ಹೆಂಡ್ತಿ ಸಿಟ್ಟನ್ನು ಕಮ್ಮಿ ಮಾಡಲು ಗುಂಡ ಕಂಡುಕೊಂಡ ರಹಸ್ಯ
ತಿಮ್ಮ: ನನ್ನ ಹೆಂಡತಿ ಯಾವಾಗಲೂ ಸಿಟ್ಟು ಮಾಡಿಕೊಂಡು ಇರ್ತಾಳೆ ಕಣೋ, ಏನ್ ಮಾಡೋದೆಂದೇ ತೋಚುತ್ತಿಲ್ಲ
ಗುಂಡ: ನನ್ನ ಹೆಂಡತಿಯೂ ನನ್ನ ಮೇಲೆ ಕಾರಣವಿಲ್ಲದೇ ಸಿಟ್ಟು ಮಾಡಿಕೊಳ್ಳುತ್ತಿದ್ದಳು, ಈಗ ಆ ಸಮಸ್ಯೆಯಿಲ್ಲ.
ತಿಮ್ಮ: ಈಗ ಇಲ್ವಾ, ಏನ್ ಮಾಡಿದೆ ಮಾರಾಯ, ನಂಗೂ ಸ್ವಲ್ಪ ಹೇಳು.. (ಇದಕ್ಕೇ ಅನ್ನೋದು ಗಂಡನ ಗ್ರಹಚಾರ ಅಂತ)
ಗುಂಡ: ಆರೇಳು ತಿಂಗಳ ಕೆಳಗೆ ಸಿಟ್ಟು ಮಾಡ್ಕೊಂಡು ಕೂತಿದ್ಳು, ವಯಸ್ಸಾದ ಮೇಲೆ ಸಿಟ್ಟು ಬರೋದು ಸಹಜ ಅಂದೆ, ಅಂದಿನಿಂದ ಯಾವತ್ತೂ ಖುಷಿ ಖುಷಿಯಾಗಿ ಇರ್ತಾಳೆ.
-----
ತಿಮ್ಮಿ ಮತ್ತು ಗುಂಡಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಹುಬ್ಬಳ್ಳಿ ಕಡೆ ತೆರಳುತ್ತಿದ್ದರು. ಮಾರ್ಗದಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಾ..
ತಿಮ್ಮಿ: ನಿನಗೆ ಎಂಥಾ ಗಂಡ ಬೇಕು?
ಗುಂಡಿ: ನನಗೆ ಗಂಡ ಆಗುವವನು ಕೋಟ್ಯಾಧಿಪತಿಯಾಗಿರಬೇಕು.
ತಿಮ್ಮಿ: ಕೋಟ್ಯಾಧಿಪತಿ ಸಿಕ್ಕಿಲ್ಲಾಂದ್ರೆ?
ಗುಂಡಿ: ಐವತ್ತು ಲಕ್ಷದ ಇಬ್ಬರು
ತಿಮ್ಮಿ: ಅದೂ ಸಿಕ್ಕಿಲ್ಲಾಂದ್ರೆ?
ಗುಂಡಿ : ಇಪ್ಪತ್ತೈದು ಲಕ್ಷದ ನಾಲ್ವರು
ಇವರ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದ ಹಿಂದಿನ ಸೀಟಿನಲ್ಲಿ ಕೂತಿದ್ದ ಬಸ್ಯಾ ಸುಮ್ಮನಿರಲಾರದೇ...
ಒಂದು ಲಕ್ಷಕ್ಕೆ ಬಂದಾಗ ನನ್ನನ್ನು ಮರೀಬೇಡಿ.. ಎಂದಾಗ ಇಬ್ಬರ ಮುಖ ಟೊಮ್ಯಾಟೊ ಹಣ್ಣಿನಂತಾಗಿತ್ತು...
-----
ಮಹಿಳೆಯರು ತುಂಬಿದ್ದ ಬಸ್ ಅಪಘಾತಕ್ಕೀಡಾಗಿತ್ತು, ಬಸ್ಸಿನಲ್ಲಿದ್ದ ಎಲ್ಲಾ ಮಹಿಳೆಯರು ಸಾವನ್ನಪ್ಪಿದರು..
ಮಹಿಳೆಯರ ಗಂಡಂದಿರೆಲ್ಲಾ ಸ್ಥಳಕ್ಕೆ ಬಂದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಳುತ್ತಿದ್ದರು...
ಆದರೆ ಬಸ್ಯಾ ಮಾತ್ರ ಎರಡು ಗಂಟೆಗೂ ಹೆಚ್ಚು ಕಾಲ ಅಳುತ್ತಿದ್ದ. ಯಾಕ್ ಗೊತ್ತಾ?
ಬಸ್ಸಿನಲ್ಲಿ ಅವನ ಹೆಂಡತಿ ಇರಲಿಲ್ಲ....












Click it and Unblock the Notifications