ಪೆಟ್ರೋಲ್ ವಾಸ್ನಿ ಐತ್ರಿ? ಹಂಗಾರ ಅದು ಚಾನರಿ!
ಮಾಂತ್ಯಾ ಮತ್ತು ಶಿವ್ಯಾ ಟ್ರೆಕ್ಕಿಂಗ್ ಹೋಗಿರ್ತಾರ. ನಡದು ನಡದು ಸುಸ್ತಾಗಿ ಚಾ ಕುಡ್ಯೋಣು ಅಂತ ನಜದೀಕ ಇದ್ದ ಕಾಕಾನ ಅಂಗಡಿಗೆ ಬರ್ತಾರ.
ಮಾಂತ್ಯಾ : ಕಾಕಾ, ಎರಡ್ ಆಪ್ ಚಾ ಕೊಡೊ.
ಕಾಕಾ ಬಂದು ಎರಡು ಸಣ್ಣು ಸ್ಟೀಲ ವಾಟಗಾದಾಗ ಎರಡ್ ಆಪ್ ಚಾ ಕೊಡ್ತಾನ. ಮಾಂತ್ಯಾ ಸೊರ್ ಅಂತ ಚಾ ಎಳೀತಾನ. ಒಂಥರಾ ರುಚಿ ಹತ್ತಿ ಮುಸಡಿ ಸೊಟ್ ಮಾಡ್ತಾನ.
ಶಿವ್ಯಾ : ಯಾಕ್ಲೇ ಮಾಂತ್ಯಾ ಚಾ ಚಲೋ ಇಲ್ಲೇನ?
ಮಾಂತ್ಯಾ : ಚಾದಾಗ ಏನ ಹಾಕ್ಯಾನಲೇ ಇವನೌನ. ಚಾನೋ, ಕಾಪಿನೋ ಒಂದೂ ಗೊತ್ತಾಗವಲ್ತು. ಒಂಥರಾ ಪೆಟ್ರೋಲ್ ವಾಸ್ನಿ ಬರಾಕತ್ತೈತಿ.
ಶಿವ್ಯಾನೂ ಹಂಗ ಸೊರ್ ಅಂತ ಎಳೀತಾನ, ಅವಂಗೂ ಹಂಗ ಅನಸತೈತಿ.
ಶಿವ್ಯಾ : ಏ ಕಾಕಾ ಬಾರೋ ಇಲ್ಲಿ. ಇದೇನ ಚಾನೋ ಗೀನೋ ಕಾಪೀನೋ ಮಣ್ಣೋ. ಒಂಥರಾ ಪೆಟ್ರೋಲ್ ವಾಸ್ನಿ ಬರಾಕತ್ತೈತಿ.
ಕಾಕಾ : ಪೆಟ್ರೋಲ್ ವಾಸ್ನಿ ಬರಾಕತ್ತೈತ್ರ್ಯ? ಹಂಗಾರ ಅದು ಚಾನರಿ. ಕಾಪಿ ಆಗಿದ್ರ ಡೀಸೆಲ್ ವಾಸ್ನಿ ಬರತಿತ್ರಿ!
***
ಎಂಟ ಮಕ್ಳ ಅಪ್ಪನಾಗಿದ್ದ ಮೇಟ್ಯಾಗ ಒಂದ್ ಸತಿ ಡೀಸೆಂಟ್ರಿ ಹತ್ತಿರತೈತಿ. ಇಡೀ ದಿನ ಓಡಾಡಿದ್ದ ಓಡಿಡಿದ್ದು. ಕಡೀಕ ಒಂಬತ್ತನೇ ಬಾರಿ ಗಬ್ ಆಗಿದ್ದ ಶಬ್ಬು ಜೊತೆ ಸಂಜಿಮುಂದ ಡಾಕ್ಟ್ರ ಹತ್ರ ಹೋಗತಾನ.
ಡಾಕ್ಟ್ರು ಅವನನ್ನು ಚೆಕಪ್ ಮಾಡಿ, "ಡಿಡ್ ಯೂ ಟ್ರೈ ಲೆಮನ್ ಥೆರಪಿ" ಅಂತ ಕೇಳ್ತಾರ.
"ಟ್ರೈ ಮಾಡಿನ್ನಿರೀ. ಥೆರಪಿ ಮಾಡೋಮುಂದ ಸರಿ ಇರತೈತ್ರಿ, ತಗದ್ ಕೂಡ್ಲೆ ಮತ್ತ ಶುರು ಆಗತೈತ್ರಿ ಅವನೌನ!"












Click it and Unblock the Notifications