Buttermilk Summer Benefits: ಪ್ರತಿದಿನ ಮಜ್ಜಿಗೆ ಕುಡಿಯುವವರು ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯಗಳು
ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ತೀವ್ರವಾದ ಬಿಸಿಯಲ್ಲಿ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭಗಳಲ್ಲಿ ಮಜ್ಜಿಗೆಯಂತಹ ತಂಪಾದ ಪಾನೀಯವು ಮತ್ತು ಅತ್ಯಂತ ಸರಳವಾಗಿಯೂ ಮಾಡುವ ಆರೋಗ್ಯಕರವಾಗಿಯೂ ಇರುವ ಪಾನೀಯವಾಗಿದೆ. ತಣ್ಣನೆಯ ಮಜ್ಜಿಗೆ ದೇಹಕ್ಕೆ ತಕ್ಷಣದ ತಂಪು ನೀಡುವುದರ ಜೊತೆಗೆ ನಾನಾರೀತಿಯ ಆರೋಗ್ಯ ಲಾಭಗಳನ್ನು ನೀಡುತ್ತದೆ.
ಮೊಸರನ್ನು ನೀರಿನೊಳಗಿನ ಬೆರೆಸಿ ಮಜ್ಜಿಗೆಯನ್ನು ತಯಾರಿಸಲಾಗುತ್ತದೆ. ತಯಾರಿಸಿದ ಮಜ್ಜಿಗೆಯಲ್ಲಿ ನೈಸರ್ಗಿಕ ಪದಾರ್ಥಗಳನ್ನು ಸೇರಿಸಿದರೆ ಅದರಿಂದ ಆರೋಗ್ಯಕ್ಕೆ ಇನ್ನು ಹೆಚ್ಚು ಪ್ರಯೋಜನಕಾರಿ ಆಗುತ್ತದೆ.

ಕೊತ್ತಂಬರಿ ಮತ್ತು ಪುದೀನಾ ಸೇರಿಸಿದರೆ ಮಜ್ಜಿಗೆಯು ದೇಹಕ್ಕೆ ಹೆಚ್ಚು ತಂಪು ನೀಡುತ್ತದೆ. ಇದರಿಂದ ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹೊಟ್ಟೆ ಉಬ್ಬರ ಮತ್ತು ದೇಹದಲ್ಲಿ ಆಗುವ ಅಸಹಜತೆಯನ್ನು ಕಡಿಮೆ ಮಾಡುತ್ತದೆ.
ಹುರಿದ ಜೀರಿಗೆ ಮತ್ತು ಉಪ್ಪು ಸೇರಿಸಿದ ಮಜ್ಜಿಗೆಯು ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ನೋವು ಮತ್ತು ಆಯಾಸವನ್ನು ಕಡಿಮೆ ಮಾಡಲು ತುಂಬಾ ಸಹಾಕಾರಿಯಾಗುತ್ತದೆ. ಇದು ನಮ್ಮ ದೇಹದಲ್ಲಿಯ ಜೀರ್ಣ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.
ಮಜ್ಜಿಗೆಯಲ್ಲಿ ಸರಿಸುಮಾರು 90% ರಷ್ಟು ನೀರಿನ ಅಂಶ ಇರುತ್ತದೆ, ಇದು ದೇಹದಲ್ಲಿ ಆಗುವ ನೀರಿನ ಕೊರತೆಯನ್ನು ತಡೆಯಲು ತುಂಬಾ ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬೆವರು ಮೂಲಕ ಕಳೆದುಕೊಳ್ಳುವ ಸೋಡಿಯಂ, ಪೊಟ್ಯಾಸಿಯಮ್‌ಗಳಂತಹ ಎಲೆಕ್ಟ್ರೋಲೈಟ್‌ಗಳನ್ನು ಮರುಪೂರೈಸಲು ಇದು ಉತ್ತಮ ಆಯ್ಕೆ. ಮಜ್ಜಿಗೆಯಲ್ಲಿರುವ ಬಿ-ವಿಟಮಿನ್‌ಗಳು ದೇಹಕ್ಕೆ ಶಕ್ತಿ ನೀಡುತ್ತವೆ. ದಿನವಿಡೀ ನಮ್ಮನ್ನು ಚುರುಕಾಗಿರಲು ಇದು ಸಹಾಯ ಮಾಡುತ್ತದೆ ಮತ್ತು ಬಿಸಿಲಿನಿಂದ ಉಂಟಾಗುವ ದಣಿವು ಕಡಿಮೆ ಮಾಡುತ್ತದೆ.
ಇದಲ್ಲದೆ, ಮಜ್ಜಿಗೆಯು ಪ್ರೋಬಯಾಟಿಕ್ ಗುಣಗಳನ್ನು ಹೊಂದಿದ್ದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಹೊಟ್ಟೆ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಜೀರಿಗೆ, ಪುದೀನಾ ಮತ್ತು ಉಪ್ಪು ಸೇರಿಸಿದ ಒಂದು ಗ್ಲಾಸ್ ಮಜ್ಜಿಗೆಯನ್ನು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಅಮೃತದಂತೆ ಕೆಲಸ ಮಾಡುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಮಿಶ್ರಿತ ತಂಪು ಪಾನೀಯಗಳಿಗಿಂತ ಇದು ಆರೋಗ್ಯಕರದ ಪರ್ಯಾಯವಾಗಿದೆ ಈ ಮಜ್ಜಿಗೆ.
ಆದಾಗ್ಯೂ ಈ ಮಜ್ಜಿಗೆಯನ್ನು ಸೇವಿಸುವ ಮೊದಲು ಲ್ಯಾಕ್ಟೋಸ್ ಅಸಹಿಷ್ಣುತೆ ಅಥವಾ ಹಾಲಿನ ಅಲರ್ಜಿ ಇರುವವರು ಮಜ್ಜಿಗೆಯನ್ನು ಮಿತವಾಗಿ ಸೇವಿಸುವುದು ಒಳ್ಳೆಯದು. ಹೆಚ್ಚಾಗಿ ಸೇವಿಸಿದರೆ ಹೊಟ್ಟೆ ಉಬ್ಬರ ಅಥವಾ ಸೈನಸ್ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಸರಳವಾದ ಮಜ್ಜಿಗೆಗೆ ಕೆಲವು ಪದಾರ್ಥಗಳನ್ನು ಸೇರಿಸುವ ಮೂಲಕ ಅದನ್ನು ಬೇಸಿಗೆಯಲ್ಲಿ ದೇಹಕ್ಕೆ ತಂಪು, ಶಕ್ತಿ ಮತ್ತು ಆರೋಗ್ಯ ನೀಡುವ ಪಾನೀಯವಾಗಿ ಬಳಸಬಹುದು.
ಬೇಸಿಗೆಯ ಕಾಲದಲ್ಲಿ ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ದುಬಾರಿ ಪಾನೀಯಗಳ ಅವಶ್ಯಕತೆ ಇಲ್ಲ. ನಮ್ಮ ಮನೆಯಲ್ಲೇ ನಾವು ಸುಲಭವಾಗಿ ತಯಾರಿಸಬಹುದಾದ ಮಜ್ಜಿಗೆ ದೇಹಕ್ಕೆ ತಂಪು, ಶಕ್ತಿ ಮತ್ತು ಪೋಷಕಾಂಶಗಳನ್ನು ಒದಗಿಸುವ ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದೆ. ದಿನನಿತ್ಯದ ಆಹಾರದಲ್ಲಿ ಮಜ್ಜಿಗೆಯನ್ನು ಸೇವಿಸುವುದರ ಮೂಲಕ ಬಿಸಿಲಿನ ತಾಪವನ್ನು ಎದುರಿಸುವುದರ ಜೊತೆಗೆ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ.












Click it and Unblock the Notifications