Chicken Biryani Recipe: ಅರ್ಧ ಗಂಟೆಯಲ್ಲಿ ಮಾಡಿ ಕೊಕ್ ಕೊಕ್ ಬಿರಿಯಾನಿ..
ಇವತ್ತು ಭಾನುವಾರ ಅಲ್ಲ. ಆದರೂ ಚಿಕನ್ ಬಿರಿಯಾನಿ ತಿನ್ಬೇಕು ಅಂತ ಮನಸ್ಸಾಗ್ತಾಯಿದಿಯಾ? ನೀವು ಚಿಕನ್ ಪ್ರಿಯರಾಗಿದ್ದರೆ ನಿಮಗೆ ಹಲವಾರು ಬಾರಿ ಹೀಗನಿಸಿರಬಹುದು. ತುಂಬಾ ಕಷ್ಟಪಟ್ಟು ಭಾನುವಾರ ಬರುವವರೆಗೂ ಚಿಕನ್ ತಿನ್ನಲು ನೀವು ಹಲವಾರು ಬಾರಿ ಕಾದಿರಬಹುದು. ಆದರೀಗ ನೀವು ಚಿಕನ್ ಬಿರಿಯಾನಿ ತಿನ್ನಲು ಕಾಯಬೇಕಿಲ್ಲ. ಯಾಕೆಂದರೆ ರುಚಿಯಾಗಿ ಮನೆಯಲ್ಲೇ ಒಂದು ಗಂಟೆಯಲ್ಲಿ ಬಿರಿಯಾನಿ ತಯಾರಿಸಿಬಿಡಬಹುದು.
ಹಾಗಾದರೆ ಮನೆಯಲ್ಲಿ ಬಹುಬೇಗ ರುಚಿಯಾಗಿ ಬಿರಿಯಾನಿ ತಯಾರಿಸುವುದು ಹೇಗೆ ಅನ್ನೋದನ್ನ ನಾವು ನಿಮಗೆ ಹೇಳಿಕೊಡುತ್ತೇವೆ. ನೀವು ಇದನ್ನು ಮನೆಯಲ್ಲಿ ಟ್ರೈ ಮಾಡಿ ಟೇಸ್ಟ್ ಮಾಡಿ ನಮ್ಮೊಂದಿಗೆ ನಿಮ್ಮ ಅನುಭವವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. ಹಾಗಾದರೆ ತಡ ಮಾಡುವುದು ಬೇಡ ಒಂದು ಗಂಟೆಯಲ್ಲಿ ಚಿಕನ್ ಬಿರಿಯಾನಿ ರಚಿಯಾಗಿ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ಚಿಕನ್ ಬಿರಿಯಾನಿ ತಯಾರಿಸಲು ಬೇಕಾದ ಪದಾರ್ಥಗಳು:
* ಚಿಕನ್ ಅರ್ಧ ಕೆಜಿ (ಎರಡು ಲೆಗ್ ಪೀಸ್ ಇರಲಿ)
* ಟೊಮ್ಯಾಟೋ ಮೂರು
* ಈರುಳ್ಳಿ ನಾಲ್ಕು
* ಬಾಸುಮತಿ ಅಕ್ಕಿ ಹತ್ತು ಟೀ ಗ್ಲಾಸ್‌ನಷ್ಟು
* ಸಾಮಾನ್ಯ ಅಕ್ಕಿ ಎರಡು ಟೀ ಗ್ಲಾಸ್‌ನಷ್ಟು
* ಚಿಕನ್ ಬಿರಿಯಾನಿ ಪೌಡರ್ ಚಿಕ್ಕ ಪ್ಯಾಕೇಟ್
* ಪಾಲಾವ್ ಎಲೆ, ಹೂವು, ಮೊಗ್ಗು, ಸೋಂಪು, ಕೇಸರಿ, ಚೆಕ್ಕೆ, ಲವಂಗಾ, ಕಾಳು ಮೆಣಸು (ಎಲ್ಲವೂ ಮಿಶ್ರತ ಪ್ಯಾಕೇಟ್ ಅಂಗಡಿಯಲ್ಲಿ ಸಿಗುತ್ತದೆ)
* ಹಸಿ ಮೆಣಸಿನ ಕಾಯಿ ಮೂರು
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಪುದೀನಾ ಸ್ವಲ್ಪ
* ಶುಂಠಿ ಒಂದು ಇಂಚು
* ಬೆಳ್ಳುಳ್ಳಿ ಐದು ಎಸಳು
* ಗೋಡಂಬಿ ಹತ್ತು
* ತುಪ್ಪ ಸ್ವಲ್ಪ
*ಎಣ್ಣೆ ಹನ್ನೆರೆಡು ಟೇಬಲ್ ಸ್ಪೂನ್
* ಖಾರದ ಪುಡಿ ಮೂರು ಚಮಚ
* ಅರಿಶಿಣ ಅರ್ಧ ಚಮಚ
* ನಿಂಬೆ ಹಣ್ಣು ಎರಡು

ಚಿಕನ್ ಬಿರಿಯಾನಿ ತಯಾರಿಸುವ ವಿಧಾನ:
* ಮೊದಲು ಚಿಕನ್ ತೊಳೆದು ಇದಕ್ಕೆ ಒಂದು ನಿಂಬೆ ಹಣ್ಣಿನ ರಸ, ಖಾರದ ಪುಡಿ, ಉಪ್ಪು, ಕಾಳು ಮೆಣಸು ಎರಡು, ಪುದೀನ ಎಲೆ ಸ್ವಲ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದೆಡೆ ಮುಚ್ಚಿಡಿ.
* ಒಂದು ಪಾತ್ರೆಯಲ್ಲಿ ಹತ್ತು ಟೀ ಗ್ಲಾಸ್‌ನಷ್ಟು ಬಾಸುಮತಿ ಅಕ್ಕಿ ಹಾಗೂ ಎರಡು ಟೀ ಗ್ಲಾಸ್‌ನಷ್ಟು ಸಾಮಾನ್ಯ ಅಕ್ಕಿಯನ್ನು ತೊಳೆದು ಇದಕ್ಕೆ 14 ಗ್ಲಾಸ್ನಷ್ಟು ಮಾತ್ರ ನೀರು ಹಾಕಿ ಒಲೆ ಮೇಲೆ ಇಡಿ.
* ಇದಕ್ಕೆ ಪಾಲಾವ್ ಎಲೆ, ಹೂವು, ಮೊಗ್ಗು, ಸೋಂಪು, ಕೇಸರಿ, ಚೆಕ್ಕೆ, ಲವಂಗಾ, ಕಾಳು ಮೆಣಸು, ಪುದೀನ, ಉಪ್ಪು ಹಾಕಿ ಕುದಿಯಲು ಬಿಡಿ
* ಮತ್ತೊಂದು ಒಲೆಯ ಮೇಲೆ ಕುಕ್ಕರ್ ಇಟ್ಟು ಇದಕ್ಕೆ ಹನ್ನೆರೆಡು ಟೇಬಲ್ ಸ್ಪೂನ್ ಎಣ್ಣೆ ಹಾಕಿ ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತೊಂಬರಿ ಸೊಪ್ಪು ಒಟ್ಟಿಗೆ ರುಬ್ಬಿಕೊಂಡ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ.
* ಬಳಿಕ ಇದಕ್ಕೆ ಈರುಳ್ಳಿ ಪೇಸ್ಟ್, ಟೊಮ್ಯಾಟೋ ಪೇಸ್ಟ್ ಒಂದೊಂದಾಗಿ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ
* ನಂತರ ಇದಕ್ಕೆ ಚಿಕನ್ ಬಿರಿಯಾನಿ ಪೌಡರ್, ಅರಿಶಿಣ, ಉಪ್ಪು ಹಾಕಿ ಮಿಕ್ಸ್ ಮಾಡಿ ಚಿಕನ್ ಹಾಕಿ. ಕುಕ್ಕರ ಮುಚ್ಚಳ ಮುಚ್ಚಿ ಎರಡು ವಿಸಿಲ್ ಆಗಲು ಬಿಡಿ.
* ಇತ್ತ ರೈಸ್ ಪೂರ್ತಿ ಬೆಂದಿರದಂತೆ ನೋಡಿಕೊಳ್ಳಿ. ಅರ್ಧ ಬೆಂದರೆ ಸಾಕು ಗ್ಯಾಸ್ ಆಫ್ ಮಾಡಿ.
* ಮತ್ತೊಂದು ಪಾತ್ರೆ ಒಲೆಯ ಮೇಲಿಟ್ಟು ಉದ್ದಕೆ ಹೆಚ್ಚಿದ ಈರುಳ್ಳಿ, ಗೋಡಂಬಿ ತುಪ್ಪದಲ್ಲಿ ಹುರಿದುಕೊಳ್ಳಿ,
* ಎರಡು ವಿಸಿಲ್ ಆದ ಬಳಿಕ ಕುಕ್ಕರ ಮುಚ್ಚಳ ತೆಗೆದು ಅದರ ಮೇಲೆ ರೈಸ್ ಹಾಕಿ, ಮಧ್ಯದಲ್ಲಿ ಹಾಗೂ ಕೊನೆಯಲ್ಲಿ ಹುರಿದುಕೊಂಡ ಈರುಳ್ಳಿ ಹಾಗೂ ಗೋಡಂಬಿ, ಪುದೀನ ಹಾಕಿ ಕುಕ್ಕರ ಮುಚ್ಚಳ ಮುಚ್ಚಿ ಒಂದು ವಿಸಿಲ್ ಆಗಲು ಬಿಡಿ.
* ಬಳಿಕ ಗ್ಯಾಸ್ ಆಫ್ ಮಾಡಿ ಹಬೆ ಹೋಗಲು ಬಿಟ್ಟು ಹತ್ತು ನಿಮಿಷದ ಬಳಿಕ ತಟ್ಟೆಗೆ ಬಿಸಿ ಬಸಿ ಚಿಕಿನ್ ಬಿರಿಯಾನಿ ತಿನ್ನಲು ಬಡಿಸಿಕೊಳ್ಳಿ. ನೀವು ಅಂದುಕೊಂಡಿರುವುದಕ್ಕಿಂತಲೂ ಇದು ತುಂಬಾ ರುಚಿಯಾಗಿರುತ್ತದೆ.












Click it and Unblock the Notifications