Power Walk: ಏನಿದು ಪವರ್ ವಾಕ್? ಇದರ ಲಾಭವೇನು?
ಜನ ಈಗ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಕಂಡು ಬಂದಿದೆ. ಬೆಳ್ಳಂ ಬೆಳಗ್ಗೆ ಎದ್ದು ದೈನಂದಿನ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು, ವಾತವರಣಕ್ಕೆ ಹೊಂದುವಂತಹ ಬಟ್ಟೆ ಹಾಗೂ ಶೂ ಹಾಕಿಕೊಂಡು, ತಮ್ಮ ಮನೆಯ ಪಕ್ಕದಲ್ಲಿರುವ ಗಾರ್ಡನ್, ಕ್ಲಬ್, ಅಪಾರ್ಟಮೆಂಟ್‌ಗಳ ಸುತ್ತಲ್ಲು ವಾಕ್ ಮಾಡುವುದನ್ನು ನಾವು ನೋಡುತ್ತೇವೆ.
ಈ ವಾಕಿಂಗ್‌ನ್ನು ಮಾಡಲು ಯಾವ ವಯಸ್ಸಿನ ಮಿತಿಯೂ ಇಲ್ಲದೇ ಎಲ್ಲರೂ ಸುಲಭವಾಗಿ ಮಾಡಬಹುದಾದ ವ್ಯಾಯಮ. ಆದರೆ ವಯಸ್ಸಿಗೆ ಅನುಸಾರವಾಗಿ ನಡೆಯುವ ದೂರ ನಿರ್ಧಾರವಾಗುತ್ತದೆ. ಯಾವ ವಯಸ್ಸಿನಲ್ಲಿ ಮಾಡಿದರೂ ಇದರ ಪ್ರಯೋಜನ ಏನು ಕಮ್ಮಿ ಆಗುವುದಿಲ್ಲ. ದಿನ ನಿತ್ಯ ವಾಕ್ ಮಾಡುವುದರಿಂದ ಮುಂದೆ ಸಂಭವಿಸ ಬಹುದಾದ ಆಪತ್ತನ್ನು ತಡೆಯ ಬಹುದು.

ಮೂರು ಬಗೆಯ ವಿಭಿನ್ನ ವಾಕಿಂಗ್
ವಾಕಿಂಗ್ ಮಾಡುವುದು ನಿಮ್ಮ ಇಡೀ ದೇಹಕ್ಕೆ ತಾಲೀಮು ನೀಡುತ್ತದೆ. ಆದಾಗ್ಯೂ, ಅನೇಕ ಬಾರಿ ಜನರು ಜಿಮ್‌ಗೆ ಹೋಗಲು ಅಥವಾ ವ್ಯಾಯಾಮ ಮಾಡಲು ಸಮಯ ಇಲ್ಲದೆ ಇರುವವರು ಇದನ್ನು ಮಾಡಬಹುದು. ಈ ವ್ಯಾಯಾಮವನ್ನು ಎಲ್ಲಿ ಬೇಕಾದರೂ ಮಾಡಬಹುದು. ಈ ವರದಿಯಲ್ಲಿ ನೀವು ಅರಿತು ಕೊಳ್ಳಬೇಕಾಗಿರುವ ಮೂರು ಬಗೆಯ ವಾಕಿಂಗ್‌ನ್ನು ತಿಳಿಸುತ್ತೇವೆ. ಈ ವಾಕ್‌ನ್ನು ನೀವು ನಿಮ್ಮ ಸಮಯಕ್ಕೆ ಅನುಗುಣವಾಗಿ ಮಾಡಬಹುದು. ಇದು ಬೇಗವಾಗಿ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
40 ನಿಮಿಷಗಳ ನಡಿಗೆ
ಆರೋಗ್ಯ ತಜ್ಞರು 40 ನಿಮಿಷಗಳ ವಾಕ್‌ನ್ನು ಉತ್ತಮ ಪರಿಪಾಠ ಎಂದು ಹೇಳುತ್ತಾರೆ. ಹೀಗೆ ಮಾಡುವುದರಿಂದ ನೀವು ಹೆಚ್ಚು ದಿನ ಫಿಟ್ ಆಗಿ ಇರಬಹುದು. ಇನ್ನು ಫಿಟ್ನೆಸ್ ಬಗ್ಗೆ ಕಾಳಜಿ ಹೊಂದಿರುವವರು 40 ನಿಮಿಷವನ್ನು ಇದಕ್ಕೆ ತೆಗೆದು ಇಡಬಹುದು. 40 ನಿಮಿಷ ವಾಕ್ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡೂ ಉಲ್ಲಾಸದಿಂದ ಕೂಡಿರುತ್ತದೆ.

20 ನಿಮಿಷಗಳ ನಡಿಗೆ
ಇನ್ನು ಬ್ಯೂಸಿ ಶೆಡ್ಯೂಲ್‌ನಲ್ಲಿ ವಾಕ್ ಮಾಡಲು ಹೆಚ್ಚಿನ ಸಮಯ ಸಿಗುವುದಿಲ್ಲ ಎಂದು ಹೇಳುವ ಜನರು, 20 ರಿಂದ 25 ನಿಮಿಷದ ವಾಕ್ ಅನ್ನಾದರೂ ಮಾಡಬಹುದು. ಹೀಗೆ ಮಾಡುವಾಗ 3 ರಿಂದ 4 ನಿಮಿಷಗಳ ಕಾಲ ವಾರ್ಮಪ್ ಮಾಡಬೇಕು. ಇದಾದ ಬಳಿಕ ನೀವು ಸಾಮಾನ್ಯ ನಡಿಗೆಯನ್ನು ಆರಂಭಿಸಬೇಕು.
20 ರಿಂದ 25 ನಿಮಿಷ ವಾಕಿಂಗ್ ಮಾಡುವ ಸಮಯವನ್ನು ಹೊಂದಿರುವವರು ಪ್ರತಿ 5 ನಿಮಿಷಕ್ಕೆ ಒಂದು ನಿಮಿಷ ಪವರ್ ವಾಕ್ ಮಾಡಬೇಕು. ಅಂದರೆ 4 ನಿಮಿಷಗಳ ಸಾಮಾನ್ಯ ನಡಿಗೆ ಮತ್ತು 1 ನಿಮಿಷ ವೇಗದ ನಡಿಗೆ. ನೀವು ಮಾದರಿಯ ಪವರ್ ವಾಕ್ ಅನ್ನು ಅನುಸರಿಸಬೇಕು. ಈ ರೀತಿಯಾಗಿ ನೀವು 5 ನಿಮಿಷಗಳ ಕಾಲ ಪವರ್ ವಾಕ್ ಮತ್ತು 15-20 ನಿಮಿಷಗಳ ಕಾಲ ಸಾಮಾನ್ಯ ನಡಿಗೆ ಮಾಡುವದರಿಂದಲೂ ನೀವು ತ್ವರಿತವಾಗಿ ರಿಸಲ್ಟ್ ಪಡೆಯಬಹುದು.
5 ನಿಮಿಷಗಳ ಪವರ್ ವಾಕ್
ವಾಕ್ ಮಾಡಲು ನಿಮಗೆ ಸಮಯದ ಅಭಾವ ಇದ್ದರೆ ಕೇವಲ 5 ನಿಮಿಷಗಳ ಕಾಲ ಪವರ್ ವಾಕ್ ಅನ್ನು ಪ್ರಯತ್ನಿಸಬಹುದು. ಇದರಿಂದ ತೂಕ ಕಡಿಮೆಯಾಗುತ್ತದೆ ಮತ್ತು ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಪವರ್ ವಾಕಿಂಗ್ ಮಾಡುವಾಗ, ನಿಮ್ಮ ಹೆಜ್ಜೆಗಳನ್ನು ನೀವು ನೋಡಿಕೊಳ್ಳಬೇಕು.
ನಡೆಯುವಾಗ ನೀವು ಸಣ್ಣ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ವೇಗದಲ್ಲಿ ಕೈಗಳನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಬೇಕಾಗುತ್ತದೆ. ಅಂದರೆ ನಡೆಯುವಾಗ ಮೊದಲು ಹಿಮ್ಮಡಿಗಳು ಮತ್ತು ನಂತರ ಕಾಲ್ಬೆರಳುಗಳು ಸ್ಪರ್ಶಿಸುತ್ತವೆ. ಈ ರೀತಿ ಮಾಡುವ ನಡಿಗೆ ಸಾಮಾನ್ಯ ನಡಿಗೆಗಿಂತ ಹೆಚ್ಚು ಪರಿಣಾಮಕಾರಿ. ಅದಕ್ಕಾಗಿಯೇ ಇದನ್ನು ಪವರ್ ವಾಕ್ ಎಂದು ಕರೆಯಲಾಗುತ್ತದೆ.












Click it and Unblock the Notifications