ಜೀಪುಣ ಸಿದ್ದೇಶಿ ಹಾಗೂ ಆಂಜನೇಯ ಗುಡಿ, ತಂದೆ-ಮಗನ ಅವಾಂತರ

ಬಳಲಿದ ಜೀವಗಳಿಗೆ ಹಾಸ್ಯ ಎನ್ನುವುದು ಯಾವಾಗಲು ಟಾನಿಕ್ ಇದ್ದ ಹಾಗೇ. ಜಂಜಾಟಗಳನ್ನು ಬಿಟ್ಟು ನಮ್ಮ ಜೀವನದಲ್ಲಿ ನಡೆಯುವ ಸಂಗತಿಗಳೇ ನಮಗೆ ಹಾಸ್ಯವಾಗಿ ಕಾಣುತ್ತವೆ. ಇಂತಹದೇ ಎರಡು ಜೋಕ್‌ಗಳು ಇಲ್ಲಿ ಕೊಡಲಾಗಿದೆ.. ನಕ್ಕು ಹಗರಾಗಿರಿ...

ಜಿಪುಣ ಸಿದ್ದೇಶಿ ಮೊದಲ ಬಾರಿಗೆ ತನಗೆ ಕೆಲಸದಲ್ಲಿ ಬಡ್ತಿ ದೊರೆತ ಕಾರಣ ಬೆಂಗಳೂರಿನ ಕೋಟೆ ಆಂಜನೇಯನ ಗುಡಿಗೆ ದರ್ಶನಕ್ಕೆ ಹೋಗಿದ್ಧ. ಶನಿವಾರವಾದ ಕಾರಣ ವಿಪರೀತ ಜನ ಜಮಾಯಿಸಿದ್ದರು.

ಪೂಜೆಮುಗಿದು ಆರತಿತಟ್ಟೆ ಆತನಬಳಿ ಭಟ್ಟ ತರುತ್ತಿದ್ದಂತೆ ಸಿದ್ದೇಶಿ ಜೋಬೆಲ್ಲಾ ತಡಕಾಡಿ 1 ರೂಪಾಯಿ ನಾಣ್ಯತೆಗೆದು ಕಸಿವಿಸಿಯಿಂದಲೇ ಅದನ್ನು ಆರತಿ ತಟ್ಟೆಗೆ ಹಾಕಿದ.....

Son And Father Jokes In Kannada

ಇತರರು 10 ರೂ, 50 ರೂ, 100 ರೂ ಹಾಕುತ್ತಿರುವುದನ್ನು ನೋಡಿ ಸಿದ್ದೇಶಿಗೆ ತಾನು ಹಾಕಿದ್ದು ಕಡಿಮೆ ಆಯ್ತು ಎಂದು ಅನಿಸತೊಡಗಿತು.

ಹಿಂದೆ ನಿಂತ ಸಾಧಾರಣ ಉಡುಪಿನ ಮಹಿಳೆಯೋರ್ವಳು ದೂರವಿದ್ದ ಕಾರಣ ಅವಳಿಗೆ ಆರತಿ ತಟ್ಟೆ ಕೈ ಎಟುಕುತ್ತಿರಲಿಲ್ಲ. ಅವಳು ಕೈಚಾಚುತ್ತ ಮುಂದೆ ನಿಂತ ಸಿದ್ದೇಶಿಯತ್ತ 2000 ರೂಪಾಯಿನ ನೋಟು ಹಿಡಿದಾಗ, ಸಿದ್ದೇಶಿ ಅದನ್ನು ಪಡೆದು ತಕ್ಷಣವೇ ಆರತಿ ತಟ್ಟೆಗೆ ಹಾಕಿದ. ಪೂಜಾರಿ ಭಟ್ಟರು ಧನ್ಯತಾ ಭಾವದಿಂದ ಸಿದ್ದೇಶಿಯತ್ತ ನೋಡಿ ಮುಗುಳ್ನಕ್ಕು ಸಿದ್ದೇಶಿಗೆ ಲಾಡು ಪ್ರಸಾದದ ಒಂದು ಪೊಟ್ಟಣ ನೀಡಿದರು. ಸಿದ್ದೇಶಿಗೆ ಒಳಗೊಳಗೆ ಖುಷಿ, ಯಾರೋ ಮಾಡಿದ ದಾನಕ್ಕೆ ತನಗೆ ಫಲ ಸಿಗುತ್ತಿದೆಯಲ್ಲ ಎಂದು !!!

ಹೊರಗೆ ಬಂದಾಗ 2000 ರೂಪಾಯಿ ದಾನ ಮಾಡಿದ ಹೆಂಗಸು ಎದುರಾದಾಗ ಸಿದ್ದೇಶಿಗೆ ಅವಳಿಗೆ -

" ತಗೋಳಿ ತಾಯಿ ಈ ಲಾಡು ಪ್ರಸಾದ. ನಿಜಕ್ಕೂ ಇದು ನಿಮಗೆ ತಲುಪಬೇಕಾದ್ದು. ಭಟ್ಟರು ಆ 2000 ರೂ ಹಣ ನಾನು ಹಾಕಿದ್ದು ಎಂದು ಭಾವಿಸಿ ನನಗೆ ಲಾಡು ಪ್ರಸಾದ ನೀಡಿದರು" ಎಂದಾಗ ಆ ಹೆಂಗಸು - " ಯಾವ 2000 ರೂಪಾಯಿ ??? ಆ 2000 ರೂಪಾಯಿ ನನ್ನದಲ್ಲ. ನೀವು ಜೋಬಿನಿಂದ ಚಿಲ್ಲರೆ ತೆಗೆಯುವಾಗ ಕೆಳಗೆ ಬೀಳಿಸಿ ಕೊಂಡದ್ದು. ಅದನ್ನು ನಾನು ನಿಮಗೆ ತೆಗೆದು ಕೊಟ್ಟೇ ಅಷ್ಟೇ!"

ಇದಕ್ಕೇ ಅನ್ನೋದು...

ಅಯ್ಯೋ ದುರ್ವಿಧಿಯೇ

ಅಪ್ಪ ಅಪ್ಪಾ ನೇ... ಮಗಾ ಮಗಾ ನೇ..

--------

ಒಂದು ಸಲ ಒಬ್ಬ ತಂದೆ ಅವರ ಮಗನನ್ನು ಭೇಟಿಯಾಗಲು ಹೋದರು.

ಅಲ್ಲಿ ಅವರ ಮಗನ ಜೊತೆ ಒಂದು ಸುಂದರವಾದ ಹುಡುಗಿ ಕೂಡ ಇದ್ದಳು.ಮೂವರು ಊಟಕ್ಕೆ ಕುಳಿತಾಗ.

ತಂದೆ : ಮಗ ನಿನ್ನ ಜೊತೆ ಇರೋ ಈ ಹುಡುಗಿ ಯಾರು ?

ಮಗ : ಅಪ್ಪ ಇವಳು ನನ್ನ ರೂಮ್ ಪಾರ್ಟ್ನರ್,

ನನ್ನ ಜೊತೆನೇ ಇರ್ತಾಳೆ, ನಂಗೊತ್ತು ನೀವು ಏನು ಯೋಚನೆ ಮಾಡ್ತಿದ್ದೀರಾ ಅಂತ ಆದರೆ, ಆ ತರ ನಮ್ಮ ಮಧ್ಯ ಏನು ಇಲ್ಲ ನಾವು ಬೇರೆ ಬೇರೆ ಕೋಣೆಯಲ್ಲಿ ಮಲಗುತ್ತಿವಿ. ನಾವಿಬ್ಬರು ಒಳ್ಳೆ ಗೆಳೆಯರು.

ಅಪ್ಪ : ಆಯ್ತು ಮಗನೆ ಚೆನ್ನಾಗಿರಿ ಅಂತ ಹೇಳಿ ಮರಳಿ ಅವರ ಊರಿಗೆ ಹೋಗುತ್ತಾರೆ.

ಒಂದು ವಾರದ ನಂತರ.

ಹುಡುಗಿ : ನೋಡು ಹೋದ ವಾರ ನಿಮ್ಮಪ್ಪ ಬಂದಿದ್ದ ಅವರು ಹೋಗುವಾಗ ಆವತ್ತು ಅವರು ಊಟ ಮಾಡಿದ ತಟ್ಟೆ ಕಾಣುತ್ತಿಲ್ಲ, ನನಗನಿಸುತ್ತಿದೆ ಅವರೇ ಕಳ್ಳತನ ಮಾಡಿಕೊಂಡು ಹೋಗಿರಬೇಕು.

ಹುಡುಗ : ನೀ ಏನು ಮಾತನಾಡ್ತಿದೀಯ ಗೊತ್ತಾ ?

ನಮ್ಮಪ್ಪ ಅಂತ ಕೆಲಸ ಮಾಡಲ್ಲ.

ಹುಡುಗಿ : ಇರಬಹುದು ಒಂದು ಸಲ ನಿಮ್ಮಪ್ಪನಿಗೆ ಕೇಳಿ ನೋಡು ಗೊತ್ತಾಗುತ್ತೆ.

ಹುಡುಗ : ಸರಿ ನೋಡೋಣ ನಾನು ಅವರಿಗೆ ಪತ್ರ ಬರೆಯುತ್ತೇನೆ..

ಪೂಜ್ಯ ತಂದೆಯವರಿಗೆ ಅಪ್ಪಾ ನಾನು ನಿಮಗೆ ಈ ತರ ಹೇಳ್ತೀನಿ ಅಂತ ಬೇಜಾರಾಗಬೇಡಿ ನಮ್ಮ ರೂಮಿನಲ್ಲಿ ಒಂದು ತಟ್ಟೆ ಕಳ್ಳತನ ಆಗಿದೆ ನೀವು ಹೋಗುವಾಗ ಗೊತ್ತಿಲ್ಲದೆ ತಗೊಂಡು ಹೋಗಿದ್ರೆ ವಾಪಸ್ ಕಳಿಸಿಕೊಡಿ ಯಾಕಂದ್ರೆ ಆ ಪ್ಲೇಟ್ ಆ ಹುಡುಗಿಯದು

ಇಂತಿ ನಿಮ್ಮ ಮಗ.

ಆ ಪತ್ರ ಓದಿದ ತಂದೆ ಮಗನಿಗೆ ಪತ್ರ ಬರೆಯುತ್ತಾನೆ

ಪ್ರೀತಿಯ ಮಗನಿಗೆ

ಮಗನೇ ನಾನು ಈ ತರ ಹೇಳ್ತೀನಿ ಅಂತ ಬೇಜಾರಾಗಬೇಡ

ನಿನ್ನ ರೂಮಿನಲ್ಲಿ ನಿನ್ನ ರೂಮ್ ಪಾರ್ಟ್ನರ್ ನಿನ್ನ ಜೊತೆನೆ ಮಲಗುತ್ತಾಳೆ ಎಂದು ನಾನು ಹೇಳಿಲ್ಲ,ಆದರೆ ಒಂದು ವಾರದಿಂದ ಆ ಹುಡುಗಿ ಅವಳ ಕೋಣೆಯಲ್ಲಿ ಅವಳ ಹಾಸಿಗೆಯಲ್ಲಿ ಮಲಗಿದ್ರೆ ಗೊತ್ತಾಗುತ್ತಿತ್ತು ನಾನು ಮುಚ್ಚಿ ಇಟ್ಟಿದ ಅವಳ ತಟ್ಟೆ ಅವಳ ತಲೆದಿಂಬಿನ ಕೆಳಗಡೆನೆ ಇದೆ ಅಂತ.

ಇಂತಿ ನಿನ್ನ ಪೂಜ್ಯ ತಂದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+