ಪ್ರತಿ ಸ್ವಪ್ನಕ್ಕೂ ಅರ್ಥವಿದೆ! ನೀವು ಓಡುತ್ತಿರುವಂತೆ ಕನಸು ಬಿದ್ದರೆ ಅದು ಯಾವುದರ ಸೂಚನೆ? ಇಲ್ಲಿದೆ ಉತ್ತರ
ಮಲಗಿದಾಗ ಕನಸು ಬೀಳುವುದು ಸಹಜ. ಆದರೆ, ಕೆಲವು ಕನಸುಗಳು ನಾವು ನಿದ್ದೆಯಿಂದ ಎಚ್ಚರಗೊಂಡ ನಂತರವೂ ನಮ್ಮನ್ನು ಕಾಡುತ್ತಿರುತ್ತವೆ. ಹೀಗಾಗುವುದಕ್ಕೆ ಪ್ರಮುಖ ಕಾರಣ ಎಂದರೆ ಕಂಡಿರುವ ಕನಸು ನಿಜ ಜೀವನದಲ್ಲಿ ನಡೆದಿರುವ ಘಟನೆಯಂತೆ ಭಾಸವಾಗುವುದು. ಕನಸಿನಲ್ಲಿ ಓಡುವುದು ಇಂಥಹ ಅನುಭವಗಳಲ್ಲಿ ಒಂದಾಗಿದೆ. ಓಡುವ ಕನಸು ಕಂಡ ಬಳಿಕ ನಿಮ್ಮ ದೇಹದಲ್ಲಿ ಭಯ, ಶ್ರಮ, ಆಯಾಸ ಎಲ್ಲವೂ ಕಾಣಿಸಿಕೊಳ್ಳಬಹುದು.ಈ ಕನಸುಗಳು ಸುಮ್ಮನೆ ಬರುವುದಿಲ್ಲ. ನಾವು ಕಾಣುವ ಪ್ರತಿ ಕನಸಿಗೂ ತನ್ನದೇ ಆದ ಅರ್ಥ ಇದೆ ಎನ್ನುತ್ತದೆ ಸ್ವಪ್ನ ಶಾಸ್ತ್ರ.
ಕನಸಿನಲ್ಲಿ ನಿಮ್ಮನ್ನು ಯಾರೋ ಬೆನ್ನಟ್ಟುತ್ತಿರುವಂತೆ, ನೀವು ಯಾರಿಂದಲಾದರೂ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವಂಥಹ ಕನಸು ಕಂಡರೆ ಈ ಕನಸುಗಳು ಆಳವಾದ ಸಂದೇಶವನ್ನು ಹೊಂದಿರುತ್ತವೆ. ಎನಿಗ್ಮಾಟ್ಯಾರೋಟ್ ಟ್ರೈಬ್‌ನ ಟ್ಯಾರೋ ಕಾರ್ಡ್ ರೀಡರ್ ಮತ್ತು ಕ್ರಿಸ್ಟಲ್ ಹೀಲರ್ ಕಿಶೋರಿ ಸುಡ್ ವಿಭಿನ್ನ ಕನಸುಗಳ ಅರ್ಥವೇನು ಮತ್ತು ಅಂಥಹ ಕನಸುಗಳು ಬಿದ್ದಾಗ ಏನು ಮಾಡಬೇಕು ಎನ್ನುವುದನ್ನು ವಿವರಿಸಿ ಹೇಳಿದ್ದಾರೆ.

ಯಾರಿಂದಲೋ ತಪ್ಪಿಸಿಕೊಂಡು ಓಡುವುದು:
ಇದು ಓಡುವ ಕನಸುಗಳ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ. ಕನಸಿನಲ್ಲಿ ನೀವು ಓಡಿಹೋಗುವುದನ್ನು ಕಂಡರೆ, ಅದು ನಿಮ್ಮ ನಿಜ ಜೀವನದಲ್ಲಿ ನೀವು ಯಾವುದೋ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ.ನೀವು ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹೀಗಿರಬಹುದು:
* ಅಹಿತಕರ ಸತ್ಯ
* ಎದುರಿಸಲು ಇಷ್ಟಪಡದ ಸಂಬಂಧ
* ವಹಿಸಿಕೊಳ್ಳಲು ಇಷ್ಟವಿಲ್ಲದೆ ಮುಂದೆ ಹಾಕುತ್ತಲೇ ಬಂದಿರುವ ಜವಾಬ್ದಾರಿ
ಕ್ರಿಸ್ಟಲ್ ಬೆಂಬಲ: ಬ್ಲಾಕ್ ಅಬ್ಸಿಡಿಯನ್ ಭಾವನಾತ್ಮಕವಾಗಿ ನಿಮ್ಮ ಮನಸ್ಸನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ನೀವು ಎದುರಿಸಲು ಸಿದ್ದವಿರದ ಸತ್ಯವನ್ನು ಧೈರ್ಯದಿಂಧ ಎದುರಿಸಲು ಸಹಾಯ ಮಾಡುತ್ತದೆ.
ಗುರಿ ತಲುಪದ ಓಟ:
ಕನಸಿನಲ್ಲಿ ನೀವು ನಿರಂತರವಾಗಿ ಓಡುತ್ತಿದ್ದು ಎಲ್ಲೂ ಗುರಿ ತಲುಪುತ್ತಿಲ್ಲ ಎಂದಾದರೆ ಅದು ನೀವು ಜೀವನದಲ್ಲಿ ಅನುಭವಿಸುತ್ತಿರುವ ನಿರಾಸೆಯನ್ನು ತೋರಿಸುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಕೆಲಸ ಕೈಗೂಡದೆ ಅನುಭವಿಸುತ್ತಿರುವ ಬೇಸರವನ್ನು ತೋರಿಸುತ್ತದೆ.
ಸ್ಫಟಿಕ ಬೆಂಬಲ: ಸ್ಪಷ್ಟ ಸ್ಫಟಿಕ (Clear Quartz) ಇದು ಮನದಲ್ಲಿ ಆವರಿಸಿರುವ ಗೊಂದಲವನ್ನು ನಿವಾರಿಸುತ್ತದೆ. ನೀವು ಗೊಂದಲಕ್ಕೊಳಗಾದಾಗ ಮನಸ್ಸಿಗೆ ಧೈರ್ಯ ತುಂಬುತ್ತದೆ.
ಗೊತ್ತು ಗುರಿ ಇಲ್ಲದ ಓಟ:
ಈ ರೀತಿಯ ಕನಸು ವಿಭಿನ್ನವಾಗಿ ಭಾಸವಾಗುತ್ತದೆ. ಅಂದರೆ ಯಾವ ದಿಕ್ಕಿಗೆ ಚಲಿಸಬೇಕು ಎನ್ನುವ ಸ್ಪಷ್ಟತೆ ಇಲ್ಲದೆ ಓಡುತ್ತಿರುವ ಕನಸಿಗೂ ವಿಶೇಷ ಅರ್ಥವಿದೆ. ಇದು ನೀವು ನಿಜ ಜೀವನದಲ್ಲಿ ಯಾವುದೋ ಮಹತ್ವಾಕಾಂಕ್ಷೆ ಹೊಂದಿದ್ದು ಅದನ್ನು ಸಾಧಿಸಲು ಪಡುತ್ತಿರುವ ಪ್ರಯತ್ನವನ್ನು ಸೂಚಿಸುತ್ತದೆ.
ಸ್ಫಟಿಕ ಬೆಂಬಲ: ಸಿಟ್ರಿನ್ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮನಸ್ಸಿಗೆ ಪ್ರೇರಣೆ ಮತ್ತು ಸ್ಪಷ್ಟತೆಯನ್ನು ನೀಡುತ್ತದೆ. ಗುರಿ ತಲುಪಲು ಸಹಾಯ ಮಾಡುತ್ತದೆ.
ನಿಧಾನವಾಗಿ ಓಡುವುದು:
ಇದು ಅತ್ಯಂತ ನಿರಾಶಾದಾಯಕ ಕನಸಿನ ಅನುಭವಗಳಲ್ಲಿ ಒಂದಾಗಿದೆ. ನೀವು ಓಡಲು ಪ್ರಯತ್ನಿಸುತ್ತಿದ್ದರೂ, ನಿಮ್ಮ ದೇಹ ಅದಕ್ಕೆ ಅನುವು ಮಾಡಿಕೊಡುವುದಿಲ್ಲ. ಅಥವಾ ನಿಧಾನವಾಗಿ ಓಡುತ್ತಿದ್ದರೂ ದೇಹ ಭಾರವಾದ ಅನುಭವವಾಗುತ್ತಿದ್ದರೆ ಇದು ಮನಸ್ಸಿನ ಹೋರಾಟಗಳನ್ನು ಪ್ರತಿಬಿಂಬಿಸುತ್ತದೆ. ಅಂದರೆ ನೀವು ನಿಜ ಜೀವನದಲ್ಲಿ ಅನುಮಾನಕ್ಕೆ ಒಳಗಾಗಿರಬಹುದು. ಮಾಡುವ ಕೆಲಸದಲ್ಲಿ ವಿಫಲವಾಗುವ ಭಯ ಕಾಡುತ್ತಿರಬಹುದು.
ಸ್ಫಟಿಕ ಬೆಂಬಲ: ಕಾರ್ನೆಲಿಯನ್ ನಿಮಗೆ ಧೈರ್ಯ ತುಂಬುತ್ತದೆ. ಆತ್ಮವಿಶ್ವಾಸ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಯಾರೋ ಬೆನ್ನಟ್ಟುತ್ತಿದ್ದು ನಿಮಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ:
ಈ ರೀತಿಯ ಕನಸು ತೀವ್ರ ಮತ್ತು ಒತ್ತಡದಿಂದ ಕೂಡಿರಬಹುದು. ಇದು ಸಾಮಾನ್ಯವಾಗಿ ನಿಮ್ಮ ಜೀವನದಲ್ಲಿನ ಆತಂಕ ಅಥವಾ ಒತ್ತಡವನ್ನು ಪ್ರತಿಬಿಂಬಿಸುತ್ತದೆ.
ಸ್ಫಟಿಕ ಬೆಂಬಲ: ಅಮೆಥಿಸ್ಟ್ ಆತಂಕವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಅತಿಯಾಗಿ ಯೋಚಿಸುವುದನ್ನು ಕಡಿಮೆ ಮಾಡಲು ಮತ್ತು ಭಾವನಾತ್ಮಕ ಸಮತೋಲನವನ್ನು ತರಲು ಸಹಾಯ ಮಾಡುತ್ತದೆ.
ಬರಿಗಾಲಿನಲ್ಲಿ ಓಡುವುದು:
ಬರಿಗಾಲಿನಲ್ಲಿ ಓಡುತ್ತಿರುವ ಕನಸು ನೀವು ಯಾವುದೋ ಕೆಲಸಕ್ಕೆ ಕೈ ಹಾಕಿದ್ದು ಅದನ್ನು ಪೂರ್ಣಗೊಳಿಸಲು ಸಿದ್ದರಿಲ್ಲ ಎನ್ನುವುದನ್ನು ತೋರಿಸುತ್ತದೆ.ಈ ಕೆಲಸ ಮಾಡಲು ನಿಮ್ಮ ಮನಸ್ಸು ಸಿದ್ದವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ಅಂದರೆ ನಿಜ ಜೀವನದಲ್ಲಿ ನೀವು ಸಾಕಷ್ಟು ಬೆಂಬಲ ಅಥವಾ ಸ್ಥಿರತೆ ಇಲ್ಲದೆ ಕೆಲಸವನ್ನು ನಿರ್ವಹಿಸುತ್ತಿರಬಹುದು.
ಸ್ಫಟಿಕ ಬೆಂಬಲ: ರೆಡ್ ಜಾಸ್ಪರ್ ಕಾಡುತ್ತಿರುವ ಅನಿಶ್ಚಿತತೆಗೆ ಒಂದು ಸ್ಪಷ್ಟತೆ ನೀಡುತ್ತದೆ.
ಈ ರೀತಿಯ ಕನಸುಗಳು ನಿಮ್ಮನ್ನು ಗೊಂದಲಕ್ಕೆ ಗುರಿ ಮಾಡುವ ಉದ್ದೇಶದಿಂದ ಬೀಳುವಂಥದ್ದಲ್ಲ. ಬದಲಾಗಿ ನಿಮಗೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಿವೆ. ಈ ಕನಸುಗಳ ಮೂಲಕ ನಿಮ್ಮ ನಿಜ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
(ಬರಹ : ರಂಜಿತಾ ಆರ್.ಕೆ)














Click it and Unblock the Notifications