ಮೊಸರಿನ ಮೇಲೆ ತೇಲುವ ನೀರನ್ನು ಚೆಲ್ಲಬೇಡಿ: ಇದರಲ್ಲೇ ಅಡಗಿರುವುದು ಆರೋಗ್ಯದ ಗುಟ್ಟು!

ಹಾಲನ್ನು ಹೆಪ್ಪುಗಟ್ಟಿಸಿ ತಯಾರಿಸಲಾಗುವ ಒಂದು ಅತ್ಯಂತ ಜನಪ್ರಿಯ ಮತ್ತು ಪೌಷ್ಟಿಕಾಂಶಯುಕ್ತ ಡೈರಿ ಉತ್ಪನ್ನವೇ ಮೊಸರು. ಊಟದ ಜೊತೆಗೆ ಒಂದು ಸಣ್ಣ ಬೌಲ್‌ ಮೊಸರು ತಿನ್ನುವ ಅಭ್ಯಾಸ ಅನೇಕರಿಗೆ ಇರುತ್ತದೆ. ಕೆಲವರಿಗಂತೂ ಮೊಸರು ಇಲ್ಲದೆ ಊಟ ಸಂಪೂರ್ಣ ಆಗುವುದೇ ಇಲ್ಲ. ಹಾಗಾಗಿ ನಮ್ಮ ನಿತ್ಯದ ಊಟದಲ್ಲಿ ಮೊಸರು ಪ್ರಮುಖ ಪಾತ್ರ ವಹಿಸುತ್ತದೆ. ಹಸುವಿನ ಅಥವಾ ಎಮ್ಮೆಯ ಹಾಲಿಗೆ ಸ್ವಲ್ಪ ಹೆಪ್ಪು ಸೇರಿಸಿದರೆ ಮನೆಯಲ್ಲಿಯೇ ಮೊಸರು ತಯಾರಿಸಬಹುದು.

ಸಾಮಾನ್ಯವಾಗಿ ಮೊಸರಿನ ಡಬ್ಬಿಯನ್ನು ಓಪನ್‌ ಮಾಡುವಾಗ ಅದರ ಮೇಲೆ ನೀರಿನ ಪದರ ಕಂಡು ಬರುತ್ತದೆ. ಈ ನೀರನ್ನು ನೋಡಿದ ತಕ್ಷಣ ಮೊಸರು ಹಾಳಾಗಿದೆ, ತಿನ್ನಲು ಯೋಗ್ಯವಲ್ಲ ಎನ್ನುವ ಭಾವನೆಯೇ ನಮ್ಮ ಮಸ್ಸಿನಲ್ಲಿ ಮೊದಲಿಗೆ ಬರುವುದು. ಆಗ ನಾವು ಮೊಸರಿನ ಮೇಲೆ ಕಾಣಿಸಿಕೊಂಡಿರುವ ನೀರನ್ನು ಚೆಲ್ಲಿ ಬಿಡತ್ತೇವೆ. ಆದರೆ ಇದು ನಾವು ಮಾಡುವ ಅತಿ ದೊಡ್ಡ ತಪ್ಪು ಎನ್ನುತ್ತಾರೆ ಆರೋಗ್ಯ ತಜ್ಙರು. ಆ ನೀರನ್ನು ಚೆಲ್ಲವ ಬದಲು ಮೊಸರಿನೊಂದಿಗೆ ಚೆನ್ನಾಗಿ ಬೆರೆಸಿ ತಿನ್ನಬೇಕು. ಇದು ಆರೋಗ್ಯಕ್ಕೆ ಹೆಚ್ಚು ಲಾಭದಾಯಕವಾಗಿರುತ್ತದೆ.

Curd Water Benefits

ಆರೋಗ್ಯ ತಜ್ಞರು ಹೇಳುವುದೇನು ?:

ಜೀರ್ಣಕ್ರಿಯೆ, ಯಕೃತ್ತು, ಮೇದೋಜ್ಜೀರಕ ಗ್ರಂಥಿ ಮತ್ತು ಪೌಷ್ಟಿಕಾಂಶದ ಆರೋಗ್ಯದಲ್ಲಿ ಪರಿಣತಿ ಹೊಂದಿರುವ ಫ್ಲೋರಿಡಾ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಲ್ತ್‌ ಕಂಟೆಂಟ್‌ ಕ್ರಿಯೇಟರ್‌ ಡಾ. ಜೋಸೆಫ್ ಸಲ್ಹಾಬ್, ಮೊಸರಿನ ಅಮೂಲ್ಯ ಪೋಷಕಾಂಶಗಳನ್ನು ತೆಗೆದುಹಾಕುವ ಸಾಮಾನ್ಯ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಈ ಕುರಿತಾದ ವಿಡಿಯೋವೊಂದನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ.

ಈ ಐದು ಪದಾರ್ಥಗಳನ್ನು ನೇರಳೆ ಹಣ್ಣಿನ ಜೊತೆ ತಿನ್ನಲೇಬಾರದು : ಜೀರ್ಣಕ್ರಿಯೆಯ ಮೇಲಾಗುವುದು ನೇರ ಪರಿಣಾಮ
ಈ ಐದು ಪದಾರ್ಥಗಳನ್ನು ನೇರಳೆ ಹಣ್ಣಿನ ಜೊತೆ ತಿನ್ನಲೇಬಾರದು : ಜೀರ್ಣಕ್ರಿಯೆಯ ಮೇಲಾಗುವುದು ನೇರ ಪರಿಣಾಮ

ಏನಿದು ಮೊಸರಿನ ಮೇಲಿನ ನೀರಿನ ಪದರ?

ಮೊದಲೇ ಹೇಳಿದ ಹಾಗೆ ಇಲ್ಲಿ ಮೊಸರಿನ ಮೇಲೆ ಕಾಣಿಸಿಕೊಳ್ಳುವ ನೀರು ಮೊಸರು ಹಾಳಾಗಿರುವ ಸಂಕೇತವಲ್ಲ. ಬದಲಿಗೆ ಮೊಸರು ತಯಾರಿಕೆಯ ಹುದುಗುವಿಕೆ ಪ್ರಕ್ರಿಯೆಯಲ್ಲಿ ಈ ನೀರು ನೈಸರ್ಗಿಕವಾಗಿ ಬೇರ್ಪಡುತ್ತದೆ. ಹಾಗಾಗಿ ಇದು ಮೊಸರಿನ ಒಂದು ಅವಿಭಾಜ್ಯ ಅಂಗವೇ. ಮೊಸರಿನಿಂದ ನೈಸರ್ಗಿಕವಾಗಿ ಬೇರ್ಪಡುವ ಪ್ರೋಟೀನ್-ಭರಿತ ದ್ರವ ಇದಾಗಿರುತ್ತದೆ.

ಪೋಷಕಾಂಶದ ಆಗರ ಈ ನೀರು:

ಡಾ. ಸಲ್ಹಾಬ್ ಹೇಳುವ ಪ್ರಕಾರ ಮೊಸರಿನ ಮೇಲೆ ತೇಲುವ ಈ ನೀರು ಪ್ರೋಟೀನ್ ನಿಂದ ತುಂಬಿರುತ್ತದೆ. ಇದು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿರುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಇದು ಮೊಸರಿನ ಅತ್ಯಂತ ಪೌಷ್ಟಿಕ-ದಟ್ಟವಾದ ಅಂಶವಾಗಿದೆ. ಒಂದು ವೇಳೆ ಈ ನೀರನ್ನು ಚೆಲ್ಲಿದರೆ ನಾವು ಮೊಸರಿನ ಮೇಲಿರುವ ಒಂದು ದ್ರವವನ್ನು ಚೆಲ್ಲುವುದಲ್ಲ ಬದಲಿಗೆ ಮೊಸರನ್ನು ಆರೋಗ್ಯಕರ ಆಹಾರವನ್ನಾಗಿ ಮಾಡುವ ಅನೇಕ ಅಮೂಲ್ಯ ಪೋಷಕಾಂಶಗಳನ್ನು ಎಸೆಯುತ್ತಿದ್ದೇವೆ ಎಂದರ್ಥ.

ಬಾಳೆ ಎಲೆ ಊಟದ ಪ್ರಯೋಜನ ತಿಳಿದರೆ ಅಪ್ಪಿತಪ್ಪಿಯೂ ತಟ್ಟೆಯಲ್ಲಿ ಅನ್ನ ತಿನ್ನುವುದಿಲ್ಲ ನೀವು:ಇದು ಸಂಪ್ರದಾಯವಲ್ಲ, ವಿಜ್ಞಾನ!
ಬಾಳೆ ಎಲೆ ಊಟದ ಪ್ರಯೋಜನ ತಿಳಿದರೆ ಅಪ್ಪಿತಪ್ಪಿಯೂ ತಟ್ಟೆಯಲ್ಲಿ ಅನ್ನ ತಿನ್ನುವುದಿಲ್ಲ ನೀವು:ಇದು ಸಂಪ್ರದಾಯವಲ್ಲ, ವಿಜ್ಞಾನ!

ಬದಲಾಗಿ ಏನು ಮಾಡಬೇಕು?:

ಇಲ್ಲಿ ಡಾ. ಸಲ್ಹಾಬ್ ಸರಳವಾದ ಪರಿಹಾರವನ್ನು ಶಿಫಾರಸು ಮಾಡುತ್ತಾರೆ. ಮೊಸರನ್ನು ತಿನ್ನುವ ಮೊದಲು ನೀರಿನ ಪದರವನ್ನು ಕೆನೆ ಮೊಸರಿನಲ್ಲಿ ಸಂಪೂರ್ಣವಾಗಿ ಬೆರೆಸಿ. ಚಮಚದ ಸಹಾಯದಿಂದ ಆ ನೀರನ್ನು ಮೊಸರಿನೊಂದಿಗೆ ಚೆನ್ನಾಗಿ ಕಲಸಬೇಕು. ಹೀಗೆ ಮಾಡುವುದರಿಂದ ಮೊಸರು ಹೆಚ್ಚು ಮೃದು ಮತ್ತು ಕೆನೆಭರಿತವಾಗಿರುವುದಲ್ಲದೆ, ಅದರ ಸಂಪೂರ್ಣ ಪೌಷ್ಟಿಕಾಂಶವನ್ನು ನಾವು ಪಡೆಯುವುದು ಸುಲಭವಾಗುತ್ತದೆ. ಫ್ರಿಡ್ಜ್‌ನಲ್ಲಿಟ್ಟ ಮೊಸರಿನಲ್ಲಿ ಈ ರೀತಿ ನೀರು ಬೇರ್ಪಡುವುದು ಅತ್ಯಂತ ಸಹಜ. ಈ ನಿಯಮವು ಗ್ರೀಕ್ ಮೊಸರು ಸೇರಿದಂತೆ ಎಲ್ಲಾ ರೀತಿಯ ಮೊಸರುಗಳಿಗೂ ಅನ್ವಯಿಸುತ್ತದೆ.

ಮೊಸರಿನ ಮೇಲೆ ನಿಲ್ಲುವ ನೀರಿನ ಪ್ರಯೋಜನ:

ಡಾ. ಸಾಲ್ಹಾಬ್ ಅವರ ಪ್ರಕಾರ, ಈ ದ್ರವವು ಪೋಷಕಾಂಶಗಳ ಆಗರ. ಇದರಲ್ಲಿ ಹೆಚ್ಚಿನ ಪ್ರೋಟೀನ್ ಅಡಗಿರುತ್ತದೆ. ಸ್ನಾಯುಗಳ ಆರೋಗ್ಯಕ್ಕೆ ಅಗತ್ಯವಾದ ಪ್ರೋಟೀನ್ ಇದರಲ್ಲಿ ಹೇರಳವಾಗಿರುತ್ತದೆ.
ದೇಹಕ್ಕೆ ಬೇಕಾದ ಪ್ರಮುಖ ಪೋಷಕಾಂಶಗಳನ್ನು ಇದು ಒಳಗೊಂಡಿದೆ.

ಆದ್ದರಿಂದ, ಮುಂದಿನ ಬಾರಿ ಮೊಸರಿನ ಡಬ್ಬಿ ತೆರೆದಾಗ ಆ ನೀರನ್ನು ಚೆಲ್ಲುವ ಬದಲು, ಅದನ್ನು ಮೊಸರಿನೊಂದಿಗೆ ಬೆರೆಸಿ ಸೇವಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+