ಲೇಡೀಸ್ ಫಸ್ಟ್ ಕಾನ್ಸೆಪ್ಟ್ ಶುರುವಾಗಿದ್ದು ಹೇಗೆ?
ಇಬ್ಬರು ಪ್ರೇಮಿಗಳು ಮದುವೆಗೆ ತತ್ಮಮ್ಮ ಕುಟುಂಬದ ಅನುಮತಿ ಸಿಗದೇ ಬಹಳ ನಿರಾಶರಾಗಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಮುಂದೇನು ಮಾಡಬೇಕೆಂದು ತೋಚದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇಬ್ಬರೂ ನಂದಿ ಬೆಟ್ಟಕ್ಕೆ ತೆರಳಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಟಿಪ್ಪು ಡ್ರಾಪ್ ಬಳಿ ಬಂದರು.
"ಮುಂದಿನ ಜನ್ಮದಲ್ಲಾದರೂ ನಾವಿಬ್ಬರೂ ಗಂಡ ಹೆಂಡತಿ ಆಗೋಣ ಚಿನ್ನಾ" ಎಂದು ಹುಡುಗ ಮೇಲಿಂದ ಕೆಳಗೆ ಹಾರಿಯೇ ಬಿಟ್ಟ. ಆದರೆ ಹುಡುಗಿ ಹಾರಲೇ ಇಲ್ಲ.
ಅಂದಿನಿಂದ ಶುರುವಾಗಿದ್ದು ನೋಡಿ 'ಲೇಡೀಸ್ ಫಸ್ಟ್' ಅನ್ನೋ ಕಾನ್ಸೆಪ್ಟ್.
***
ಟೀಚರ್ : ಗುಂಡ.. ಆರು ಹಕ್ಕಿಗಳು ಮರದ ಮೇಲೆ ಕುಳಿತಿದ್ದವು. ಒಬ್ಬ ಬೇಟೆಗಾರ ಗನ್ ಹಿಡಿದುಕೊಂಡು ಬಂದು ಶೂಟ್ ಮಾಡಿದ. ಮರದ ಮೇಲಿದ್ದ ಆರು ಹಕ್ಕಿಗಳಲ್ಲಿ ಐದು ಹಕ್ಕಿಗಳು ಹಾರಿ ಹೋದವು. ಆದರೆ ಒಂದು ಹಕ್ಕಿ ಮಾತ್ರ ಹಾರಿ ಹೋಗಲಿಲ್ಲ, ಏಕೆ?
ಅಷ್ಟರಲ್ಲಿ ಅವನ ಪಕ್ಕ ಕುಳಿದಿದ್ದ ತಿಮ್ಮ, "ಕಾಗೆಗೆ ಕಿವಿನೇ ಕೇಳಲ್ಲ ಸಾರ್" ಅಂತ ಉತ್ತರಿಸಿದ.
ಟೀಚರ್ : "ಲೇ ಭಡವ, ನಾನಿನ್ನ ಕೇಳಿದ್ನೇನೋ? ಗುಂಡ ಯಾಕೋ ಸುಮ್ನೆ ಕೂತಿದ್ದಿಯಾ, ಬೊಗಳೋ."
ಗುಂಡ : "ಅದಕ್ಕೆ ಸೊಕ್ಕಿನ ಪರಮಾವಧಿ ಸಾರ್!"
(ಜೋಕ್ ಕಳಿಸಿದವರು ಚಂದ್ರ)
***
ಟೀಚರ್ : ಮೊದಲ ಸೈಲೆಂಟ್ ಹಿಂದಿ ಚಿತ್ರ ಯಾವುದು?
ಗುಂಡ : ಚಿತ್ರ ಸೈಲೆಂಟ್ ಆಗಿದ್ದರೆ ಅದು ಹಿಂದಿ ಚಿತ್ರವೆಂದು ಹೇಗೆ ಗೊತ್ತಾಗುತ್ತೆ ಸಾರ್?
ಗುಂಡ.. rocks.. ಟೀಚರ್ shocked!












Click it and Unblock the Notifications