Get Updates
Get notified of breaking news, exclusive insights, and must-see stories!

Summer Health Tips: ಹೊರ ಹೋಗಿ ವೋಟು ಮಾಡಲು ಬಿಸಿಲು ಬಿಡ್ತಾಯಿಲ್ವಾ? ಹಾಗಾದರೆ ಹೀಗೆ ಮಾಡಿ....

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು (ಏಪ್ರಿಲ್ 26) ಮತದಾನ ಆರಂಭವಾಗಿದೆ. ಆದರೆ ಮತದಾನಕ್ಕೆ ಬಿಸಿಲು ಅಡ್ಡಿಯನ್ನುಂಟು ಮಾಡಿದೆ. ಇದರಿಂದಾಗಿ ವಯಸ್ಸಾದವರು, ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲದೆ ಇರುವವರು ಮಾತ್ರವಲ್ಲದೆ ಆರೋಗ್ಯವಾಗಿರುವವರಿಗೂ ಸಾಕಷ್ಟು ತೊಂದರೆಯಾಗಿದೆ. ಹಾಗಂತ ವೋಟು ಹಾಕದೇ ಇರಬೇಡಿ. ಮತಗಟ್ಟೆಗೆ ಹೋಗಿ ಮೊದಲು ವೋಟ್ ಮಾಡಿ. ಹಾಗಾದರೆ ಮತದಾನಕ್ಕಾಗಿ ಹೊರ ಹೋಗುವಾಗ ಬಿಸಿಲಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ?

ರಾಜ್ಯದಲ್ಲಿ ಇಂದು ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಶುರುವಾಗಿದೆ. ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಜನ ಮತದಾನಕ್ಕಾಗಿ ಕಾಯುತ್ತಿದ್ದಾರೆ. ಅದೆಷ್ಟೋ ಜನ ವೋಟರ್ ಐಡಿಯನ್ನೇ ಫ್ಯಾನ್ ಮಾಡಿಕೊಂಡಿರುವ ದೃಶ್ಯಗಳು ಮತಗಟ್ಟೆಯಲ್ಲಿ ಕಾಣಸಿಗುತ್ತಿವೆ. ಇನ್ನೂ ಮಧ್ಯಾಹ್ನ ಆಗುತ್ತಿದ್ದಂತೆ ಬಿಸಿಲ ಝಳ ಮತ್ತಷ್ಟು ಹೆಚ್ಚಾಗಲಿದೆ. ಈ ಸಮಯದಲ್ಲಿ ಮತದಾರರು ಮನೆಯಿಂದ ಹೊರಬರುವುದು ಕಷ್ಟಸಾಧ್ಯ. ಆದರೆ ಇಂದು ಮತದಾನಕ್ಕಾಗಿ ಪ್ರತಿಯೊಬ್ಬರೂ ಮತಗಟ್ಟೆಗಳಿಗೆ ಹೊರಬರಲೇಬೇಕಾದ ಅನಿವಾರ್ಯತೆ ಇದೆ.

7 Steps to Beat the Summer Heat in Karnataka While Voting in Lok Sabha Election 2024 Expert Tips

ಆದರೆ ಕರ್ನಾಟಕದಲ್ಲಿ ತಾಪಮಾನ ಕಳೆದ ವರ್ಷಗಳಿಗೆ ಹೋಲಿಸಿದರೆ ಹೆಚ್ಚಾಗಿದ್ದು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿದೆ. ಹೀಗಿರುವಾಗ ಮನೆಯಿಂದ ಹೊರಬರುವವರು ಮುನ್ನೆಚ್ಚರಿಕೆ ವಹಿಸಿದರೆ ಆರಾಮದಾಯಕವಾಗಿ ಮತದಾನ ಮಾಡಬಹುದು. ಹಾಗಾದರೆ ಮತದಾನಕ್ಕಾಗಿ ಹೊರ ಹೋಗುವಾಗ ಬಿಸಿಲಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ?

ಛತ್ರಿ ಬಳಸಿ

ಮತದಾನಕ್ಕಾಗಿ ಮನೆಯಿಂದ ಹೊರ ಬರುವವರು ಛತ್ರಯನ್ನು ಹಿಡಿದುಕೊಳ್ಳಿ. ಇದರಿಂದ ಬಿಸಿಲಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಛತ್ರಿ ನಿಮ್ಮ ಮೇಲೆ ನೇರವಾಗಿ ಸೂರ್ಯನ ಕಿರಣ ಬೀಳದಂತೆ ತಡೆಯುತ್ತದೆ. ಹೀಗಾಗಿ ಬಿಸಿಲ ಬಿಸಿ ನಿಮ್ಮ ಮೇಲೆ ನೇರವಾಗಿ ಬೀಳುವುದಿಲ್ಲ.

7 Steps to Beat the Summer Heat in Karnataka While Voting in Lok Sabha Election 2024 Expert Tips

ಕ್ಯಾಪ್ ಹಾಕಿ

ಯುವಕರು ಈ ಬಾರಿ ವೋಟ್ ಹಾಕಲು ಮನೆಯಿಂದ ಹೊರ ಬರುತ್ತಿದ್ದರೆ ಕ್ಯಾಪ್ ಧರಿಸುವುದನ್ನು ಮರೆಯಬೇಡಿ. ಇದು ಕೂಡ ನಿಮ್ಮನ್ನು ಬಿಸಿಲಿನಿಂದ ರಕ್ಷಣೆ ಮಾಡುತ್ತದೆ. ತಲೆಗೆ ಸೂರ್ಯನ ಕಿರಣಗಳು ನೇರವಾಗಿ ಬೀಳದಂತೆ ತಡೆಯುತ್ತದೆ. ಇದರಿಂದ ಬಿಸಿಲಿನಿಂದಾಗುವ ಅಪಾಯವನ್ನು ತಡೆಯಬಹುದು.

ಸ್ಕಾರ್ಫ ಧರಿಸಿ

ಇನ್ನು ಯುವತಿಯರು ಮನೆಯಿಂದ ಹೊರ ಬರಬೇಕಾಗಿದ್ದರೆ ಮುಖ ಹಾಗೂ ತಲೆ ಮುಚ್ಚಿಕೊಳ್ಳುವಂತೆ ಸ್ಕಾರ್ಫ್ ಕಟ್ಟಿಕೊಳ್ಳಿ. ಇದರಿಂದಾಗಿ ನಿಮ್ಮನ್ನು ನೀವು ರಕ್ಷಿಸಿಕೊಳ್ಬಹುದು. ಮುಖದ ಕಾಂತಿ ಕೂಡ ನೀವು ರಕ್ಷಣೆ ಮಾಡಿಕೊಳ್ಳಬಹುದು. ಬಿಸಿಲು ಹೆಚ್ಚಾಗಿದ್ದರೆ ಛತ್ರಿ ಬಳಕೆ ಮಾಡುವುದು ಒಳ್ಳೆಯದು.

7 Steps to Beat the Summer Heat in Karnataka While Voting in Lok Sabha Election 2024 Expert Tips

ಮತಗಟ್ಟೆಗೆ ತೆರಳಲು ಸಾರಿಗೆ ಬಳಸಿ

ಇನ್ನೂ ಮನೆಯಿಂದ ಮತಗಟ್ಟೆಗೆ ತೆರಳಲು ಆಟೋ, ಕ್ಯಾಬ್, ಬಸ್‌ ನಲ್ಲಿ ಪ್ರಯಾಣ ಮಾಡಿ. ಯಾಕೆಂದರೆ ಮತಗಟ್ಟೆ ಹತ್ತಿರವಿದೆ ಎಂದು ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಹೋಗುವುದನ್ನು ತಪ್ಪಿಸಿ. ಇದರಿಂದ ನಿಮ್ಮ ಆರೋಗ್ಯದಲ್ಲಿ ಏಕಾಏಕಿ ಬದಲಾವಣೆಯಾಗಬಹುದು. ತಲೆ ಸುತ್ತುವುದು, ಮೂರ್ಚೆ ಹೋಗುವುದು, ಕಚ್ಚು ಕತ್ತಲಾಗುವುದು ಇಂತೆಲ್ಲಾ ಸಮಸ್ಯೆಗಳು ನಿಮಗೆ ತಿಳಿಯದಂತೆ ಆಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮೊಂದಿಗೆ ಯಾರನ್ನಾದರೂ ಜೊತೆಗೆ ಕರೆದುಕೊಂಡು ಮತಗಟ್ಟೆಗಳಿಗೆ ಹೋಗುವುದು ಉತ್ತಮ.

ಮತಗಟ್ಟೆಯಲ್ಲಿ ಸರತಿ ಸಾಲು ಇದ್ದಲ್ಲಿ....

ಮತಗಟ್ಟೆಯಲ್ಲಿ ಹೆಚ್ಚು ಸರತಿ ಸಾಲು ಇದ್ದಲ್ಲಿ ಗಿಡ ಅಥವಾ ನೆರಳಿರುವ ಕಡೆಗೆ ನಿಂತುಕೊಳ್ಳಿ. ಇಲ್ಲವೇ ಛತ್ರಿ, ದುಪ್ಪಟ್ಟ ಅಥವಾ ಕ್ಯಾಪ್‌ ನಿಂದ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಿ. ತುಂಬಾ ಬೇಗ ಬರುವುದು, ಹೆಚ್ಚು ಜನರಿದ್ದಾಗ ಮತಗಟ್ಟೆಗಳಿಗೆ ಬರುವುದನ್ನು ತಪ್ಪಿಸಿ. ಆದಷ್ಟು ಬೇಗ ತೆರಳಿ ಮತಚಲಾಯಿಸುವುದು ಒಳ್ಳೆಯದು.

ಏನೆಲ್ಲಾ ಇಟ್ಟುಕೊಳ್ಳಬೇಕು..?

ವಯಸ್ಸಾದವರು, ಮಕ್ಕಳಿರುವ ಪೋಷಕರು ಅಥವಾ ಇನ್ನಿತರ ಆರೋಗ್ಯ ಸಮಸ್ಯೆ ಇರುವವರು ಪ್ರತಿಯೊಬ್ಬರೂ ಮತದಾನ ಕೇಂದ್ರಕ್ಕೆ ತೆರಳುವ ಮುನ್ನ ನೀರಿನ ಬಾಟಲ್ ಅನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ. ಯಾಕೆಂದರೆ ಮತದಾನ ಮಾಡಿ ಬೇಗ ಬಂದು ಬಿಡುವ ಅವಸರದಲ್ಲಿ ನೀವು ಮತಗಟ್ಟೆಗೆ ಹೋಗಿದ್ದರೆ ಅಲ್ಲಿ ಜನ ಹೆಚ್ಚಾಗಿದ್ದರೆ ಮತ ಚಲಾಯಿಸಿ ಬರುವುದು ತಡವಾಗಬಹುದು. ಇದರಿಂದಾಗಿ ಬಿಸಿಲಿಗೆ ನಿರ್ಜಲೀಕರಣವಾಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮೊಂದಿಗೆ ನೀರು, ಜ್ಯೂಸ್, ಹಣ್ಣು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಇನ್ನೂ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವಯಸ್ಸಾದವರು ಅಗತ್ಯ ಮಾತ್ರೆಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+