• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೋಡಿ ಅಲ್ಲಿ, ಸುಂದರ ರಿಸೆಪ್ಶನಿಸ್ಟ್ ಒಬ್ಬಳೇ ಕುಳಿತಿದ್ದಾಳೆ!

|

ಮಿಟಕಲಾಡಿ ಮೀನಾಕ್ಷಿ ನುರಿತ ವೈದ್ಯರ ಬಳಿ ತಪಾಸಣೆಗೆಂದು ಹೋಗಿರುತ್ತಾರೆ. ವೈದ್ಯರು ಗಂಡನನ್ನು ಹೊರಗೆ ಕೂಡಿಸಿ ಹೆಂಡತಿಯನ್ನು ಮಾತ್ರ ತಮ್ಮ ಕೋಣೆಯೊಳಗೆ ತಪಾಸಣೆಗೆಂದು ಕರೆಸಿಕೊಳ್ಳುತ್ತಾರೆ. ಹೆಂಡತಿಗೆ ಇದ್ದಕ್ಕಿದ್ದಂತೆ ತಳಮಳ ಆರಂಭವಾಗಿಬಿಡುತ್ತದೆ.

ಹೆಂಡತಿ : ಡಾಕ್ಟ್ರೆ, ದಯವಿಟ್ಟು ನನ್ನ ಗಂಡನನ್ನು ಕೋಣೆಯೊಳಗೆ ಕರೆಸಿಕೊಳ್ಳಿ.

ವೈದ್ಯ : (ಆಕೆಯ ಮನದಲ್ಲೇನಿರಬಹುದು ಎಂಬುದು ಅರ್ಥ ಮಾಡಿಕೊಂಡು) ನೀವೇನು ಹೆದರಿಕೊಳ್ಳಬೇಕಿಲ್ಲ. ನಾನು ಜಂಟಲ್‌ಮನ್ ವೈದ್ಯ ಅಂತಾನೇ ಫೇಮಸ್ಸು.

ಹೆಂಡತಿ : ಅಯ್ಯೋ ನಿಮ್ಮ ಬಗ್ಗೆ ನನಗೇನೂ ಅನುಮಾನವಿಲ್ಲ. ನನ್ನ ಗಂಡನ ಮೇಲೆಯೇ ನನಗೆ ನಂಬಿಕೆಯಿಲ್ಲ. ನೋಡಿ ಅಲ್ಲಿ, ಸುಂದರವಾಗಿರುವ ರಿಸೆಪ್ಶನಿಸ್ಟ್ ಒಬ್ಬಳೇ ಕುಳಿತಿದ್ದಾಳೆ. [ಕಾಮಿನಿ, ಭಾಮಿನಿ, ಯಾರ್ನಾದ್ರೂ ಲವ್ ಮಾಡ್ಕೊ]

***

ಮಹಿಳೆಯೊಬ್ಬರು ಮಗುವನ್ನು ಕರೆದುಕೊಂಡು ಡಾಕ್ಟರ್ ಶಾಪಿಗೆ ಹೋಗಿರುತ್ತಾರೆ. ಸ್ವಲ್ಪ ಸಮಯದ ನಂತರ ಡಾಕ್ಟರ್ ಬಂದು ಮಗುವನ್ನು ಮಲಗಿಸಿ ಸಮಗ್ರವಾಗಿ ಪರೀಕ್ಷೆ ಮಾಡುತ್ತಾರೆ.

ವೈದ್ಯ : ಮಗುವಿಗೆ ಸ್ತನ್ಯಪಾನ ಮಾಡಿಸುತ್ತೀರೋ, ಬಾಟಲ್ ಹಾಲು ಕುಡಿಸುತ್ತೀರೋ?

ಮಹಿಳೆ : ಸ್ತನ್ಯಪಾನ ಡಾಕ್ಟ್ರೆ.

ವೈದ್ಯ : ನಿಮ್ಮನ್ನು ಸ್ವಲ್ಪ ಪರೀಕ್ಷಿಸಬೇಕಲ್ಲ. ಮೇಲುಡುಪನ್ನು ತೆಗೆಯಬೇಕು.

ಮಹಿಳೆ : ನನ್ನನ್ನ ಯಾಕೆ ಡಾಕ್ಟ್ರೆ?

ವೈದ್ಯ : ಸುಮ್ಮನೆ ಹೇಳಿದ ಹಾಗೆ ಮಾಡ್ರಿ.

ವೈದ್ಯರು ಸಿಡುಕಿದರೂ ಅವರು ಹೇಳಿದ ಹಾಗೆ ಮಾಡಿದರಾಯಿತೆಂದು ಆ ಸುಂದರ ಮಹಿಳೆ ವಿವಸ್ತ್ರಳಾಗುತ್ತಾಳೆ. ವೈದ್ಯರು ಆಕೆಯನ್ನು ಅಮೂಲಾಗ್ರವಾಗಿ ಪರೀಕ್ಷಿಸುತ್ತಾರೆ.

ವೈದ್ಯ : ಮಗು ತೂಕ ಕಳೆದುಕೊಂಡಿರುವುದು ಸಹಜವೇ. ನಿಮ್ಮ ಎದೆಯಲ್ಲಿ ಹಾಲೇ ಇಲ್ಲ!

ಮಹಿಳೆ : (ಕೋಪದಿಂದ) ನನಗೆ ಗೊತ್ತು, ನಾನು ಆ ಮಗುವಿನ ಚಿಕ್ಕಮ್ಮ! [ಇನ್ನಷ್ಟು ಡಾಕ್ಟರ್ ಜೋಕ್ಸ್]

English summary
Weekend special, some doctor jokes. Laughter is the best medicine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X