Areca Rasam Recipe: ಅಡಿಕೆ ರಸಂ ತಯಾರಿಸುವ ವಿಧಾನ: ಬಾಯಿ ಚಪ್ಪರಿಸಿ ಸವಿಯಿರಿ...
ಅಡಿಕೆ ಆಹಾರ ಜೀರ್ಣಕ್ಕೆ ಸಹಾಯ ಮಾಡುವ ಪುಟ್ಟ ಕಾಯಿ. ಪೂಜಾ ಕಾರ್ಯಗಳು ಇದು ಇಲ್ಲದೆ ಪೂರ್ಣಗೊಳ್ಳುವುದೇ ಇಲ್ಲ. ಕೆಲಸದ ವೇಳೆ ನಿದ್ದೆ ಬಂದರೆ ಇದನ್ನು ಅಗಿಯುವವರ ಸಂಖ್ಯೆ ನಮ್ಮ ನಡುವೆ ಹೆಚ್ಚಾಗಿದೆ. ಅಷ್ಟು ಮಾತ್ರವಲ್ಲದೆ ಇದು ಆರೋಗ್ಯಕ್ಕೆ ನಾನಾ ಪ್ರಯೋಜನಗಳನ್ನು ನೀಡುತ್ತದೆ.
ಗಂಭೀರ ಕಾಯಿಲೆಗಳನ್ನು ಗುಣಪಡಿಸುವ ಪೋಷಕಾಂಶಗಳನ್ನು ಅಡಿಕೆ ಹೊಂದಿದೆ. ಹೀಗಾಗಿ ಇದನ್ನು ಊಟದ ನಂತರ ಸೇವಿಸಲಾಗುತ್ತದೆ, ವಿವಿಧ ಔಷಧ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಅಷ್ಟೇ ಯಾಕೆ ಇದರಿಂದ ಚಹಾ ಕೂಡ ಮಾಡಲಾಗುತ್ತದೆ. ಮಾತ್ರವಲ್ಲದೆ ಇದರಿಂದ ರಸಂ ಕೂಡ ತಯಾರಿಸಲಾಗುತ್ತದೆ. ಹೌದು... ಅಡಿಕೆಯಿಂದ ರುಚಿಕರವಾಗಿ ರಸಂ ತಯಾರಿಸಿ ಸವಿಯಬಹುದು.

ಹಾಗಾದರೆ ಅಡಿಕೆ ರಸಂ ತಯಾರಿಸುವುದು ಹೇಗೆ? ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಯಾವವು? ಎಂದು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಮ್ಮೆ ಇದನ್ನು ತಯಾರಿಸಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಹಾಗಾದರೆ ತಡ ಮಾಡುವುದು ಬೇಡ ಅಡಿಕೆ ರಸಂ ತಯಾರಿಸುವುದು ಹೇಗೆ ಎಂದು ತಿಳಿಯೋಣ.
ಬೇಕಾಗುವ ಪದಾರ್ಥಗಳು:
* ಅಡಿಕೆ 5-6
* ಟೊಮೆಟೋ 2
* ಜೀರಿಗೆ ಒಂದೂವರೆ ಚಮಚ
* ಕಾಳುಮೆಣಸು 1
* ಹುಣಸೆ ರಸ 1 ಚಮಚ
* ಒಣಮೆಣಸಿನಕಾಯಿ ಪುಡಿ 1 ಚಮಚ
* ಬೆಲ್ಲ-ಅರ್ಧ ಚಮಚ
* ಉಪ್ಪು-ರುಚಿಗೆ ತಕ್ಕಷ್ಟು
* ನೀರು- ಹದಕ್ಕೆ ತಕ್ಕಷ್ಟು ಇರಲಿ
* ಅರಿಶಿಣ ಚಿಟಿಕೆ
* ರಸಂ ಪುಡಿ- ಒಂದು ಚಮಚ

* ಕರಿಬೇವು - ಒಂದು ಎಸಳು
* ಕೊತ್ತಂಬರಿ ಸೊಪ್ಪು-ಸ್ವಲ್ಪ
* ಎಣ್ಣೆ ಒಗ್ಗರಣೆಗೆ ಬೇಕಾದಷ್ಟು
* ಜೀರಿಗೆ, ಇಂಗು, ಒಣಮೆಣಸಿನಕಾಯಿ
ತಯಾರಿಸುವ ವಿಧಾನ
* ಅಡಿಕೆಯನ್ನು ಕುಟ್ಟಿ ಸ್ವಲ್ಪ ಪುಟ್ಟಿ ಮಾಡಿ ನಂತರ ಅದನ್ನು ಹೊರಳು ಅಥವಾ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ
* ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಮೂರರಿಂದ ನಾಲ್ಕು ಚಮಚ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದ ಬಳಿಕ ಅದಕ್ಕೆ ಜೀರಿಗೆ, ಕಾಳುಮೆಣಸು ಹಾಕಿ, ಕರಿಬೇವಿನ ಎಲೆಯನ್ನು ಹಾಕಿ ಹುರಿಯಿರಿ
* ಜೀರಿಗೆ ಕೆಂಪಾದ ಬಳಿಕ ಹೆಚ್ಚಿದ ಟೊಮೆಟೊ ಹಾಕಿ ಬಾಡಿಸಿಕೊಳ್ಳಿ, ಬಳಿಕ ಇದಕ್ಕೆ ಹುಣಸೆ ರಸ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ

* ಬಳಿಕ ಇದಕ್ಕೆ ಅಡಿಕೆ ಪುಡಿ, ಬೆಲ್ಲ, ಉಪ್ಪು ಹಾಕಿ ಕೈಯಾಡಿಸಿ
* ನಂತರ ಇದಕ್ಕೆ ರಸಂ ಹದಕ್ಕೆ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಕುದಿಯಲು ಬಿಡಿ
* ಬಳಿಕ ಅರಿಶಿಣ, ರಸಂ ಪುಡಿ, ಒಣ ಖಾರದ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ ಹುದಿಯಲು ಬಿಡಿ
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬಿಡಿ
* ಕೊನೆಯಲ್ಲಿ ಇದಕ್ಕೆ ಒಗ್ಗರಣೆ ತಯಾರಿಸಿ, ಒಂದು ಪಾತ್ರೆಯಲ್ಲಿ ಎರ್ಣನೆ ಹಾಕಿ ಬಿಸಿಯಾದ ಬಳಿಕ ಜೀರಿಗೆ, ಸ್ವಲ್ಪ ಇಂಗು, ಒಣಮೆಣಸಿನಕಾಯಿ ಹಾಕಿ ಹುರಿದ ಬಳಿಕ ರಸಂಗೆ ಬೆರೆಸಿದರೆ ರುಚಿರಕವಾದ ರಸಂ ಸವಿಯಲು ಸಿದ್ಧ.
-
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್












Click it and Unblock the Notifications