ಮೇಕಪ್ ರಾಮಕ್ಕನ ಗುರುತು ಹಿಡಿಯದ ಯಮಣ್ಣ
ರಾಮಕ್ಕನಿಗೆ ಮೇಕಪ್ ಅಂದ್ರೆ ಏನು ಹುಚ್ಚು ಅಂತೀರಾ? ವಯಸ್ಸು ಅರವತ್ತೈದು ದಾಟಿದ್ದರೂ ಇಪ್ಪತ್ತೈದರ ಹುಡುಗಿಯಂತೆ ಕಾಣಿಸಿಕೊಳ್ಳಬೇಕೆಂಬುದು ಆಕೆಯ ಹೆಬ್ಬಯಕೆ. ದೇಹದ ನೆರಿಗೆಗಳನ್ನೆಲ್ಲ ಮುಚ್ಚಲು ಮೈತುಂಬ ಬಟ್ಟೆ, ಮುಖದ ನೆರಿಗೆಗಳನ್ನು ಮುಚ್ಚಲು ಭರ್ಜರಿ ಮೇಕಪ್. ಆಕೆಗೆ ಮೇಕಪ್ ರಾಮಕ್ಕ ಎಂಬ ಅಡ್ಡಹೆಸರೇ ಬಿದ್ದಿತ್ತು. ತುಟಿಗೆ ರಂಗಾರಂಗಿ ಕೆಂಪು ಬಣ್ಣ, ಕಣ್ಣಿಗೆ ಕೂಲಿಂಗ್ ಗ್ಲಾಸು ಹಾಕಿಕೊಳ್ಳದೆ ರಾಮಕ್ಕ ಹೊರಗೆ ಹೆಜ್ಜೆಯನ್ನೇ ಇಡುತ್ತಿರಲಿಲ್ಲ.
ಹೀಗೇ ಕಾಲದ ಓಟ ಸಾಗಿತ್ತು. ಕಾಲವನ್ನು ತಡೆಯಲು ಯಾರಿಂದ ಸಾಧ್ಯ ಹೇಳಿ? ಒಂದು ದಿನ ಅಜಾರಿ ಬಂದು ಆಸ್ಪತ್ರೆ ಸೇರಿಕೊಂಡಳು. ಮೇಕಪ್ ರಾಮಕ್ಕನ ಮುಖದ ಬಣ್ಣವೆಲ್ಲ ಅಳಿಸಿಹೋಗಿತ್ತು. ವೈದ್ಯರು ಮಾತ್ರ ಆಕೆಯನ್ನು ಗುಣಮುಖಗೊಳಿಸುವ ಕಾಯಕದಲ್ಲಿ ತೊಡಗಿದ್ದರು. ಸಾವನ್ನು ತಡೆಯಲು ಅವರಿಂದಲೂ ಸಾಧ್ಯವಿಲ್ಲವಲ್ಲ. ಒಂದು ದಿನ ಆ ದಿನವೂ ಬಂದೇಬಿಟ್ಟಿತು.
ಸುತ್ತಲೂ ಕತ್ತಲು, ಕೋಣದ ಮೇಲೆ ಕುಳಿತುಕೊಂಡು ಯಮರಾಯ ಬಂದೇಬಿಟ್ಟ. ಬೇಡಬೇಡವೆಂದರೂ ಕೇಳದೆ ರಾಮಕ್ಕನನ್ನು ಯಮಣ್ಣ ತನ್ನ ಕೋಣದ ಮೇಲೆ ಕುಳ್ಳಿರಿಸಿಕೊಂಡು ಹೋರಟೇಬಿಟ್ಟ. ಇನ್ನೂ ಆಸ್ಪತ್ರೆಯ ಹೊಸ್ತಿಲಲ್ಲೂ ದಾಟಿರಲಿಲ್ಲ, ಯಾಕೋ ಡೌಟು ಬಂದು ತನ್ನ ಲಿಸ್ಟನ್ನು ಟಾರ್ಚ್ ಬಿಟ್ಟು ನೋಡುತ್ತಾನೆ. ರಾಮಕ್ಕನ ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ರಾಮಣ್ಣನ ಬದಲು ರಾಮಕ್ಕನನ್ನು ಕರೆದುಕೊಂಡು ಹೊರಟುಬಿಟ್ಟಿರುತ್ತಾನೆ.
ತನ್ನಿಂದ ಪ್ರಮಾದ ಆಗಿದ್ದಕ್ಕೆ ರಾಮಕ್ಕನಿಗೆ ಕ್ಷಮೆ ಕೋರಿ, "ಸಾರಿ ರಾಮಕ್ಕ, ನಿಮ್ಮ ಆಯಸ್ಸು ಇನ್ನೂ ಎರಡು ವರ್ಷವಿದೆ" ಎಂದು ಹೇಳಿ ಅವಳನ್ನು ಮತ್ತೆ ಆಕೆಯ ಹಾಸಿಗೆಯ ಮೇಲೆ ಬಿಟ್ಟು, ಬಚಾವಾದೆ ಎಂದು ಗಹಗಹಿಸುತ್ತಿದ್ದ ರಾಮಣ್ಣನನ್ನು ಎತ್ತಾಕ್ಕೊಂಡು ಹೋಗುತ್ತಾನೆ.
ಸಾವಿನ ಕದತಟ್ಟಿ ವಾಪಸ್ ಬಂದ ರಾಮಕ್ಕ ಹಾಸಿಗೆಯಿಂದ ಪುಟಿದೆದ್ದುಬಿಡುತ್ತಾಳೆ. ಆಕೆಯಲ್ಲಿ ನವೋಲ್ಲಾಸ ತುಂಬಿಕೊಂಡಿರುತ್ತದೆ. ವೈದ್ಯರಿಗೂ ಆಶ್ಚರ್ಯ. ಸರಿ, ನೀನು ಹುಷಾರಾಗಿದ್ದೀಯಾ ಎಂದು ವಾಪಸ್ ಕಳಿಸಿಬಿಡುತ್ತಾರೆ.
ಎರಡು ವರ್ಷವೋ, ಇಪ್ಪತ್ತು ವರ್ಷವೋ, ಇದ್ದಷ್ಟು ದಿನ ಚೆನ್ನಾಗಿ ಕಾಣಿಸಿಕೊಂಡು ಇರೋಣವೆಂದು ಕಳೆಗುಂದಿದ್ದ ಮುಖಕ್ಕೆ ಪಾರ್ಲರಿಗೆ ಹೋಗಿ ಮತ್ತೆ ಮೇಕಪ್ ಬಳಿಸಿಕೊಂಡು ಮುಂಚಿನಂತೆ ಕಾಣಿಸಿಕೊಳ್ಳುತ್ತಾಳೆ. ಪಾರ್ಲರಿಂದ ಕೊಡೆಹಿಡಿದು ನಡೆದುಕೊಂಡ ರಾಮಕ್ಕ, ಹಠಾತ್ತನೆ ಬಿಎಂಟಿಸಿ ಬಸ್ ಹರಿದು ಅಪ್ಪಚ್ಚಿಯಾಗುತ್ತಾಳೆ.
ಮತ್ತೊಂದು ವಿಸಿಟ್ಟಿಗೆ ಭೂಮಿಗೆ ಬಂದಿದ್ದ ಯಮಣ್ಣನಿಗೆ ಚಿತ್ರಗುಪ್ತನಿಂದ ಕಾಲ್ ಬರುತ್ತದೆ. ಹ್ಯಾಗಿದ್ರೂ ಭೂಮಿಗೆ ಹೋಗಿದ್ದಿಯಾ, ಅಂಗೆ ಬಸ್ ಅಪಘಾತದಲ್ಲಿ ಅಪ್ಪಚ್ಚಿಯಾದ ರಾಮಕ್ಕನನ್ನೂ ಎಳೆದುಕೊಂಡು ಬಾ. ಅನ್ಯಮಾರ್ಗವಿಲ್ಲದೆ ಪಕ್ಕದಲ್ಲೇ ಹಾದುಹೋಗುತ್ತಿದ್ದ ಯಮ ರಾಮಕ್ಕನ ಕುತ್ತಿಗೆಗೆ ಹಗ್ಗ ಹಾಕಿ ಎಳೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ, ರಾಮಕ್ಕ ಯಮಣ್ಣನನ್ನು ಮತ್ತೆ ಕೇಳುತ್ತಾಳೆ.
"ಯೋ ಯಮಣ್ಣ, ಇನ್ನೂ ಎರಡು ವರ್ಷ ನನಗೆ ಆಯಸ್ಸು ಇದೆ ಎಂದು ಹೇಳಿದ್ದೆಯಲ್ಲ. ನೀನು ಸಾಕ್ಷಾತ್ ಭಗವಂತ. ನಿನಗೆ ಅಪಾರ ಶಕ್ತಿಯಿದೆ. ನನ್ನ ದಾರಿಗೆ ಅಡ್ಡ ಬಂದ ಬಿಎಂಟಿಸಿ ಬಸ್ಸನ್ನು ನಿನ್ನ ಶಕ್ತಿಯಿಂದ ಬದಿಗೆ ಸರಿಸಲು ಸಾಧ್ಯವಿರಲಿಲ್ಲವೆ?" ಎಂದು ಆಕ್ರೋಶಭರಿತಳಾಗಿ ರಾಮಕ್ಕ ಕೇಳುತ್ತಾಳೆ.
"ಐ ಆಮ್ ರಿಯಲಿ ಸಾರಿ ರಾಮಕ್ಕ. ನನಗೆ ನಿನ್ನ ಗುರುತೇ ಸಿಕ್ಕಲಿಲ್ಲ!" ಎಂದ ಯಮಣ್ಣ ತನ್ನ ಡ್ಯೂಟಿ ಮುಂದುವರಿಸುತ್ತಾನೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಅನುಷ್ಕಾ-ಅನನ್ಯಾ ಬಿರ್ಲಾ: ನೆಟ್ಟಿಗರ ಮನಗೆದ್ದ ಆ ಹ್ಯಾಂಡ್ಶೇಕ್ ವಿಡಿಯೋ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ? ಇಲ್ಲಿದೆ ಏಪ್ರಿಲ್ 13ರ ದರಪಟ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
AI Wife: ಇಹಲೋಕ ಬಿಟ್ಟು ಡಿಜಿಟಲ್ ಲೋಕಕ್ಕೆ ಬಾ, ನನ್ನ ಸೇರು: ಎಐ ಪತ್ನಿಯ ಪ್ರೇಮಪಾಶಕ್ಕೆ ಸಿಲುಕಿ ಅಮೆರಿಕ ವ್ಯಕ್ತಿ ಆತ್ಮಹತ್ಯೆ -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು












Click it and Unblock the Notifications