Face packs: ದೀಪಾವಳಿಯಂದು ಮಿಂಚಬೇಕೆ? ಹಾಗಾದರೆ ಇಂದಿನಿಂದ ಈ ಫೇಸ್ ಪ್ಯಾಕ್‌ಗಳನ್ನು ಬಳಸಿ..
ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲರೂ ದೀಪಾವಳಿಯಂದು ಸುಂದರವಾದ ಹೊಚ್ಚ ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಹಬ್ಬ ಆಚರಿಸಲು ಸಂಬಂಧಿಕರ ಮನೆಗೆ ಹೋಗುತ್ತಾರೆ. ಇಂತಹ ಹಬ್ಬದ ದಿನಗಳಲ್ಲಿ ನೀವು ಸುಂದರವಾಗಿ ಮಿಂಚಲು ಬಯಸುವಿರಾ?
ಹಾಗಾದರೆ ಇಂದಿನಿಂದ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡಲು ತ್ವಚೆದ ಆರೈಕೆಯನ್ನು ಮಾಡಿ. ಕೆಲವು ಫೇಸ್ ಪ್ಯಾಕ್‌ಗಳು ತ್ವಚೆಯಿಂದ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನೈಸರ್ಗಿಕ ಪದಾರ್ಥಗಳಿಂದ ತ್ವಚೆಗೆ ಫೇಸ್ ಪ್ಯಾಕ್ ಹಚ್ಚಿದರೆ ತ್ವಚೆಯ ಮೇಲಿರುವ ಕೊಳೆ ನಿವಾರಣೆಯಾಗಿ ತ್ವಚೆಯ ಆರೋಗ್ಯ ಸುಧಾರಿಸುತ್ತದೆ. ಹಾಗಾದರೆ ಚರ್ಮದ ಸೌಂದರ್ಯ ಮತ್ತು ಮೈಬಣ್ಣವನ್ನು ಸುಧಾರಿಸಲು ಸಹಾಯ ಮಾಡುವ ಕೆಲವು ಫೇಸ್ ಪ್ಯಾಕ್‌ಗಳ ಬಗ್ಗೆ ತಿಳಿಯೋಣ.

1. ಅರಿಶಿನ ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕ್
ತ್ವಚೆಯ ಸೌಂದರ್ಯವನ್ನು ಸುಧಾರಿಸಲು ಕಡಲೆ ಹಿಟ್ಟು ಮತ್ತು ಅರಿಶಿನ ಎರಡನ್ನೂ ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ. ಒಂದು ಬಟ್ಟಲಿನಲ್ಲಿ 1 ಚಮಚ ಕಡಲೆ ಹಿಟ್ಟನ್ನು ತೆಗೆದುಕೊಂಡು, 1/2 ಚಮಚ ಅರಿಶಿನ ಪುಡಿಯನ್ನು ಸೇರಿಸಿ, ರೋಸ್ ವಾಟರ್ ಸೇರಿಸಿ ಮತ್ತು ದಪ್ಪ ಪೇಸ್ಟ್ ಮಾಡಿ, ಮುಖ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಕಾಲ ನೆನೆಸಿ ನಂತರ ತಣ್ಣೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ 2 ಬಾರಿ ಬಳಸಿದರೆ ನಿಮ್ಮ ತ್ವಚೆಯಲ್ಲಿ ಉತ್ತಮ ಬದಲಾವಣೆಯನ್ನು ನೀವು ಕಾಣಬಹುದು.
2. ಶ್ರೀಗಂಧದ ಫೇಸ್ ಪ್ಯಾಕ್
ಶ್ರೀಗಂಧವು ತ್ವಚೆಯನ್ನು ತುಂಬಾ ತಂಪಾಗಿಸುವುದು ಮಾತ್ರವಲ್ಲದೆ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಮುಖ್ಯವಾಗಿ ಈ ಶ್ರೀಗಂಧವು ಚರ್ಮದ ಟೋನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಂತಹ ಶ್ರೀಗಂಧದ ಎಣ್ಣೆಯ 2-3 ಹನಿಗಳನ್ನು ಒಂದು ಬಟ್ಟಲಿನಲ್ಲಿ ಸುರಿಯಿರಿ ಮತ್ತು ಅದನ್ನು 1 ಚಮಚ ಬಾದಾಮಿ ಎಣ್ಣೆ ಮತ್ತು 1 ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ನಂತರ ಇದನ್ನು ಮುಖಕ್ಕೆ ಹಚ್ಚಿ 15-20 ನಿಮಿಷ ನೆನೆಯಲು ಬಿಡಿ ನಂತರ ತಣ್ಣೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶವನ್ನು ಪಡೆಯಲು ಇದನ್ನು ವಾರದಲ್ಲಿ 2-3 ಬಾರಿ ಬಳಸಿ.

3. ಜೇನುತುಪ್ಪ ಮತ್ತು ನಿಂಬೆ ಫೇಸ್ ಪ್ಯಾಕ್
ಜೇನುತುಪ್ಪ ಮತ್ತು ನಿಂಬೆ ಎರಡೂ ಚರ್ಮದ ಮೇಲೆ ಮ್ಯಾಜಿಕ್ ಮಾಡುತ್ತವೆ. ಮುಖ್ಯವಾಗಿ ಈ ಎರಡು ಪದಾರ್ಥಗಳು ಚರ್ಮದ ಟೋನ್ ಹೆಚ್ಚಿಸಲು ಮತ್ತು ತ್ವಚೆಯನ್ನು ರೇಷ್ಮೆಯಂತಹ ಮೃದುವಾಗಿರಿಸಲು ಸಹಾಯ ಮಾಡುತ್ತದೆ. ಒಂದು ಬಟ್ಟಲಿನಲ್ಲಿ 1 ಚಮಚ ಜೇನುತುಪ್ಪ ಮತ್ತು ಕೆಲವು ಹನಿ ನಿಂಬೆ ರಸವನ್ನು ಮಿಶ್ರಣ ಮಾಡಿ. ನಂತರ ಇದನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ 20 ನಿಮಿಷ ನೆನೆಯಲು ಬಿಡಿ ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಬಳಸಿದರೆ ತ್ವಚೆಯ ಮೇಲಿನ ಕಪ್ಪು ಕಲೆಗಳು ಮಾಯವಾಗುತ್ತವೆ.
4. ಬೇವು, ತುಳಸಿ, ಅರಿಶಿನ ಫೇಸ್ ಪ್ಯಾಕ್
ಈ ಫೇಸ್ ಪ್ಯಾಕ್‌ಗಾಗಿ 4 ತುಳಸಿ ಎಲೆಗಳು ಮತ್ತು 3 ಬೇವಿನ ಎಲೆಗಳನ್ನು ರುಬ್ಬಿಕೊಳ್ಳಿ. ನಂತರ ಅದಕ್ಕೆ 1 ಚಮಚ ಅರಿಶಿನ ಪುಡಿ ಮತ್ತು 1 ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಚೆನ್ನಾಗಿ ಆರಿದ ನಂತರ ತಣ್ಣೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ದಿನ ಬಿಟ್ಟು ದಿನ ಹಚ್ಚಿಕೊಂಡರೆ ಮುಖ ಕಾಂತಿಯುತವಾಗಿರುತ್ತದೆ.
5. ಅಕ್ಕಿ ಹಿಟ್ಟು ಮತ್ತು ಶ್ರೀಗಂಧದ ಫೇಸ್ ಪ್ಯಾಕ್
ಈ ಫೇಸ್ ಪ್ಯಾಕ್‌ಗಾಗಿ 1 ಚಮಚ ಅಕ್ಕಿ ಹಿಟ್ಟು, 1/2 ಚಮಚ ಶ್ರೀಗಂಧದ ಪುಡಿ ಮತ್ತು 1 ಚಮಚ ರೋಸ್ ವಾಟರ್ ಅನ್ನು ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿ, ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ ಮತ್ತು 5-10 ನಿಮಿಷಗಳ ಕಾಲ ಬಿಡಿ. ಅದನ್ನು ತಣ್ಣೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೊಮ್ಮೆ ಬಳಸಿ ನಿಮ್ಮ ಮುಖ ಹೊಳೆಯುತ್ತದೆ.












Click it and Unblock the Notifications