ಕಳ್ಳರು ಜಾಣರೋ ದಡ್ಡರೋ? ಪತ್ತೆದಾರಿ ಸುಬ್ಬುನ ಕೇಳಿ
ಸುಬ್ಬು ಪತ್ತೆದಾರಿ ಕೆಲಸಕ್ಕೆಂದು ಅರ್ಜಿ ಗುಜರಾಯಿಸಿದ್ದ. ಒಂದು ದಿನ ಟಿಪ್‌ಟಾಪ್ ಆಗಿ ಸಂದರ್ಶನಕ್ಕೆಂದು ಹಾಜರಾದ. ನೋಡಲು ಮಂಕನಂತೆ ಕಂಡರೂ ಬುದ್ಧಮತ್ತೆ ಹೇಗಿದೆಯೆಂದು ಪರೀಕ್ಷಿಸಬೇಕೆಂದು ಪತ್ತೆದಾರಿ ಸಂಸ್ಥೆಯ ಮಾಲಿಕ ನಿರ್ಧರಿಸಿದ.
ಮಾಲಿಕ : ಕಳ್ಳತನವಾದ ಮೇಲೆ ಪತ್ತೆದಾರಿಗಳು ಎಂತಹ ಕುರುಹಿಗಾಗಿ ನೋಡುತ್ತಾರೆ?
ಸುಬ್ಬು : ಫಿಂಗರ್ ಪ್ರಿಂಟ್ ನೋಡ್ತಾರಾ ಸಾ.
ಮಾಲಿಕ : ಪರವಾಗಿಲ್ಲ, ಜಾಣ ಇದ್ದೀಯಾ. ಆದರೆ, ಕಳ್ಳತನ ಮಾಡಿದ ಮೇಲೆ ಕಳ್ಳರೆಲ್ಲರೂ ಬೆರಳಿನ ಗುರುತನ್ನು ಯಾಕೆ ಬಿಟ್ಟು? ಹೋಗುತ್ತಾರೆ?
ಸುಬ್ಬು : ಅಷ್ಟೂ ಗೊತ್ತಿಲ್ವಾ ಸಾ. ಕಳ್ಳರು ಮಹಾ ದಡ್ಡರಿರುತ್ತಾರೆ.
ಮಾಲಿಕ : ದಡ್ಡರಾಗಿರ್ತಾರಾ?
ಸುಬ್ಬು : ಮತ್ತೇನಿನ್ಸಾ. ಅವರೇನಾದರೂ ಜಾಣರಾಗಿದ್ದರೆ ಬೆರಳಿನ ಗುರುತು ಏಕೆ ಬಿಟ್ಟು ಹೋಗಿರುತ್ತಿದ್ದರು? ಜಾಣರಾಗಿದ್ದರೆ ಸಹಿ ಮಾಡಿ ಹೋಗಿರುತ್ತಿದ್ದರು!












Click it and Unblock the Notifications