ಕೇರಳದ ಮಲ್ಲುಗಳ ಕುರಿತು ಕೆಲ ಜೋಕುಗಳು

ಮರಿವರ್ಗೀಸ್ : ಅಪ್ಪ ಅಪ್ಪ, ನೀನಾವತ್ತಾದರೂ ಈಜಿಪ್ತಿಗೆ ಹೋಗಿದ್ಯಾ?

ವರ್ಗೀಸ್ : ಛೆಛೆ, ಈ ಕೇರಳ ಬಿಟ್ಟು ನಾನ್ಯಾವತ್ತೂ ಕದಲಿಲ್ಲ.

ಮರಿವರ್ಗೀಸ್ : ಹಾಗಿದ್ರೆ, ಈ ಮಮ್ಮಿಯನ್ನು ಎಲ್ಲಿಂದ ಕರೆದುಕೊಂಡು ಬಂದಿ?

***
ಟೀಚರ್ : ಕಾಕತಾಳೀಯಕ್ಕೆ ಯಾರಾದ್ರೂ ಒಂದು ಉದಾಹರಣೆ ಕೊಡುತ್ತೀರಾ?

ಬಿಜು : ಸರ್, ನನ್ನ ಅಪ್ಪ ಮತ್ತು ಅಮ್ಮ ಒಂದೇ ದಿನ ಮದುವೆಯಾದರಂತೆ, ಒಂದೇ ಸಮಯದಲ್ಲಿ!

***
ಟೀಚರ್ : ಒಂದು ಪ್ರಶ್ನೆ ಕೇಳ್ತೀನಿ ಯಾರು ಸರಿಯಾಗಿ ಉತ್ತರ ಹೇಳ್ತೀರಿ?

ಶಿಜು : ನಾನು ಉತ್ತರ ಹೇಳ್ತೀನಿ ಮೇಷ್ಟ್ರೆ.

ಟೀಚರ್ : ಓಕೆ. ಅಪ್ಪ ನೀರು ಗೊಬ್ಬರ ಹಾಕಿ ಕಷ್ಟಪಟ್ಟು ಬೆಳೆದಿದ್ದ ಪಪ್ಪಾಯಿ ಹಣ್ಣಿನ ಮರವನ್ನು ಆತನ ಮಗ ಕೊಡಲಿಯಿಂದ ಒಂದೇ ಏಟಿಗೆ ಕಡಿದುಬಿಟ್ಟ ಮತ್ತು ತಾನೇ ಕಡಿದದ್ದನ್ನು ಒಪ್ಪಿಕೊಂಡ ಕೂಡ.

ಶಿಜು : ಅದೆಲ್ಲ ಸರಿ ಸರ್, ಮೊದ್ಲು ಪ್ರಶ್ನೆ ಕೇಳಿ.

ಟೀಚರ್ : ತಡ್ಕಳ್ಳಯ್ಯ. ಮಾಡಿದ್ದ ತಪ್ಪು ಒಪ್ಪಿಕೊಂಡರೂ ತಂದೆ ಏಕೆ ಮಗನನ್ನು ಶಿಕ್ಷಿಸಲಿಲ್ಲ?

ಶಿಜು : ಯಾಕೆಂದರೆ, ಆತನ ಕೈಯಲ್ಲಿ ಕೊಡಲಿ ಇನ್ನೂ ಇತ್ತು!

***
ಟೀಚರ್ : ಶ್ರೀಕುಮಾರ್ ಬಾರಯ್ಯ ಇಲ್ಲಿ. ಈ ನಕಾಶೆಯಲ್ಲಿ ಉತ್ತರ ಅಮೆರಿಕ ಎಲ್ಲಿದೆಯೆಂದು ಹೇಳಯ್ಯ.

ಶ್ರೀಕುಮಾರ್ ಬಂದು ಭೂಪಟದಲ್ಲಿದ್ದ ಉತ್ತರ ಅಮೆರಿಕಾವನ್ನು ಗುರುತಿಸುತ್ತಾನೆ.

ಟೀಚರ್ : ಶಭಾಸ್ ಶ್ರೀಕುಮಾರ್, ಈಗ ಹೇಳು ಅಮೆರಿಕಾ ಕಂಡುಹಿಡಿದವರು ಯಾರು?

ಶ್ರೀಕುಮಾರ್ : ನಾನೇ ಸರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+