ಮನೆಯಲ್ಲಿರುವ ಕಬ್ಬಿಣದ ಕಾವಲಿಯನ್ನೇ ನಾನ್‌ಸ್ಟಿಕ್‌ ಮಾಡಬೇಕೇ? ಈ ಸಿಂಪಲ್‌ ವಿಧಾನವನ್ನು ಟ್ರೈ ಮಾಡಿ

ನಾನ್-ಸ್ಟಿಕ್ ಪಾತ್ರೆಗಳನ್ನು ಬಳಸಿದರೆ ಅಡುಗೆ ಮಾಡುವ ಪ್ರಕ್ರಿಯೆ ಸುಲಭವಾಗುತ್ತದೆ. ಆದರೆ, ನಾನ್-ಸ್ಟಿಕ್ ಪಾತ್ರೆಗಳು ಮಾನವನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಕೂಡಾ ಸತ್ಯ. ಕಬ್ಬಿಣದ ಪಾತ್ರೆಗಳಲ್ಲಿ ಆಹಾರ ಬೇಯಿಸುವುದರಿಂದ ರುಚಿ ದುಪ್ಪಟ್ಟಾಗುವುದರ ಜೊತೆಗೆ ಅದು ಆರೋಗ್ಯಕರವಾಗಿಯೂ ಇರುವುದು. ಹೀಗಿರುವಾಗ ಅಡುಗೆ ಪ್ರಕ್ರಿಯೆಯೂ ಸುಲಭವಾಗಬೇಕು ಜೊತೆಗೆ ಆರೋಗ್ಯಕರವಾಗಿಯೂ ಇರಬೇಕು ಎನ್ನುವ ಸುಲಭ ಮಾರ್ಗದತ್ತ ಮುಖ ಮಾಡಬೇಕಾಗುತ್ತದೆ. ಅಂದರೆ ಸಾಮಾನ್ಯ ಕಬ್ಬಿಣದ ತವಾವನ್ನು ಸುಗಮ ಅಡುಗೆಗಾಗಿ ನಾನ್-ಸ್ಟಿಕ್ ಪ್ಯಾನ್ ಆಗಿ ಪರಿವರ್ತಿಸಬೇಕಾಗುತ್ತದೆ. ಇದನ್ನು ಮಾಡುವುದು ಬಹಳ ಸುಲಭ. ಕೆಲವೊಂದು ಹಂತಗಳನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿರುವ ಕಬ್ಬಿಣದ ಕಾವಲಿಯನ್ನು ನಾನ್‌ ಸ್ಟಿಕ್‌ ತವಾ ಆಗಿ ಬದಲಿಸಬಹುದು.

ಕಬ್ಬಿಣದ ತವಾ ನಾನ್-ಸ್ಟಿಕ್ ಮಾಡುವುದು ಹೇಗೆ?

ತೊಳೆದು ಒಣಗಿಸಿ: ಮೊದಲು, ಕಬ್ಬಿಣದ ತವಾವನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಿ. ಇದನ್ನು ಕೈಯಿಂದಲೇ ತೊಳೆಯಬೇಕು, ಪಾತ್ರೆ ತೊಳೆಯುವ ಮಿಷನ್‌ಗೆ ಹಾಕಬೇಡಿ. ಜೊತೆಗೆ ಸಾಬೂನು, ಲಿಕ್ವಿಡ್‌ ಯಾವುದನ್ನೂ ಬಳಸಬೇಡಿ. ಕೇವಲ ಬಿಸಿ ನೀರು ಬಳಸಿ ತೊಳೆದರೆ ಸಾಕು. ತುಕ್ಕು ಹಿಡಿಯುವುದನ್ನು ತಡೆಯಲು ಅಡಿಗೆ ಟವೆಲ್ ಬಳಸಿ ಅದನ್ನು ಸಂಪೂರ್ಣವಾಗಿ ಒಣಗಿಸಿ.

ತವಾವನ್ನು ಬಿಸಿ ಮಾಡಿ: ಈಗ, ತವಾವನ್ನು ಮಧ್ಯಮ ಉರಿಯಲ್ಲಿ 2-3 ನಿಮಿಷಗಳ ಕಾಲ ಬಿಸಿ ಮಾಡಿ.

ಎಣ್ಣೆಯನ್ನು ಹಚ್ಚಿ: ನಂತರ, ಒಂದು ಚಮಚ ಎಣ್ಣೆ ತೆಗೆದುಕೊಂಡು ಇಡೀ ತವಾದ ಮೇಲೆ ಸರಿಯಾಗಿ ಹಚ್ಚಿ. ಹೀಗೆ ಎಣ್ಣೆಯನ್ನು ಬಳಸುವಾಗ ಶುಂಠಿ, ಎಳ್ಳು, ಕಡಲೆಕಾಯಿ, ಸೂರ್ಯಕಾಂತಿ ಎಣ್ಣೆಯನ್ನು ಬಳಸಿದರೆ ಒಳ್ಳೆಯದು.

ಬಿಸಿ ಮಾಡಿದ ನಂತರ ಮತ್ತೊಮ್ಮೆ ಎಣ್ಣೆ ಹಚ್ಚಿ: ಈಗ ಕಡಿಮೆ ಉರಿಯಲ್ಲಿ 5-7 ನಿಮಿಷಗಳವರೆಗೆ ತವಾವನ್ನು ಬಿಸಿ ಮಾಡಿ. ಮೇಲ್ಮೈ ಮೇಲೆ ಎಣ್ಣೆ ಸವರಿ ತಣ್ಣಗಾಗಲು ಬಿಡಿ. ಹೆಚ್ಚುವರಿ ಎಣ್ಣೆಯನ್ನು ಒರೆಸಿ ತೆಗೆಯಿರಿ. ಈಗ ನಿಮ್ಮ ತವಾ ನಾನ್-ಸ್ಟಿಕ್ ಆಗಿ ಬಳಸಲು ಸಿದ್ಧವಾಗಿರುತ್ತದೆ.

Cast Iron Tawa Seasoning

ತಜ್ಞರು ಏನು ಹೇಳುತ್ತಾರೆ?

ಮನೆಯಲ್ಲಿ ಅಡುಗೆ ಮಾಡಲು ಕಬ್ಬಿಣದ ಪಾತ್ರೆಗಳನ್ನು ಬಳಸುವಾಗ ಅನುಸರಿಸಬೇಕಾದ ಅಡುಗೆ ತಂತ್ರಗಳ ಬಗ್ಗೆ ಬಾಣಸಿಗ ಸಂಜೀವ್ ಕಪೂರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಪ್ರಕಾರ, ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವಾಗ ನಿಂಬೆ ರಸ, ಸಿಟ್ರಸ್ ಅಥವಾ ಆಸಿಡ್‌ ಪದಾರ್ಥಗಳನ್ನು ಬಳಸಬೇಡಿ. ಒಂದು ವೇಳೆ ಈ ಪದಾರ್ಥಗಳನ್ನು ಬಳಸಿದರೆ ನಾವು ಮಾಡುವ ಅಡುಗೆ ಕಬ್ಬಿಣದ ವಾಸನೆ ಬರಬಹುದು.ಜೊತೆಗೆ , ಆಹಾರವನ್ನು ಕಬ್ಬಿಣದ ಪಾತ್ರೆಯಲ್ಲಿ ತಯಾರಿಸಿದ ನಂತರ, ಅದೇ ಪಾತ್ರೆಯಲ್ಲಿ ಆಹಾರವನ್ನು ಬಿಡಬಾರದು. ಅಡುಗೆಯಾದ ತಕ್ಷಣ ಆಹಾರವನ್ನು ಬೇರೆ ಪಾತ್ರೆಗೆ ಶಿಫ್ಟ್‌ ಮಾಡಬೇಕು. ಇಲ್ಲವಾದರೆ ಆಹಾರ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಮಿಕ್ಕಿರುವ ಅನ್ನವನ್ನು ಎಸೆಯುವ ಬದಲು ತಯಾರಿಸಿ ಗರಿಗರಿಯಾದ ಹಪ್ಪಳ: ಬಲು ಸುಲಭದ ರೆಸಿಪಿ ಇದು
ಮಿಕ್ಕಿರುವ ಅನ್ನವನ್ನು ಎಸೆಯುವ ಬದಲು ತಯಾರಿಸಿ ಗರಿಗರಿಯಾದ ಹಪ್ಪಳ: ಬಲು ಸುಲಭದ ರೆಸಿಪಿ ಇದು

ಕಬ್ಬಿಣದ ತವಾವನ್ನು ಸೀಸನಿಂಗ್‌ ಮಾಡುವುದು ಹೇಗೆ ?:

ಬಾಣಸಿಗ ಸಂಜೀವ್ ಅವರ ಪ್ರಕಾರ, ಹಿಟ್ಟು ತವಾಗೆ ಅಂಟಿಕೊಳ್ಳುವುದನ್ನು ತಪ್ಪಿಸಲು, ಈರುಳ್ಳಿಯ ಅರ್ಧ ಭಾಗವನ್ನು ಎಣ್ಣೆಯಲ್ಲಿ ಅದ್ದಿ ತವಾ ಮೇಲೆ ಹಚ್ಚಿ. ಅದು ಬಿಸಿಯಾಗಲು ಬಿಡಿ. ಇಷ್ಟು ಮಾಡಿದರೆ ತವಾ ಪಳಗುತ್ತದೆ. ಅಲ್ಲದೆ, ಈರುಳ್ಳಿಯ ಬದಲಿಗೆ ಮಸ್ಲಿನ್ ಬಟ್ಟೆಯನ್ನು ಕೂಡಾ ಬಳಸಬಹುದು. ಮಸ್ಲಿನ್ ಬಟ್ಟೆಯನ್ನು ಎಣ್ಣೆಯಲ್ಲಿ ಅದ್ದಿ ಕಬ್ಬಿಣದ ತವಾ ಮೇಲೆ ಎಣ್ಣೆಯನ್ನು ಹಚ್ಚಿ ಮತ್ತು ತವಾ ಬಿಸಿಯಾಗಲು ಬಿಡಿ.

ಕಾಸ್ಟ್‌ ಐರನ್‌ ತವಾದಲ್ಲಿ ಅಡುಗೆ ಮಾಡುವುದರಿಂದಾಗುವ ಪ್ರಯೋಜನಗಳು:

ಆರೋಗ್ಯ ಮತ್ತು ಪೌಷ್ಟಿಕಾಂಶ ತಜ್ಞರ ಪ್ರಕಾರ, ಕಾಸ್ಟ್‌ ಐರನ್‌ ಪಾತ್ರೆಗಳು ನಮ್ಮ ಆಹಾರದಲ್ಲಿ ಜೈವಿಕ ಲಭ್ಯವಿರುವ ಕಬ್ಬಿಣವನ್ನು ನಿಧಾನವಾಗಿ ಬಿಡುಗಡೆ ಮಾಡುತ್ತವೆ. ರಕ್ತಹೀನತೆ, ಹಿಮೋಗ್ಲೋಬಿನ್ ಸಮಸ್ಯೆಗಳು ಅಥವಾ ಥಲಸ್ಸೆಮಿಯಾ ಮೈನರ್‌, ಕೂದಲು ಉದುರುವಿಕೆ, ಮಹಿಳೆಯರ ಆರೋಗ್ಯ ಸಮಸ್ಯೆಗಳಿದ್ದರೆ, ಇದು ಸಹಾಯಕವಾಗಿದೆ. ಇದರಲ್ಲಿ ದೋಸೆ, ಪ್ಯಾನ್‌ಕೇಕ್‌ಗಳನ್ನು ತಯಾರಿಸಬಹುದು. ಯಾವುದೇ ರೀತಿಯ ತೆಳುವಾದ ಬ್ರೆಡ್ ಟೋಸ್ಟ್ ಅನ್ನು ಸಹ ಇದರ ಮೇಲೆ ಮಾಡಬಹುದು. ಅಲ್ಲದೆ, ನಿಮ್ಮ ಆಹಾರದಲ್ಲಿ ಸುಸ್ಥಿರ ರೀತಿಯಲ್ಲಿ ಕಬ್ಬಿಣವನ್ನು ಪಡೆಯಲು ಇದು ಉತ್ತಮ ಮಾರ್ಗವಾಗಿದೆ.

ಬೇಗ ಅಗೋ, ಕೃಷ್ಣನ ಪ್ರೀತಿಯ ಅವಲಕ್ಕಿಗೆ ಇಂಗ್ಲೀಷ್‌ ಅಲ್ಲಿ ಏನಂತಾರೆ?
ಬೇಗ ಅಗೋ, ಕೃಷ್ಣನ ಪ್ರೀತಿಯ ಅವಲಕ್ಕಿಗೆ ಇಂಗ್ಲೀಷ್‌ ಅಲ್ಲಿ ಏನಂತಾರೆ?

ನ್ಯಾಷನಲ್‌ ಲೈಬ್ರೆರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಕಬ್ಬಿಣದ ಪಾತ್ರೆಯಲ್ಲಿ ಆಹಾರವನ್ನು ಬೇಯಿಸುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಮತ್ತು ಆಹಾರದ ಕಬ್ಬಿಣದ ಅಂಶ ಹೆಚ್ಚಾಗುತ್ತದೆ.ಹೀಗಾಗಿ ಕಬ್ಬಿಣದ ಕೊರತೆಯ ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನಾನ್-ಹೀಮ್ ಕಬ್ಬಿಣವನ್ನು ಹೊಂದಿರುವ ಸಸ್ಯಹಾರಿ ಆಹಾರಗಳಿಗಿಂತ, ಹೀಮ್ ಕಬ್ಬಿಣವನ್ನು ಹೊಂದಿರುವ ಮಾಂಸಾಹಾರಿ ಆಹಾರಗಳನ್ನು ಕಬ್ಬಿಣದ ಪಾತ್ರೆಯಲ್ಲಿ ಬೇಯಿಸಿದಾಗ ಅದರ ಜೈವಿಕ ಲಭ್ಯತೆ ಗಮನಾರ್ಹವಾಗಿ ಹೆಚ್ಚುತ್ತದೆ .

ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು:

ತಜ್ಞರ ಪ್ರಕಾರ, ಟೊಮೆಟೊ ಆಧಾರಿತ ಕರಿ ಅಥವಾ ನಿಂಬೆಹಣ್ಣಿನ ಬಳಕೆಯಂತಹ ಆಸಿಡ್‌ ಯುಕ್ತ ಆಹಾರಗಳು ಹೆಚ್ಚು ಐರನ್‌ ಅಂಶವನ್ನು ಹೊರಹಾಕಬಹುದು. ಆದರೆ ಇದು ಪ್ಯಾನ್‌ನ ಸೀಸನಿಂಗ್‌ ಮೇಲೂ ಪರಿಣಾಮ ಬೀರಬಹುದು. ಹಿಮೋಕ್ರೊಮಾಟೋಸಿಸ್ ನಂತಹ ಸಮಸ್ಯೆ ಇದ್ದರೆ ಸೀಸನಿಂಗ್‌ ಮಾಡಿದ ಕಬ್ಬಿಣದ ಪಾತ್ರೆಯಲ್ಲಿ ಆಹಾರ ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಕಬ್ಬಿಣದ ಅಂಶ ಹೆಚ್ಚಿರುವ ಆಹಾರದ ಜೊತೆ ಡೈರಿ ಉತ್ಪನ್ನಹಗಳ ಸೇವೆಯನ್ನು ಕಡಿಮೆ ಮಾಡಬೇಕು.

ಕಾಸ್ಟ್‌ ಐರನ್‌ ಪಾತ್ರೆಯಲ್ಲಿ ಯಾವ ರೀತಿಯ ಆಹಾರವನ್ನು ಬೇಯಿಸಬೇಕು?

ಸೊಪ್ಪು, ಬದನೆಕಾರಿ, ಆಲೂಗಡೆ, ರಾಜ್ಮಾ, ಕಡಲೆಕಾಳು, ಬೆಂಡೆಕಾಯಿ, ರಸಂ ಮತ್ತು ಸಾಂಬಾರ್‌ನಂತಹ ಅಡುಗೆಗಳನ್ನು ಕಾಸ್ಟ್‌ ಐರನ್‌ ಪಾತ್ರೆಗಳಲ್ಲಿ ತಯಾರಿಸಬಹುದು.ಅಲ್ಲದೆ, ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಕಬ್ಬಿಣಾಂಶವಿರುವ ಆಹಾರಗಳನ್ನು ವಿಟಮಿನ್ ಸಿ ನೊಂದಿಗೆ ಜೋಡಿಸಬೇಕು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+