ್ಟರೆ ಏನಾಗುತ್ತದೆ ಗೊತ್ತಾ? ಈ ವೈರಲ್ ಟ್ರಿಕ್ ಹಿಂದಿದೆ ಅಚ್ಚರಿ ಕಾರಣ
ಫ್ರಿಜ್‌ನಲ್ಲಿ 1 ರೂಪಾಯಿ ನಾಣ್ಯ ಇಟ್ಟರೆ ಏನಾಗುತ್ತದೆ ಗೊತ್ತಾ? ಈ ವೈರಲ್ ಟ್ರಿಕ್ ಹಿಂದಿದೆ ಅಚ್ಚರಿ ಕಾರಣ

ಮೊಟ್ಟೆಗಳನ್ನು ಎ‍ಷ್ಟುದಿನ ಫ್ರಿಜ್್ನಲ್ಲಿ ಇಡಬಹುದು?

ತಜ್ಞರು ಹೇಳುವ ಪ್ರಕಾರ ಮೊಟ್ಟೆಗಳನ್ನು ಫ್ರಿಜ್್ನಲ್ಲಿ ೩ ರಿಂದ ೫ ವಾರಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಬಾರದು. ಫ್ರಿಜ್್ನಲ್ಲಿ ಇಡಬೇಕಾದರೆ ಅವುಗಳನ್ನು ಪ್ರತ್ಯೇಕ ಡಬ್ಬಿಯಲ್ಲಿ ಅಥವಾ ಮುಚ್ಚಿದ ಪ್ರತ್ರೆಯಲ್ಲಿ ಸಂಗ್ರಹಿಸಿ ಇಡುವುದು ಒಳ್ಳೆಯದು.

ಮೊಟ್ಟೆ ಸಂಗ್ರಹಿಸುವಾಗ ಗಮನಿಸಬೇಕಾದ ವಿಷಯಗಳು

ಮೊಟ್ಟೆಗಳನ್ನು ಯಾವಾಗಲೂ ತಂಪಾದ ಮತ್ತು ಒಣ ಸ್ಥಳದಲ್ಲಿ ಸಂಗ್ರಹಿಸಿ.
ಫ್ರಿಜ್‌ನಲ್ಲಿ ಇಡಬೇಕಾದರೆ 3 ರಿಂದ 5 ವಾರಗಳೊಳಗೆ ಬಳಸುವುದು ಉತ್ತಮ.
ಮೊಟ್ಟೆಗಳನ್ನು ಫ್ರಿಜ್‌ನ ಬಾಗಿಲಿನ ಟ್ರೇಗಿಂತ ಒಳಭಾಗದ ಶೆಲ್ಫ್‌ನಲ್ಲಿ ಇಡಿ.
ಮೊಟ್ಟೆಗಳಲ್ಲಿ ವಿಚಿತ್ರ ವಾಸನೆ ಕಂಡುಬಂದರೆ ತಕ್ಷಣ ತೆಗೆಯಬೇಕು.
ಮೊಟ್ಟೆಗಳನ್ನು ಅಗತ್ಯಕ್ಕಿಂತ ಹೆಚ್ಚು ದಿನ ಸಂಗ್ರಹಿಸಬೇಡಿ.
ಸಾಧ್ಯವಾದಷ್ಟು ತಾಜಾ ಮೊಟ್ಟೆಗಳನ್ನು ಖರೀದಿಸಿ ಬೇಗನೆ ಬಳಸಿ.
ಫ್ರಿಜ್‌ನಲ್ಲಿ ಇಡುವಾಗ ಪ್ರತ್ಯೇಕ ಡಬ್ಬಿ ಅಥವಾ ಟ್ರೇನಲ್ಲಿ ಇಡಿ.
ಮೊಟ್ಟೆಗಳನ್ನು ನೇರ ಸೂರ್ಯನ ಬೆಳಕು ಅಥವಾ ಹೆಚ್ಚಿನ ಉಷ್ಣಾಂಶದಲ್ಲಿ ಇಡಬೇಡಿ

ಫೈಬರ್ ನಿಂದ ಸಮೃದ್ಧವಾಗಿರುವ ರುಚಿಕರ ಇನ್ಸ್ಟೆಂಟ್ ಗರಿಗರಿ ಜೋಳದ ದೋಸೆ ಮಾಡುವ ಸರಳ ವಿಧಾನ
ಫೈಬರ್ ನಿಂದ ಸಮೃದ್ಧವಾಗಿರುವ ರುಚಿಕರ ಇನ್ಸ್ಟೆಂಟ್ ಗರಿಗರಿ ಜೋಳದ ದೋಸೆ ಮಾಡುವ ಸರಳ ವಿಧಾನ

ಮೊಟ್ಟೆ ತಾಜಾವಾಗಿದೆಯೇ? ಹೀಗೆ ಸುಲಭವಾಗಿ ಪರೀಕ್ಷಿಸಿ

ನೀವು ಫ್ರಿಜ್‌ನಲ್ಲಿ ಇಟ್ಟಿರುವ ಮೊಟ್ಟೆಗಳು ತಾಜಾವಾಗಿವೆಯೇ ಎಂಬುದನ್ನು ಪರೀಕ್ಷಿಸಲು ಒಂದು ಸರಳ ವಿಧಾನವೂ ಇದೆ. ಒಂದು ಪಾತ್ರೆಯಲ್ಲಿ ನೀರು ತುಂಬಿ ಅದರಲ್ಲಿ ಮೊಟ್ಟೆಯನ್ನು ಹಾಕಿ ನೋಡಿ. ಮೊಟ್ಟೆ ನೀರಿನ ತಳದಲ್ಲಿ ಸಮತಟ್ಟಾಗಿ ಮಲಗಿದರೆ ಅದು ತಾಜಾ ಎಂದು ಅರ್ಥ. ಸ್ವಲ್ಪ ಮೇಲಕ್ಕೆ ಎದ್ದು ನಿಂತರೆ ಅದು ಹಳೆಯದಾಗುತ್ತಿದೆ ಎನ್ನುವ ಸೂಚನೆ. ಆದರೆ ಮೊಟ್ಟೆ ಸಂಪೂರ್ಣವಾಗಿ ನೀರಿನ ಮೇಲ್ಮೈಗೆ ತೇಲಿದರೆ ಅದನ್ನು ಬಳಸದೇ ತ್ಯಜಿಸುವುದು ಉತ್ತಮ. ಈ ಸರಳ ಪರೀಕ್ಷೆಯ ಮೂಲಕ ಮೊಟ್ಟೆಗಳ ಗುಣಮಟ್ಟವನ್ನು ಸುಲಭವಾಗಿ ಪರಿಶೀಲಿಸಿ, ಸುರಕ್ಷಿತವಾಗಿ ಸೇವಿಸಬಹುದು.

ತಜ್ಞರ ಅಭಿಪ್ರಾಯದಂತೆ, ಮೊಟ್ಟೆಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ, 3 ರಿಂದ 5 ವಾರಗಳೊಳಗೆ ಬಳಸಿದರೆ ಅವುಗಳ ಪೌಷ್ಟಿಕಾಂಶವನ್ನು ಉತ್ತಮವಾಗಿ ಪಡೆಯಬಹುದು. ತಾಜಾ ಮೊಟ್ಟೆಗಳ ಸೇವನೆಯೇ ಆರೋಗ್ಯಕ್ಕೆ ಹೆಚ್ಚು ಲಾಭದಾಯಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+