Bachelor recipes | ಫಟಾ ಫಟ್ ಸೋಂಬೇರಿ ಚಿಕನ್ ಮಾಡುವ ವಿಧಾನ!
ಹೇಳಿಕೇಳಿ ಇವೊತ್ತು ಭಾನುವಾರ. ನಾನ್ ವೆಜ್ ಪ್ರಿಯರಿಗೆ ಇಂದು ಯಾವುದಾದರೂ ನಾನ್‌ವೆಜ್ ತಿನ್ನಬೇಕು ಎನಿಸಿದರೆ, ಅದರಲ್ಲೂ ಬ್ಯಾಚುಲರ್‌ಗಳಿಗೆ ಕಡಿಮೆ ಸಾಧನಗಳನ್ನು ಬಳಸಿ, ಅತ್ಯಂತ ಕಡಿಮೆ ಸಮಯದಲ್ಲಿ ಮಾಡುವುದಕ್ಕೆ ಸೋಂಬೇರಿ ಚಿಕನ್ ಬೆಸ್ಟ್.
ಹೆಸರೇ ಹೇಳುವಂತೆ ಈ ಚಿಕನ್ ಮಾಡುವುದಕ್ಕೆ ನೀವು ಹೆಚ್ಚು ಶ್ರಮ ವಹಿಸುವ ಅಗತ್ಯ ಇಲ್ಲ. ಕಡಿಮೆ ಅವಧಿಯಲ್ಲಿ, ಐದಾರು ಸಾಧನಗಳನ್ನು ಬಳಸಿ ನೀವು ಸೋಂಬೇರಿ ಚಿಕನ್ ಮಾಡಬಹುದು. ಇನ್ನು ಬ್ಯಾಚುಲರ್ಸ್‌ಗಳಿಗಂತೂ ಇದು ತುಂಬಾನೇ ಸುಲಭ. ಇಲ್ಲಿದೆ ಸೋಂಬೇರಿ ಚಿಕನ್ ಮಾಡುವ ವಿಧಾನ.

ಹೆಸರೇ ಸೋಂಬೇರಿ ಚಿಕನ್ ಅಲ್ವಾ. ಹೀಗಾಗಿ, ಇದನ್ನು ಮಾಡೋದಕ್ಕೂ ನೀವು ತುಂಬಾ ಶ್ರಮ ವಹಿಸಬೇಕಿಲ್ಲ. ಆದರೆ, ಸ್ವಲ್ಪನಾದ್ರೂ ಶ್ರಮ ವಹಿಸಲೇಬೇಕು. ಈ ಚಿಕನ್ ಬ್ಯಾಚುಲರ್ಸ್‌ಗಳಿಗೆ ಇಷ್ಟವಾಗದೆ ಇರುವುದಕ್ಕೆ ಕಾರಣವೇ ಇಲ್ಲ. 20ರಿಂದ 25 ನಿಮಿಷದಲ್ಲಿ ಸೋಂಬೇರಿ ಚಿಕನ್ ಮಾಡಬಹುದು.
Bachelor ಸೋಂಬೇರಿ ಚಿಕನ್ ಮಾಡಲು ಬೇಕಾದ ಸಾಧನಗಳು
ಬೇಕಾಗುವ ವಸ್ತು / ಪ್ರಮಾಣ
ಚಿಕನ್: ಅರ್ಧ ಕೆ.ಜಿ
ಈರುಳ್ಳಿ: ಎರಡರಿಂದ ಮೂರು
ಶುಂಠಿ - ಬೆಳ್ಳುಳ್ಳಿ ಪೇಸ್ಟ್: ಅರ್ಧ ಚಮಚ
ಕೊತ್ತಂಬರಿ: ಸ್ವಲ್ಪ
ಕಾರದಪುಡಿ: ಒಂದು ಚಮಚ
ದನಿಯಾಪುಡಿ: ಒಂದು ಚಮಚ
ಗರಂ ಮಸಾಲ: ಒಂದು ಚಮಚ
ಅರಿಶಿನ ಪುಡಿ: ಅರ್ಧ ಚಿಟಿಕೆ
ಕಸ್ತೂರಿ ಮೇಥಿ: ಅರ್ಧ ಚಿಟಿಕೆ
ಎಣ್ಣೆ: ಮೂರು ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ಸೋಂಬೇರಿ ಚಿಕನ್ ಮಾಡುವ ವಿಧಾನ: ಸೋಂಬೇರಿ ಚಿಕನ್ ಮಾಡುವುದು ಅತ್ಯಂತ ಸುಲಭ. ಚಿಕನ್ ಅನ್ನು ಮೊದಲು ಸ್ವಚ್ಛ ಮಾಡಿಕೊಂಡು, ಕತ್ತರಿಸಿದ ಎರಡು ಮೂರು ಈರುಳ್ಳಿಯನ್ನು ಚಿಕನ್‌ನೊಂದಿಗೆ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕೊತ್ತಂಬರಿ, ಕಾರದಪುಡಿ, ದನಿಯಾಪುಡಿ, ಗರಂ ಮಸಾಲ, ಅರಿಶಿನ ಪುಡಿ, ಕಸ್ತೂರಿ ಮೇಥಿ, ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಐದರಿಂದ ಹತ್ತು ನಿಮಿಷ ಬಿಡಬೇಕು. ಚಿಕನ್ ಬಿಸಿ ಮಾಡುವಾಗ ಮಧ್ಯ ಮಧ್ಯದಲ್ಲಿ ಚಿಕನ್ ತಳ ಹಿಡಿಯದಂತೆ ತಿರುಗಿಸಬೇಕು. ಗ್ರೇವಿ ಹೆಚ್ಚು ಬೇಕು ಅನಿಸಿದರೆ ಸ್ವಲ್ಪ ನೀರು ಹಾಕಿಕೊಳ್ಳಬಹುದು. ಇದಾದ ಮೇಲೆ 20ರಿಂದ 25 ನಿಮಿಷ ಇದನ್ನು ಬಿಸಿ ಮಾಡಿದರೆ, ಸೋಂಬೇರಿ ಚಿಕನ್ ರೆಡಿ!












Click it and Unblock the Notifications