ಅಕ್ಕದ ಮನೆ ನ್ಯಾನ್ಸಿ, ಪಕ್ಕದ ಮನೆ ನೀಲಂ!

ದಂಪತಿಗಳಿಬ್ಬರು ಮಕ್ಕಳಿಲ್ಲದೆ ಕೊರಗುತ್ತಿರುತ್ತಾರೆ. ಎಷ್ಟೇ ಪ್ರಯತ್ನ ಮಾಡಿದರೂ ಮಕ್ಕಳಾಗುವ ಸೂಚನೆಗಳೇ ಕಾಣುವುದಿಲ್ಲ. ಗಂಡನಿಗೆ ತನ್ನಲ್ಲಿ ವೀರ್ಯದ ಕೊರತೆ ಇರುವುದರಿಂದಲೇ ಮಕ್ಕಳಾಗುತ್ತಿಲ್ಲ ಎಂಬ ಅನಿಸಿಕೆ. ಅದನ್ನು ಇಬ್ಬರೂ ಮಾತನಾಡಿಕೊಳ್ಳುತ್ತಾರೆ. ಲೈಂಗಿಕ ತಜ್ಞರ ಬಳಿ ಸಲಹೆ ಪಡೆಯೋಣವೆಂದು ತೀರ್ಮಾನಿಸುತ್ತಾರೆ.

ಗಂಡನಿಗೆ ಲೈಂಗಿಕ ತಜ್ಞ ವೈದ್ಯರು ಒಂದು ಖಾಲಿ ಬಾಟಲಿಯನ್ನು ಕೊಟ್ಟು ಮರುದಿನ ಪರೀಕ್ಷೆಗಾಗಿ ವೀರ್ಯ ತೆಗೆದುಕೊಂಡು ಬಾ ಎಂದು ಹೇಳಿ ಕಳುಹಿಸುತ್ತಾರೆ.

ಮರುದಿನ ಗಂಡ ಪರೀಕ್ಷೆಗಾಗಿ ವೀರ್ಯ ತೆಗೆದುಕೊಂಡು ಬರದೆ ಖಾಲಿ ಬಾಟಲಿ ತಂದಿರುತ್ತಾನೆ. ವೈದ್ಯರು ಏಕೆ ಖಾಲಿ ಬಾಟಲಿ ತಂದಿ ಎಂದು ವಿಚಾರಿಸುತ್ತಾರೆ.

ಗಂಡ "ವೈದ್ಯರೆ, ಮೊದಲು ಎಡಗೈಯಿಂದ ಪ್ರಯತ್ನ ಮಾಡಿದೆ ಆಗಲಿಲ್ಲ, ನಂತರ ಬಲಗೈಯಿಂದಲೂ ಪ್ರಯತ್ನಿಸಿದೆ ಸಾಧ್ಯವಾಲಿಲ್ಲ" ಎನ್ನುತ್ತಾರೆ.

"ಸರಿ ಆಮೇಲೆ?"

"ನಂತರ ನನ್ನ ಹೆಂಡತಿಯನ್ನು ಕರೆದು ಹೇಳಿದೆ. ಆಕೆ ಕೂಡ ಮೊದಲು ಬಲಗೈಯಿಂದ ನಂತರ ಎಡಗೈಯಿಂದ ಪ್ರಯತ್ನಿಸಿದಳು ಸಾಧ್ಯವಾಗಲೇ ಇಲ್ಲ."

"ಆಮೇಲೇನು ಮಾಡಿದ್ರಿ?" ವೈದ್ಯನ ಪ್ರಶ್ನೆ.

"ಮಾಡೋದೇನು, ನನ್ನ ಹೆಂಡತಿ ತಂಗಿಯನ್ನು ಕೇಳಿಕೊಂಡೆ. ಆಕೆ ಕೂಡ ಮೊದಲು ಎಡಗೈ ನಂತರ ಬಲಗೈ, ಆಮೇಲೆ ಎರಡೂ ಕೈಗಳಿಂದ ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ" ಎಂದುತ್ತರಿಸಿದ.

"ತಂಗಿ ಅಂದ್ರೆ ನಾದಿನಿ, ಇಂಟರೆಸ್ಟಿಂಗ್! ಆಮೇಲೆ?" ವೈದ್ಯನ ಹುಬ್ಬು ಹಣೆಯ ಮೇಲೇರಿತ್ತು.

"ಬೇರೆ ದಾರಿಯಿಲ್ಲದೆ, ಅಕ್ಕದ ಮನೆ ನ್ಯಾನ್ಸಿ, ಪಕ್ಕದ ಮನೆ ನೀಲಂಳನ್ನು ಕರೆದು ಕೇಳಿಕೊಂಡೆ. ಅವರು ಕೂಡ ಎರಡೂ ಕೈಗಳಿಂದ ನಂತರ ಬಾಯಿಯಿಂದ ಕೂಡ ಪ್ರಯತ್ನಿಸಿದರೂ... ಊಹುಂ... ನೋ" ಎಂದುತ್ತರಿಸಿದ.

"ಅಕ್ಕದ ಮನೆ ನ್ಯಾನ್ಸಿ, ಪಕ್ಕದ ಮನೆ ನೀಲಂ! ಆಮೇಲೆ" ವೈದ್ಯನ ಉತ್ಸಾಹ ನೂರ್ಮಡಿಯಾಗಿತ್ತು.

"ಆಮೇಲೆನು ಡಾಕ್ಟ್ರೆ, ಯಾರು ಎಷ್ಟೇ ಪ್ರಯತ್ನಿಸಿದರೂ ಬಾಟಲಿ ಬೂಚು ಓಪನ್ ಮಾಡಲು ಸಾಧ್ಯವಾಗಲೇ ಇಲ್ಲ! ಹೀಗಾಗಿ ಖಾಲಿ ಬಾಟಲಿ ತೆಗೆದುಕೊಂಡು ಬರಬೇಕಾಯಿತು." ಈ ಉತ್ತರ ಕೇಳುತ್ತಲೇ ವೈದ್ಯನ ತಲೆ ಗಿರ್ ಅನ್ನಲು ಪ್ರಾರಂಭಿಸಿತು. [ಗಂಡ ಹೆಂಡತಿ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+