ಸಿಕ್ಕಾಪಟ್ಟೆ ಸತ್ಯವಂತರಾಗಿದ್ದರೆ ಈ ಜೋಕ್ಸ್ ಓದಬೇಡಿ
ಮದುವೆಯಾದ ಮಧ್ಯವಯಸ್ಕನೊಬ್ಬ ತನ್ನ ಹೆಂಡತಿಯನ್ನು ಸೈಕಿಯಾಟ್ರಿಸ್ಟ್ ಬಳಿ ಕರೆದುಕೊಂಡು ಬರುತ್ತಾನೆ. ಹೆಂಡತಿಯೊಡನೆ ಸೈಕಿಯಾಟ್ರಿಸ್ ಕೌನ್ಸೆಲಿಂಗ್ ನಡೆಸಿದ ಬಳಿಕ ಗಂಡ ಆತನೊಂದಿಗೆ ಏಕಾಂತದಲ್ಲಿ ಮಾತನಾಡಬಯಸುತ್ತಾನೆ.
ಗಂಡ : ಸಾಹೇಬ್ರೆ, ನನ್ನ ಹೆಂಡತಿ ಇತ್ತೀಚೆಗೆ ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಿದ್ದಾಳೆ. ಈ ಸಮಸ್ಯೆ ದಯವಿಟ್ಟು ಪರಿಹಾರ ದೊರಕಿಸಿಕೊಡಿ.
ಸೈಕಿಯಾಟ್ರಿಸ್ಟ್ : ನಿಮಗ್ಯಾಕೆ ಈ ಅನುಮಾನ ಬಂತು?
ಗಂಡ : ನಿದ್ದೆಯಲ್ಲಿ 'ಐ ಲವ್ ಯೂ' ಅಂತ ಬಡಬಡಿಸುತ್ತಿರುತ್ತಾಳೆ!
***
ಮನಶಾಸ್ತ್ರ ಪಾಠ ಮಾಡುವ ಶಿಕ್ಷಕನೊಬ್ಬ ಮೊದಲ ದಿನ ತನ್ನ ವಿದ್ಯಾರ್ಥಿಗಳು ಎಷ್ಟು ಸತ್ಯವಂತರು, ಎಷ್ಟು ಸುಳ್ಳುಗಾರರು ಎಂದು ತಿಳಿಯಬಯಸುತ್ತಾನೆ.
"ವಿದ್ಯಾರ್ಥಿಗಳೆ, ನಿಮಗೆ ಇಂದು ಸುಳ್ಳಿನ ಬಗ್ಗೆ ಪಾಠ ಮಾಡಬೇಕೆಂದು ಬಯಸುತ್ತೇನೆ. ಪುಸ್ತಕದ 35ನೇ ಪುಟದಲ್ಲಿರುವ ಸುಳ್ಳಿನ ಕುರಿತ ಅಧ್ಯಾಯವನ್ನು ಎಷ್ಟು ಜನ ಓದಿದ್ದೀರಿ ಕೈಎತ್ತಿರಿ" ಎಂದು ವಿದ್ಯಾರ್ಥಿಗಳನ್ನು ಕೇಳುತ್ತಾರೆ.
ಕೂಡಲೆ ಎಲ್ಲ ವಿದ್ಯಾರ್ಥಿಗಳು ಕೈ ಎತ್ತುತ್ತಾರೆ.
"ವಾವ್, ಈ ಪಾಠ ಕೇಳಲು ನೀವು ತಕ್ಕ ವಿದ್ಯಾರ್ಥಿಗಳು. ಪಾಠ ಓದಿದ್ದೀರೆಂದು ಎಲ್ಲರೂ ಕೈ ಎತ್ತಿದ್ದೀರಿ ಸರಿ. ಆದರೆ, ಈ ಪುಸ್ತಕದಲ್ಲಿ ಸುಳ್ಳಿನ ಕುರಿತು ಯಾವುದೇ ಅಧ್ಯಾಯವೇ ಇಲ್ಲ!"












Click it and Unblock the Notifications