ಕನ್ನಡದ ವಾಟ್ಸಪ್ ಜೋಕುಗಳು; ಒಮ್ಮೆ ಓದಿ, ನಕ್ಕು ಬಿಡಿ

ಈಗ ಎಲ್ಲರ ಕೈಯಲ್ಲೂ ಮೊಬೈಲ್. ಇಂಟರ್‌ನೆಟ್ ಕಾಂತಿ ಆದ ಮೇಲೆ ವಾಟ್ಸಪ್ ಬಳಕೆ ಹೆಚ್ಚಾಗುತ್ತಿದೆ. ಪ್ರತಿದಿನ ಕೋಟ್ಯಾಂತರ ಸಂದೇಶಗಳು ವಿನಿಮಯವಾಗುತ್ತವೆ. ಅವುಗಳಲ್ಲಿ ಜೋಕ್‌ಗಳು ಸಹ ಸೇರಿವೆ.

ಇನ್ನು ನೀವು ಹಲವಾರು ಗ್ರೂಪ್‌ಗಳಲ್ಲಿ ಸೇರಿದ್ದರೆ ಮುಗಿದೇ ಹೋಯಿತು. ಟ್ರಾಲ್, ಹಲವಾರು ಜೋಕುಗಳುಗಳು ನಿತ್ಯ ಬಂದು ಬೀಳುತ್ತವೆ. ಕೆಲಸದ ಒತ್ತಡದಲ್ಲಿರುವ ಜನರು ಜೋಕುಗಳನ್ನು ಓದಿ ನಸುನಕ್ಕು ಬಿಡಬಹುದು.

ಒಂದು ವೇಳೆ ನಿಮ್ಮ ಬಳಿ ಸಮಯವಿದ್ದರೆ ಅವುಗಳನ್ನು ಇತರರಿಗೆ ಕಳಿಸುವ ಮೂಲಕ ಅವರನ್ನು ನಗಿಸಬಹುದು. ವಾಟ್ಸಪ್‌ನಲ್ಲಿ ಇತ್ತೀಚೆಗೆ ಬಂದ ಕೆಲವು ಜೋಕ್ಸ್‌ಗಳು ಇಲ್ಲಿವೆ ಒಮ್ಮೆ ಓದಿ ನಕ್ಕುಬಿಡಿ....

* ಗುಂಡನ ಮೊಬೈಲ್ ಪದ್ಯ

ಟೀಚರ್‌; ಗುಂಡ ಕಲಿತ ಪದ್ಯ ಹೇಳು

ಗುಂಡ; 1-2 ಮೊಬೈಲ್ ನೋಡು, 3-4 ನೆಟ್ ಆನ್ ಮಾಡು, 5-6 ವಾಟ್ಸಪ್ ನೋಡು, 7-8 ಫೇಸ್‌ಬುಕ್ ನೋಡು, 8-9 ಸ್ಟೇಟಸ್ ಹಾಕು, 1 ರಿಂದ 10 ಹೀಗಿತ್ತು ಡೇಟಾ ಖಾಲಿ ಆಗಿತ್ತು.

* ರೊಟ್ಟಿ ಸ್ಟೇಟಸ್‌ಗೆ ಹಾಕಿದೀರಿ

ಭಿಕ್ಷುಕ; ಅಮ್ಮಾ ಒಂದ್ ರೊಟ್ಟಿ ಕೊಡಿ

ಮಹಿಳೆ; ರೊಟ್ಟಿ ಮಾಡಿಲ್ಲ, ಅನ್ನ, ಪಲ್ಯ ಕೊಡ್ತಿನಿ ಇರು

ಭಿಕ್ಷುಕ; ಇವತ್ತಿನ ತಿಂಡಿ ಮತ್ತೆ ರೊಟ್ಟಿ, ಪಲ್ಯ ಅಂತ ಸ್ಟೇಟಸ್ ಹಾಕಿದೀರಿ.

* ದೊಡ್ಡವರು ಹೊಡೆಯಬಾರದು

ಹೆಂಡತಿ; ರೀ, ಗಂಡನಿಗಿಂತ ಹೆಂಡತಿ ವಯಸ್ಸು ಯಾಕೆ ಕಡಿಮೆ ಇರಬೇಕು?

ಗಂಡ; ಚಿಕ್ಕವರು ಹೊಡೆದರು ದೊಡ್ಡವರು ಹೊಡೆಯಬಾರದು ಅದಕ್ಕೆ.

* ಆಧಾರ್ ಲಿಂಕ್ ಅಕೌಂಟ್‌ಗೆ ಹೋಗಿದೆ

ಅಪ್ಪ; ರಿಸಲ್ಟ್ ಏನೋ ಇದು ಕೇವಲ 40 ಪರ್ಸೆಂಟ್ ಬಂದಿದೆ.

ಮಗ; ಇಲ್ಲಪ್ಪ ಶೇ 80ರಷ್ಟು ಬಂದಿದೆ 40 ಮಾತ್ರ ಕಾಣಿಸ್ತಾ ಇದೆ

ಅಪ್ಪ; ಉಳಿದ 40 ಪರ್ಸೆಂಟ್ ಎಲ್ಲಿ ಹೋಯಿತು

ಮಗ; ಆಧಾರ್ ಕಾರ್ಡ್‌ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಜಮಾ ಮಾಡ್ತಿನಿ ಅಂತ ಹೇಳಿದಾರೆ.

Latest Whatsapp Jokes Student Rhymes ing On Mobile


* ಕೊನೆ ಆಸೆ ಕೇಳಿ ಜೈಲರ್ ಸುಸ್ತು

ಜೈಲರ್; ನಾಳೆ ನಿನ್ನನ್ನು ಗಲ್ಲಿಗೇರಿಸುತ್ತೇವೆ, ಕೊನೆ ಆಸೆ ಏನು ಹೇಳು?

ಕೈದಿ; ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿ ನೇಣು ಹಾಕಿ

* ನಾನು ಕೆಲಸ ಬಿಟ್ಟು ನೊಣಕ್ಕೆ ಈಜು ಕಲಿಸಲ

ಗ್ರಾಹಕ; ಯಾರು ಈ ಹೋಟೆಲ್‌ ಮ್ಯಾನೇಜರ್, ಕಾಫಿಯಲ್ಲಿ ನೊಣ ಬಿದ್ದು ಸತ್ತಿದೆ?

ಮ್ಯಾನೇಜರ್; ಸರ್ ನಾನು ನನ್ನ ಕೆಲಸ ಬಿಟ್ಟು ನೊಣಕ್ಕೆ ಈಜುವುದು ಕಲಿಸಲಾ?

* ಯಾವ ಬುಕ್‌ ನಿನಗೆ ತುಂಬಾ ಇಷ್ಟ

ಟೀಚರ್; ಮಕ್ಕಳೇ ನಿಮಗೆ ಯಾವ ಬುಕ್ ತುಂಬಾ ಇಷ್ಟ?

ಗುಂಡ; ಅಪ್ಪನ ಚೆಕ್ ಬುಕ್ ಟೀಚರ್.

* ಶಿಕ್ಷಕರು ಎಂದರೆ GST

ಅಪ್ಪ; ನೀವು ಶಿಕ್ಷಕರನ್ನು ಏನಂತ ಕರೀತಿರೋ?

ಮಗ; GST

ಅಪ್ಪ; ಏ ಸರಿಯಾಗಿ ಹೇಳು

ಮಗ; ಹೌದಪ್ಪ Government School Teacher

* ಜಾಹೀರಾತು ಕೊಡ್ತಿನಿ

ಗಂಡ; ನಾನು ತಪ್ಪಿಸಿಕೊಂಡರೆ ನೀನು ಏನು ಮಾಡ್ತಿಯಾ?

ಹೆಂಡತಿ; ಜಾಹೀರಾತು ಕೊಡ್ತಿನಿ

ಗಂಡ; ಏನಂತ ಜಾಹೀರಾತು?

ಗಂಡ; ಗಂಡ ಬೇಕಾಗಿದ್ದಾನೆ ಎಂದು.

* ಬಾಟಲ್ ಕೊಟ್ಟು ಬಂದೆ

ಗುಂಡ; ಎಣ್ಣೆ ಬಾಟಲ್ ತರುವಾಗ ಅಪ್ಪ ಎದುರಿಗೆ ಬಂದ್ರು

ಸ್ನೇಹಿತ; ಸಿಕ್ಕಿಬಿದ್ಯಾ, ಏನ್‌ ಮಾಡಿದೆ?

ಗುಂಡ ; ಬಾಟಲ್ ಕೈಗೆ ಕೊಟ್ಟು ಹ್ಯಾಪಿ ಬರ್ತಡೇ ಡ್ಯಾಡಿ ಅಂತ ಹೇಳಿ ಬಂದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+