Costly Condom: ಈ ಕಾಂಡೋಮ್ ಉದ್ದ 19 ಸೆಂ.ಮೀ.!-ಇದರ ದರ ಎಷ್ಟು ಸಾವಿರ ಗೊತ್ತಾ?
Costly Condom: ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಸಾಂಕ್ರಾಮಿಕ ರೋಗಗಳು, ಗರ್ಭಧಾರಣೆ ತಡೆಗಟ್ಟಲು ಕಾಂಡೋಮ್ ಪಾತ್ರ ಪ್ರಮುಖ ಪಾತ್ರವಹಿಸುತ್ತದೆ. ಹಿಂದೆಲ್ಲ ವೈದ್ಯರು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದರು. ಆದರೆ ಇದೀಗ ಪ್ಯಾಮಿಲಿ ಪ್ಲಾನಿಂಗ್‌ಗಾಗಿಯೇ ಕಾಂಡೋಮ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಇದರ ನಡುವೆಯೇ ಅತ್ಯಂತ ದುಬಾರಿ ಕಾಂಡೋಮ್‌ವೊಂದು ಪತ್ತೆಯಾಗಿದೆ.
ವೈದ್ಯರು ಲೈಂಗಿಕ ಕ್ರಿಯೆಯಲ್ಲಿ ತೊಡಗುವವರು ಕಾಂಡೋಮ್ ಬಳಸಿದರೆ ಮುಂದಾಗುವ ಅನಾಹುತಗಳನ್ನು ತಡೆಗಟ್ಟಬಹುದು ಎನ್ನುವ ಸಲಹೆಗಳನ್ನು ಆಗಾಗ ನೀಡುತ್ತಲೇ ಇರುತ್ತಾರೆ. ಆದರೆ ಇದೀಗ ಅವರವರೇ ಎಚ್ಚತ್ತುಕೊಂದು ಕಾಂಡೋಮ್ ಬಳಕೆ ಮಾಡುವ ಮೂಲಕ ಲೈಂಗಿಕ ಕ್ರಿಯೆಯಲ್ಲಿ ತೊಡಗುವವರ ಸಂಖ್ಯೆ ಹೆಚ್ಚಾಗಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ಕೆಲವರು ವೃತ್ತಿಯಲ್ಲಿ ನೆಲೆ ನಿಂತ ಮೇಲೆಯೇ ಮಕ್ಕಳು ಮಾಡಿಕೊಳ್ಳಲು ಬಯಸುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ವಿವಾಹಕ್ಕೂ ಮುನ್ನವೇ ಒಬ್ಬರನ್ನೊಬ್ಬರು ಅರಿತುಕೊಂಡು ಸಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದರಿಂದ ಕಾಂಡೋಮ್ ಬಳಕೆಯ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ತಿಳಿದುಬಂದಿದೆ.
ಕಾಂಡೋಮ್‌ಗಳನ್ನು ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಮತ್ತು ಗರ್ಭನಿರೋಧಕಕ್ಕಾಗಿ ಬಳಕೆ ಮಾಡಲಾಗುತ್ತದೆ. ಇನ್ನು ಬ್ರಾಂಡ್‌ಗಳ ಆಧಾರದ ಮೇಲೆ ವಿವಿಧ ಬೆಲೆಗಳಲ್ಲಿ ಕೆಲವು ಮೆಡಿಕಲ್ ಶಾಪ್ಗಳಲ್ಲಿ ಇದು ಸಿಗುತ್ತದೆ. ಆದರೆ ಅತೀ ಹೆಚ್ಚು ಬೆಲೆ ಹೊಂದಿರುವ ಕಾಂಡೋಮ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಿದೆ.
ಮೂಲಗಳ ಪ್ರಕಾರ, ಸ್ಪೇನ್‌ನ ಸಣ್ಣ ಪಟ್ಟಣದಲ್ಲಿ ಪೆಟ್ಟಿಗೆಯೊಂದು ಪತ್ತೆಯಾಗಿದೆ. ಈ ಪೆಟ್ಟಿಗೆಯಲ್ಲಿ ಕಾಂಡೋಮ್ ಕೂಡ ಪತ್ತೆಯಾಗಿದ್ದು, ಈ ಕಾಂಡೋಮ್ ಅನ್ನು ಅಧ್ಯಯನ ಮಾಡಿದ ನಂತರ ಇದು 200 ವರ್ಷಗಳಷ್ಟು ಹಳೆಯದು ಎಂದು ತಿಳಿದುಬಂದಿದೆ. ಆದರೆ ಆ ಸಮಯದಲ್ಲಿ ಶ್ರೀಮಂತರು, ಉನ್ನತ ಮಟ್ಟದ ಸ್ಥಾನದಲ್ಲಿದ್ದವರು ಮಾತ್ರ ಕಾಂಡೋಮ್‌ಗಳನ್ನು ಬಳಕೆ ಮಾಡುತ್ತಿದ್ದರಂತೆ.
ವಿವಿಧ ಮೂಲಗಳ ಪ್ರಕಾರ, ಸಾಮಾನ್ಯವಾಗಿ ಕಾಂಡೋಮ್ಗಳು 15 ಸೆಂಟಿ ಮೀಟರ್‌ವರೆಗೆ ಉದ್ದ ಇರುತ್ತವೆ ಎಂದು ಹೇಳಲಾಗುತ್ತದೆ. ಆದರೆ ಸ್ಪೇನ್ನಲ್ಲಿ ಸಿಕ್ಕ ಕಾಂಡೋಮ್‌ನ ಉದ್ದ ಮಾತ್ರ 19 ಸೆಂಟಿ ಮೀಟರ್ ಎಂದು ತಿಳಿದುಬಂದಿದೆ. ಆಮ್‌ಸ್ಟರ್‌ಡ್ಯಾಮ್‌ನ ವ್ಯಕ್ತಿಯೊಬ್ಬರು ಈ ಐತಿಹಾಸಿಕ ಕಾಂಡೋಮ್‌ನೊಂದಿಗೆ ಬಂದಿದ್ದು, ಕಾಂಡೋಮ್ ಅನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಿದಾಗ, ಅದು ಸಾಮಾನ್ಯ ಬೆಲೆಗಿಂತ ದುಪ್ಪಟ್ಟಾಗಿದೆ ಎಂದು ತಿಳಿದುಬಂದಿದೆ.
ಇದು ವಿಶ್ವದ ಅತ್ಯಂತ ದುಬಾರಿ ಮತ್ತು ಅಪರೂಪದ ಕಾಂಡೋಮ್ ಎಂದು ಹೇಳಲಾಗುತ್ತದೆ. ಈ ರೀತಿಯ ಕಾಂಡೋಮ್‌ಗಳನ್ನು ವಸ್ತುಸಂಗ್ರಹಾಲಯದಲ್ಲಿ ಮಾತ್ರ ಕಾಣಬಹುದು. ವಿಶ್ವದ ಅತ್ಯಂತ ದುಬಾರಿ ಕಾಂಡೋಮ್‌ನ ಬೆಲೆ 460 ಪೌಂಡ್ ಅಂದರೆ ಸುಮಾರು 44,000 ರೂಪಾಯಿ ಎಂದು ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications