ಸ್ವತಂತ್ರವಾಗಿ ನಿಂತು ಡೆಪಾಸಿಟ್ ಕಳೆದುಕೊಂಡ
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿ ಪ್ರಚಾರದ ಭರಾಟೆ ಎಲ್ಲೆಲ್ಲೂ ಆವರಿಸಿಕೊಂಡಿರುತ್ತದೆ. ಛತ್ರಿ ಗುರುತು ಇಟ್ಟುಕೊಂಡಿದ್ದ ಮೈಕಲ್ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿರುತ್ತಾನೆ. ಅವನಿಗಾಗಿ ಅವನ ಆಪ್ತ ಸ್ನೇಹಿತರಾದ, ಆದರೆ ದಂಪತಿಗಳಾದ ಸ್ಟ್ಯಾನ್ಲಿ ಮತ್ತು ರೋಸಾ ಪ್ರಚಾರ ಮಾಡುತ್ತಿರುತ್ತಾನೆ.
ಪ್ರಚಾರ ಮಾಡಿ ಮಾಡಿ ಅವರು ಪರಸ್ಪರ ಮಾತನಾಡುವ ಧರತಿಯೇ ಬದಲಾಗಿರುತ್ತದೆ. ಬೆಳಿಗ್ಗೆ ಸ್ನಾನ ಮಾಡುವಾಗ, ಊಟ ಮಾಡುವಾಗ, ರಾತ್ರಿ ಮಲಗುವಾಗ ಕೂಡ ಅವರ ಮಾತುಕತೆಗಳ ನಡುವೆ ಚುನಾವಣೆಯದೇ ಮಾತು. ಜೊತೆಗೆ, ಪ್ರಚಾರ ಮಾಡುವ ಸ್ಟೈಲಿನಲ್ಲಿಯೇ ಅವರ ಸಂಭಾಷಣೆ ನಡೆದಿರುತ್ತದೆ. ಇಷ್ಟರಮಟ್ಟಿಗೆ ಚುನಾವಣೆ ಅವರಿಬ್ಬರ ಮೇಲೆ ಪ್ರಭಾವ ಬೀರಿರುತ್ತದೆ.
ಒಂದು ದಿನ ಭಾನುವಾರ, ವಾರವಿಡೀ ಪ್ರಚಾರ ಮಾಡಿ ಸುಸ್ತಾಗಿದ್ದ ದಂಪತಿಗಳಿಬ್ಬರು ರಜಾ ತೆಗೆದುಕೊಂಡು ಹೆಂಡತಿ ಜೊತೆ ಮಾಜಾ ಮಾಡಬೇಕೆಂದು ಸ್ಟ್ಯಾನ್ಲಿ ನಿರ್ಧರಿಸುತ್ತಾನೆ. ಲಗುಬಗೆಯಿಂದ ಸ್ನಾನ ಮಾಡಿಬಂದವನೆ ಅಡುಗೆಮನೆಯಲ್ಲಿ ಗಡಿಬಿಡಿಯಿಂದ ಅಡುಗೆ ಮಾಡುತ್ತಿದ್ದ ರೋಸಾಳನ್ನು ಹಿಂಬದಿಯಿಂದ ತಬ್ಬಿಕೊಂಡವನೆ, "ಡಾರ್ಲಿಂಗ್, ಇವತ್ತು ರಾತ್ರಿ ನಿಮ್ಮ ಪಾರ್ಟಿಯ ಅಭ್ಯರ್ಥಿ ಜೊತೆ ನಮ್ಮ ಪಕ್ಷದ ಕ್ಯಾಂಡಿಡೇಟ್ ಮೈತ್ರಿ ಮಾಡಕೊಳ್ಳಬೇಕೆಂದು ಬಯಸಿದ್ದಾನೆ" ಎಂದು ಚುನಾವಣಾ ಭಾಷೆಯಲ್ಲಿ ಸೂಕ್ಷ್ಮವಾಗಿ ಹೇಳುತ್ತಾನೆ.
ಆತನ ಮನದಲ್ಲಿ ಏನಿದೆ, ಯಾಕೆ ಈ ರೀತಿ ಮಾತನಾಡುತ್ತಿದ್ದಾನೆ ಎಂದು ಗ್ರಹಿಸದ ಬುದ್ದು ರೋಸಾ, "ಸಾಧ್ಯವೇ ಇಲ್ಲ ಡಿಯರ್. ಇಂಥ ಅನೈತಿಕ ಮೈತ್ರಿಯನ್ನು ನಮ್ಮ ಪಕ್ಷ ಒಪ್ಪಲ್ಲ" ಎಂದು ಹೇಳಿ ಗಂಡನ ಹಿಡಿತದಿಂದ ತಪ್ಪಿಸಿಕೊಂಡು ತನ್ನ ಕೆಲಸದಲ್ಲಿ ಮುಳುಗಿಬಿಡುತ್ತಾಳೆ. ಗಂಡನಿಗೆ ನಿರಾಶೆಯಾಗಿ ಇವತ್ತು ಪ್ರಚಾರ ಕ್ಯಾನ್ಸಲ್ ಎಂದು ಹೇಳಿ ತನ್ನ ಕೆಲಸದಲ್ಲಿ ತೊಡಗುತ್ತಾನೆ.
ದಿನ ಮುಳುಗುತ್ತದೆ, ರಾತ್ರಿ ಮೇಲೇರುತ್ತದೆ, ಕತ್ತಲು ಮುಸುಕು ಹಾಕಿಕೊಂಡಿರುತ್ತದೆ. ದಿನದ ವ್ಯಾಪಾರ ಮುಗಿಸಿ ಬೆಡ್ ರೂಂ ಬಳಿ ಬಂದು ಇನ್ನೇನು ಬಟ್ಟೆ ಕಳಚಿ ನೈಟ್ ಗೌನ್ ಧರಿಸಿ ಹಾಸಿಗೆ ಮೇಲೆ ಬೀಳಬೇಕು... ಅಷ್ಟರಲ್ಲಿ ಗಂಡ ಏನು ದೃಷ್ಟಿಯಲ್ಲಿ ಇಟ್ಟುಕೊಂಡು ಬೆಳಿಗ್ಗೆ ಮೈತ್ರಿ ಮಾಡಿಕೊಳ್ಳೋಣ ಎಂದಿದ್ದ ಎಂದು ಆಕೆಗೆ ಹೊಳೆದುಬಿಡುತ್ತದೆ. ಥತ್ತೆರೇಕಿ ಎಂಥ ಕೆಲಸವಾಯಿತು ಎಂದು ಪೇಚಾಡಿಕೊಂಡು, ಅದೀಗ ತಾನೆ ಮುಸುಕು ಹೊದ್ದಿದ್ದ ಗಂಡನ ಬಳಿಗೆ ಬರುತ್ತಾಳೆ.
ಗಂಡನನ್ನು ಮುದ್ದಾಡುತ್ತ, "ಸ್ಟೀಟಿ ಸ್ಟ್ಯಾನ್ಲಿ, ನಿಮ್ಮ ಕ್ಯಾಂಡಿಡೇಟ್ ಜೊತೆ ನಮ್ಮ ಅಭ್ಯರ್ಥಿಯ ಮೈತ್ರಿಗೆ ನಾನು ರೆಡಿ" ಎಂದು ಕಿವಿಯಲ್ಲಿ ಮೆಲ್ಲಗೆ ಉಸುರುತ್ತಾಳೆ.
ಮೊದಲೇ ನಿರಾಶೆ ಹೊಂದಿದ್ದ ಗಂಡ, ಮಾಡ್ತೀನಿ ತಡಿ ಎಂದು, "ಹೋಗೆ ಹೋಗೆ, ಆವಾಗ ಮೈತ್ರಿ ಮಾಡಿಕೊಳ್ಳೋಣ ಅಂದ್ರೆ ಬರಲಿಲ್ಲ. ಈಗ ನೋಡು ಏನಾಗಿದೆ. ನನ್ನ ಅಭ್ಯರ್ಥಿ ಈಗಾಗಲೆ ಸ್ವತಂತ್ರವಾಗಿ ಚುನಾವಣೆಗೆ ನಿಂತು, ಡೆಪಾಸಿಟ್ ಕೂಡ ಕಳೆದುಕೊಂಡಿದ್ದಾನೆ" ಎಂದು ಹೇಳಿ ಮತ್ತೆ ಮುಸುಕು ಹೊದ್ದು ನಿದ್ದೆಗೆ ಜಾರುತ್ತಾನೆ. [ಗಂಡ ಹೆಂಡತಿ ಜೋಕ್ಸ್]












Click it and Unblock the Notifications