ಸಿ ಸೆಕ್ಷನ್‌ ಮೂಲಕ ಹೆರಿಗೆಯ ನಂತರ ಮಹಿಳೆಯರು ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ

ಮಗುವನ್ನು ಹೆರಿಗೆ ಮಾಡಲು ಎರಡು ಮಾರ್ಗಗಳಿವೆ. ಮೊದಲನೆಯದು ನೈಸರ್ಗಿಕ ಹೆರಿಗೆ ಅಥವಾ ನಾರ್ಮಲ್‌ ಡೆಲಿವೆರಿ ಇದನ್ನು ಯೋನಿ ಹೆರಿಗೆ ಎಂದು ಕರೆಯಲಾಗುತ್ತದೆ. ಎರಡನೇಯದ್ದು ಸಿಸೇರಿಯನ್ ಮೂಲಕ. ನಾರ್ಮಲ್‌ ಡೆಲಿವೆರಿ ಮೂಕ ಮಗುವಿಗೆ ಜನ್ಮ ನೀಡುವಾಗ ಮಹಿಳೆ ವಿಪರೀತ ನೋವು ಅನುಭವಿಸಬೇಕಾಗುತ್ತದೆ. ಸಿಸೇರಿಯನ್‌ನಲ್ಲಿ ಹಾಗಲ್ಲ, ಹೆರಿಗೆ ವೇಳೆ ಯಾವುದೇ ನೋವು ಅರಿವಿಗೆ ಬರುವುದಿಲ್ಲ, ನಂತರ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ನೋವು, ಸವಾಲುಗಳು ಮಹಿಳೆಗೆ ಮಾತ್ರ ತಿಳಿದಿರುತ್ತದೆ. ಸಿ-ಸೆಕ್ಷನ್ ಎನ್ನುವುದು ಹೊಟ್ಟೆ ಮತ್ತು ಗರ್ಭಾಶಯದಲ್ಲಿ ಛೇದನಗಳನ್ನು ಮಾಡುವ ಮೂಲಕ ಮಗುವನ್ನು ಹೊರ ತೆಗೆಯುವ ವಿಧಾನ.ಇದು ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಯಾಗಿದೆ.

ಗರ್ಭದಲ್ಲಿ ಮಗುವಿನ ಸ್ಥಾನ ಸರಿಯಾಗಿಲ್ಲದಿದ್ದಾಗ ಅಥವಾ ಇತರ ತೊಡಕುಗಳಿದ್ದಾಗ ಶಸ್ತ್ರ ಚಿಕಿತ್ಸೆ ಮೂಲಕ ಮಗುವನ್ನು ಹೊರ ತೆಗೆಯಲಾಗುತ್ತದೆ. ತಾಯಿ ಮತ್ತು ಮಗುವಿನ ಜೀವವನ್ನು ಉಳಿಸಲು ಕೆಲವೊಮ್ಮೆ ಈ ವಿಧಾನ ಅನಿವಾರ್ಯವಾಗಿರುತ್ತದೆ. ಆದರೆ ನಂತರದ ಚೇತರಿಕೆಯ ಪ್ರಯಾಣವು ಸಾಕಷ್ಟು ಸವಾಲಿನದ್ದಾಗಿರುತ್ತದೆ. ಪ್ರತಿ ವರ್ಷ ಲಕ್ಷಾಂತರ ಮಹಿಳೆಯರು ಈ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ನಂತರದ ದೈಹಿಕ ಮತ್ತು ಮಾನಸಿಕ ಸವಾಲುಗಳಿಗೆ ಪ್ರತಿಯೊಬ್ಬರೂ ಸಿದ್ಧರಿರುವುದಿಲ್ಲ. ಸಿ-ಸೆಕ್ಷನ್ ನಂತರ ಮಹಿಳೆಯರು ಯಾವ ರೀತಿಯ ಸಮಸ್ಯೆ, ಸವಾಲಗಳನ್ನು ಎದುರಿಸುತ್ತಾರೆ ನೋಡೋಣ.

C Section Delivery

ಶಸ್ತ್ರಚಿಕಿತ್ಸೆಯ ನಂತರ ಕಾಡುವ ನೋವು:

ಸಿಸೇರಿಯನ್ ನಂತರ ತಕ್ಷಣವೇ ಉಂಟಾಗುವ ದೊಡ್ಡ ಸಮಸ್ಯೆ ಎಂದರೆ ಛೇದನದ ಸ್ಥಳದಲ್ಲಿ ಕಾಣಿಸಿಕೊಳ್ಳುವ ನೋವು. ಈ ಊತ ಮತ್ತು ನೋವು ಹಲವಾರು ವಾರಗಳವರೆಗೆ ಇರುತ್ತದೆ. ಕುಳಿತುಕೊಳ್ಳುವುದು, ನಡೆಯುವುದು, ನಗುವುದು ಅಥವಾ ಕೆಮ್ಮುವುದು ತುಂಬಾ ನೋವಿನಿಂದ ಕೂಡಿರುತ್ತದೆ. ವೈದ್ಯರು ನೋವು ನಿವಾರಕ ಔಷಧಿಗಳನ್ನು ನೀಡುತ್ತಾರೆ ನಿಜ. ಆದರೆ ಈ ಔಷಧಿಯ ಪರಿಣಾಮ ತಮ್ಮ ಮಗುವಿನ ಮೇಲೆ ಆಗಬಹುದೇ ಎನ್ನುವ ಚಿಂತೆ ಅನೇಕ ತಾಯಂದಿರನ್ನು ಬಾಧಿಸುತ್ತದೆ.

ಸಾಮಾನ್ಯ ಹೆರಿಗೆಗೆ ಹೋಲಿಸಿದರೆ, ಸಿ-ಸೆಕ್ಷನ್ ನಂತರ ಚೇತರಿಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪೂರ್ಣ ಚೇತರಿಕೆ ಸಾಮಾನ್ಯವಾಗಿ ಸುಮಾರು 6 ರಿಂದ 8 ವಾರಗಳನ್ನು ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ, ಭಾರ ಎತ್ತುವುದು, ವೇಗವಾಗಿ ನಡೆಯುವುದು ಅಥವಾ ಶ್ರಮದಾಯಕ ಚಟುವಟಿಕೆಗಳನ್ನು ಮಾಡುವುದರಿಂದ ಪ್ರತಿಕೂಲ ಪರಿಣಾಮ ಬೀರಬಹುದು.

ಮುಟ್ಟಿನ ಸಮಯದಲ್ಲಿ ಕಾಡುವ ನೋವಿಗೆ ಮಾತ್ರೆಯೇ ಪರಿಹಾರವಲ್ಲ, ಈ 5 ಯೋಗಾಸನದಿಂದಲೂ ಶಮನವಾಗುವುದು ಬಾಧೆ
ಮುಟ್ಟಿನ ಸಮಯದಲ್ಲಿ ಕಾಡುವ ನೋವಿಗೆ ಮಾತ್ರೆಯೇ ಪರಿಹಾರವಲ್ಲ, ಈ 5 ಯೋಗಾಸನದಿಂದಲೂ ಶಮನವಾಗುವುದು ಬಾಧೆ

ಗಾಯದ ಸೋಂಕುಗಳು ಮತ್ತು ತೊಡಕುಗಳು:

ಸಿ ಸೆಕ್ಷನ್‌ನಲ್ಲಿ ಸಾಮಾನ್ಯವಾಗಿ ಹೊಲಿಗೆ ಇರುವ ಜಾಗದಲ್ಲಿ ಸೋಂಕು ಉಂಟಾಗುವ ಭಯ ಕಾಡುತ್ತದೆ. ಆದ್ದರಿಂದ, ಈ ಜಾಗದಲ್ಲಿ ಕೆಂಪು, ಊತ ಅಥವಾ ಕೀವು ಕಂಡುಬಂದರೆ ಅಸಡ್ಡೆ ತೋರದೆ ತಕ್ಷಣ ವೈದ್ಯರ ಗಮನಕ್ಕೆ ತರಬೇಕು.ಕೆಲವೊಮ್ಮೆ, ಹೊಟ್ಟೆಯೊಳಗೆ ಕೂಡಾ ಸೋಂಕು ಬೆಳೆಯಬಹುದು. ಇದಲ್ಲದೆ, ಅತಿಯಾದ ವಿಶ್ರಾಂತಿ ಮತ್ತು ಚಲನೆಯ ಕೊರತೆಯು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.

ಆಂತರಿಕ ನೋವು ಮತ್ತು ಗಾಯಗಳು:

ಶಸ್ತ್ರಚಿಕಿತ್ಸೆಯ ನಂತರ, ಹೊಟ್ಟೆಯ ಆಂತರಿಕ ಅಂಗಗಳ ಮೇಲೆ ಗಾಯದ ಗುರುತುಗಳು ಉಳಿಯುತ್ತವೆ. ಈ ಗಾಯದ ಗುರುತುಗಳು ಕೆಲವೊಮ್ಮೆ ವರ್ಷಗಳ ನಂತರ ಹೊಟ್ಟೆ ನೋವು ಅಥವಾ ಮೂತ್ರ ವಿಸರ್ಜನೆಯ ಸಮಸ್ಯೆಗಳನ್ನು ಉಂಟುಮಾಡುತ್ತವೆ . ಬಾಹ್ಯ ಹೊಲಿಗೆಗಳಲ್ಲಿ ಕೆಲವೊಮ್ಮೆ ಮರಗಟ್ಟುವ ಅನುಭವ ಆಗಹುದು. ಇದು ಹಲವಾರು ತಿಂಗಳುಗಳವರೆಗೆ ಇರುತ್ತದೆ.

ಒಂದು ವರ್ಷದ ಮಗುವಿಗೆ ಬೇಸಿಗೆಯಲ್ಲಿ ಯಾವ ಆಹಾರ ನೀಡಬೇಕು? ಎಷ್ಟು ಪ್ರಮಾಣದಲ್ಲಿ ನೀಡಬೇಕು?
ಒಂದು ವರ್ಷದ ಮಗುವಿಗೆ ಬೇಸಿಗೆಯಲ್ಲಿ ಯಾವ ಆಹಾರ ನೀಡಬೇಕು? ಎಷ್ಟು ಪ್ರಮಾಣದಲ್ಲಿ ನೀಡಬೇಕು?

ಹಾಲುಣಿಸುವಿಕೆಯಲ್ಲಿ ತೊಂದರೆಗಳು:

ಶಸ್ತ್ರಚಿಕಿತ್ಸೆಯ ನಂತರ ತಾಯಿಯ ದೇಹವು ಹಾಲು ಉತ್ಪಾದಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಹಾಲು ಉತ್ಪಾದನೆಗೆ ಅಗತ್ಯವಾದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ದೇಹವು ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ, ಹೊಲಿಗೆಗಳಿಂದ ಉಂಟಾಗುವ ನೋವು ಮಗುವನ್ನು ಹಾಲುಣಿಸಲು ಸರಿಯಾದ ಸ್ಥಾನದಲ್ಲಿ ಹಿಡಿದಿಟ್ಟುಕೊಳ್ಳುವುದನ್ನು ಕಷ್ಟಕರವಾಗಿಸುತ್ತದೆ.

ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳು:

ಸಿಸೇರಿಯನ್ ನಂತರ ಅನೇಕ ಮಹಿಳೆಯರು ವಿವಿಧ ರೀತಿಯ ಭಾವನೆಗಳನ್ನು ಅನುಭವಿಸುತ್ತಾರೆ. ಕೆಲವರು ಬದುಕುಳಿದಿದ್ದಕ್ಕಾಗಿ ಸಂತೋಷಪಡುತ್ತಾರೆ.ಇನ್ನು ಕೆಲವರು ಸಾಮಾನ್ಯ ಹೆರಿಗೆಯಾಗಲು ಸಾಧ್ಯವಾಗದಿದ್ದಕ್ಕೆ ದುಃಖ ಅಥವಾ ವಿಷಾದ ವ್ಯಕ್ತಪಡಿಸುತ್ತಾರೆ. ಇದು ಪ್ರಸವಾನಂತರದ ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಶಸ್ತ್ರಚಿಕಿತ್ಸೆ ಹಠಾತ್ ಅಥವಾ ತುರ್ತು ಪರಿಸ್ಥಿತಿಯಲ್ಲಿದ್ದರೆ, ಆತಂಕವು ತಾಯಿಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ.

ಭವಿಷ್ಯದಲ್ಲಿ ಗರ್ಭಧರಿಸುವಾಗ ಉಂಟಾಗುವ ಅಪಾಯಗಳು:

ಗರ್ಭಾಶಯದ ಮೇಲಿನ ಶಸ್ತ್ರಚಿಕಿತ್ಸೆಯ ಗಾಯವು ಮುಂದಿನ ಗರ್ಭಧಾರಣೆಗೆ ಅಪಾಯವನ್ನುಂಟುಮಾಡಬಹುದು. ಹಳೆಯ ಗಾಯವು ಹರಿದು ಹೋಗುವ ಸಾಧ್ಯತೆಯೇ ಇಲ್ಲಿ ಕಾಡುವ ದೊಡ್ಡ ಭಯ. ಇದಲ್ಲದೆ, ಹೊಕ್ಕುಳ ಬಳ್ಳಿಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಮತ್ತೊಂದು ಮಗುವನ್ನು ಯೋಜಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+