ಹಾಸ್ಯ: ಮದುವೆ, ಗಂಡ- ಹೆಂಡ್ತಿ, ಇತ್ಯಾದಿ
ಬಡವನೊಬ್ಬನು ಪ್ರತಿದಿನ ಕಾಗದದಲ್ಲಿ "ದೇವರೆ, ನನಗೆ 50,000 ರೂಪಾಯಿ ಕಳುಹಿಸಿ" ಎಂದು ಬಲೂನ್ ನಲ್ಲಿ ಆಂಟಿಸಿ ಗಾಳಿಯಲ್ಲಿ ಹಾರಿಸುತ್ತಿದ್ದ.
ಬಲೂನ್ ಪೊಲೀಸ್ ಠಾಣೆಯ ಮೇಲೆ ಪ್ರತಿದಿನ ಹಾದುಹೋಗುತ್ತದೆ ಮತ್ತು ಪೋಲಿಸ್ ಸಿಬ್ಬಂದಿ ಬಲೂನ್ ಅನ್ನು ಹಿಡಿದು ಸ್ಲಿಪ್ ಅನ್ನು ಓದುತ್ತಾರೆ.
ಮತ್ತು ಆ ಮನುಷ್ಯನ ಮುಗ್ಧತೆಗೆ ನಗುತ್ತಾ, ಆ ದಿನ ಪೊಲೀಸರು ಆಲೋಚಿಸಿದರು, ಬಡವನಿಗೆ ಸಹಾಯ ಮಾಡಬೇಕೆಂದು. ಒಟ್ಟು 25,000 ಸಂಗ್ರಹಿಸಿ ಆ ವ್ಯಕ್ತಿಯ ಮನೆಗೆ ಕೊಟ್ಟು ಬರುತ್ತಾರೆ
ಮರುದಿನವು ಬಲೂನ್ ಪೊಲೀಸ್ ಠಾಣೆಯ ಮೇಲೆ ಹಾದುಹೋಗುತ್ತದೆ ಮತ್ತು ಪೋಲಿಸ್ ಸಿಬ್ಬಂದಿ ಬಲೂನ್ ಅನ್ನು ಹಿಡಿದು ಸ್ಲಿಪ್ ಅನ್ನು ಓದುತ್ತಾರೆ.
"ದೇವರೆ ನೀವು ಹಣ ಕಳುಹಿಸದ ಹಣ ಸಿಕ್ಕಿತು ಆದರೆ ನೀವು ಪೊಲೀಸರ ಕೈಯಲ್ಲಿ ಕಳುಹಿಸಬಾರದಿತ್ತು!!" ದರಿದ್ರವರು 25, 000 ತಿಂದು ಹಾಕಿದರು.
🤑🤑😂😂

ಒಂದು ಒಳ್ಳೆಯ ಮುಹೂರ್ತ ನೋಡಿ ಮದುವೆ ಆದ..
ಮದುವೆ ನಂತರ ಹುಡುಗಿಯನ್ನು ಕೇಳಿದ...
TF IAS ಅಂದರೇನು ಅಂತ..
ಹುಡುಗಿ: Tenth Fail In All Subjects..
😁😜😂😂🤣
***
ಮದುವೆ ಅನ್ನೋದು KSRTC ಬಸ್ ಇದ್ದ ಹಾಗೆ...
ತುಂಬಾ ಕಾದು ಯಾವುದೇ ಬಸ್ ಬರಲಿಲ್ಲ ಅಂತ ಕೆಂಪು ಬಸ್ ಹತ್ತುತೀವಿ.. ಟಿಕೆಟ್ ತಗೊಂಡು ತಿರುಗಿ ನೋಡಿದ್ರೆ ರಾಜಹಂಸ..ಐರಾವತ..ಸ್ಕ್ಯಾನಿಯ.. ಎಲ್ಲಾ ಬರುತ್ತಾ ಇರುತ್ತೆ...
😃😜😎🍾
*****
ಗುಂಡನ ಹೆಂಡ್ತಿ: ಡಾಕ್ಟ್ರೆ, ಈಗ ನನ್ ಗಂಡನ ಕಂಡೀಶನ್ ಹೇಗಿದೆ?
ಡಾಕ್ಟರ್ : ಪರ್ವಾಗಿಲ್ಲಮ್ಮ, ನರ್ಸು ಬಂದ್ರೆ ಆಗಾಗ ಕಣ್ ಬಿಟ್ಟು ನೋಡ್ತಾರೆ...

ಉಪ್ಪಿಟ್ಟಾ
ಮಗ: ಇವತ್ತೂ ಉಪ್ಪಿಟ್ಟಾ 🤦
♂
ಅಮ್ಮ :ಈ ದಿಮಾಕೆಲ್ಲಾ ಮುದುವೇ ಆದ್ಮೇಲೆ ಹೆಂಡ್ತಿ ಮುಂದೆ ಇಟ್ಕೋ 😡
ಮಗ: ಅಯ್ತಮ್ಮ 😷
ಗಂಡ :ಏನೇ ? ಇವತ್ತೂ ಉಪ್ಪಿಟ್ಟಾ 🤦
♂
ಹೆಂಡತಿ :ಈ ದೀಮಾಕ್ ಮಾತೆಲ್ಲ ನಿಮ್ಮ ಅಮ್ಮನ ಮುಂದೆ ಇಟ್ಕೊಳ್ಳಿ 😡
ಗಂಡ : ಸರಿ ಕಣೇ 😷
ಲೈಫ್ ಇಷ್ಟೇನೆ 😂😂😂

ಸರಿಯಾದ ಹುಡುಗಿಯನ್ನು ಮದುವೆಯಾದರೆ ನಿತ್ಯವೂ ಪ್ರೇಮಿಗಳ ದಿನಾಚರಣೆ.
ಇಷ್ಟ ಇಲ್ಲದ ಹುಡುಗಿಯನ್ನು ಮದುವೆಯಾದರೆ ನಿತ್ಯವೂ ಹುತಾತ್ಮ ದಿನಾಚರಣೆ.
ಸೋಮಾರಿ ಹುಡುಗಿಯನ್ನು ಮದುವೆಯಾದರೆ ನಿತ್ಯವೂ ಕಾರ್ಮಿಕರ ದಿನಾಚರಣೆ.
ಶ್ರೀಮಂತ ಹುಡುಗಿಯನ್ನು ಮದುವೆಯಾದರೆ
ನಿತ್ಯವೂ ಹೊಸವರ್ಷದ ಆಚರಣೆ.
ಸುಳ್ಳು ಮತ್ತು ಮೋಸಮಾಡುವ ಹುಡುಗಿಯನ್ನು ಮದುವೆಯಾದರೆ
ನಿತ್ಯವೂ ಮೂರ್ಖರದಿನಾಚರಣೆ.
ಪೆದ್ದಿ ಹುಡುಗಿಯನ್ನು ಮದುವೆಯಾದರೆ
ನಿತ್ಯವೂ ಮಕ್ಕಳದಿನಾಚರಣೆ.
ಮದುವೇನೆ ಆಗದಿದ್ದರೆ
ನಿತ್ಯವೂ ಸ್ವಾತಂತ್ರ್ಯ ದಿನಾಚರಣೆ
ಇದರಲ್ಲಿ ನಿಮ್ಮ ದಿನ ಆಚರಣೆ ಯಾವುದು..🤔

ತಾವು ಎಂದಾದರೂ VCR ಬಾಡಿಗೆಗೆ ತಂದು ಸಿನೆಮಾ ನೀಡಿದ್ದೀರಾ?
ತಾವು ಎಂದಾದರೂ TV ಯ nobe ನ್ನು ಕೈಯಿಂದ ತಿರುಗಿಸಿ tune ಮಾಡಿದ್ದೀರಾ?
ತಾವು ಎಂದಾದರೂ audio cassette ನ್ನು ಪೆನ್ಸಿಲ್ ನಿಂದ ತಿರುಗಿಸಿ rewined ಮಾಡಿದ್ದೀರಾ?
ತಾವು ಎಂದಾದರೂ ತೋರುಬೆರಳಿಂದ ತಿರುಗಿಸಿ ಟೆಲಿಫೋನ್ ಡಯಲ್ ಮಾಡಿದ್ದೀರಾ?
ತಾವು ಎಂದಾದರೂ ರಸ ಮಂಜರಿ ಕಾರ್ಯಕ್ರಮದಲ್ಲಿ ಏಕ್, ದೋ, ತೀನ್, ಚಾರ್.. ಈ ಹಾಡು ಹಾಡುವುದನ್ನು ನೀಡಿದ್ದೀರಾ?
ತಾವು ಎಂದಾದರೂ ದೂರದರ್ಶನದಲ್ಲಿ, ಚಿತ್ರಹಾರ, ಚಿತ್ರಗೀತ,ಕೇಳಿದ್ದೀರಾ?
ಈ ಪ್ರಶ್ನೆಗಳಿಗೆಲ್ಲ ನಿಮ್ಮ ಉತ್ತರ "ಹೌದು" ಎಂದಾದರೆ
ನಿಮಗೆ ವಯಸ್ಸಾಗಿದೆ.... 🤔
ನಮಸ್ಕಾರ 🙏
***

ಮದುವೆ ಆಗಲು ಹುಡುಗಿ ನೋಡಲು ಹೊರಟ ರಘು....
ಎಲ್ಲರ ಎದುರಿಗೇ ....ಹುಡುಗಿಯನ್ನು ಕೇಳಿದ..
ರಘು : ಏನಾಯ್ತು ನಿನ್ ಎಜುಕೇಷನ್?
ಹುಡುಗಿ : TF IAS
ರಘುವಿಗೆ ಅರ್ಥ ಆಗಲಿಲ್ಲ...ಮತ್ತೇ ಕೇಳಿದರೆ...
ಇಷ್ಟೂ ಗೊತ್ತಿಲ್ಲ ಅಂದುಕೊಂಡರೆ ಏನಪ್ಪಾ ನನ್ನ ಮರ್ಯಾದೆ ಎಂದು ಸುಮ್ಮನಾದ.












Click it and Unblock the Notifications