ಕಾರಿನ ಕೀಯನ್ನು ಆಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡವುದರ ಹಿಂದಿದೆ ಮರ್ಮ: ಕಳ್ಳತನ ತಡೆಯುವ ಸುಲಭ ಮಾರ್ಗ ಇದು

ನಮ್ಮಲ್ಲಿ ಬಹುತೇಕ ಮಂದಿಗೆ ಒಂದು ಅಭ್ಯಾಸವಿರುತ್ತದೆ. ಕಾರಿನ ಕೀಯನ್ನು ಬಾಗಿಲಿನ ಪಕ್ಕದಲ್ಲಿರುವ ಮೇಜಿನ ಮೇಲೆ ಇಟ್ಟು ಬಿಡುತ್ತೇವೆ. ಇದು ಬಹಳ ಅಪಾಯಕಾರಿ ಅಭ್ಯಾಸ. 2023 ರ ಹೊತ್ತಿಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಕಾರುಗಳು ಕಳವಾಗಿದೆ. ಇಂದಿನ ಅಪರಾಧಿಗಳು ಕಾರುಗಳನ್ನು ಕದಿಯಲು ಇತ್ತೀಚಿನ ತಂತ್ರಜ್ಞಾನಗಳನ್ನು ಅನುಸರಿಸುತ್ತಾರೆ. ಈ ಮೂಲಕ ಕಳ್ಳತನದ ಕುರುಹು ಕೂಡಾ ಬಿಡುವುದಿಲ್ಲ.

ಇತ್ತೀಚಿನ ಕಾರುಗಳು ಕೀಲಿರಹಿತವಾಗಿವೆ ಎಂಬ ಅಂಶವೇ ಈ ಕಳ್ಳರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕಾರುಗಳು ಕೀ ಲೆಸ್‌ ಆಗಿರುವುದರ ಲಾಭವನ್ನು ಪಡೆಯಲು ಅಪರಾಧಿಗಳು ಅತ್ಯಾಧುನಿಕ ವಿಧಾನಗಳನ್ನು ಬಳಸುತ್ತಿದ್ದಾರೆ. ಒಮ್ಮೆ ಅನುಕೂಲವೆಂದು ಪರಿಗಣಿಸಲ್ಪಟ್ಟಿದ್ದ ಕೀ ಲೆಸ್‌ ಕಾರುಗಳು ಈಗ ಅಪಾಯಕಾರಿಯಾಗಿ ಮಾರ್ಪಟ್ಟಿದೆ.

Car Key

ಕೀ ಲೆಸ್‌ ಕಾರಿನ ಸಿಸ್ಟಮ್‌ ಗಳು ಕಾರು ಮತ್ತು ಕೀ ಫೋಬ್ ಅನ್ನು ಸಂಪರ್ಕಿಸುವ ವೈರ್‌ಲೆಸ್ ಸಿಗ್ನಲ್‌ಗಳನ್ನು ನಿರಂತರವಾಗಿ ಸಂವಹನ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತವೆ. ಕಾರು ಕೀ ಫೋಬ್ ಅನ್ನು ಪತ್ತೆಹಚ್ಚಿದ ನಂತರ ಮತ್ತು ಅದು ತಕ್ಷಣವೇ ಬಾಗಿಲನ್ನು ಅನ್‌ಲಾಕ್ ಮಾಡಿಬಿಡುತ್ತದೆ. ಇಂದು 70% ಕ್ಕಿಂತ ಹೆಚ್ಚು ಕಾರುಗಳು ಈ ರೀತಿಯ ತಂತ್ರಜ್ಞಾನವನ್ನು ಹೊಂದಿವೆ.

ಯಾವುದೇ ಹೆಚ್ಚು ಕೆಲಸ ಅಥವಾ ಶ್ರಮವಿಲ್ಲದೆ ಕಳ್ಳರು ತೋರುವ ಕೈಚಳಕ ಚಾಲಕರಿಗೆ ಮ್ಯಾಜಿಕ್‌ನಂತೆ ಭಾಸವಾಗುತ್ತದೆ. ಕೀ ಲೆಸ್‌ ಕಾರಿನಲ್ಲಿ ಸಿಗ್ನಲ್‌ಗಳು ಗೋಚರಿಸದಿದ್ದರೂ, ಅವುಗಳನ್ನು ಕದಿಯಬಹುದು ಅಥವಾ ವಿಸ್ತರಿಸಬಹುದು ಇಲ್ಲಾ ನಂತರ ಬದಲಾಯಿಸಬಹುದು.

ಅಟ್ಯಾಕ್ ರಿಲೇ:

ಆಧುನಿಕ ಕಾರು ಕಳ್ಳರು ಬಳಸುವ ಅತ್ಯಂತ ಜನಪ್ರಿಯ ವಿಧಾನವನ್ನು ಅಟ್ಯಾಕ್ ರಿಲೇ ಎಂದು ಕರೆಯಲಾಗುತ್ತದೆ. ಇಲ್ಲಿ ಗಾಜು ಒಡೆಯುವುದು ಅಥವಾ ಬೀಗಗಳನ್ನು ಮುರಿಯುವುದಲ್ಲ. ಬದಲಾಗಿ, ಇಲ್ಲಿ ಸಿಗ್ನಲ್‌ಗಳ ಫಾರ್ವರ್ಡ್ ಮಾಡುವ ಮೂಲಕ ಕಳ್ಳತನ ಮಾಡಲಾಗುತ್ತದೆ.

ಇಲ್ಲಿ ಕಾರು ಕಳ್ಳರು ಹೇಗೆ ಕೆಲಸ ಮಾಡುತ್ತಾರೆ ಎನ್ನುವುದನ್ನು ಉದಾಹರಣೆ ಮೂಲಕ ನೋಡುವುದಾದರೆ ಇಬ್ಬರು ವ್ಯಕ್ತಿಗಳು ಕೆಲಸ ಮಾಡುತ್ತಾರೆ. ಒಬ್ಬ ಕಾರಿನ ಹತ್ತಿರದಲ್ಲಿ ನಿಲ್ಲುತ್ತಾನೆ. ಮತ್ತೊಬ್ಬ ಇನ್ನೊಂದು ಕೀ ಫೋಬ್ ಇರುವ ಸ್ಥಳದಲ್ಲಿರುತ್ತಾನೆ. ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು, ಅವರು ಫೋಬ್‌ ಕೀಯಿಂದ ಸಿಗ್ನಲ್‌ಗಳನ್ನು ರೆಕಾರ್ಡ್ ಮಾಡಿ ವಾಹನಕ್ಕೆ ನೀಡುತ್ತಾರೆ. ವಾಹನ ಈ ಸಿಗ್ನಲ್‌ ಸ್ವೀಕರಿಸಿದ ತಕ್ಷಣ ಕಾರು ಅನ್‌ಲಾಕ್‌ ಆಗುತ್ತದೆ.

ಅಧ್ಯಯನದ ಪ್ರಕಾರ ಈ ಸಿಗ್ನಲ್‌ಗಳನ್ನು 49 ಅಡಿಗಳವರೆಗೆ ವಿಸ್ತರಿಸಬಹುದು. ಅಂದರೆ ಕಿಟಕಿ ಅಥವಾ ಬಾಗಿಲಿನ ಹತ್ತಿರ ಬಿಟ್ಟ ಬೀಗವನ್ನು ಹೊರಗಿನಿಂದ ಯಾರು ಬೇಕಾದರೂ ಪತ್ತೆಹಚ್ಚಬಹುದು.

ಅಲ್ಯೂಮಿನಿಯಂ ಫಾಯಿಲ್ ಎಂಬ ಆಸಕ್ತಿದಾಯಕ ಪರಿಹಾರ:

ಹೆಚ್ಚುತ್ತಿರುವ ಕಳ್ಳತನದ ಈ ಅಪಾಯವನ್ನು ಎದುರಿಸಲು ಕೆಲವು ಚಾಲಕರು ಅಲ್ಯೂಮಿನಿಯಂ ಫಾಯಿಲ್ ಬಳಸುವತ್ತ ಮೊರೆ ಹೋಗುತ್ತಿದ್ದಾರೆ.ಇದು ವಿಚಿತ್ರವೆನಿಸಿದರೂ ಸತ್ಯ.

ಕೀ ಫೋಬ್ ಅನ್ನು ಫಾಯಿಲ್‌ನಿಂದ ಸುತ್ತುವ ಕ್ರಮವನ್ನು "ಫ್ಯಾರಡೆ ಕೇಜ್‌ " ಎಂದು ಕರೆಯುತ್ತಾರೆ. ಇದನ್ನು ವಿಜ್ಞಾನಿ ಮೈಕೆಲ್ ಫ್ಯಾರಡೆ ಹೆಸರಿನ ಆಧಾರದಲ್ಲಿ ಇಡಲಾಗಿದೆ. ಈ ಪರಿಕಲ್ಪನೆಯು ವಿದ್ಯುತ್ಕಾಂತೀಯ ಸಂಕೇತಗಳನ್ನು ನಿರ್ಬಂಧಿಸುವ ವಿದ್ಯುತ್ ವಾಹಕ ವಸ್ತುವಿನಿಂದ ಕೀಯನ್ನು ಸುತ್ತುವ ಪ್ರಕ್ರಿಯೆಯಾಗಿದೆ.

ಫೋಬ್‌ನ ಕೀಯನ್ನು ಸಂಪೂರ್ಣವಾಗಿ ಆಲ್ಯೂಮಿನಿಯಂ ಫಾಯಿಲ್‌ನಿಂದ ಸುತ್ತಿದರೆ ಸಿಗ್ನಲ್ ಅನ್ನು ರಿಲೇ ಸಾಧನಗಳು ಗುರುತಿಸುವುದು ಕಷ್ಟವಾಗುತ್ತದೆ. ಅಲ್ಯೂಮಿನಿಯಂ ಫಾಯಿಲ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಸಿಗ್ನಲ್‌ ಹರಿದು ಹೋಗುವುದನ್ನು ತಡೆಯಬಹುದು.

ದೈನಂದಿನ ಬಳಕೆಗೆ ಪರಿಣಾಮಕಾರಿ ಫಾಯಿಲ್ ತಂತ್ರ:

ಆಲ್ಯೂಮಿನಿಯಂ ಫಾಯಿಲ್‌ ತಂತ್ರದ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ಕೀಯನ್ನು ಫಾಯಿಲ್‌ನ ಹಲವು ಪದರಗಳಲ್ಲಿ ಕವರ್‌ ಮಾಡಬೇಕು. ಕೀ ಸಂಪೂರ್ಣವಾಗಿ ಫಾಯಿಲ್‌ನಿಂದ ಮುಚ್ಚಲ್ಪಟ್ಟಿದ್ದರೆ ಮಾತ್ರ ಇದು ಸರಿಯಾದ ಪರಿಣಾಮ ಬೀರುವುದು. ಇಲ್ಲವಾದರೆ ಸಿಗ್ನಲ್‌ಗಳು ಹಾದು ಹೋಗಲು ಸಾಧ್ಯವಾಗಬಹುದು. ಇನ್ನು ವಾಹನವನ್ನು ಒಂದು ಜಾಗದಲ್ಲಿ ಪಾರ್ಕ್‌ ಮಾಡಿ ಬಿಟ್ಟು ಹೋಗುವಾಗ ಕಾರು ಸರಿಯಾಗಿ ಲಾಕ್‌ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಮಾತ್ರವಲ್ಲ ಕೀಯನ್ನು ಆಲ್ಯೂಮಿನಿಯಂ ಫಾಯಿಲ್‌ನಲ್ಲಿ ಕವರ್‌ ಮಾಡಿ ಇಡಬೇಕು ಎಂದು ಪೊಲೀಸ್‌ ಸಂಸ್ಥೆಗಳು ಕೂಡಾ ಹೇಳುತ್ತವೆ.

ಇನ್ನು ಕೀಯನ್ನು ಯಾವ ಜಾಗದಲ್ಲಿ ಇಡುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯ. ಬಾಗಿಲ ಹಿಂದೆ ಕಿಟಕಿಗಳಂತಹ ಜಾಗದಲ್ಲಿ ಕಾರಿನ ಕೀಯನ್ನು ಬಿಡುವುದು ಒಳ್ಳೆಯ ಅಭ್ಯಾಸವಲ್ಲ.

ರಿಲೇ ದಾಳಿಯಿಂದ ರಕ್ಷಿಸಲು ಅಲ್ಯೂಮಿನಿಯಂ ಫಾಯಿಲ್ ಸಹಾಯ ಮಾಡಬಹುದಾದರೂ, ಇದು ಅಂತಿಮ ಭದ್ರತಾ ಕ್ರಮವಲ್ಲ. ಕೀಲೆಸ್‌ ಸಿಸ್ಟಮ್‌ನಲ್ಲಿನ ವ್ಯಾಪಕವಾದ ದುರ್ಬಲತೆಗಳನ್ನು ಸಂಶೋಧನೆಯು ಬಹಿರಂಗಪಡಿಸುತ್ತಲೇ ಇದೆ. ಭದ್ರತಾ ತಜ್ಞರು ಲೇಯರಿಂಗ್ ರಕ್ಷಣೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾರೆ. ಥ್ಯಾಚಮ್ ರಿಸರ್ಚ್‌ನಂತಹ ಕಂಪನಿಗಳು ಸಿಗ್ನಲ್-ಬ್ಲಾಕಿಂಗ್ ಪೌಚ್‌ಗಳನ್ನು ಬಳಸಲು ಶಿಫಾರಸು ಮಾಡುತ್ತವೆ. ಐಡಲ್ ಮೋಡ್‌ನಲ್ಲಿ ಕೀಗಳನ್ನು ಆಫ್ ಮಾಡುವುದು ಕೂಡಾ ಪರಿಹಾರವಾಗಬಹುದು.

ಕೀಲೆಸ್ ಭದ್ರತೆ:

ಆಟೋಮೇಕರ್‌ಗಳು ಈಗಾಗಲೇ ತಮ್ಮ ಉತ್ಪನ್ನಗಳನ್ನು ಸುಧಾರಿಸುವತ್ತ ಗಮನ ಹರಿಸುತ್ತಿದ್ದಾರೆ. ಅಲ್ಟ್ರಾ ವೈಡ್ ಬ್ಯಾಂಡ್‌ನಂತಹ ತಂತ್ರಜ್ಞಾನವು ಕೀಗಳು ಮತ್ತು ವಾಹನದ ನಡುವಿನ ನಿಖರವಾದ ಅಂತರವನ್ನು ಅಳೆಯುವ ಮೂಲಕ ರಿಲೇ ದಾಳಿಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ಹೆಚ್ಚು ಆಧುನಿಕವಾದ ಕೀ ಫೋಬ್‌ಗಳು ಮೋಶನ್‌ ಸೆನ್ಸರ್‌ಗಳನ್ನು ಒಳಗೊಂಡಿರುತ್ತವೆ. ಅವು ಕಾರು ಆಫ್‌ ಆಗಿರುವಾಗ ಸಂದೇಶಗಳನ್ನು ರವಾನಿಸುವುದನ್ನು ನಿಲ್ಲಿಸುತ್ತವೆ.

ಆದರೂ, ಈ ಪರಿಹಾರಗಳು ಸಾರ್ವತ್ರಿಕವಾಗಿ ಅನ್ವಯವಾಗುವುದಿಲ್ಲ. ಅವು ಎಷ್ಟು ಪರಿಣಾಮಕಾರಿ ಎನ್ನುವುದು ಮಾದರಿ ಮತ್ತು ಬ್ರ್ಯಾಂಡ್ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+