ರನ್ನಿಂಗ್ ರೇಸಲ್ಲಿ ರಜನಿ ಫಸ್ಟ್! ಸೆಕೆಂಡ್ ಯಾರು?
* ರಜನಿಕಾಂತ್‌ಗೆ ಅಚಾನಕ್ಕಾಗಿ ಹಾರಿದ ಗುಂಡು ತಗುಲಿದ್ದರಿಂದ ಗುಂಡಿನ ಸಾವು! ಮರುದಿನ ಗುಂಡಿನ ಅಂತ್ಯಸಂಸ್ಕಾರ!
* ಪಾಕಿಸ್ತಾನದಲ್ಲಿನ ಭಯೋತ್ಪಾದಕನನ್ನು ರಜನಿಕಾಂತ್ ಇಲ್ಲಿಂದಲೇ ಸಾಯಿಸಿದ್ದು ಹೇಗೆ ಗೊತ್ತಾ? ಬ್ಲೂಟೂತ್ ಮುಖಾಂತರ!
* ತ್ರಿಜ್ಯ ಬಳಸಿ ನೇರವಾದ ಗೆರೆ ಎಳೆಯುವುದು ರಜನಿಕಾಂತ್‌ಗೆ ಮಾತ್ರ ಸಾಧ್ಯ.
* ರಜನಿಕಾಂತ್ ನಾಡಿಮಿಡಿತವನ್ನು ರಿಕ್ಟರ್ ಮಾಪಕದಿಂದ ಅಳೆಯುತ್ತಾರೆ.
* ರುಪಾಯಿ ಹೊಸ ಚಿಹ್ನೆ ಮತ್ತೇನೂ ಅಲ್ಲ, ಅದು ರಜನಿಕಾಂತ್ ಸಹಿ.
* ಮೇಡಂ ತೌಸಡ್ಸ್ ಪ್ರತಿಮೆಯನ್ನೇ ರಜನಿಕಾಂತ್ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದಾರೆ.
* ಒಂದು ರನ್ನಿಂಗ್ ರೇಸ್‌ನಲ್ಲಿ ರಜನಿ ಭಾಗವಹಿಸಿದ್ದರು. ಸಹಜವಾಗಿ ಅವರೇ ಮೊದಲಿಗರಾದರು. ಇದನ್ನು ನೋಡುತ್ತಿದ್ದ ಐನ್‌ಸ್ಟೀನ್ ಹಠಾತ್ತನೆ ಸಾವಿಗೀಡಾದರು. ಯಾಕೆ ಗೊತ್ತೆ. ಎರಡನೇ ಸ್ಥಾನ ಪಡೆದದ್ದು ಬೆಳಕು.
* ನ್ಯೂಟನ್‌ನ ತಲೆಯ ಮೇಲೆ ಸೇಬು ಬಿದ್ದಿದ್ದು ಆಕಸ್ಮಿಕವಲ್ಲ, ಅದನ್ನು ಎಸೆದದ್ದು ರಜನಿಕಾಂತ್.
* ರಜನಿಕಾಂತ್ 5 ಬೇರೆಬೇರೆ ಭಾಷೆಗಳಲ್ಲಿ ಶಿಳ್ಳೆ ಹೊಡೆಯಬಲ್ಲರು. ನಿಮಗೆ ಸಾಧ್ಯವಾ?
* ಮೊನಾಲಿಸಾ ನಗುವಿನ ರಹಸ್ಯ ಇನ್ನೂ ಭೇದಿಸಲಾಗಿಲ್ಲ. ಆದರೆ, ಆ ರಹಸ್ಯ ರಜನಿಕಾಂತ್‌ಗೆ ಮಾತ್ರ ಗೊತ್ತು.
* ಅಂತಾರಾಷ್ಟ್ರೀಯ ನಳಪಾಕ ಸ್ಪರ್ಧೆಯಲ್ಲಿ ಭಾಗವಹಿಸಿ ರಜನಿಕಾಂತ್ ಮೊದಲನೇ ಸ್ಥಾನ ಪಡೆದರು. ಅವರು ಮಾಡಿದ ಸ್ವಾದಿಷ್ಟ ತಿನಿಸು ಯಾವುದು ಗೊತ್ತಾ? ಖಾರದ ಮೆಣಸಿನಕಾಯಿಯಿಂದ ಮಾಡಿದ ಸಿಹಿ ಖೀರು!












Click it and Unblock the Notifications