Cake Birthday: ಹುಟ್ಟುಹಬ್ಬದಂದು ನಾವು ಕೇಕ್ ಕತ್ತರಿಸಿ ಮೇಣದಬತ್ತಿ ಏಕೆ ಊದುತ್ತೇವೆ? ಈ ಆಚರಣೆ ಹೇಗೆ ಹುಟ್ಟಿಕೊಂಡಿತು ಗೊತ್ತಾ?
ಹುಟ್ಟುಹಬ್ಬಗಳಲ್ಲಿ ಸಾಮಾನ್ಯವಾಗಿ ನಾವು ಕೇಕ್‌ಗಳನ್ನು ಕಟ್ ಮಾಡುತ್ತೇವೆ. ಕ್ಯಾಂಡಲ್ ಅನ್ನು ಊದುತ್ತೇವೆ. ಇದನ್ನು ನಾವು ಯಾಕ್ ಮಾಡುತ್ತೇವೆ. ಈ ಪದ್ಧತಿ ಬಂದಿದ್ದು ಹೇಗೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಹಾಗಾದರೆ ಈ ಆಚರಣೆ ಹೇಗೆ ಹುಟ್ಟಿಕೊಂಡಿತು ಎನ್ನುವ ಬಗ್ಗೆ ತಿಳಿಯೋಣ.
ಎಲ್ಲಾ ಹುಟ್ಟುಹಬ್ಬದ ಸಮಾರಂಭಗಳಲ್ಲಿ ಮೇಣದಬತ್ತಿಗಳನ್ನು ಊದುವ ಮತ್ತು ಕೇಕ್ ಕತ್ತರಿಸುವ ಸಾಮಾನ್ಯ ಆಚರಣೆ ಇರುತ್ತದೆ. ಹುಟ್ಟುಹಬ್ಬದ ಕೇಕ್ ಇಲ್ಲದೆ ಜನ್ಮದಿನ ಪೂರ್ಣಗೊಳ್ಳುವುದಿಲ್ಲ. ಸದ್ಯ ಈ ಆಚರಣೆಯು ಪ್ರಪಂಚದಾದ್ಯಂತ ಸಾಮಾನ್ಯವಾಗಿದೆ.

ಎಲ್ಲಾ ದೇಶಗಳು ಮತ್ತು ಜನಾಂಗಗಳ ಜನರು ಮೇಣದಬತ್ತಿಗಳನ್ನು ಊದುವ, ಕೇಕ್ ಕತ್ತರಿಸುವ ಮತ್ತು ಜನ್ಮದಿನದ ಶುಭಾಶಯಗಳನ್ನು ಹಾಡುವ ಹೆಚ್ಚು ಕಡಿಮೆ ಒಂದೇ ಮಾದರಿಯನ್ನು ಅನುಸರಿಸುತ್ತಾರೆ. ಆದರೆ ಈ ಆಚರಣೆ ಹೇಗೆ ಹುಟ್ಟಿಕೊಂಡಿತು? ಹುಟ್ಟುಹಬ್ಬದಂದು ನಾವು ಕೇಕ್ ಕತ್ತರಿಸಿ ಮೇಣದಬತ್ತಿಗಳನ್ನು ಏಕೆ ಊದುತ್ತೇವೆ? ಇದಕ್ಕೆ ಉತ್ತರ ನಿಮಗೆ ತಿಳಿದಿಲ್ಲವಾದಲ್ಲಿ ಮುಂದೆ ಓದಿ...
ಕೇಕ್ ಕತ್ತರಿಸುವ ಸಂಪ್ರದಾಯ
ದಂತಕಥೆಗಳ ಪ್ರಕಾರ, ರೋಮನ್ ಸಂಸ್ಕೃತಿಯಲ್ಲಿ ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ ಅತಿಥಿಗಳಿಗೆ ಕೇಕ್ಗಳನ್ನು ನೀಡಲಾಗುತ್ತಿತ್ತು. ಆರಂಭದಲ್ಲಿ ಈ ಕೇಕ್‌ಗಳನ್ನು ವೃತ್ತಾಕಾರದಲ್ಲಿ ಹಿಟ್ಟು, ಜೇನುತುಪ್ಪ ಮತ್ತು ಬೀಜಗಳಂತಹ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತಿತ್ತು.
ಕ್ರಿ.ಶ. 15ನೇ ಶತಮಾನದ ಅವಧಿಯಲ್ಲಿ ಜರ್ಮನಿಯ ಬೇಕರಿಗಳು ಮಾರುಕಟ್ಟೆಯಲ್ಲಿ ಹುಟ್ಟುಹಬ್ಬದ ಆಚರಣೆಗಳಿಗಾಗಿ ಏಕ-ಪದರದ ಕೇಕ್‌ಗಳನ್ನು ಪರಿಚಯಿಸಿದವು. ಇದು ಮದುವೆಗಳಲ್ಲಿ ಮಾತ್ರ ಕೇಕ್ ಕತ್ತರಿಸಬಹುದು ಎಂಬ ಸಂಪ್ರದಾಯವನ್ನು ಹಿಂದಕ್ಕೆ ತಳ್ಳಿತು. ಇದು ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಸಂಪ್ರದಾಯದ ಸೃಷ್ಟಿಗೆ ಕಾರಣವಾಯಿತು.

ಕಾಲ ಕಾಲಕ್ಕೆ ಕೇಕ್‌ಗಳು ಬಹಳಷ್ಟು ಬದಲಾವಣೆಗಳನ್ನು ಕಂಡವು. ಈ ಕೇಕ್‌ಗಳನ್ನು ನಂತರ 17 ನೇ ಶತಮಾನದಲ್ಲಿ ಪರಿಚಯಿಸಲಾಯಿತು. ಈ ಕೇಕ್‌ಗಳಿಗೆ ಕೆನೆ ಲೇಪಿಸಲಾಯಿತು. ಸುಂದರವಾದ ಐಸಿಂಗ್‌ನಿಂದ ಅಲಂಕರಿಸಲಾಯಿತು ಮತ್ತು ವಿವಿಧ ಆಕಾರಗಳಲ್ಲಿಯೂ ಇವು ಲಭ್ಯವಾಗ ತೊಡಗಿದವು.
ನಂತರ 19 ನೇ ಶತಮಾನದ ಮಧ್ಯಭಾಗದಲ್ಲಿ ಪಾಶ್ಚಿಮಾತ್ಯ ಯುರೋಪಿಯನ್ ದೇಶಗಳು ಸಹ ಹುಟ್ಟುಹಬ್ಬದಂದು ಕೇಕ್ಗಳನ್ನು ಕತ್ತರಿಸಲು ಪ್ರಾರಂಭಿಸಿದವು. ಈ ಸಂಪ್ರದಾಯ ಪ್ರಪಂಚದಾದ್ಯಂತ ಹರಡಿತು.
ಗ್ರೀಕ್ ಪದ್ಧತಿಯಲ್ಲಿ ಕೇಕ್ ಹುಟ್ಟಿಕೊಂಡಿದ್ದು ಹೀಗೆ:-
ಗ್ರೀಕ್ ಮೈಥಾಲಜಿಯಲ್ಲಿ ಹುಟ್ಟಿದಹಬ್ಬದಂದು ಕೇಕ್ ಕಟ್ ಮಾಡುವುದಕ್ಕೆ ಒಂದು ಅರ್ಥವಿದೆ. ಗ್ರೀಕ್‌ನಲ್ಲಿ ಆರ್ಟೆಮಿಸ್ ಎನ್ನುವಂತಹ ಮೂನ್ ಗಾಡ್ ಇದ್ದಳು. ಈಕೆಯ ಹುಟ್ಟುಹಬ್ಬದಂದು ರೌಂಡ್ ಆದ ಕೇಕ್ ತಯಾರಿಸಿ ಅದರ ಮೇಲೆ ಮೇಣದ ಬತ್ತಿಗಳನ್ನು ಹಚ್ಚಲಾಯಿತು. ಕಾರಣ ಈ ರೌಂಡ್ ಕೇಕ್ ಚಂದ್ರನನ್ನು ಹೋಲುತ್ತಿತ್ತು. ಜೊತೆಗೆ ಇದರ ಮೇಲೆ ಇಟ್ಟ್ ಕ್ಯಾಂಡಲ್ ಕೂಡ ಆಕೆ ಮುಖದಲ್ಲಿ ಚಂದ್ರ ಕಾಣಿಸುವಂತೆ ಬೆಳಗುತ್ತಿತ್ತು.

ಮಾತ್ರವಲ್ಲದೆ ಇದು ಹನಿ ಕೇಕ್ ಆಗಿತ್ತು. ಇದು ಸಿಹಿಯ ಸಂಕೇತ ಹೌದು ಆಕೆಯ ವ್ಯಕ್ತಿತ್ವದ ಸಂಕೇತವೂ ಹೌದು. ಹಾಗೆನೇ ನಿನ್ನ ಬದುಕು ಕೂಡ ಹೀಗೆ ಸಹಿ ಆಗಿರಲಿ ಅನ್ನೋದರ ಸಂಕೇತವೂ ಆಗಿತ್ತು. ಹೀಗೆನೆ ರೌಂಡ್ ಕೇಕ್ ಮೇಲೆ ಕ್ಯಾಂಡಲ್ಸ್ ಇಟ್ಟು ಅದನ್ನು ಕಟ್ ಮಾಡುವಂತ ಪದ್ಧತಿ ಆಗಿನಿಂದ ಜಗತ್‌ವ್ಯಾಪಿಯಾಗಿ ಈಗಿನವರೆಗೂ ನಾವು ಅದನ್ನು ಮಾಡುತ್ತಿದ್ದೇವೆ.
ಇನ್ನೂ ಹುಟ್ಟುಹಬ್ಬದ ದಿನ ಬೆಳಗಿಸಿರುವ ಕ್ಯಾಂಡಲ್ ಆರಿಸುವುದೇಕೆ? ಇದಕ್ಕೂ ಕೂಡ ಗ್ರೀಕ್ ಮೈಥಾಲಜಿಯಲ್ಲಿ ಒಂದು ಅರ್ಥವಿದೆ. ಕೇಕ್ ಮೇಲಿನ ಮೇಣದಬತ್ತಿಗಳ ಸಂಖ್ಯೆಯು ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿರುತ್ತದೆ. ವಯಸ್ಸು ಆಗ್ತಾ ಆಗ್ತಾ ನಮ್ಮ ಜೀವನ ಕೂಡ ಹೆಚ್ಚಾಗಿ ಬೆಳಗಲಿ ಅನ್ನೋ ಕಾರಣಕ್ಕೆ ಹೆಚ್ಚಾಗಿ ಕ್ಯಾಂಡಲ್‌ಗಳನ್ನು ಬೆಳಗಿಸಲಾಗುತ್ತದೆ.
ಇನ್ನೂ ವಿಶ್ ಮಾಡಿಕೊಂಡು ಕ್ಯಾಂಡಲ್ ಊದಿದಿರೆ ಅದರಿಂದ ಬರುವ ಹೊಗೆ ಮೇಲಿರುವ ದೇವತೆಗಳಿಗೆ ನಮ್ಮ ವಿಶ್ ಅನ್ನು ತಲುಪಿಸಿ ಆದಷ್ಟು ಬೇಗ ಅದು ಸಕಾರ ಆಗಲಿ ಅನ್ನೋದರ ಪ್ರತೀಕ ಆಗಿತ್ತು. ಹೀಗಾಗಿ ಕ್ಯಾಂಡಲ್ ಊದುವ ಪದ್ಧತಿ ಹುಟ್ಟಿಕೊಂಡಿತು.
ಇನ್ನೂ ರೌಂಡ್ ಕೇಕ್ ಆಗಿರುವುದರಿಂದ ಬೇಕಾಗಿರುವವರೆಲ್ಲರೂ ಸುತ್ತಲು ನಿಂತುಕೊಳ್ಳುತ್ತಿದ್ದರು. ಹೀಗಾಗಿ ಎಲ್ಲರು ಒಟ್ಟುಗೂಡಿ ಈ ಸಂಭ್ರಮವನ್ನು ಆಚರಿಸ್ತಾಯಿದ್ವಿ ಅನ್ನೋದು ಅಗಿನ ಪ್ರತೀಕ ಆಗಿತ್ತು. ಈಗ ಹಾರ್ಟ್, ಬಾರ್ಬಿ ಕೇಕ್ ಇನ್ನಿತರ ಕೇಕ್‌ಗಳು ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುತ್ತವೆ.
ಜನ್ಮದಿನದ ಶುಭಾಶಯಗಳ ಹಾಡು
ಕೇಕ್ ಕತ್ತರಿಸುವ ಮತ್ತೊಂದು ಪ್ರಮುಖ ಆಚರಣೆಯೆಂದರೆ ಅದರೊಂದಿಗೆ ಪ್ರಸಿದ್ಧವಾದ 'ಹ್ಯಾಪಿ ಬರ್ತ್‌ಡೇ' ಹಾಡನ್ನು ಹಾಡುವುದು. ಹುಟ್ಟುಹಬ್ಬದ ಈ ಹಾಡನ್ನು ಹಾಡುವ ಸಂಪ್ರದಾಯವು ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ ಮೊದಲು ಪ್ರಾರಂಭವಾಯಿತು. ಶೀಘ್ರದಲ್ಲೇ ಹಾಡು ಎಷ್ಟು ಜನಪ್ರಿಯವಾಯಿತು ಎಂದರೆ ಅದೇ ಕ್ಲಾಸಿಕ್ ಧ್ವನಿಯೊಂದಿಗೆ 18 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಯಿತು.












Click it and Unblock the Notifications