Brown Rice Bhat Recipe: ತೂಕ ಕಡಿಮೆ ಮಾಡ್ಕೋಬೇಕಾ ಬ್ರೌನ್ ರೈಸ್ ವೆಜಿಟೆಬಲ್ ಬೇಳೆ ಬಾತ್ ಮನೆಯಲ್ಲೇ ತಯಾರಿಸಿ ತಿನ್ನಿ....

ತೂಕ ಕಡಿಮೆ ಮಾಡಿಕೊಳ್ಳಬೇಕು ಅನ್ನೋರ ಸಂಖ್ಯೆ ಇತ್ತೀಚಿಗೆ ಹೆಚ್ಚಾಗಿದೆ. ಆದರೆ ಏನೇ ಪ್ರಯತ್ನ ಮಾಡಿದರೂ ಕೂಡ ತೂಕ ಇಳಿಸಿಕೊಳ್ಳಲು ಬಹುತೇಕರಿಗೆ ಸಾಧ್ಯವಾಗದೇ ಇರಬಹುದು. ಅಂಥವರು ವೈದ್ಯರ ಬಳಿ ಹೋದರೂ ಅವರು ನೀಡೋದು ಮೊದಲ ಸಲಹೆ ಅಂದರೆ ರೈಸ್ ಬಿಟ್ಟುಬಿಡಿ ಅನ್ನೋದು.

ಆದರೆ ನಿತ್ಯ ರೈಸ್ ತಿನ್ನೋರಿಗೆ ಅದನ್ನು ಬಿಟ್ಟು ಚಪಾತಿ ರೋಟಿ ತಿನ್ನೋದು ಸ್ವಲ್ಪ ಕಷ್ಟವೇ ಸರಿ. ಆದರೆ ನೀವು ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಲು ರೈಸ್ ಬದಲಿಗೆ ಬ್ರೌನ್ ರೈಸ್ ತಿನ್ನಬಹುದು. ಇದು ನಿಮ್ಮ ತೂಕ ಇಳಿಸಿಕೊಳ್ಳಲು ತುಂಬಾ ಸಹಕಾರಿಯಾಗಿದೆ. ಬ್ರೌನ್‌ ರೈಸ್ ತಿನ್ಬಹುದು ಆದರೆ ಅದನ್ನು ಮನೆಯಲ್ಲಿ ತಯಾರಿಸುವ ಬಗೆ ನಮಗೆ ಗೊತ್ತಿಲ್ಲ ಅನ್ನೋರಿಗೆ ಇಲ್ಲಿದೆ ಬ್ರೌನ್ ರೈಸ್ ವೆಜಿಟೆಬಲ್ ಬಾತ್ ರೆಸಿಪಿ. ನೀವು ಮನೆಯಲ್ಲಿ ಇದನ್ನು ಮಾಡಲು ಬಯಸಿದರೆ ಒಮ್ಮೆ ಟ್ರೈ ಮಾಡಿ ಇಷ್ಟಪಟ್ಟು ತಿಂತೀರಾ....

Brown Rice Vegetable Dal Bhat Recipe: How to make Brown Rice Vegetable Bele Bhat at home in kannada

ಬ್ರೌನ್ ರೈಸ್ ವೆಜಿಟೆಬಲ್ ಬೇಳೆ ಬಾತ್ ತಯಾರಿಸಲು ಬೇಕಾಗುವ ಪದಾರ್ಥಗಳು:-

* ಬ್ರೌನ್ ರೈಸ್ 2 ಕಪ್

* ಹೆಸರು ಬೇಳೆ 1 ಕಪ್

* ಕ್ಯಾರಟ್ 2

* ಬೀನ್ಸ್ 5

* ಟೊಮ್ಯಾಟೀ 1

* ಈರುಳ್ಳಿ 1

* ಹಸಿ ಮೆಣಸಿನಕಾಯಿ 4

* ಕೊತ್ತಂಬರಿ ಸೊಪ್ಪು ಸ್ವಲ್ಪ

* ಉಪ್ಪು ರುಚಿಗೆ ತಕ್ಕಷ್ಟು

* ಅರಿಶಿಣ ಚಿಟಿಕೆ

* ಎಣ್ಣೆ

ಬ್ರೌನ್ ರೈಸ್ ವೆಜಿಟೆಬಲ್ ಬೇಳೆ ಬಾತ್ ತಯಾರಿಸುವ ವಿಧಾನ:-

* ಒಂದು ಕುಕ್ಕರ್ ಒಲೆಯ ಮೇಲಿಟ್ಟು ಸ್ವಲ್ಪ ಬಿಸಿಯಾದ ನಂತರ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಸಣ್ಣಕೆ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಹುರಿಯಿರಿ.

Brown Rice Vegetable Dal Bhat Recipe: How to make Brown Rice Vegetable Bele Bhat at home in kannada

* ನಂತರ ಇದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ಬಳಿಕ ಬೀನ್ಸ್ ಹಾಕಿ.

* ಬಳಿಕ ಉದ್ದವಾಗಿ ಹೆಚ್ಚಿದ ಕ್ಯಾರಟ್, ಸಣ್ಣಕೆ ಕಟ್ ಮಾಡಿದ ಟೊಮ್ಯಾಟೋ ಹಾಕಿ ಹಸಿ ವಾಸನೆ ಹೋಗುವವರೆಗೂ ಚೆನ್ನಾಗಿ ಫ್ರೈ ಮಾಡಿ. (ನೆನಪಿಡಿ ಯಾವಾಗಲೂ ತರಕಾರಿಗಳನ್ನು ಒಂದೊಂದೆ ಹಾಕಿ ಫ್ರೈ ಮಾಡ್ತಾ ಹೋಗಬೇಕು. ಒಂದೇ ಬಾರಿ ಎಲ್ಲಾ ತರಕಾರಿಯನ್ನು ಹಾಕುವುದು ರುಚಿ ನೀಡುವುದಿಲ್ಲ)

* ಎದೆಲ್ಲವೂ ಎಣ್ಣೆಯಲ್ಲಿ ಬಾಡಿದ ನಂತರ ಇದಕ್ಕೆ ಅರಿಶಿಣ, ಉಪ್ಪು, ಕೊತ್ತಂಬರಿ ಸುಪ್ಪು ಹಾಕಿ ಮಿಕ್ಸ್‌ ಮಾಡಿ, ಆರು ಲೋಟ ನೀರು ಹಾಕಿ ಸ್ವಲ್ಪ ಕುದಿ ಬರುವವರೆಗೂ ಬಿಡಿ.

* ಬಳಿಕ ಇದಕ್ಕೆ ಚೆನ್ನಾಗಿ ತೊಳೆದ ಬ್ರೌನ್‌ ರೈಸ್ ಹಾಗೂ ಹೆಸರು ಬೇಳೆ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ.

* ಐದರಿಂದ ಆರು ವಿಸಿಲ್ ಬರುವವರೆಗೂ ಬೊಲೆಯ ಮೇಲೆ ಕುಕ್ಕರ್ ಇಟ್ಟಿರಿ. ನಂತರ ಗ್ಯಾಸ್ ಆಫ್‌ ಮಾಡಿ ಹಬೆ ಹೋಗುವವರೆಗೂ ಬಿಡಿ.

* ನಂತರ ಕುಕ್ಕರ್ ಮುಚ್ಚಳ ತೆಗೆದು ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿದರೆ ಬಿಸಿ ಬಿಸಿ ರುಚಿಕರವಾದ ಬ್ರೌನ್ ರೈಸ್ ವೆಜಿಟೆಬಲ್ ಬೇಳೆ ಬಾತ್ ಸವಿಯಲು ಸಿದ್ಧ.

(ಇದಕ್ಕೆ ಬೇಕಾದಲ್ಲಿ ನೀವು ಇನ್ನಷ್ಟು ತರಕಾರಿಗಳನ್ನೂ ಸೇರಿಸಿಕೊಳ್ಳಬಹುದು. ಮಾತ್ರವಲ್ಲದೆ ಇದು ನಿಮ್ಮ ತೂಕ ಇಳಿಕೆಗೂ ಸಹಕಾರಿಯಾಗಿದೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+