ಸೌಂದರ್ಯ ವೃದ್ಧಿಗೆ ₹4 ಕೋಟಿ ಖರ್ಚು ಮಾಡಿದ 75ರ ವೃದ್ಧೆ! ಬಿಲ್‌ ನೋಡಿ ದಂಗಾದ ಮಗಳು

ನಿವೃತ್ತಿಯ ನಂತರ ಕೈ ಸೇರುವ ಹಣ ವೃದ್ದಾಪ್ಯದ ಜೀವನಕ್ಕೆ ಆಧಾರ. ವೃದ್ದಾಪ್ಯದಲ್ಲಿ ಯಾರ ಮೇಲೂ ಅವಲಂಬಿತರಾಗದೆ ನೆಮ್ಮದಿಯ ಬದುಕು ಬದುಕಲು ಈ ಹಣ ಸಹಾಯಕ್ಕೆ ಬರುತ್ತದೆ. ಕೆಲಸ ಬಿಟ್ಟ ನಂತರ, ಈ ಉಳಿತಾಯದ ಹಣವನ್ನು ದೈನಂದಿನ ಖರ್ಚುಗಳು ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು ಬಳಸಲಾಗುತ್ತದೆ.ಆದರೆ ಇಲೊಬ್ಬ ಮಹಿಳೆ ಈ ಹಣವನ್ನು ತನ್ನ ಮುಖ ಸೌಂದರ್ಯ ಹೆಚ್ಚಿಕೊಳ್ಳಲು ಬಳಸಿ ಸುದ್ದಿಯಾಗಿದ್ದಾರೆ.

ಸೌಂದರ್ಯ ಮತ್ತು ವೆಲ್‌ನೆಸ್‌ ಟ್ರೀಟ್‌ಮೆಂಟ್‌ಗೆ ಹಣ ವ್ಯಯ

ಚೀನಾದಲ್ಲಿ 75 ವರ್ಷದ ಮಹಿಳೆಯೊಬ್ಬರು ನಿವೃತ್ತಿ ಉಳಿತಾಯದ ಹಣವನ್ನು ಖರ್ಚು ಮಾಡಿರುವ ರೀತಿ ಆಘಾತಕಾರಿಯಾಗಿದೆ. ವರದಿಗಳ ಪ್ರಕಾರ, ಮಹಿಳೆ ಹಲವಾರು ವರ್ಷಗಳಿಂದ ಒಂದೇ ಸಲೂನ್‌ನಲ್ಲಿ ಸೌಂದರ್ಯ ಮತ್ತು ವೆಲ್‌ನೆಸ್‌ ಟ್ರೀಟ್‌ಮೆಂಟ್‌ ಮಾಡಿಸಿಕೊಳ್ಳುತ್ತಿದ್ದರು. ಇದಕ್ಕಾಗಿ ಅವರು ತಮ್ಮ ಉಳಿತಾಯ ಹಣದ ಸ್ವಲ್ಪ ಭಾಗ ಹಣವನ್ನು ಖರ್ಚು ಮಾಡಿದ್ದರೆ ಯಾರೂ ಇವರನ್ನು ಪ್ರಶ್ನೆ ಮಾಡುತ್ತಿರಲಿಲ್ಲ.

75 Year Old Lady

ಆದರೆ ಇವರು ಈ ಟ್ರೀಟ್‌ಮೆಂಟ್‌ಗಾಗಿ ಖರ್ಚು ಮಾಡಿದ್ದು ಬರೋಬ್ಬರಿ 4 ಕೋಟಿಗೂ ಹೆಚ್ಚು ಹಣವನ್ನು. ತನ್ನ ತಾಯಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಬ್ಯೂಟಿ ಮತ್ತು ವೆಲ್‌ನೆಸ್‌ ಟ್ರೀಟ್‌ಮೆಂಟ್‌ಗೆ ಖರ್ಚು ಮಾಡಿದ್ದಾರೆ ಎಂದು ತಿಳಿಯುತ್ತಿದ್ದ ಹಾಗೆ ಮಗಳು ಆಘಾತಗೊಂಡಿದ್ದಾರೆ. ಈ ಕಥೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

4 ಕೋಟಿ ರೂಪಾಯಿ ಖರ್ಚು

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಯು ಎಂಬ ಸರ್‌ ನೇಮ್‌ ಹೊಂದಿರುವ ಮಹಿಳೆ 2016 ರಿಂದ ಯೋಂಗ್ಕಿ ಬ್ಯೂಟಿ ಅಂಡ್ ಹೇರ್ ಡ್ರೆಸ್ಸಿಂಗ್ ಕಂಪನಿ ಮತ್ತು ಅದರ ಜೊತೆ ಗುರುತಿಸಿಕೊಂಡಿರುವ ಮೆಡಿಕಲ್‌ ಬ್ಯೂಟಿ ಕ್ಲಿನಿಕ್‌ಗೆ ಭೇಟಿ ನೀಡುತ್ತಿದ್ದರು. ಇಲ್ಲಿ ಪಡೆಯುತ್ತಿದ್ದ ಸರ್ವಿಸ್‌ಗೆ ತಮ್ಮ ಉಳಿತಾಯದ ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದಾರೆ. ವರದಿಯ ಪ್ರಕಾರ, ಯು ಸಲೂನ್ ಮತ್ತುಬ್ಯೂಟಿ ಕ್ಲಿನಿಕ್‌ನಿಂದ ಅನೇಕ ರೀತಿಯ ಸರ್ವಿಸ್‌ ಅನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಸ್ಕಿನ್‌ ಟೈಟ್‌ನಿಂಗ್‌ ಪ್ರೋಸೀಜರ್‌, ಥ್ರೆಡ್ ಲಿಫ್ಟ್‌ಗಳು ಮತ್ತು ಮೆರಿಡಿಯನ್ ಮಸಾಜ್ ಥೆರಪಿ ಸೇರಿದಂತೆ ಬೇರೆ ಬೇರೆ ರೀತಿಯ ಬ್ಯೂಟಿ ಮತ್ತು ವೆಲ್‌ನೆಸ್‌ ಸೇವೆಗಳು ಸೇರಿವೆ. ಅವರು ಐಬ್ರೋ ಮತ್ತು ಲಿಪ್‌ ಟ್ಯಾಟೂವಿನಂಥಹ ಕಾಸ್ಮೆಟಿಕ್‌ ಪ್ರೋಸೀಜರ್‌ಗೂ ಒಳಗಾಗಿದ್ದರು ಎನ್ನಲಾಗಿದೆ.

ತುಟಿಗಳಿಗೆ ಸುಮಾರು 6 ಲಕ್ಷ ರೂ. ಖರ್ಚು

ಸಲೂನ್ ಬಿಲ್‌ಗಳು ಮತ್ತು ಚಿಕಿತ್ಸಾ ದಾಖಲೆಗಳು ಕಣ್ಣಿಗೆ ಬಿದ್ದಾಗಲೇ ಮಗಳಿಗೆ ತನ್ನ ತಾಯಿ ಸಲೂನ್‌ ಮ್ತು ಬ್ಯೂಟಿ ಕ್ಲಿನಿಕ್‌ಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎನ್ನುವ ಸತ್ಯ ಅರಿವಾದದ್ದು. ಆ ಬೃಹತ್ ಮೊತ್ತವನ್ನು ನೋಡಿ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಕೆಲವು ಸೌಂದರ್ಯ ಚಿಕಿತ್ಸೆಗಳಿಗೆ ಯು ಮಾರುಕಟ್ಟೆ ದರಕ್ಕಿಂತ ಹಲವಾರು ಪಟ್ಟು ಹೆಚ್ಚು ಪಾವತಿಸಿದ್ದಾರೆ ಎನ್ನುವುದು ಬಿಲ್‌ಗಳಿಂದ ಸಾಬೀತಾಗಿದೆ. ವರದಿಗಳ ಪ್ರಕಾರ, ಕೆಲವು ಸೇವೆಗಳ ಬೆಲೆ ಸಾಮಾನ್ಯ ದರಕ್ಕಿಂತ 10 ರಿಂದ 20 ಪಟ್ಟು ಹೆಚ್ಚಾಗಿತ್ತು. ಆಘಾತಕಾರಿ ವಿಷಯ ಎಂದರೆ ಒಂದೇ ಸೆಷನ್‌ನಲ್ಲಿ ಅಧಿಕ ಲಿಪ್‌ ಟ್ಯಾಟೂ ಮಾಡಿಸಿಕೊಳ್ಳುವುದಕ್ಕಾಗಿ 39,800 ಯುವಾನ್ ಅಥವಾ ಸುಮಾರು 6 ಲಕ್ಷ ರೂ. ಹಣವನ್ನು ಖರ್ಚು ಮಾಡಿರುವುದು.

ದುಬಾರಿ ಚಿಕಿತ್ಸೆಯ ಬಗ್ಗೆ ಎದ್ದಿರುವ ಪ್ರಶ್ನೆಗಳು

ದುಬಾರಿ ಚಿಕಿತ್ಸೆಗಳ ವೆಚ್ಚ ಬೆಳಕಿಗೆ ಬಂದ ನಂತರ, ಯು ಅವರಿಗೆ ಈ ಸೇವೆಗಳ ನಿಜವಾದ ವೆಚ್ಚ ಮತ್ತು ಪ್ರಯೋಜನಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅವರು 65 ನೇ ವಯಸ್ಸಿನಲ್ಲಿ ಸಲೂನ್‌ಗೆ ಭೇಟಿ ನೀಡಲು ಪ್ರಾರಂಭಿಸಿದರು. ನಂತರ ಕ್ರಮೇಣ ವಿವಿಧ ಚಿಕಿತ್ಸೆಗಳನ್ನು ಪಡೆಯಲು ಶುರು ಮಾಡಿದರು. ಇದೀಗ ಈ ವಿಷಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿಸಲಾಗುತ್ತಿದೆ.

ವಿಶೇಷವಾಗಿ ವಯಸ್ಸಾದ ಗ್ರಾಹಕರಿಗೆ ಯಾವುದೇ ರೀತಿಯ ಬ್ಯೂಟಿ ಮತ್ತು ವೆಲ್‌ನೆಸ್‌ ಟ್ರೀಟ್‌ಮೆಂಟ್‌ ನೀಡುವಾಗ ಅವರಿಗೆ ಅದರ ವೆಚ್ಚ ಮತ್ತು ಪ್ರಯೋಜನಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಬೇಕು ಎನ್ನುವುದು ಜನರ ಅಭಿಪ್ರಾಯ. ಇಲ್ಲಿ ಸಲೂನ್ ಯೂ ಅವರಿಗೆ ವಿಧಿಸಿರುವ ಬೆಲೆಗಳು ಮತ್ತು ಸಾಮಾನ್ಯ ಮಾರುಕಟ್ಟೆ ದರದ ನಡುವಿನ ಗಮನಾರ್ಹ ವ್ಯತ್ಯಾಸದ ಬಗ್ಗೆ ಚರ್ಚಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+