ಹಾಸ್ಯ: ಸಾರಾಯಿ V/s ಹಾಲು- ದೇವರು ಕೊಟ್ಟಿದ್ದು ವರವೋ, ಶಾಪವೋ!

ಒಮ್ಮೆ ದೇವರಿಗೆ ಭೂಮಿಗೆ ಬರುವ ಇಚ್ಚೆಯಾಯಿತು. ನಡೆಯುತ್ತ ಬರುವಾಗ ಬಾಯಾರಿಕೆ ಆಯಿತು. ರಸ್ತೆಯ ಬದಿಯಲ್ಲಿ ಒಬ್ಬ ಹಾಲು ಮಾರುವವನ ಭೇಟಿಯಾದಾಗ ಅವನಲ್ಲಿ ಬಾಯಾರಿಕೆ ಹೋಗಲಾಡಿಸುವುದಕ್ಕೋಸ್ಕರ ಹಾಲು ಕೇಳುತ್ತಾರೆ. ಆತ " ಹಾಲು ಪುಕ್ಕಟೆಯಾಗಿ ಸಿಗುವುದಿಲ್ಲ" ಎಂದು ನಿರಾಕರಿಸಿ ಬಿಟ್ಟ.

ದೇವರು ನಿರಾಶೆಯಿಂದ ಮುಂದೆ ನಡೆಯ ತೊಡಗಿದರು....

ದಾರಿಯಲ್ಲಿ ಮದುವೆಯ ಮೆರವಣಿಗೆಯೊಂದು ಸಾಗುತ್ತಿತ್ತು ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡ ಜನರಿಗೆ ಸಾರಾಯಿ ನೀಡಲಾಗುತ್ತಿತ್ತು.

ದೇವರು ಒಬ್ಬಾತನಲ್ಲಿ ತೃಷೆ ನಿವಾರಿಸಲೋಸುಗ ಸಾರಾಯಿ ಕೇಳಿದಾಗ ಆತ " ನಿಮಗೆಷ್ಟು ಬೇಕೋ ಅಷ್ಟು ಕುಡಿಯಿರಿ.... ನೃತ್ಯ ಮಾಡಿ..... ಆನಂದ ಪಡೆಯಿರಿ" ಅಂದ.

ದೇವರು ಅವನ ಈ ಮಾತಿನಿಂದ ಪ್ರಸನ್ನರಾಗಿ ಸಾರಾಯಿ ಮಾರುವವರಿಗೆ ವರದಾನ ಮತ್ತು ಹಾಲು ಮಾರುವವನೀಗೆ ಶಾಪ ಕೊಟ್ಟು ಬಿಟ್ರು.

ಹಾಲಿನವನಿಗೆ ಕೊಟ್ಟ ಶಾಪ: " ನಿನ್ನ ಅಂಗಡಿಗೆ ಯಾರೂ ಬಾರದೆ ನೀನು‌ ಬೆಳಿಗ್ಗೆ ಎದ್ದು ಮನೆ ಮನೆಗೆ ಹೋಗಿ‌ ಹಾಲು ಮಾರಾಟ ಮಾಡಬೇಕು".

Jokes

ಸಾರಾಯಿ ಯವನಿಗೆ ಕೊಟ್ಟ ವರದಾನ
" ನೀನೆಂದೂ ಸಾರಾಯಿ ಮನೆ ಮನೆಗೆ ಮಾರಾಟ ಮಾಡದೆ ಜನರು ನಿನ್ನನ್ನು ಹುಡುಕಿಕೊಂಡು ಬರಬೇಕು" ಅಂತ ಹೇಳಿ ದೇವರು ಮಾಯವಾಗಿಬಿಟ್ಟರು.

ಆ ವರದಾನ ಇಂದಿಗೂ ಚಾಲ್ತಿಯಲ್ಲಿದೆ.
...😂😂
-#Whatsಅಪ್ಪು😝😂
*****
ಗಂಡ ಕೊನೇ ಉಸಿರೆಳೆಯುವ ಸಮಯದಲ್ಲಿ (ಬೆಂಗಳೂರಿನ ಒಂದು ಆಸ್ಪತ್ರೆಯಲ್ಲಿ)

ತನ್ನ ದೊಡ್ಡ ಮಗನನ್ನು ಕರೆದು "ಜಯನಗರ 3ನೇ ಬ್ಲಾಕಿನ 15 ಮನೆಗಳನ್ನ ನೀನು ತಗೋ,"🏠🏠🏠

ಎರಡನೆಯವನ್ನನ್ನು ಕರೆದು "ಜಯನಗರ 5ನೇ ಬ್ಲಾಕಿನ 8 ಫ್ಲಾಟ್ಗಳನ್ನ ನೀನು ಇಟ್ಕೋ,"🏫🏫🏫

ಕಡೆಯ ಮಗನನ್ನು ಕರೆದು "ನೀನು ನನಗೆ ತುಂಬ ಪ್ರೀತಿ ಪಾತ್ರ. 4ನೇ ಬ್ಲಾಕಿನ 20 ಅಂಗಡಿಗಳನ್ನು ನೀನೇ ಇಟ್ಕೋ."🏤🏤🏤

ಕೊನೆಯದಾಗಿ ತನ್ನ ಪತ್ನಿಯನ್ನು ಕುರಿತು
"ನೀನು ನಮ್ಮ 4ನೇT ಬ್ಲಾಕಿನ 11 ಮನೆಗಳನ್ನು ನೀನೆ ಇಟ್ಕೊ. ಈಗಿನ ನಮ್ಮ ಮನೆಗೆ ತುಂಬಾ ಹತ್ತಿರ ಆಗುತ್ತೆ."🏡🏡🏡

ಇದೆಲ್ಲವನ್ನೂ ನೋಡುತ್ತಿದ್ದ ನರ್ಸ್ "ನೀವು ಎಂತಾ ಪುಣ್ಯವಂತರು....!!!"

ಕೋಪಗೊಂಡ ಹೆಂಡ್ತಿ "ಬಡ್ಕೊಂಡ್ರು. ಅದೆಲ್ಲಾ ನಾವು ಹಾಲು ಹಾಕುತ್ತಿದ್ದ ಮನೆಗಳು,
ಅದನ್ನ ಹಂಚ್ತಾ ಅವ್ರೆ ಅಷ್ಟೇಯ....!!!""

😃😃😜🤣🤣

*****

Toothbrush ಎಷ್ಟ್ ದಿನ use ಮಾಡ್ತೀರಿ ಅನ್ನೋ ಸಮೀಕ್ಷೆಗೆ ಸಿಕ್ಕ ಉತ್ತರಗಳು

ಅಮೆರಿಕಾ: 3 ತಿಂಗಳು

ಚೀನಾ:6 ತಿಂಗಳು
ಭಾರತ: ಮೊದ್ಲು ಒಂದ್ ಎರಡ ವರ್ಷ ಹಲ್ಲು ಉಜ್ಜತೇವಿ, ಆಮೇಲೆ ಬಾಚಣಕಿ clean ಮಾಡ್ಲಿಕ್ use ಮಾಡ್ತೇವಿ, ಸ್ವಲ್ಪ ದಿನ ಆದ ಮ್ಯಾಲೆ hair colour ಮಾಡ್ಲಿಕ್ use ಮಾಡ್ತೇವಿ, ಆದರ ಬ್ರಿಸೆಲ್ಸ್ ಎಲ್ಲ ಕಿತ್ತ ಮ್ಯಾಲೆ ಅದಕ್ಕ ಒಂದ್ ತೂತು ಮಾಡಿ ಪಾಯಿಜಾಮಾಕ್ಕ ಲೇಸ್ ಹಾಕಲಿಕ್ use ಮಾಡ್ತೇವಿ, ಆಮೇಲೆ ಕಿಟಕಿ open ಮಾಡಿದಾಗ ಗಾಳಿಗೆ ವಾಪಸ್ ಮುಚ್ಚಬಾರದು ಅಂತ ಅಡ್ಡ ಇಡಲಿಕ್ಕೇ use ಮಾಡ್ತೇವೀ ಮತ್ತ.....

ಪ್ರಶ್ನೆ ಕೇಳಿದವ ಕೋಮಾದಾಗ ಇದಾನಾಂತ
😂😂😂

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+