ನೋಡ್ರೀ.. ಬೇಗ ಬಂದ್ರೆ ಬಿಜೆಪಿ ಪಕ್ಷದ ಚಿನ್ಹೆಯಿಂದ ಸ್ವಾಗತಿಸುತ್ತೇನೆ!!

Posted By:
Subscribe to Oneindia Kannada

ಹೆಂಡತಿ: ರೀ.. ಸಂಜೆ ಬೇಗ ಮನೆಗೆ ಬನ್ನಿ ಸಿನಿಮಾಗೆ ಹೋಗೋಣ!
ಗಂಡ: ಬೇಗ ಬರಲ್ಲಾಂದ್ರೆ ಏನ್ಮಾಡ್ತಿಯ?
ಹೆಂಡತಿ: ನೋಡೀ ಬೇಗ ಬಂದ್ರೆ ಬಿಜೆಪಿ ಚಿನ್ಹೆಯಿಂದ ಸ್ವಾಗತಿಸುತ್ತೇನೆ!
ಲೇಟಾಗಿ ಬಂದ್ರೆ ಕಾಂಗ್ರೆಸ್ ಪಕ್ಷದ ಚಿನ್ಹೆಯಿಂದ ಸ್ವಾಗತಿಸುತ್ತೇನೆ!
ತುಂಬಾ ಲೇಟಾಗಿ ಬಂದ್ರೀ ಅನ್ಕೊಳ್ಳಿ.. ಆಮ್ ಆದ್ಮಿ ಪಕ್ಷದ ಚಿನ್ಹೆಯಿಂದ ಸ್ವಾಗತಿಸುತ್ತೇನೆ.. ಆಯ್ಕೆ ನಿಮ್ಮದು!
ಗಂಡ: ಆಯ್ತು ಬಿಡು ಮಾರಾಯ್ತಿ.. ಬೇಗ ಬರ್ತೀನಿ
---
ಟೀಚರ್ : ' You spilled Coffee over the table'. Translate this sentence in your mother tongue.
ಚಿಂಟು : Mother tongue means the language my mom use, right mam?
ಟೀಚರ್ : Yes...
ಚಿಂಟು : ನಿನ್ ಕೈ ಮು‌ರ್ದ್ ಹೋಗಿದ್ಯೇನೋ ನಾಲಾಯಕ್? ಯಾವತ್ತಾದ್ರೂ ಒಂದ್ ಕೆಲ್ಸ ನೆಟ್ಟಗ್ ಮಾಡಿದ್ದೀಯಾ? ಎಲ್ಲಾ ನಿಮ್ಮಪ್ಪನ್ ಬುದ್ದಿ ನಿಂಗೇ.. ಒಂದಾದ್ರೂ ನನ್ ಬುದ್ದಿ ಕಲ್ತಿಲ್ಲ. ಈಗ ಯಾವನ್ ಬಂದು ಇದನ್ನ ಕ್ಲೀನ್ ಮಾಡ್ತಾನೆ? ನಿಮ್ಮಪ್ಪ ಯಾವಾಗ ಬರ್ತಾರೋ ಬರ್ಲಿ. ಅವ್ರ ಕೈಲೇ ವಾಷ್ ಮಾಡ್ಸ್‌ ಕೋತೀನಿ...
ಟೀಚರ್ : 😳😳😳😳
-----
ಟೀಚರ್: "ಸಬ್ ಕಾ ಸಾಥ್, ಸಬ್ ಕಾ ವಿಕಾಸ್"* ಇದನ್ನು ಸರಿಯಾಗಿ ಅನುಷ್ಠಾನಕ್ಕೆ ತಂದ ಮುಖ್ಯಮಂತ್ರಿಗಳು ಯಾರು?
ಗುಂಡ: ಸರ್.. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್..
ಟೀಚರ್: ಅದು ಹೇಗೆ.. ವಿವರಿಸು..
ಗುಂಡ: ಸರ್.. "ಮೊದಲು ಅವರೊಬ್ಬರೇ ಕೆಮ್ತಾ ಇದ್ರು. ಈಗ ಇಡೀ ದೆಹಲಿನೇ‌ ಕೆಮ್ತಾ ಇದೆ". (ವಾಟ್ಸಾಪ್ ಜೋಕ್ಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jokes for the day: If you come early to home, I will welcome you BJP symbol. Jokes between Teacher and Student

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ