Curd Tomato Chutney Recipe: ಮೊಸರು ಟೊಮೆಟೊ ಚಟ್ನಿ ಪಾಕವಿಧಾನ: ಜಾಸ್ತಿ ಚಪಾತಿ ಬೇಕು ಅಂತೀರಾ...
ನೀವು ಇಂದು ರಾತ್ರಿ ನಿಮ್ಮ ಮನೆಯಲ್ಲಿ ಚಪಾತಿ ಮಾಡಲು ಯೋಚಿಸಿದ್ದೀರಾ? ನೀವೇನಾದ್ರು ಯಾವಾಗಲೂ ಚಪಾತಿಗೆ ಗುರುಮಾ, ಗೊಜ್ಜು ಮಾಡ್ತಾಯಿದ್ದರೆ ಇವತ್ತು ಸ್ವಲ್ಪ ವಿಭಿನ್ನವಾಗಿ ಚಪಾತಿಗೆ ಮೊಸರು ಮತ್ತು ಟೊಮೆಟೊ ಚಟ್ನಿ ಮಾಡಿ.
ಈ ಮೊಸರು ಟೊಮೆಟೊ ಚಟ್ನಿಯು ಚಪಾತಿಯೊಂದಿಗೆ ಮಾತ್ರವಲ್ಲದೆ ಇಡ್ಲಿ ಮತ್ತು ದೋಸೆಯೊಂದಿಗೂ ಕೂಡ ಅದ್ಭುತವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಹಾಗಾದರೆ ತಟ ಮಾಡುವುದು ಬೇಡ ಮೊಸರು ಟೊಮೆಟೊ ಚಟ್ನಿ ತಯಾರಿಸುವುದು ಹೇಗೆ ಅನ್ನೋದನ್ನು ತಿಳೀಯೋಣ. ನೀವು ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಅಗತ್ಯವಿರುವ ವಸ್ತುಗಳು:
* ಬೆಳ್ಳುಳ್ಳಿ - 7
* ಎಣ್ಣೆ - 1 tbsp
* ಹಸಿರು ಮೆಣಸಿನಕಾಯಿ - 6
* ಟೊಮೇಟೊ - 4
* ಉಪ್ಪು - ರುಚಿಗೆ ತಕ್ಕಷ್ಟು
* ಹುಣಸೆಹಣ್ಣು - 1 ಸಣ್ಣ ತುಂಡು
* ಜೀರಿಗೆ - 1 tbsp
* ಕೊತ್ತಂಬರಿ ಸೊಪ್ಪು - 1/4 ಕಪ್
* ಮೊಸರು - 1/2 ಕಪ್
ಒಗ್ಗರಣೆಗಾಗಿ...
* ಎಣ್ಣೆ - 1 ಟೇಬಲ್ಸ್ಪೂನ್
* ಕಡಲೆ - 1 tbsp
* ಇದ್ದಿನ ಬೇಳೆ - 1 tbsp
* ಸಾಸಿವೆ - 1/2 ಟೀಸ್ಪೂನ್
* ಕರಿಬೇವು ಸ್ವಲ್ಪ
*ಸಣ್ಣ ಈರುಳ್ಳಿ - 1 (ಸಣ್ಣದಾಗಿ ಹೆಚ್ಚಿದ)
ಪಾಕವಿಧಾನ:
* ಮೊದಲು ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಬೆಳ್ಳುಳ್ಳಿ ಜಜ್ಜಿ ಹಾಕಿ ಚೆನ್ನಾಗಿ ವಾಸನೆ ಬರುವವರೆಗೆ ಹುರಿದು ಪ್ರತ್ಯೇಕ ತಟ್ಟೆಯಲ್ಲಿ ಇಡಿ.
* ನಂತರ ಅದೇ ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಅದು ಬಿಸಿಯಾದಾಗ ಹಸಿಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.

* ನಂತರ ಅದಕ್ಕೆ ಕತ್ತರಿಸಿದ ಟೊಮೇಟೊ ಹಾಕಿ 1 ಚಮಚ ಉಪ್ಪು ಮತ್ತು ಹುಣಸೆಹಣ್ಣು ಹಾಕಿ ಹುರಿದು 2 ನಿಮಿಷ ಮುಚ್ಚಿ ಟೊಮೇಟೊ ಮೃದುವಾಗುವವರೆಗೆ ಬೇಯಿಸಿ ತಣ್ಣಗಾಗಲು ಬಿಡಿ.
* ನಂತರ ಮಿಕ್ಸರ್ ಜಾರ್‌ಗೆ ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ.
* ನಂತರ ಒಂದು ಬೌಲ್‌ನಲ್ಲಿ ಮೊಸರನ್ನು ಹಾಕಿ ಉಂಡೆಗಳಿಲ್ಲದಂತೆ ಚೆನ್ನಾಗಿ ಕಲಿಸಿಕೊಳ್ಳಿ
* ನಂತರ ಅದಕ್ಕೆ ಮಿಕ್ಸಿಗೆ ಹಾಕಿಕೊಂಡ ಮಸಾಲೆ ಹಾಕಿ ಚೆನ್ನಾಗಿ ಕಲಕಿ.
* ಮುಂದೆ ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ, ಕರಿ ಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ ಚಟ್ನಿಯೊಂದಿಗೆ ಕಲಸಿ.
*ಕೊನೆಗೆ ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿ ಈರುಳ್ಳಿಯನ್ನು ಹಾಕಿ ಕಲಕಿದರೆ ರುಚಿಯಾದ ಮೊಸರು ಟೊಮೆಟೊ ಚಟ್ನಿ ರೆಡಿ.












Click it and Unblock the Notifications