ಪ್ರೇಮ ತಿರಸ್ಕರಿಸಿದ ತಿಮ್ಮಿಗೆ ತಿಮ್ಮ ಕಲಿಸಿದ ಪಾಠ

ಕಾರಣಾಂತರಗಳಿಂದ ಅನೇಕ ತಿಂಗಳುಗಳ ಕಾಲ ಪ್ರಿಯತಮೆ ತಿಮ್ಮಿಯಿಂದ ದೂರವಿದ್ದ ತಿಮ್ಮನಿಗೆ ಒಂದು ದಿನ ಅದೇ ಪ್ರಿಯತಮೆಯಿಂದ ಆಘಾತಕಾರಿ ಎಸ್ಎಂಎಸ್ ಬಂದಿತ್ತು. ಅದರಲ್ಲಿ ಹೀಗೆ ಬರೆದಿತ್ತು, "ಪ್ರಿಯ ತಿಮ್ಮ, ನಿನ್ನಿಂದ ಬಹುಕಾಲ ದೂರವಿರಲು ಸಾಧ್ಯವಿಲ್ಲದ್ದರಿಂದ... ಅನಿವಾರ್ಯವಾಗಿ ನಾನು ನಿನ್ನ ಆತ್ಮೀಯ ಗೆಳೆಯ ಗುಂಡನನ್ನು ಪ್ರೀತಿಸಬೇಕಾಯಿತು, ದಯವಿಟ್ಟು ನಿನ್ನ ಬಳಿಯಿರುವ ನನ್ನ ಭಾವಚಿತ್ರ ವಾಪಸ್ ಕಳಿಸು, ಅನ್ಯಥಾ ಭಾವಿಸಬೇಡ."

ಆತ್ಮಹತ್ಯೆ ಮಾಡಿಕೊಳ್ಳುವಷ್ಟು ತಿಮ್ಮ ಹೇಡಿಯಾಗಿಲ್ಲದಿದ್ದರಿಂದ, ಆಘಾತದಿಂದ ಸಾವರಿಸಿಕೊಂಡು, ನನ್ನ ಪ್ರೀತಿಗೆ ಬೆಂಕಿ ಇಟ್ಟ ತಿಮ್ಮಿಗೆ ಬುದ್ಧಿ ಕಲಿಸಬೇಕೆಂದು ತಿಮ್ಮ ನಿರ್ಧಾರ ಮಾಡಿದ. ತನ್ನ ಸ್ನೇಹಿತರನ್ನೆಲ್ಲ ಸಂಪರ್ಕಿಸಿ, ಅವರ ಬಳಿ ಇದ್ದ ಅವರಿಗೆ ಬೇಡವಾದ ಹುಡುಗಿಯರ ಫೋಟೋಗಳನ್ನೆಲ್ಲ ಕಲೆ ಹಾಕಿದ. ಕಡೆಗೆ, ತನ್ನ ಮಾಜಿ ಪ್ರಿಯತಮೆ ತಿಮ್ಮಿಗೆ ಒಂದು ಎಸ್ಎಂಎಸ್ ಕಳಿಸಿದ.

ಅದರಲ್ಲಿ ಹೀಗೆ ಬರೆದಿತ್ತು, "ನನ್ನ ಮಾಜಿ ಪ್ರಿಯತಮೆ, ನಾನೂ ನಿನ್ನಿಂದ ಅನೇಕ ತಿಂಗಳುಗಳ ಕಾಲ ದೂರವಿದ್ದರಿಂದ ನೀನು ಹೇಗಿದ್ದಿಯಾ ಎಂಬುದೇ ಮರೆತುಹೋಗಿದೆ. ಒಂದಿಷ್ಟು ಫೋಟೋಗಳನ್ನು ಅಂಚೆ ಮೂಲಕ ನಿನಗೆ ಕಳುಹಿಸುತ್ತಿದ್ದೇನೆ. ಅದರಲ್ಲಿ ನಿನ್ನ ಫೋಟೋ ನೀನೇ ಹೆಕ್ಕಿಕೊಂಡು ಉಳಿದವುಗಳನ್ನು ನನಗೆ ವಾಪಸ್ ಕಳಿಸು! ಗುಂಡನನ್ನ ನೆನೆಸಿಕೊಂಡ್ರೆ ಪಾಪ ಅನ್ನಿಸ್ತಿದೆ!"

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+