ಹದಿನೆಂಟರ ಮೊಮ್ಮಗಳಿಗೆ ಅಜ್ಜಿಯ ಡೇಟಿಂಗ್ ಟಿಪ್ಸ್!

ಹಿಂದಿನ ದಿನ ಹದಿನೆಂಟನೇ ವಯಸ್ಸಿಗೆ ಕಾಲಿಟ್ಟ ಸಂತಸಕ್ಕೆ ಕೇಕ್ ಕತ್ತರಿಸಿದ್ದ ತುಂಟಿ ಲವೀನಾ ತನ್ನ ಮೊಟ್ಟಮೊದಲ ಡೇಟಿಂಗ್‍‌ಗಾಗಿ ತುಡಿಯುತ್ತಿರುತ್ತಾಳೆ. ಖಡಕ್ ಅಮ್ಮನನ್ನು ಡೇಟಿಂಗ್ ಟಿಪ್ಸ್ ಕೇಳಲು ಧೈರ್ಯ ಸಾಲದೆ ಸಖತ್ ಜಾಲಿ ಮತ್ತು ಕಿಲಾಡಿಯಾಗಿದ್ದ ಅಜ್ಜಿಯ ಬಳಿ ಬಂದು ಡೇಟಿಂಗ್ ಟಿಪ್ಸ್ ಕೇಳುತ್ತಾಳೆ ಶೋಡಷಿ ಲವೀನಾ.

ತುಂಟಿ ಅಂತ ಮೊಮ್ಮಗಳ ಮುದ್ದು ಗಲ್ಲವನ್ನು ತಿವಿದ ಅಜ್ಜಿ, ಒಂದೆರಡು ಕ್ಷಣ ನಾಸ್ಟಾಲ್ಜಿಕ್ ಆಗುತ್ತಾಳೆ. ತಾನು ಕೂಡ ಹದಿನೆಂಟರ ಹರೆಯದಲ್ಲಿ ಕಳೆದ ಯೌವನದ ಲೋಕದಲ್ಲಿ ವಿಹರಿಸಿ ಬಂದು, ತನ್ನ ಅನುಭವವನ್ನು ಧಾರೆ ಎರೆಯಲು ಅಜ್ಜಿ ಅನುವಾಗುತ್ತಾಳೆ.

"ಪುಟ್ಟಿ, ಕರೆಕ್ಟಾಗಿ ಕೇಳಿಸಿಕೊ. ಮೊದಲನೇ ಬಾರಿ ಡೇಟಿಂಗಿಗೆ ಹೋಗ್ತಿದ್ದೀಯಲ್ಲ ಬೀ ಕೇರ್ ಫುಲ್. ನೋಡು, ಈ ಹುಡುಗರಿರ್ತಾರಲ್ಲ ಮೊದಲನೇ ಬಾರಿನೇ ಮುತ್ತು ಕೊಡಬೇಕೆಂದು ಹಪಹಪಿಸುತ್ತಿರುತ್ತಾರೆ. ಅದು ನಿನಗೂ ಇಷ್ಟವಾಗುತ್ತದೆ. ಆದರೆ, ಪಿಗ್ಗಿ ಬೀಳಬೇಡ. ನಯವಾಗಿಯೇ ನಿರಾಕರಿಸು" ಎಂದು ಅಜ್ಜಿ ಹೇಳುತ್ತಿದ್ದಾಗ, ಇನ್ನೂ ಕನ್ಯೆಯಾಗಿರುವ ಲವೀನಾ ತದೇಕಚಿತ್ತದಿಂದ ಕೇಳುತ್ತಿರುತ್ತಾಳೆ.

ಮುಂದುವರೆದು, "ಎರಡನೇ ಬಾರಿ ಹೋದಾಗ, ಮುತ್ತಿನ ಹಂತ ದಾಟಿ ಹೆಗಲ ಮೇಲೆ ಕೈಹಾಕಲು ಯತ್ನಿಸುತ್ತಾರೆ. ನಿನ್ನ ದೇಹದ ಮೇಲೆ ಕೈಯಾಡಿಸಲೂಬಹುದು. ಪ್ರೇಮದ ಉನ್ಮಾದದಲ್ಲಿ ಇರುವ ನಿನಗೆ ಅದೂ ಕೂಡ ಇಷ್ಟವಾಗೇ ಆಗುತ್ತದೆ. ಆದರೆ, ಪೆದ್ದಿಯಂತೆ ನಡೆದುಕೊಳ್ಳಬೇಡ, ಅದಕ್ಕೆ ಅವಕಾಶವನ್ನೇ ನೀಡಬೇಡ. ನಯವಾಗಿಯೇ ನಿರಾಕರಿಸಿಬಿಡು" ಅಜ್ಜಿ ಹೇಳಿದ್ದೆಲ್ಲ ಮನಸ್ಸಿಗೆ ನಾಟಿದಂತೆ ಲವೀನಾ ಕುಳಿತಿರುತ್ತಾಳೆ.

ಇನ್ನೂ ಮುಂದುವರೆದು, "ಇದು ತುಂಬಾ ಇಂಪಾರ್ಟೆಂಟು. ಸಲುಗೆ ಪಡೆದು ಹುಡುಗರು ನಿನ್ನ ಮೇಲೆಯೇ ಎರಗಲು ಯತ್ನಿಸುತ್ತಾರೆ. ನೀನು ಕುಣಿದಾಡ್ತಾ ಇರೋದು ನೋಡಿದ್ರೆ ಅದಕ್ಕೂ ನೀನು ಯಸ್ ಅನ್ನೋಳೆ. ಕೇಳಿಸ್ಕೋ, ಅದಕ್ಕೆ ಅವಕಾಶವನ್ನೇ ನೀಡಬೇಡ. ಇಂಥದಕ್ಕೆಲ್ಲ ಅವಕಾಶ ನೀಡುವುದು ನಮ್ಮ ಕುಟುಂಬಕ್ಕೆ ಅವಮಾನ ಮಾಡಿದಂತೆ. ತಿಳೀತಾ? ನೌ ಗೆಟ್ ಲಾಸ್ಟ್" ಎಂದು ಹೇಳಿ ತನ್ನ ಬಳಿಯಿದ್ದ ಸಾವಿರ ರು. ಕೊಟ್ಟು ಕಳಿಸುತ್ತಾಳೆ.

ಪಿಂಕ್ ಕಲರ್ ಫ್ರಾಕ್ ಧರಿಸಿದ್ದ ಲವ್ಲಿ ಲವೀನಾ ಅಜ್ಜಿಯ ಗಲ್ಲಕ್ಕೊಂದು ಮುತ್ತುಕೊಟ್ಟು ಡೇಟಿಂಗಿಗೆ ಹೋಗುತ್ತಾಳೆ. ಅವಳು ಡೇಟಿಂಗಿಗೆ ಹೋಗಿದ್ದು ತನ್ನ ಬಾಯ್ ಫ್ರೆಂಡ್ ಯತೀಶ್ ಜೊತೆ. ರಾತ್ರಿ ಮನೆಗೆ ಬಂದವಳೆ ಅಜ್ಜಿಯನ್ನು ಅಪ್ಪಿ ಮುದ್ದಾಡಿಬಿಡುತ್ತಾಳೆ. ಹೇಗಿತ್ತೇ ಡೇಟಿಂಗೂ ಅಂತ ಅಜ್ಜಿ ಲಲ್ಲೆಗರೆಯುತ್ತ ಕೇಳುತ್ತಾಳೆ.

"ಅಜ್ಜಿ ಬಜ್ಜಿ, ನೀನು ಹೇಳಿದ್ದೆಲ್ಲ ಚೆನ್ನಾಗಿ ಜ್ಞಾಪಕವಿತ್ತು. ಅವನು ಹಾಗೇ ಮಾಡ್ತಾನಂತ ನಿನಗೆ ಹ್ಯಾಗೆ ಗೊತ್ತಿತ್ತು ಅಜ್ಜೀ, ಬಲೇ ಕಿಲಾಡಿ ನೀನು. ನೀನು ಅಂದಂತೆ ಯತೀಶ್ ಹಾಗೆಯೇ ಮಾಡಿದ. ಒಂದೊಂದೇ ಹಂತ ದಾಟುತ್ತ ನನ್ನ ಕುಟುಂಬವನ್ನು ಅವಮಾನ ಮಾಡುವ ಹಂತಕ್ಕೆ ಬಂದಿದ್ದ. ನೀನು ಹೇಳಿದಂತೆ ನಾನು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ" ಎಂದು ಹರ್ಷಚಿತ್ತಳಾಗಿ ವಿವರವಾಗಿ ಕಥೆಯನ್ನು ಹೇಳಿದಳು.

"ವೆರಿ ಗುಡ್ ಲವ್ಲಿ. ನನಗೆ ಗೊತ್ತಿತ್ತು. ನಿನ್ನ ಮೇಲೆ ನಂಬಿಕೆಯೂ ಇತ್ತು" ಅಂತ ಅಜ್ಜಿ ಶಭಾಸ್ ಗಿರಿ ನೀಡಿದಳು.

"ತಡ್ಕೋ ಅಜ್ಜಿ, ಇನ್ನೂ ಕಥೆ ಮುಗಿದಿಲ್ಲ. ಅವನೇನೋ ನನ್ನ ಕುಟುಂಬಕ್ಕೆ ಅವಮಾನವಾಗುವಂತೆ ಮಾಡಲಿಲ್ಲ. ಆದರೆ, ನಾನೇ ಅವನ ಕುಟುಂಬಕ್ಕೆ ಅವಮಾನವಾಗುವಂತೆ ಮಾಡಿದೆ" ಅಂತ ಹೇಳುತ್ತಿದ್ದಂತೆ ಅರವತ್ತೈದರ ಅಜ್ಜಿ ಶಾಕ್ ಹೊಡೆದಂತೆ ಕಿಟಾರ್ ಅಂತ ಚೀರಿಬಿಟ್ಟಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+