ತಲೆ ತಿರುಗಿಸುವಂಥ ಎರಡು ತರಲೆ ಜೋಕ್‌ಗಳು

ರಾಮ್ : ನಾನು ನನ್ನ ಹೆಂಡ್ತಿಯನ್ನು ಎಷ್ಟೊಂದು ಪ್ರೀತಿಸ್ತೀನಿ ಗೊತ್ತಾ?

ಶಾಮ್ : ಎಷ್ಟು ಪ್ರೀತಿಸ್ತಿಯಾ?

ರಾಮ್ : ಪ್ರತಿದಿನ ಆಫೀಸಿಗೆ ಹೊರಡುವ ಮುನ್ನ ಆಕೆಯ ತುಟಿಯ ಮೇಲೆ ಮುತ್ತಿಟ್ಟೇ ನಾನು ಹೊರಡುವುದು.

ಶಾಮ್ : ನಾನೂ ಅಷ್ಟೇ ಪ್ರೀತಿಸ್ತೀನಿ ರಾಮ್.

ರಾಮ್ : ನೀನೂ ಚುಂಬಿಸ್ತಿಯಾ?

ಶಾಮ್ : ಯಸ್ ಮ್ಯಾನ್. ನೀನು ಅತ್ತ ಹೊರಟ ಮೇಲೆ ಆಕೆಯ ತುಟಿಯ ಮೇಲೆ ಚುಂಬಿಸುತ್ತೇನೆ! [ಗಂಡ ಹೆಂಡತಿ ಜೋಕ್ಸ್]

***
ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಟೀಚರ್ ಅಲ್ಮೇಡಾ ಮೇಡಂ ತನ್ನ ಕ್ಲಾಸಲ್ಲಿ ಓದುತ್ತಿರುವ ಚಿಮಣ್ ಅವರ ತಾಯಿ ಸುಲೋಚನಾಗೆ ಫೋನ್ ಮಾಡುತ್ತಾಳೆ. ಆರು ವರ್ಷದ ಚಿಮಣ್ ಮೇಲೆ ಟೀಚರ್ ಕೆಂಡಾಮಂಡಲವಾಗಿರುತ್ತಾಳೆ. ಎರಡೇ ದಿನಗಳಲ್ಲಿ ಆತನ ತರ್ಲೆತನವನ್ನು ಕಂಡು ಅಲ್ಮೇಡಾ ಮೇಡಂ ಕಂಗಾಲಾಗಿಬಿಟ್ಟಿರುತ್ತಾಳೆ.

ಅಲ್ಮೇಡಾ : ಸುಲೋಚನಾ ಅವ್ರಾ? ಏನ್ ತರ್ಲೇರೀ ನಿಮ್ಮ ಮಗಾ. ಬೇಸಿಗೆ ರಜಾ ಮುಗಿಸಿ ಎರಡು ದಿನ ಆಗಿಲ್ಲ, ಏನ್ ತರ್ಲೆ ಮಾಡ್ತಿದ್ದಾನ್ರೀ, ಕರಕೊಂಡ್ಹೋಗ್ರಿ ಅವನ್ನ.

ಸುಲೋಚನಾ : ತಡಕಳ್ರೀ, ಏನ್ ಕರ್ಕೊಂಡ್ಹೋಗೋದು. ಅವನ ತರ್ಲೆತನವನ್ನು ಬೇಸಿಗೆ ರಜೆಯಲ್ಲಿ ಎರಡು ತಿಂಗಳು ಸಹಿಸಿಕೊಂಡಿದ್ದೇನೆ. ಒಂದ್ ಸತಿಯಾದ್ರೂ ನಿಮಗೆ ದೂರು ಕೊಟ್ಟಿದ್ನಾ? (ಅಲ್ಮೇಡಾ ಮೇಡಂ ಮುಖ ಅಳು ಮತ್ತು ನಗುವಿನ ಸಂಗಮದಂತಿರುತ್ತದೆ.) [ಸ್ಟುಡೆಂಟ್ ಟೀಚರ್ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+