Unlucky plants for home: ಮನೆಯಲ್ಲಿ ಈ ಗಿಡ ಹಾಕಿದರೆ ಕುಂತ್ರೂ ನಿಂತ್ರೂ ಶನಿ ಕಾಟ

ಮನೆಯ ಅಂದವನ್ನು ಹೆಚ್ಚಿಸಲು ಕೆಲ ಗಿಡಗಳನ್ನು ಬೆಳಸಲಾಗುತ್ತದೆ. ಕೆಲವರು ಟೊಮ್ಯಾಟೋ, ಮೆಣಸಿನಕಾಯಿ, ಬದನೆಕಾಯಿಯಂತಹ ತರಕಾರಿ ಗಿಡಗಳನ್ನು ಹಾಕುತ್ತಾರೆ. ಇಂಥಹ ತರಕಾರಿ ಗಿಡಗಳಲ್ಲಿ ಒಂದನ್ನು ಮಾತ್ರ ನೀವು ಮನೆಯಲ್ಲಿ ಬೆಳಸುವಂತಿಲ್ಲ. ಒಂದು ವೇಳೆ ಬೆಳಸಿದ್ದೇ ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಂತವರಿಗೆ ಶನಿ ಕಾಟ ಶುರುವಾಗಲಿದೆ. ಹಾಗಾದರೆ ಆ ಗಿಡ ಯಾವುದು ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ.

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಮರಗಳು ಮತ್ತು ಸಸ್ಯಗಳನ್ನು ಮನೆಯಲ್ಲಿ ನೆಟ್ಟರೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ಜೊತೆಗೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಕೆಲ ಗಿಡಗಳನ್ನು ಮನೆಯಲ್ಲಿ ಬೆಳಸಬಾರದು. ಯಾಕೆಂದರೆ ಅವು ನಕಾರಾತ್ಮಕತೆಯನ್ನು ಹರಡುತ್ತವೆ. ಈ ನಿಷೇಧಿತ ಸಸ್ಯಗಳನ್ನು ಮನೆಯಲ್ಲಿ ನೆಡುವುದರಿಂದ ಆರ್ಥಿಕ ತೊಂದರೆಗಳು ಮಾತ್ರವಲ್ಲದೆ ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತವೆ.

 Bitter gourd plant Vastu tips: Shouldnt you plant it at home?

ವಾಸ್ತು ಶಾಸ್ತ್ರದಲ್ಲಿ ಅಂತಹ ಕೆಲವು ಸಸ್ಯಗಳನ್ನು ಸಹ ಉಲ್ಲೇಖಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮನೆಯಲ್ಲಿ ತೋಟಗಾರಿಕೆ ಮಾಡಲು ಇಷ್ಟಪಡುತ್ತಾರೆ. ಹೀಗಾಗಿ ಮನೆಯಲ್ಲಿ ತರಕಾರಿ ಮತ್ತು ಹಣ್ಣುಗಳ ಗಿಡಗಳನ್ನು ಬೆಳೆಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ತರಕಾರಿ ಗಿಡಗಳನ್ನು ಮನೆಯಲ್ಲಿ ನೆಡಬಾರದು. ಅಂಥಹ ಗಿಡಗಳಲ್ಲಿ ಮೊದಲ ಹೆಸರು ಹಾಗಲಕಾಯಿ. ಹಾಗಲಕಾಯಿ ಗಿಡವನ್ನು ಮನೆಯಲ್ಲಿ ಏಕೆ ನೆಡಬಾರದು ಎಂದು ಈಗ ತಿಳಿಯೋಣ.

ಹಾಗಲಕಾಯಿ ಗಿಡ ಮನೆಗೆ ಅಶುಭ..

ಹಾಗಲಕಾಯಿ ಕಹಿಯಾಗಿರುವುದರಿಂದ ಮನೆಯಲ್ಲಿ ಹಾಗಲಕಾಯಿ ಗಿಡ ನೆಡುವುದನ್ನು ನಿಷೇಧಿಸಲಾಗಿದೆ. ಯಾಕೆಮದರೆ ಹಾಗಲಕಾಯಿಯಿಂದ ಹೊರಹೊಮ್ಮುವ ಶಕ್ತಿಯು ನಕಾರಾತ್ಮಕವಾಗಿರುತ್ತದೆ. ಇದನ್ನು ಬೆಳೆಸುವುದರಿಂದ ನೀವು ಅಶುಭ ಫಲಿತಾಂಶಗಳನ್ನು ಪಡೆಯಬಹುದು. ಇದರಿಂದ ಬಿಡುಗಡೆಯಾಗುವ ಶಕ್ತಿ ನಿಮ್ಮ ಆರೋಗ್ಯಕ್ಕೂ ಒಳ್ಳೆಯದಲ್ಲ. ವಿಶೇಷವಾಗಿ ನಿಮ್ಮ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ಆದ್ದರಿಂದ ನೀವು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಣಬೇಕಾದರೆ ಹಾಗಲಕಾಯಿಯನ್ನು ಮನೆಯಲ್ಲಿ ನೆಡಬೇಡಿ.

 Bitter gourd plant Vastu tips: Shouldnt you plant it at home?

ಹಾಗಲಕಾಯಿಯನ್ನು ಈ ದಿಕ್ಕಿನಲ್ಲಿ ಎಂದಿಗೂ ನೆಡಬೇಡಿ

ಹಾಗಲಕಾಯಿ ಗಿಡವನ್ನು ಮನೆಯಲ್ಲಿ ನೆಡಲಾಗದಿದ್ದರೆ ಹಾಗಲಕಾಯಿ ಗಿಡವನ್ನು ಎಲ್ಲಿ ನೆಡಬೇಕು ಎಂಬ ಪ್ರಶ್ನೆಯೂ ಜನರ ಮನಸ್ಸಿನಲ್ಲಿ ಮೂಡುತ್ತದೆ. ಇದಕ್ಕೆ ಉತ್ತರ ಏನೆಂದರೆ ಮನೆಯ ಹೊರಗಿರುವ ತೋಟ ಅಥವಾ ಖಾಲಿ ಸ್ಥಳ ಇದ್ದರೆ ಅಲ್ಲಿ ಹಾಗಲಕಾಯಿ ಗಿಡ ಬೆಳೆಸಬಹುದು. ಆದರೆ ಇಲ್ಲಿಯೂ ಹಾಗಲಕಾಯಿ ಗಿಡ ನೆಡುವಾಗ ದಿಕ್ಕು ದಕ್ಷಿಣದಲ್ಲಿರುವುದನ್ನು ಗಮನದಲ್ಲಿಟ್ಟುಕೊಳ್ಳಿ.

ಮನೆಯಲ್ಲಿ ಹಾಗಲಕಾಯಿ ಗಿಡ ನೆಟ್ಟರೆ ಅಶುಭ ಫಲ

ವಾಸ್ತುಶಾಸ್ತ್ರದ ಪ್ರಕಾರ, ಹಾಗಲಕಾಯಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಅವರ ಅಸಮಾಧಾನದ ಹೆಚ್ಚಳದಿಂದ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ನಿಮ್ಮ ವ್ಯವಹಾರದಲ್ಲಿ ನಷ್ಟದ ಪರಿಸ್ಥಿತಿಯನ್ನು ನೀವು ನೋಡಬಹುದು. ಲಕ್ಷ್ಮಿ ದೇವಿಯ ಕೋಪದಿಂದಾಗಿ ನಿಮ್ಮ ಸಾಲವೂ ಹೆಚ್ಚಾಗಬಹುದು.

ಹಾಗಲಕಾಯಿ ಗಿಡವನ್ನು ಮನೆಯಲ್ಲಿ ನೆಟ್ಟರೆ ನಿಮ್ಮ ಖ್ಯಾತಿಗೂ ಧಕ್ಕೆಯಾಗುತ್ತದೆ. ಸಮಾಜ ಅಥವಾ ಕೆಲಸದ ಸ್ಥಳದಲ್ಲಿ ಅನುಪಯುಕ್ತ ಕಾರಣಗಳಿಂದಾಗಿ ನೀವು ಅವಮಾನ, ವದಂತಿಗಳಂತಹ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಹಾಗಲಕಾಯಿ ಗಿಡದಿಂದ ಹೊರಹೊಮ್ಮುವ ಋಣಾತ್ಮಕ ಶಕ್ತಿ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ನೀವು ಅಸ್ವಸ್ಥರಾಗಬಹುದು ಅಥವಾ ಗಾಯಗೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+