Life After Corona: ಪ್ರಕೃತಿ ಕಲಿಸಿದ ಪಾಠವನ್ನು ಅರಿತುಕೊಳ್ಳೋಣ
ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನವನ್ನು ಮುಂದುವರೆಸುತ್ತಾ, ಈ ದಿನ ತುಮಕೂರಿನ ಜೆಸಿಐ ಮಾಜಿ ಅಧ್ಯಕ್ಷ ಟಿವಿಎನ್ ಮೂರ್ತಿ ಅವರ ಅಭಿಪ್ರಾಯ, ಅನುಭವ ಅನಿಸಿಕೆ ಇಲ್ಲಿದೆ.. ಇದು ಈ ಸರಣಿಯ 16ನೇ ಲೇಖನವಾಗಿದೆ.
ಓದುಗರೇ, ನೀವು ನಿಮ್ಮ ಉತ್ತರಗಳನ್ನು ನಮಗೆ ಕಳಿಸಬಹುದು. ಅದನ್ನು ಇದೇ ಸರಣಿಯಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?
ನಿಮ್ಮ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ
ಜೆಸಿಐ (ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್) ಮಾಜಿ ಅಧ್ಯಕ್ಷರು, ತುಮಕೂರು ಜಿಲ್ಲಾ ಗೌರವ ವನ್ಯಜೀವಿ ಪಾಲಕರಾದ ಟಿವಿಎನ್ ಮೂರ್ತಿ ಅವರು ಒನ್ಇಂಡಿಯಾ ಕನ್ನಡದ ಅಭಿಯಾನದ ಪ್ರಶ್ನೆಗಳಿಗೆ ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದಾರೆ.
ಪ್ರಕೃತಿ ಕಲಿಸುತ್ತಿರುವ ಪಾಠಗಳಲ್ಲಿ ಕೊರೊನಾ ಒಂದು ಭಾಗವಷ್ಟೇ. ಯಾವ ಕಾಯಿಲೆಗಾದರೂ ಔಷಧ ಕಂಡುಹಿಡಿಯಲಾಗುತ್ತದೆ. ಆದರೆ ಸ್ವಲ್ಪ ತಡವಾಗಬಹುದು. ಆದರೆ ಇನ್ನು ಮುಂದೆ ಈ ಬಾರಿಯ ತಪ್ಪನ್ನು ಮತ್ತೆ ಮಾಡುವುದು ಬೇಡ. ನಮ್ಮ ಬಗ್ಗೆ ನಮಗೆ ಅತಿಯಾದ ವಿಶ್ವಾಸ ಬೇಡ. ಅಗತ್ಯ ಮಟ್ಟದ ನಂಬಿಕೆ ಸಾಕು. ಇನ್ನು ಈಗಿನ ಸ್ಥಿತಿಯು ಮತ್ತಷ್ಟು ವಿಕೋಪಕ್ಕೆ ಹೋಗಬಹುದು. ಆದರೆ ಪ್ರಸ್ತುತ ಸನ್ನಿವೇಶದ ಸಕಾರಾತ್ಮಕ ಬೆಳವಣಿಗೆ ಕಡೆಯೂ ನೋಡೋಣ ಎಂದಿದ್ದಾರೆ ಟಿವಿಎನ್ ಮೂರ್ತಿ.











Click it and Unblock the Notifications