ಯಮನ ಬೇಸ್ತು ಬೀಳಿಸಿಲು ಹೋಗಿ ಪ್ಲಾನ್ ಉಲ್ಟಾ!

ಸುಬ್ಬು ಯದ್ವಾತದ್ವಾ ನಿದ್ದೆಯಲ್ಲಿ ಮುಳುಗಿರುತ್ತಾನೆ. ಸಣ್ಣಪುಟ್ಟ ಶಬ್ದಗಳಿಗೆ ಏಳುವಂತಹ ಮನುಷ್ಯನೇ ಅಲ್ಲ. ಮುಸುಕಿ ಹಾಕಿ ಮಲಗಿದವನನ್ನು ಒಂದು ಆಕೃತಿ ಬಂದು ಮೆಲ್ಲಗೆ ತಟ್ಟಿ ಎಬ್ಬಿಸುತ್ತದೆ. ಜಪ್ಪಯ್ಯ ಅಂದ್ರೂ ಏಳುವುದಿಲ್ಲ. ಮುಸುಕನ್ನು ಎಳೆದು ಪಕ್ಕಕ್ಕೆ ಎಸೆದರೂ ಸುಬ್ಬು ಗುರುಗುರು ನಿದ್ದೆಯಲ್ಲಿ ತೊಡಗಿರುತ್ತಾನೆ.

ಕಡೆಗೆ ತಲೆ ಮೇಲೆ ಪಟ್ಟಂತ ಸ್ವಲ್ಪ ಜೋರಾಗಿಯೇ ತಟ್ಟಿದಾಗ, ಯಾರು ಯಾರು ಎಂದು ಥಟ್ಟಂತ ಎದ್ದುಬಿಡುತ್ತಾನೆ. ಎಲ್ಲೆಲ್ಲೂ ಕತ್ತಲು. ಆ ಕತ್ತಲನ್ನೇ ಸೀಳಿಕೊಂಡು ಬಂದಂತಹ ಆಕೃತಿಯೊಂದು ಸುಬ್ಬುವಿನ ಗಮನಕ್ಕೆ ಬರುತ್ತದೆ. ಕಣ್ಣನ್ನು ಒಮ್ಮೆ ಉಜ್ಜಿಕೊಂಡು, ಕತ್ತಲೆಗೆ ದೃಷ್ಟಿಯನ್ನು ಅಡ್ಜಸ್ಟ್ ಮಾಡಿಕೊಂಡು ನೋಡುತ್ತಾನೆ... ಪಕ್ಕದಲ್ಲೇ ತಲೆಮೇಲೆ ಕಿರೀಟ ಹೊತ್ತು ಕೋಣದ ಮೇಲೆ ಕುಳಿತ ಯಮರಾಜ ನಿಂತುಬಿಟ್ಟಿದ್ದಾನೆ.

ಜಂಘಾಬಲವೇ ಉಡುಗಿಹೋದಂತಾಗುತ್ತದೆ ಸುಬ್ಬುವಿಗೆ. ಈವಯ್ಯ ಇಲ್ಯಾಕೆ ಬಂದ ಎಂದು ತಬ್ಬಿಬ್ಬಾಗುತ್ತಾನೆ. ಆದರೆ ಧೈರ್ಯ ಕಳೆದುಕೊಳ್ಳುವುದಿಲ್ಲ. ಎದುರಿಸಿಯೇ ಬಿಡೋಣ ಎಂದು ಸುಬ್ಬು ನಿರ್ಧರಿಸುತ್ತಾನೆ. [ಓದಲು ಮರೆಯದಿರಿ : ಯಮಣ್ಣನ ಪೀಕಲಾಟ ಎಂಬ ಹಾಸ್ಯ ಲೇಖನ]

"ಯಾರು ನೀನು? ಏನು ಬೇಕಾಗಿತ್ತು? ಇಷ್ಟೊತ್ತಲ್ಯಾಕೆ ಬಂದೆ? ವಿಳಾಸ ತಪ್ಪಿ ಇಲ್ಲಿಗೇನಾದರೂ ಬಂದಿದ್ದೆಯಾ?" ಎಂದು ಪ್ರಶ್ನೆಗಳ ಮಳೆಯನ್ನೇ ಸುರಿಸುತ್ತಾನೆ ಸುಬ್ಬು.

"ಹಾದಿ ತಪ್ಪೇನು ಬಂದಿಲ್ಲ. ಸರಿಯಾಗಿಯೇ ಬಂದಿದ್ದೇನೆ. ಏಳು ಏಳು, ನಿನ್ನ ಸಮಯ ಬಂದಿದೆ. ನಡೆ ನನ್ನ ಜೊತೆ ನರಕಕ್ಕೆ. ನೋಡಿಲ್ಲಿ ಲಿಸ್ಟಲ್ಲಿ ನಿನ್ನ ಹೆಸರೇ ಮೊದಲಲ್ಲಿದೆ" ಎಂದು ಗಡಸಿನ ದನಿಯಲ್ಲಿ ಆದರೆ ಅಚ್ಚ ಕನ್ನಡದಲ್ಲಿ ಯಮಧರ್ಮರಾಯ ಸುಬ್ಬುವನ್ನು ಹೇಳುತ್ತಾನೆ.

"ವಾಟ್? ನಾನಿನ್ನೂ ರೆಡಿಯಾಗಿಲ್ಲ. ಕೈಕಾಲಿಗೆ ಹೋಗಿಲ್ಲ, ಹಲ್ಲು ಉಜ್ಜಿಲ್ಲ, ಸ್ನಾನ ಮಾಡಿಲ್ಲ. ಏನಾದರೂ ತಗೊಳ್ತೀಯಾ? ಟೀ ಕಾಫಿ ಹಾಲು ಅಥವಾ ಸಿಕ್ಸ್‌ಟಿ ಹಾಟ್?" ಎಂದು ಶಾಂತವಾಗಿಯೇ ಕೇಳುತ್ತಾನೆ.

ಅವನ ಮಾತಿಗೆ ನಕ್ಕ ಯಮ "ನನಗೆ ಬರೀ ಅಮೃತ ಕುಡಿದು ಅಭ್ಯಾಸ. ಸರಿ, ಕಾಫಿ ಕೊಡು ನೋಡೋಣ" ಎಂದು ನುಡಿಯುತ್ತಾನೆ. ತನ್ನ ಪ್ಲಾನ್ ಸಕ್ಸಸ್ ಆಗಿದ್ದಕ್ಕೆ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಾನೆ ಸುಬ್ಬು.

ಸಿಕ್ಕಿದ್ದೇ ಚಾನ್ಸ್ ಅಂದು ಕಾಫಿಯಲ್ಲಿ ಎರಡು ನಿದ್ದೆ ಮಾತ್ರೆ ಮಿಕ್ಸ್ ಮಾಡಿ ಯಮನಿಗೆ ಕೊಟ್ಟುಬಿಡುತ್ತಾನೆ. ಯಮಣ್ಣ ಕುಡಿದು ಕೋಣದ ಮೇಲೆಯೇ ನಿದ್ದೆ ಹೋಗಿಬಿಡುತ್ತಾನೆ. ಅಷ್ಟರಲ್ಲಿ ಯಮನ ಬಳಿಯಿದ್ದ ಲಿಸ್ಟನ್ನು ಕಿತ್ತುಕೊಂಡ ಸುಬ್ಬು ಮೊದಲಿದ್ದ ತನ್ನ ಹೆಸರನ್ನು ಅಳಿಸಿಹಾಕಿ ಕೊನೆಯಲ್ಲಿ ಹಾಕಿಬಿಡುತ್ತಾನೆ. ಇಷ್ಟೆಲ್ಲ ಮುಗಿಯುವ ಹೊತ್ತಿಗೆ ಒಂದು ಜೊಂಪು ನಿದ್ದೆಯಿಂದ ಯಮ ಎದ್ದುಬಿಡುತ್ತಾನೆ.

"ಏನ್ ಕಾಫಿ ಕಣ್ಲಾ ಅದು. ಇಂಥ ನಿದ್ದೆ ನನ್ನ ಜನ್ಮದಲ್ಲೇ ಅನುಭವಿಸಿಲ್ಲ. ಸುಬ್ಬು ನನ್ ಮಗನೆ, ನಿನ್ನ ಆದರದಿಂದ ನಾನು ಸಂಪ್ರೀತನಾಗಿದ್ದೇನೆ. ನಿನ್ನನ್ನು ಈಗ ಕರೆದುಕೊಂಡು ಹೋಗುವ ಬದಲು ಕೊನೆಗೆ ಕರೆದುಕೊಂಡು ಹೋಗುತ್ತೇನೆ. ಈಗ ಈ ಲಿಸ್ಟಿನ ಕೊನೆಯಿಂದ ಪ್ರಾರಂಭಿಸುತ್ತೇನೆ. ಆಗ ನಿನ್ನ ಹೆಸರು ಕಡೆಗೆ ಬರುತ್ತದೆ. ಆಗಬಹುದಾ?" ಎಂದು ಹೇಳುವಷ್ಟರಲ್ಲಿ ಸುಬ್ಬುವಿಗೆ ಕಣ್ಣು ಕತ್ತಲೆ ಬಂದಂತಾಗಿ ತಲೆತಿರುಗಿ ಬಿದ್ದುಬಿಡುತ್ತಾನೆ. [ಸುಬ್ಬು ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+