ಜೋಕ್ಸ್: ಮಳೆ ಬರ್ತಿದೆ ಅಂತಾ ಗಂಡ ಹೆಂಡತಿಗೆ ಹೇಳಿದ್ದೇ ತಡ..
"ಹೊರಗೆ ತುಂಬಾ ಜೋರು ಮಳೆ ಬರ್ತಿದೆ ಕಣೇ" ಎಂದು ಉತ್ಸಾಹದಿಂದ ಗಂಡ, ಹೆಂಡತಿಯ ಬಳಿ ಹೇಳಿದ.. ಆಗ, ಹೆಂಡತಿ ಶುರು ಹಚ್ಕೊಂಡ್ಳು ನೋಡಿ..
ಮನೆಯಲ್ಲಿ ಕಡಲೆಹಿಟ್ಟು ಖಾಲಿಯಾಗಿದೆ... ಪಕೋಡ, ಬೋಂಡಾ ಅಂತ ಆಸೆ ಇಟ್ಕೋಬೇಡಿ...
ಐಸ್ ಕ್ಯೂಬ್ಸ್ ಗೋಸ್ಕರ ಫ್ರಿಜ್ ತಡಕಾಡಬೇಡಿ.. ಮನೇಲಿ ಬೆಳಗ್ಗೆಯಿಂದ ಕರೆಂಟ್ ಇಲ್ಲ, ಅದರಲ್ಲೂ ಮನೇಲಿ ಬೆಳೆಯುತ್ತಿರುವ ಮಕ್ಕಳಿದ್ದಾರೆ, ಅಂತವುಗಳನ್ನು ಮನೇಲಿ ತಪ್ಪಿಸಿ..
ಗಂಡ ಪಿಳಿಪಿಳಿ ಕಣ್ಣು ಬಿಡ್ತಾ ಹೆಂಡತಿ ಮುಖನೇ ನೋಡುತ್ತಾ ಇದ್ದ...
ಇನ್ನು ನನ್ನ ಮುಖಾನೇ ಹಾಗೆ ನೋಡುತ್ತಾ ಇರಬೇಡಿ... ನನಗೆ ಸೊಂಟ ನೋವು.. ತುಂಬಾ ಸುಸ್ತಾಗಿದೆ..
ಗಂಡ, ಸೀದಾ ಬೆಡ್ ರೂಂ ಹೋಗಿ ಮಲ್ಕೊಂಡು ಬಿಟ್ಟ (ವಾಟ್ಸಾಪ್ ನಲ್ಲಿ ಬಂದಿದ್ದು)

*****
ಗುಂಡ ತನ್ನ ಮಡದಿ ಮತ್ತು ಅತ್ತೆಯ ಜೊತೆಗೆ ಗುರುಗಳ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಹೋದ. ಅಲ್ಲಿ..
ಗುರು: ಸ್ವರ್ಗಕ್ಕೆ ಹೋಗೋ ಇಚ್ಛೆ ಇರೋರು ಕೈಯೆತ್ತಿ,
ಗುಂಡನ ಅತ್ತೆ ಮತ್ತು ಹೆಂಡತಿ ಕೈ ಎತ್ತಿದ್ರು, ಆದರೆ ಗುಂಡ ಕೈ ಎತ್ತಲಿಲ್ಲ.
ಗುರು: ನೀನು ಸ್ವರ್ಗಕ್ಕೆ ಹೋಗುವುದಿಲ್ಲವೇ?
ಗುಂಡ: ಇಲ್ಲ.. ಗುರುಗಳೇ.. ಇವರಿಬ್ಬರು ಹೋದರೆ ನನಗಿಲ್ಲೇ ಸ್ವರ್ಗ
ಗುರು: ಶಿಷ್ಯರೇ ಈ ಮಹಾಜ್ಞಾನಿಯನ್ನು ನಮ್ಮ ಆಶ್ರಮಕ್ಕೆ ಸೇರಿಸ್ಕೊಳ್ಳಿ!
*****
ತಿಮ್ಮ ತನ್ನ ಆಪ್ತ ಸ್ನೇಹಿತ ಗುಂಡನ ಮನೆಗೆ ಬರುತ್ತಾನೆ..
ತಿಮ್ಮ: ಏನೋ ಇದು, ಬಟ್ಟೆ ಒಗಿತಾ ಇದ್ಯಾ?
ಗುಂಡ : ಹೌದು, ಏನ್ ಮಾಡೋದಪ್ಪಾ..
ತಿಮ್ಮ: ಅಲ್ವೋ..ಮನೆ ಕೆಲಸಕ್ಕೆ ಕೆಲಸದವಳನ್ನು ಇಟ್ಟುಕೊಂಡಿದ್ದೆಲ್ಲಾ.. ಎಲ್ಲಿ ಅವಳು.. ನೀನ್ಯಾಕೆ ಈ ಕೆಲಸ ಮಾಡ್ತಾ ಇದ್ಯಾ?
ಗುಂಡ: ಅವಳನ್ನೇ ಮದುವೆಯಾಗಿದ್ದೇನೆ ಕಣೋ..
ತಿಮ್ಮ: ಅನುಭವಿಸು..











Click it and Unblock the Notifications