ಮಕ್ಕಳಿಗೆ ಬಾಕ್ಸ್ ಕಟ್ಟುವ ಕಿರಿಕಿರಿಯಾ? ಇಲ್ಲಿದೆ ಚಟ್‌ಪಟ್ ಮಾಡುವ ತಿನಿಸು
ಪ್ರತಿದಿನ ಬೆಳಗ್ಗೆ ತಾಯಂದಿರಿಗೆ ಒಂದು ಟೆನ್ಷನ್ ಇದ್ದೇ ಇರುತ್ತದೆ. ಮಕ್ಕಳು ಶಾಲೆಗೆ ಹೊರಡಲು ಸಿದ್ಧರಾಗಿರುತ್ತಾರೆ. ಹಾಗೂ ಗಂಡ ಆಫೀಸ್‌ಗೆ ಹೋಗುತ್ತಾರೆ. ಸಿಗುವ ಕೊಂಚ ಸಮಯದಲ್ಲಿ ಕುಟುಂಬಸ್ಥರಿಗೆ ಅಗತ್ಯವಿರುವ ಹೆಲ್ತಿ ಹಾಗೂ ಟೆಸ್ಟಿ ಆಹಾರವನ್ನು ತಯಾರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಲೆ ಇರುತ್ತದೆ. ಈ ಪ್ರಶ್ನೆ ನಿಜಕ್ಕೂ ತಾಯಂದಿರಿಗೆ ಹೆಚ್ಚಿನ ಕಿರಿಕಿರಿ ಉಂಟು ಮಾಡುವುದರಲ್ಲಿ ಸಂದೇಹವೇ ಇಲ್ಲ.
ಹೆಚ್ಚು ಸಮಯ ಬಾಕ್ಸ್‌ನಲ್ಲಿ ಚೆನ್ನಾಗಿ ಇರಬೇಕಾದ ಉತ್ತಮ ಆಹಾರವನ್ನು ತಯಾರಿಸುವ ಜವಾಬ್ದಾರಿ ಮನೆಯಲ್ಲಿ ಅಡುಗೆ ತಯಾರಿಸುವ ತಾಯಂದಿರ ಮೇಲೆ ಇರುತ್ತದೆ. ಇನ್ನು ಗಂಡ ಏನು ಮಾಡಿದರೂ ತಿನ್ನ ಬಹುದು ಆದರೆ ಮಕ್ಕಳು ಹಾಗೇ ಅಲ್ಲವಲ್ಲ. ಅವರ ಇಷ್ಟ, ಕಷ್ಟಗಳನ್ನು ಅರ್ಥ ಮಾಡಿಕೊಂಡು ಬಾಕ್ಸ್ ಕಟ್ಟಬೇಕಾಗುತ್ತದೆ. ನಾವು ಇಂದು ಮಕ್ಕಳಿಗೆ ಇಷ್ಟವಾಗುವ ಚಟ್ ಪಟ್ ಟಿಫಿನ್ ಬಗ್ಗೆ ತಿಳಿಸುತ್ತೇವೆ. ಈ ಟಿಫಿನ್ ನೋಡಿದ್ರೆ ನೀವು ಮಾಡಿ ಮಕ್ಕಳಿಗೆ ಕಟ್ಟಿಕೊಡುವುದು ಗ್ಯಾರಂಟಿ..

ಸ್ಯಾಂಡ್ವಿಚ್
ಮಕ್ಕಳಿಗೆ ದಿನವೂ ರೊಟ್ಟಿ, ಚಪಾತಿ ಹಾಗೂ ಅನ್ನವನ್ನು ಕಟ್ಟಿ ಕೊಟ್ಟರೆ, ಅವರು ಮುಖವನ್ನು ಮುರಿಯುತ್ತಾರೆ. ಅದೇ ಅವರ ಬಾಕ್ಸ್‌ನಲ್ಲಿ ಭಿನ್ನ ವಿಭಿನ್ನ ಟಿಫಿನ್ ಮಾಡಿಕೊಟ್ಟರೆ ಚಪ್ಪರಿಸುತ್ತಾ ತಿನ್ನುತ್ತಾರೆ. ಹಾಗಿದರೆ, ನೀವು ಚಟ್ ಪಟ್ ಮಾಡುವ ಬಾಕ್ಸ್ ಐಟಮ್‌ನಲ್ಲಿ ಮೊದಲಿಗೆ ಕಾಣಿಸಿಕೊಳ್ಳುವ ಸ್ಯಾಂಡ್ವಿಚ್.
ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಮಾಡಬಹುದಾದ ಸ್ಯಾಂಡ್ವಿಚ್. ಮೊದಲು ಬ್ರೆಡ್ ಸ್ಲೈಸ್ ತೆಗೆದುಕೊಂಡು ಅದನ್ನು ಟೋಸ್ಟ್ ಮಾಡಿ. ಇದರಿಂದ ಬ್ರೆಡ್ ಕ್ರಿಸ್ಪಿಯಾಗುತ್ತದೆ. ಇದಾದ ಬಳಿಕ ಇದರ ಮೇಲೆ
ಕೆಚಪ್, ಮೇಯನೇಸ್ ಮತ್ತು ಹಸಿರು ಚಟ್ನಿಯನ್ನು ಹಚ್ಚಿ. ಈಗ ಅದರ ಮೇಲೆ ಟೊಮ್ಯಾಟೊ, ಚೀಸ್ ಸ್ಲೈಸ್ ಮತ್ತು ಬ್ರೆಡ್ ಇರಿಸಿ. ಈ ರೀತಿಯಲ್ಲಿ ನೀವು ಸುಲಭವಾಗಿ ಮನೆಯಲ್ಲಿ ಸ್ಯಾಂಡ್ವಿಚ್ಗಳನ್ನು ಮಾಡಬಹುದು.

ಇನ್ನು ಆರೋಗ್ಯಕರ ಟಿಫಿನ್ ಪಟ್ಟಿಯನ್ನು ಹುಡುಕುತ್ತಾ ಹೋದರೆ ಈ ಪಟ್ಟಿಯಲ್ಲಿ ಪನೀರ್‌ಗೂ ಸ್ಥಾನವಿದೆ. ಇದರಿಂದ ಉತ್ತರ ಭಾರತದಲ್ಲಿ ಹಲವು ಖಾದ್ಯಗಳನ್ನು ಮಾಡುತ್ತಾರೆ. ಇದರಿಂದ ಹೆಚ್ಚಿನ ಪ್ರೋಟಿನ ದೇಹಕ್ಕೆ ಸಿಗುತ್ತದೆ. ಟಿಫಿನ್ ಬಾಕ್ಸ್‌ನಲ್ಲಿ ಪನೀರ್ ಪಕೋಡವನ್ನು ಮಾಡಿ ಕೊಡಬಹುದು.
ಇದನ್ನು ಮಾಡಲು, ಮೊದಲು ಒಂದು ಬೌಲ್ ತೆಗೆದುಕೊಳ್ಳಿ. ಮೈದಾ, ಉಪ್ಪು, ಚಾಟ್ ಮಸಾಲಾ, ಕೆಂಪು ಮೆಣಸಿನ ಪುಡಿ, ಕಾರ್ನ್ ಫ್ಲೋರ್ ಮತ್ತು ನೀರು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ದಪ್ಪ ಪೇಸ್ಟ್ ತಯಾರಿಸಿ. ಈಗ ಚೀಸ್ ತೆಗೆದುಕೊಳ್ಳಿ. ಇದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪೇಸ್ಟ್ಗೆ ಸೇರಿಸಿ. ಈಗ ಪನೀರ್ ಅನ್ನು ಕಾದ ಎಣ್ಣೆಯೊಂದಿಗೆ ಬಾಣಲೆಯಲ್ಲಿ ಹಾಕಿ ಫ್ರೈ ಮಾಡಿ. ಅವುಗಳ ಬಣ್ಣವು ತಿಳಿ ಕಂದು ಬಣ್ಣಕ್ಕೆ ತಿರುಗಿದಾಗ, ಅವುಗಳನ್ನು ಎಣ್ಣೆಯಿಂದ ಹೊರತೆಗೆಯಿರಿ. ಅದರ ಮೇಲೆ ಗರಂ ಮಸಾಲ ಉದುರಿಸಿ ಟಿಫಿನ್ ಬಾಕ್ಸ್ ನಲ್ಲಿ ಮಕ್ಕಳಿಗೆ ನೀಡಬಹುದು.

ಸೋರೆಕಾಯಿ ಇಡ್ಲಿ
ಮನೆಯಲ್ಲಿ ಮಾಡುವ ಅಕ್ಕಿ ಇಡ್ಲಿ, ತಟ್ಟೆ ಇಡ್ಲಿ, ರಾಗಿ ಇಡ್ಲಿಗಳನ್ನು ತಿಂದು ಮಕ್ಕಳು ಬೇಜಾರವಾಗುತ್ತಾರೆ. ಹೀಗಾಗಿ ಕೊಂಚ ಡಿಫರೆಂಟ್ ಆಗಿ ಟಿಫಿನ್‌ನಲ್ಲಿ ಬಾಟಲ್ ಸೋರೆಕಾಯಿ ಇಡ್ಲಿಯನ್ನು ಸಹ ನೀಡಬಹುದು. ಇದನ್ನು ಮಾಡಲು, ಪ್ಯಾನ್ ಅನ್ನು ಗ್ಯಾಸ್ ಮೇಲೆ ಇರಿಸಿ. ನಂತರ ಎಣ್ಣೆ, ಉದ್ದಿನಬೇಳೆ, ಉಪ್ಪು, ಕರಿಬೇವಿನ ಸೊಪ್ಪು, ರವೆ ಮತ್ತು ಕೆಂಪು ಮೆಣಸಿನಕಾಯಿ ಹಾಕಿ ಐದು ನಿಮಿಷ ಫ್ರೈ ಮಾಡಿ. ಈಗ ಅದಕ್ಕೆ ನೀರು ಮತ್ತು ಮೊಸರು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಅನ್ನು ಸ್ವಲ್ಪ ಸಮಯದವರೆಗೆ ಮುಚ್ಚಿಡಿ.
ಅಷ್ಟರಲ್ಲಿ ಸೋರೆಕಾಯಿಯನ್ನು ತುರಿದುಕೊಳ್ಳಿ. ಈಗ ಈ ಪೇಸ್ಟ್ ಗೆ ಸೋರೆಕಾಯಿ ತುರಿದು ಹಾಕಿ. ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. ಪೇಸ್ಟ್ ಅನ್ನು ಇಡ್ಲಿ ಅಚ್ಚಿನಲ್ಲಿ ಸುರಿಯಿರಿ ಮತ್ತು 10 ನಿಮಿಷಗಳ ಕಾಲ ಉಗಿಗೆ ಗ್ಯಾಸ್ ಮೇಲೆ ಇರಿಸಿ. ಈ ರೀತಿಯಾಗಿ, ರುಚಿಕರವಾದ ಸೋರೆಕಾಯಿ ಇಡ್ಲಿಯನ್ನು ಮನೆಯಲ್ಲಿ ತಕ್ಷಣವೇ ತಯಾರಿಸಿ, ಚಟ್ನಿಯೊಂದಿಗೆ ತಿನ್ನಿ.












Click it and Unblock the Notifications