ಪೆದ್ದು ಮಗನಿಗೆ ಅಪ್ಪನಿಂದ ಡೇಟಿಂಗ್ ಟಿಪ್ಸ್!
ಪ್ರತಿ ಸಲ ಡೇಟಿಂಗಿಗೆ ಹೋದಾಗಲೂ ವಾಪಸ್ ಬರುವಾಗ ಪೆಕ್ರನಂತೆ ಮುಖ ಮಾಡಿಕೊಂಡು ಬರುತ್ತಿದ್ದ ಚಕ್ರನ ವಕ್ರ ಮುಖ ಕಂಡು ಚಕ್ರನ ಅಡ್ವಾನ್ಸ್ಡ್ ಥಿಂಕಿಂಗ್ ಫಾದರ್ ನಕ್ರನಿಗೆ ನಖಶಿಖಾಂತ ಕೋಪ ಬಂದಿರುತ್ತದೆ. ಒಂದಾನೊಂದು ಕಾಲದಲ್ಲಿ, ಅಂದ್ರೆ ತನ್ನ ಯೌವನದಲ್ಲಿ ತಾನು ಹೇಗಿದ್ದೆ? ಅಂಥ ಅಪ್ಪನಿಗೆ ಇಂಥ ಮಗ ಹುಟ್ಟಿದನಲ್ಲ ಎಂದು ನಕ್ರ ಶ್ಯಾನೆ ಬೇಜಾರು ಮಾಡಿಕೊಂಡಿರುತ್ತಾನೆ.
ಕಡೆಗೊಂದು ದಿನ ವಯಸ್ಸಿಗೆ ಬಂದಿದ್ದ ಮಗ ಚಕ್ರನನ್ನು ಕೂಡಿಸಿಕೊಂಡು ಡೇಟಿಂಗ್ ಟಿಪ್ಸ್ ಕೊಡಲು ಅಪ್ಪ ಅನುವಾಗುತ್ತಾನೆ. ಪೆದ್ದು ಮುಂಡೇದೆ... ಅಂತ ಮನದಲ್ಲಿಯೇ ಅಂದುಕೊಂಡು ಚಕ್ರನ ಹೆಗಲ ಮೇಲೆ ಕೈಹಾಕಿ ನಕ್ರ ಲೌ ಪಾಠ ಹೇಳಲು ಶುರು ಮಾಡುತ್ತಾನೆ.
ಚಕ್ರನ ಹೆಗಲನ್ನು ಮೆತ್ತಗೆ ಹಿಸುಕಿ, "ಲೋ ಮಗನೆ, ಡೇಟಿಂಗ್ ಮಾಡುವುದು, ಹುಡುಗಿಯರನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲಲೋ. ಮೊದಲು ಸುಂದರವಾದ ಹುಡುಗಿಯರನ್ನು ಆಯ್ದುಕೊಳ್ಳಬೇಕು. ನಂತರ ಡೇಟಿಂಗಿಗೆ ಹೋದಾಗ ಅವರಿಗೊಂದು ಹೂವು ಅಥವಾ ಚಾಕಲೇಟ್ ಗಿಫ್ಟ್ ಕೊಡಬೇಕು. ಆಗಲೇ ಅವರ ಹೃದಯವನ್ನು ಗೆಲ್ಲಲು ಸಾಧ್ಯ" ಎಂದು ಮಹಾನ್ ಸಲಹೆ ಕೊಡುತ್ತಾನೆ.
ಮುಂದುವರಿಸಿ, "ಹೆಚ್ಚೆಚ್ಚು ಕೊಟ್ಟಾಗ ಅವರ ಕಾಮೋತ್ಕಟತೆಯೂ ಅಧಿಕವಾಗುತ್ತದೆ. ನೀನೇನು ಕೊಡುತ್ತಿಯೋ ಅದಕ್ಕಿಂತ ಹೆಚ್ಚೇ ನಿನಗೆ ಸಿಗುತ್ತದೆ. ಅರ್ಥವಾಯ್ತೇನೋ" ಅಂತ ನಕ್ರ ಪಟ್ಟನೆ ಚಕ್ರನ ತಲೆ ಮೇಲೆ ಹೊಡೆದಿರುತ್ತಾನೆ, ಚಕ್ರ ತಲೆ ಅಲ್ಲಾಡಿಸಿರುತ್ತಾನೆ.
ಮರುದಿನ ಚಕ್ರ ಮತ್ತೆ ಡೇಟಿಂಗಿಗೆ ಹೋಗುತ್ತಾನೆ. ಈಬಾರಿ ಅಪ್ಪ ಹೇಳಿದಂತೆ ಸುಗಂಧಪುಷ್ಪಗಳ ಗೊಂಚಲು ಮತ್ತು ಅಮೂಲ್ ಚಾಕಲೇಟನ್ನು ಮರೆಯದೆ ತೆಗೆದುಕೊಂಡು ಹೋಗಿರುತ್ತಾನೆ. ಹೋಟೆಲಿನ ರೂಮಿನಲ್ಲಿ ಮೊದಲು ಹೂಗುಚ್ಛ ಕೊಟ್ಟಕೂಡಲೆ, ಆತನ ತುಟಿಗಳ ಮೇಲೆ ಲೊಚಕ್ಕನೆ ಮುತ್ತಿನ ಕಾಣಿಕೆ ನೀಡಿರುತ್ತಾಳೆ ಸುಂದರಿ.
ಇದರಿಂದ ಉತ್ತೇಜಿತನಾದ ಆತ ಚಾಕಲೇಟನ್ನೂ ಆಗಲೇ ಕೊಟ್ಟುಬಿಡುತ್ತಾನೆ. ಇದರಿಂದ ಮತ್ತಷ್ಟು ಕೆರಳಿದ ಸುಂದರಿ ಚಕ್ರನಿಗೆ ಇನ್ನೂ ಹೆಚ್ಚಿನ ಸುಖವನ್ನು ನೀಡಬೇಕು ಎಂದು ಅಂದುಕೊಂಡು, ತನ್ನ ತುಂಬಿದ ಎದೆಯನ್ನು ಆತನ ಎದೆಗೆ ಒತ್ತುತ್ತಾಳೆ ಮತ್ತು ಇನ್ನೂ ಮುಂದುವರಿಯಬೇಕು ಎಂದು ಅಂದುಕೊಂಡಿರುತ್ತಾಳೆ... ಅಷ್ಟರಲ್ಲಿ ಆಕೆಯ ಹಿಡಿತದಿಂದ ಚಕ್ರ ತಟಕ್ಕನೆ ಬಿಡಿಸಿಕೊಂಡು ಬಿಡುತ್ತಾನೆ. ಸುಂದರಿಗೆ ಅಚ್ಚರಿ ಆಘಾತ ಎರಡೂ ಆಗಿರುತ್ತದೆ.
"ಚಕ್ರಿ ಡಾರ್ಲಿಂಗ್, ಯಾಕೆ ಹೆದರಿಕೆ ಆಯ್ತಾ?" ಎಂದು ಸುಂದರಿ ಕೇಳುತ್ತಾಳೆ.
"ಛೆಛೆ ಖಂಡಿತ ಇಲ್ಲ ಸುಂದರಿ. ಈಗಲೇ ಜ್ಯುವೆಲ್ಲರಿ ಅಂಗಡಿ ಹೋಗಿ ನಿನಗೊಂದು ಚಿನ್ನದ ಸರ ತಂದುಕೊಡುತ್ತೇನೆ" ಎಂದು ಬಾಗಿಲನ್ನು ಧಡಾರನೆ ಹಾಕಿಕೊಂಡು ಓಡಿರುತ್ತಾನೆ.












Click it and Unblock the Notifications